VIDEO: ಇವರೇ ನಿಜವಾದ ಗೋ ರಕ್ಷಕ: ಸಖತ್​ ವೈರಲ್ ಆಗುತ್ತಿದೆ ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಸಹ ಸಾಬರಮತಿ ಆಶ್ರಮದ ಶತಮಾನೋತ್ಸವದ ಸಂದರ್ಭದಲ್ಲಿ ಭಾಷಣ ಮಾಡುವ ವೇಳೆ ಗೋವಿನ ಹೆಸರಲ್ಲಿ ಜನರನ್ನು ಹತ್ಯೆ ಮಾಡುವುದನ್ನು ಒಪ್ಪಲಾಗುವುದಿಲ್ಲ ಎಂದು ಗೋ ರಕ್ಷಕರಿಗೆ ಖಡಕ್​ ಸಂದೇಶ ನೀಡಿದ್ದರು.

zahir | news18
Updated:January 24, 2019, 5:44 PM IST
VIDEO: ಇವರೇ ನಿಜವಾದ ಗೋ ರಕ್ಷಕ: ಸಖತ್​ ವೈರಲ್ ಆಗುತ್ತಿದೆ ವಿಡಿಯೋ
ಸಾಂದರ್ಭಿಕ ಚಿತ್ರ
zahir | news18
Updated: January 24, 2019, 5:44 PM IST
ಗೋ ರಕ್ಷಣೆಯ ಹೆಸರಿನಲ್ಲಿ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ಮತ್ತು ಹಲ್ಲೆ-ಹತ್ಯೆಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್​ ಈ ಹಿಂದೆ ಸೂಚಿಸಿತ್ತು. ಅಷ್ಟೇ ಅಲ್ಲದೆ ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸೆ-ದೊಂಬಿ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳದ 18 ರಾಜ್ಯಗಳಿಗೆ ಸುಪ್ರೀಂ ಕೋರ್ಟ್​ ಚಾಟಿ ಬೀಸಿ ಎಚ್ಚರಿಸಿತ್ತು. ಅಲ್ಲದೆ ಈ ಕುರಿತು ವರದಿ ನೀಡುವಂತೆ ಆದೇಶವನ್ನು ಹೊರಡಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಸಹ ಸಾಬರಮತಿ ಆಶ್ರಮದ ಶತಮಾನೋತ್ಸವದ ಸಂದರ್ಭದಲ್ಲಿ ಭಾಷಣ ಮಾಡುವ ವೇಳೆ ಗೋವಿನ ಹೆಸರಲ್ಲಿ ಜನರನ್ನು ಹತ್ಯೆ ಮಾಡುವುದನ್ನು ಒಪ್ಪಲಾಗುವುದಿಲ್ಲ ಎಂದು ಗೋ ರಕ್ಷಕರಿಗೆ ಖಡಕ್​ ಸಂದೇಶ ನೀಡಿದ್ದರು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರವಿಲ್ಲ ಎಂದ ತಿಳಿಸಿದ ಪ್ರಧಾನಿ, ನಾವು ಅಹಿಂಸಾ ತತ್ವವನ್ನು ನಂಬುವ ನೆಲದಲ್ಲಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: VIDEO: ಕಿವೀಸ್​ ವಿರುದ್ದ ಭರ್ಜರಿ ಜಯ: ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಧೋನಿ-ಕೊಹ್ಲಿ

ಸರ್ವೋಚ್ಚ ನ್ಯಾಯಾಲಯದ ಆಕ್ಷೇಪ, ಪ್ರಧಾನಿಯ ಖಡಕ್​ ಸೂಚನೆಯಿಂದ ದೇಶದಲ್ಲಿ ಗೋ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ಗೋವಿಗೆ ಸಂಬಂಧಿಸಿದ ವಿಡಿಯೋವೊಂದು ಸಖತ್ ವೈರಲ್​ ಆಗುತ್ತಿದೆ. ಇವರೇ ನಿಜವಾದ ಗೋ ರಕ್ಷಕ ಎಂಬ ಟ್ಯಾಗ್​ಲೈನ್​ನೊಂದಿಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಜಿಯೋ​ ಭರ್ಜರಿ ಆಫರ್​: ಒಂದು ಬಾರಿ ರಿಜಾರ್ಚ್​ ಮಾಡಿದ್ರೆ 6 ತಿಂಗಳು ಎಲ್ಲವೂ ಉಚಿತ

ಗೋವೊಂದು ರಸ್ತೆ ದಾಟುತ್ತಿತ್ತು. ಈ ವೇಳೆ ಅತಿ ವೇಗದಿಂದ ಬರುತ್ತಿದ್ದ ಟ್ಯಾಂಕರ್​ವೊಂದು ಇನ್ನೇನು ಗೋವಿಗೆ ಗುದ್ದಲಿದೆ ಅನ್ನುವಷ್ಟರಲ್ಲಿ ಚಾಲಕ ವಾಹನವನ್ನು ನಿಯಂತ್ರಿಸಿದ ಪರಿ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ವೇಗವನ್ನು ನಿಯಂತ್ರಿಸಿ ಗೋವಿನ ಜೀವ ಉಳಿಸಿದ ಚಾಲಕನೇ ನಿಜವಾದ ಗೋ ರಕ್ಷಕ ಎಂದು ಈ ವಿಡಿಯೋ ಹರಿದಾಡುತ್ತಿದೆ. ಗೋ ರಕ್ಷಕ ಟ್ರಕ್​ ಡೈವರ್ ಎಂದು ಚಾಲಕನನ್ನು ಎಲ್ಲರು ಹೊಗಳುತ್ತಿದ್ದಾರೆ. ಆದರೆ ಇದೇ ವೇಳೆ ಅನಾಹುತ ಸಂಭವಿಸದೇ ಇದ್ದದ್ದು ಪುಣ್ಯಕೋಟಿಯ ಪುಣ್ಯ ಎಂದು ಹೇಳುವವರೂ ಇದ್ದಾರೆ. ಒಟ್ಟಿನಲ್ಲಿ ಇವರೇ ನಿಜವಾದ ಗೋ ರಕ್ಷಕ ಎಂಬ ವಿಡಿಯೋ ಮಾತ್ರ ಸಖತ್ತಾಗಿ ವೈರಲ್ ಆಗುತ್ತಿದೆ.
First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...