• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ನಡುರಾತ್ರಿಯಲ್ಲಿ ಟ್ರಕ್‌ ಡ್ರೈವರ್​ಗೆ ಆಯ್ತು ಬಿಗ್​ ಶಾಕ್​, ಅಷ್ಟಕ್ಕೂ ಆಗಿದ್ದೇನು?

Viral Video: ನಡುರಾತ್ರಿಯಲ್ಲಿ ಟ್ರಕ್‌ ಡ್ರೈವರ್​ಗೆ ಆಯ್ತು ಬಿಗ್​ ಶಾಕ್​, ಅಷ್ಟಕ್ಕೂ ಆಗಿದ್ದೇನು?

ವೈರಲ್​

ವೈರಲ್​

ಕಳೆದ ವಾರ ಅಮೆರಿಕದ ಅರಿಜೋನಾ ಬಳಿ ವಿಲಿಯಂ ಚರ್ಚ್‌ ಎಂಬಾತ ಟ್ರಕ್‌ ಚಾಲನೆ ಮಾಡುತ್ತಿದ್ದ. ಬೀಲೈನ್ ಹೆದ್ದಾರಿ ಎಂದೂ ಕರೆಯಲ್ಪಡುವ ಸ್ಟೇಟ್ ರೂಟ್ 8 ರಲ್ಲಿ ಟ್ರಕ್‌ ಚಲಾಯಿಸುತ್ತಿದ್ದ.

  • Share this:

ಮಧ್ಯರಾತ್ರಿಯಲ್ಲಿ (Mid Night) ವಾಹನಗಳಲ್ಲಿ ಸಾಗುವಾಗ ಸಾಕಷ್ಟು ಜನರಿಗೆ ವಿಚಿತ್ರ ಅನುಭವಗಳಾಗಿರುವುದನ್ನು ಕೇಳಿರುತ್ತೇವೆ. ಕಾಡಿನ ಮಧ್ಯದಲ್ಲಿ, ರಸ್ತೆಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ಸಾಗುತ್ತಿರುವಾಗ ಭಯ ಹುಟ್ಟಿಸುವಂಥ ಕೆಲವು ಘಟನೆಗಳು ನಡೆದಿರುತ್ತವೆ. ಅವು ಎಷ್ಟರ ಮಟ್ಟಿಗೆ ನಿಜ ಎಂಬುದರ ಹೊರತಾಗಿ ಆ ಕ್ಷಣಕ್ಕೆ ಅಲ್ಲಿರುವಂಥ ವ್ಯಕ್ತಿಗಳಿಗೆ ಅದರ ಅನುಭವವಾಗಿರುತ್ತದೆ. ಕೆಲವೊಮ್ಮೆ ಇಂಥವು ಕ್ಯಾಮರಾಗಳಲ್ಲಿ ರೆಕಾರ್ಡ್ (Record)‌ ಆಗಿದ್ದೂ ಇದೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ಅಮೆರಿಕದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media)  ಅದರ ವಿಡಿಯೋ ವೈರಲ್‌ (Viral) ಆಗಿದೆ. ಹಾಗಿದ್ರೆ ಅಷ್ಟಕ್ಕೂ ಆಗಿದ್ದೇನು? ಟ್ರಕ್‌ ಚಾಲಕನಿಗೆ ಕಾಣಿಸಿದ ದೃಶ್ಯವೇನು ಅನ್ನೋದನ್ನು ನೋಡೋಣ.


ರಾತ್ರಿಯ್ಲಲಿ ಟ್ರಕ್‌ ಚಾಲಕನಿಗೆ ಕಂಡದ್ದೇನು?


ಕಳೆದ ವಾರ ಅಮೆರಿಕದ ಅರಿಜೋನಾ ಬಳಿ ವಿಲಿಯಂ ಚರ್ಚ್‌ ಎಂಬಾತ ಟ್ರಕ್‌ ಚಾಲನೆ ಮಾಡುತ್ತಿದ್ದ. ಬೀಲೈನ್ ಹೆದ್ದಾರಿ ಎಂದೂ ಕರೆಯಲ್ಪಡುವ ಸ್ಟೇಟ್ ರೂಟ್ 8 ರಲ್ಲಿ ಟ್ರಕ್‌ ಚಲಾಯಿಸುತ್ತಿದ್ದ.


ಈ ವೇಳೆ ಆತ ರಸ್ತೆಯ ಮುಂಭಾಗದ ದಿಕ್ಕಿನಲ್ಲಿ ಪ್ರಕಾಶಮಾನವಾದ ಪ್ರಜ್ವಲಿಸುವಿಕೆಯನ್ನು ಗಮನಿಸಿದ. ಅದೇ ಸಮಯದಲ್ಲಿ ಮುಂದೆ ಹೋಗುತ್ತಿದ್ದಂತೆ ರಸ್ತೆಯ ಪಕ್ಕದಲ್ಲಿ ನಡೆಯುತ್ತಿದ್ದ ವಿಚಿತ್ರ ಆಕೃತಿ ಕೂಡ ಅವನಿಗೆ ಕಾಣಿಸಿತು.


ಒಂದು ಕ್ಷಣ ಗಲಿಬಿಲಿಗೊಳಗಾದ ವಿಲಿಯಂ ನಂತರದಲ್ಲಿ ಖಾಲಿ ರಸ್ತೆಯ ಬಲಭಾಗದಲ್ಲಿ ನಿಜವಾಗಿಯೂ ಏನಾದರೂ ಇದ್ದಿತ್ತಾ ಎಂದು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ್ದಾನೆ.


ತಕ್ಷಣವೇ ಟ್ರಕ್‌ನ ಡ್ಯಾಶ್‌ಕ್ಯಾಮ್ ಫೂಟೇಜ್ ತೆಗೆದು ಪರಿಶೀಲಿಸಿದ್ದಾಗಿ ಹೇಳಿರುವ ವಿಲಿಯಂ ನಾನು ಹಾದುಹೋಗುವಾಗ ಏನೋ ಒಂದು ಆಕೃತಿ ರಸ್ತೆಮಾರ್ಗದಲ್ಲಿ ನಿಂತಿರುವುದು ತೋರುತ್ತಿದೆ ಎಂಬುದಾಗಿ ಹೇಳಿದ್ದಾನೆ.  FOX 10 Phoenix ಈ ವಿಡಿಯೋವನ್ನು ಯುಟ್ಯೂಬ್‌ ನಲ್ಲಿ ಹಂಚಿಕೊಂಡಿದೆ.


ಎಸ್‌ಆರ್‌87 ಹೆದ್ದಾರಿಯಲ್ಲಿ ನಡೆದಿವೆ ಹಲವಾರು ಅಪಘಾತ


ಪರ್ವತ ಸಮುದಾಯಗಳಿಗೆ ಹೋಗಲು ಮತ್ತು ಅಲ್ಲಿಂದ ವಾಪಸ್‌ ಬರಲು ಇರುವಂಥ ರಾಜ್ಯದ ಮುಖ್ಯ ಹೆದ್ದಾರಿಗಳಲ್ಲಿ ಈ ಹೆದ್ದಾರಿ ಒಂದಾಗಿದೆ. ಅಂದಹಾಗೆ ಈ SR 87 ಹೆದ್ದಾರಿಯಲ್ಲಿ ಈ ಹಿಂದೆ ಹಲವಾರು ಮಾರಣಾಂತಿಕ ಕಾರು ಅಪಘಾತಗಳಾಗಿತ್ತು ಅನ್ನೋದು ಗಮನಾರ್ಹ. ಈ ಮಾಹಿತಿಯನ್ನು FOX 10 Phoenix ತನ್ನ ಬಳಕೆದಾರರಿಗೆ ನೀಡಿದೆ.


ಇದನ್ನೂ ಓದಿ: 'ಪ್ಲೀಸ್​ ನನ್ನ ಅಣ್ಣ ಅಂತ ಕರೆಯಬೇಡಿ' ಎಂದು ಮಹಿಳೆಗೆ ಮೆಸೇಜ್ ಮಾಡಿದ​ ರಾಪಿಡೋ ಚಾಲಕ, ಮುಂದೇನಾಯ್ತು?


ಕಿರು ಕ್ಲಿಪ್ ಅನ್ನು ನೆಕ್ಸರ್ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ವಿಡಿಯೋ ಕ್ಲಿಪ್‌ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ.


ಒಬ್ಬ ಬಳಕೆದಾರ “ಹೊರಗೆ ಕತ್ತಲೆಯಿರುವ ಕಾರಣ ರಸ್ತೆ ಬದಿಯಲ್ಲಿ ಕಾಣಿಸಿರುವ ಭೂತವು ಸ್ವಲ್ಪ ಗೊಂದಲವನ್ನುಂಟು ಮಾಡಿದೆ” ಎಂದು ಬರೆದಿದ್ದಾರೆ.


"ರಸ್ತೆಯಲ್ಲಿ ನಿಂತಿರುವ ಆಕೃತಿಯು ವ್ಯಕ್ತಿಯಾಗಿರಲಿ ಅಥವಾ ಪ್ರೇತವಾಗಿರಲಿ, ಇದು ಉತ್ತಮ ಕ್ಯಾಚ್ ಆಗಿತ್ತು! ನಾವು ಈ ಸ್ಥಳವನ್ನು ಶೀಘ್ರದಲ್ಲೇ ತನಿಖೆ ಮಾಡುತ್ತೇವೆ" ಎಂಬುದಾಗಿ ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.




"ಮೊದಲಿಗೆ ಅದು ವ್ಯಕ್ತಿಯಂತೆ ಕಾಣುತ್ತದೆ ಎಂದು ನಾನು ಭಾವಿಸಿದೆ. ಆದರೆ ನಂತರ ಬಿಳಿ ರೇಖೆಯನ್ನು ಸರಿಯಾಗಿ ನೋಡಬಹುದು ಎಂಬುದನ್ನು ನಾನು ಗಮನಿಸಿದೆ" ಎಂದು ಇನ್ನೊಬ್ಬ ಬಳಕೆದಾರರು ಹೇಳಿಕೊಂಡಿದ್ದಾರೆ.


"ನೀವು ಅದನ್ನು 25x ವೇಗದಲ್ಲಿ ವೀಕ್ಷಿಸಿದರೆ ಮತ್ತು ಅದನ್ನು ಜೂಮ್ ಮಾಡಿದರೆ ಅದು ಮನುಷ್ಯನ ಆಕೃತಿಯಂತೆ ಕಾಣುತ್ತದೆ. ನೀವು ಸ್ಪಷ್ಟವಾಗಿ ಕಾಲುಗಳನ್ನು ನೋಡಬಹುದು” ಎಂದು ಇನ್ನೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ: ಈ ಜನರು ಕೂದಲು ತೊಳೆಯೋದು ನೀರಿನಿಂದ ಅಲ್ಲ, ಕೋಕಾ ಕೋಲಾದಿಂದ, ವೈರಲ್ ಆಗ್ತಿದೆ ಹೊಸ ಟ್ರೆಂಡ್​!


ಒಟ್ಟಾರೆ, ಕೆಲವೊಮ್ಮೆ ಇಂಥ ಘಟನೆಗಳು ನಿಜವಾಗಿಯೂ ಆಗಿರುತ್ತದೆ. ಇನ್ನೂ ಕೆಲವೊಮ್ಮೆ ಜನರನ್ನು ಮರಳು ಮಾಡಲು, ಭಯ ಪಡಿಸಲು ಅಥವಾ ಹೆಚ್ಚು ವೀಕ್ಷಣೆ ಪಡೆಯಲು ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವಿಡಿಯೋಗಳನ್ನು ಹಾಕಲಾಗುತ್ತದೆ ಅನ್ನೋದನ್ನೂ ಅಲ್ಲಗಳೆಯುವಂತಿಲ್ಲ.




ಹಾಗಾಗಿ ಇದು ಸತ್ಯವೋ ಸುಳ್ಳೋ ಬೇರೆ ಮಾತು. ಆದರೆ ಟ್ರಕ್‌ ಡ್ರೈವರ್‌ ಹೇಳುವ ಪ್ರಕಾರ ಇದೊಂದು ಭಯಾನಕ ಅನುಭವವಂತೂ ಹೌದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು