VIDEO: ವಯಸ್ಕರಿಗೆ ಮಾತ್ರ: ಬೆಚ್ಚಿಬೀಳಿಸುತ್ತೆ ಅಪಘಾತದ ಭೀಕರ ದೃಶ್ಯ..!

zahir | news18
Updated:January 10, 2019, 9:40 PM IST
VIDEO: ವಯಸ್ಕರಿಗೆ ಮಾತ್ರ: ಬೆಚ್ಚಿಬೀಳಿಸುತ್ತೆ ಅಪಘಾತದ ಭೀಕರ ದೃಶ್ಯ..!
ಸಾಂದರ್ಭಿಕ ಚಿತ್ರ
  • News18
  • Last Updated: January 10, 2019, 9:40 PM IST
  • Share this:
ವಾಹನ ಓಡಿಸುವಾಗ ಸ್ವಲ್ಪ ಮೈಮರೆತರೆ ಅಪಘಾತಗಳು ಸಂಭವಿಸುತ್ತದೆ. ಆದರೆ ಕೆಲವೊಂದು ಬಾರಿ ಯಾವುದೋ ವಾಹನ ಚಾಲಕನ ಅಜಾಗರೂಕತೆಯಿಂದ ದೊಡ್ಡ ಅನಾಹುತಗಳೇ ಗತಿಸಿ ಬಿಡುತ್ತದೆ. ಅಂಥಹದ್ದೇ ಅವಘಡ ವಿಯ್ನೆಟ್ನಾಂನಲ್ಲಿ ನಡೆದಿದೆ.

ಲಾಂಗ್​ ಪ್ರಾಂತ್ಯದ ನಗರದಲ್ಲಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಒಂದಷ್ಟು ವಾಹನಗಳು ನಿಂತಿದ್ದವು. ಇನ್ನೇನು ಸಿಗ್ನೆಲ್ ದ್ವೀಪ ಹಸಿರು ಬಣ್ಣಕ್ಕೆ ತಿರುಗಲಿದೆ ಎನ್ನುವಷ್ಟರಲ್ಲಿ ಟ್ರಕ್​ವೊಂದು ವೇಗವಾಗಿ ಹಿಂದೆಯಿಂದ ಬಂದಿದೆ. ಅತಿ ವೇಗವಾಗಿ ಬರುತ್ತಿದ್ದ ಟ್ರಕ್​ ಸಿಗ್ನಲ್ ಸಮೀಪಿಸುತ್ತಿದ್ದಂತೆ ನಿಯಂತ್ರಣ ತಪ್ಪಿದ್ದು, ಇದರಿಂದ ಸಿಗ್ನೆಲ್​ನಲ್ಲಿ ನಿಂತಿದ್ದ 20 ಕ್ಕೂ ಹೆಚ್ಚಿನ ಬೈಕುಗಳ ಮೇಲೆ ಹರಿದಿದೆ.

ಇದನ್ನೂ ಓದಿ: ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ನೇರ ನೇಮಕಾತಿ: ವಾರ್ಷಿಕ ವೇತನ 52 ಲಕ್ಷ ರೂ.

ಈ ಘಟನೆಯಿಂದ 6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 22 ಮಂದಿಗೆ ಗಂಭೀರ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನು ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: 48MP ಕ್ಯಾಮೆರಾ ​ಫೋನ್​ಗೆ ಕೇವಲ 10 ಸಾವಿರ ರೂ..!

ಟ್ರಕ್​ ಚಾಲಕನನ್ನು ವಿಯೆಟ್ನಾಂ ಪೊಲೀಸರು ವಶಕ್ಕೆ ಪಡೆದಿದ್ದು, ಈ ಬ್ರೇಕ್ ಫೇಲ್​ ಆಗಿದ್ದರಿಂದ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಈ ಭೀಕರ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೊ ತುಣುಕು ವಿಶ್ವದಾದ್ಯಂತ ವೈರಲ್ ಆಗಿದೆ.

ಇದನ್ನೂ ಓದಿ: ನಡುರಸ್ತೆಯಲ್ಲೇ ತೋರಿಸಿದರು ಪೋರ್ನ್​ ವೀಡಿಯೊ..!
First published:January 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading