Viral Video: ಟ್ರಾಫಿಕ್ ಪೊಲೀಸರ ಕಾಟದಿಂದ ಬಚಾವಾಗಲು ಬೈಕ್ ಸವಾರರ ಹೊಸ ಐಡಿಯಾ!

New Traffic Rules: ಗುಜರಾತ್​ನ ವಡೋದರದ ರಾಮ್​ ಶಾ ಎಂಬುವವರು ತಮ್ಮ ಬಳಿ ಬೈಕ್​ಗೆ ಸಂಬಂಧಿಸಿದ ದಾಖಲಾತಿಗಳನ್ನು ಹೆಲ್ಮೆಟ್​ನ ನಾಲ್ಕೂ ಭಾಗಗಳಲ್ಲಿ ಅಂಟಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಟ್ರಾಫಿಕ್ ನಿಯಮಗಳನ್ನು ಟ್ರೋಲ್ ಮಾಡಲಾಗುತ್ತಿದೆ.

Sushma Chakre | news18-kannada
Updated:September 10, 2019, 4:40 PM IST
Viral Video: ಟ್ರಾಫಿಕ್ ಪೊಲೀಸರ ಕಾಟದಿಂದ ಬಚಾವಾಗಲು ಬೈಕ್ ಸವಾರರ ಹೊಸ ಐಡಿಯಾ!
ಬೈಕ್​ನ ಎಲ್ಲ ದಾಖಲೆಗಳನ್ನು ಹೆಲ್ಮೆಟ್​ಗೆ ಅಂಟಿಸಿಕೊಂಡಿರುವ ಚಾಲಕ
  • Share this:
ಹೊಸ ಟ್ರಾಫಿಕ್ ರೂಲ್ಸ್​ ಜಾರಿಗೆ ಬಂದಮೇಲೆ ಜನರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸಲೂ ಹಿಂದೆಮುಂದೆ ನೋಡುವಂತಾಗಿದೆ. ಯಾವುದಾದರೂ ಒಂದು ದಾಖಲೆ ತಪ್ಪಾಗಿದ್ದರೂ, ನಿಯಮ ಬ್ರೇಕ್ ಮಾಡಿದರೂ ದುಬಾರಿ ದಂಡ ತರಲೇಬೇಕಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜೋಕ್​ಗಳು ಹರಿದಾಡುತ್ತಿವೆ. ಟ್ರಾಫಿಕ್ ನಿಯಮವನ್ನು ಅಣಕಿಸುವ ವಿಡಿಯೋಗಳು ಕೂಡ ಟ್ರೆಂಡ್ ಆಗಿವೆ.

ತನ್ನ ಹೆಲ್ಮೆಟ್​ ಮೇಲೆ ಡಿಎಲ್, ಆರ್​ಸಿ, ಇನ್ಷುರೆನ್ಸ್ ಕಾಪಿ, ಹಾಗೂ ಪಿಯುಸಿ ಸರ್ಟಿಫಿಕೇಟ್ ಅಂಟಿಸಿಕೊಂಡಿರುವ ಗುಜರಾತ್​ನ ವಡೋದರದ ಬೈಕ್ ಸವಾರನ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರ್ಜೆಂಟ್​ನಲ್ಲಿ ಆಫೀಸಿಗೋ, ಇನ್ಯಾವುದೋ ಕೆಲಸಕ್ಕೋ ಹೋಗುವಾಗ ಬೈಕ್ ಅಡ್ಡಗಟ್ಟಿ ದಾಖಲಾತಿ ಕೇಳುವ ಟ್ರಾಫಿಕ್ ಪೊಲೀಸರನ್ನು ಅಣಕಿಸುವ ರೀತಿಯಲ್ಲಿ ಈ ಉಪಾಯ ಮಾಡಿದ್ದಾರೆ ಬೈಕ್ ಸವಾರ.

ಹೊಸ ಸಂಚಾರಿ ನಿಯಮದಡಿ ಬೆಂಗಳೂರಲ್ಲಿ ದಾಖಲಾದ ಪ್ರಕರಣಗಳೆಷ್ಟು? ಸಂಗ್ರಹವಾದ ದಂಡ ಎಷ್ಟು? ಇಲ್ಲಿದೆ ಮಾಹಿತಿ

ವೃತ್ತಿಯಲ್ಲಿ ಇನ್ಷುರೆನ್ಸ್​ ಏಜೆಂಟ್ ಆಗಿರುವ ರಾಮ್ ಶಾ ಎಂಬುವವರು ತಮ್ಮ ಬಳಿ ಬೈಕ್​ಗೆ ಸಂಬಂಧಿಸಿದ ದಾಖಲಾತಿ ಕೇಳುವ ಟ್ರಾಫಿಕ್ ಪೊಲೀಸರಿಗೆ ನೋಡಲು ಸುಲಭವಾಗಲಿ ಎಂದು ತಮ್ಮ ಹೆಲ್ಮೆಟ್​ನ ನಾಲ್ಕೂ ಭಾಗದಲ್ಲೂ ದಾಖಲಾತಿಗಳನ್ನು ಅಂಟಿಸಿಕೊಂಡಿದ್ದಾರೆ. ಇದರಿಂದ ಪೊಲೀಸರಿಗೆ ಸಮಯ ಉಳಿತಾಯವಾಗುತ್ತದೆ, ತನಗೂ ಸಮಯ ಉಳಿತಾಯವಾಗುತ್ತದೆ ಎಂಬುದು ಅವರ ಉದ್ದೇಶವಂತೆ. ಈ ಐಡಿಯಾವನ್ನು ಅನೇಕರು ಪಾಲಿಸಲು ಮುಂದಾಗಿದ್ದಾರಂತೆ!ಟ್ರಾಫಿಕ್ ನಿಯಮ ಉಲ್ಲಂಘನೆ; ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಾರಿಗೂ ದಂಡ!

ಗುಜರಾತ್​ನ ರಾಮ್ ಶಾ ಅವರ ಹೆಲ್ಮೆಟ್ ಮೇಲೆ ಡಿಎಲ್, ಆರ್​ಸಿ ಸೇರಿದಂತೆ ದಾಖಲಾತಿ ಇರುವ ವಿಡಿಯೋವನ್ನು ಅವರ ಗೆಳೆಯರೊಬ್ಬರು ಅಪ್​ಲೋಡ್ ಮಾಡಿದ್ದಾರೆ. ಈ ವಿಡಿಯೋ ಫೇಸ್​​ಬುಕ್, ವಾಟ್ಸಾಪ್, ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಗುಜರಾತ್​ನಲ್ಲಿ ಟ್ರಾಫಿಕ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಇತ್ತೀಚೆಗೆ ಹೆಲ್ಮೆಟ್ ಧರಿಸದೆ ಪೊಲೀಸ್ ಅಧಿಕಾರಿಯೊಬ್ಬರು ಮೊಬೈಲ್​ನಲ್ಲಿ ಮಾತನಾಡುತ್ತ ಬೈಕ್ ಚಲಾಯಿಸುತ್ತಿದ್ದರು. ಅದನ್ನು ನೋಡಿದವರು ಫೋಟೋ ತೆಗೆದು ಟ್ವಿಟ್ಟರ್​ನಲ್ಲಿ ಹಾಕಿದ್ದರು. ಆ ಫೋಟೋ ಮೂಲಕ ಬೈಕ್ ನಂಬರ್​ ಪ್ಲೇಟ್ ಗಮನಿಸಿದ ಟ್ರಾಫಿಕ್ ಸಿಬ್ಬಂದಿ ಆ ಅಧಿಕಾರಿಗೂ 1,100 ರೂ. ದಂಡ ವಿಧಿಸಿದ್ದರು.

ದಾಖಲಾತಿಗಳನ್ನು ಹೆಲ್ಮೆಟ್​ಗೆ ಅಂಟಿಸಿಕೊಂಡಿರುವ ರಾಮ್ ಶಾ


ಟ್ರಾಫಿಕ್ ರೂಲ್​ಗಳ ಬಗ್ಗೆ ಸಾರ್ವಜನಿಕರು ಗೇಲಿ ಮಾಡುತ್ತಿದ್ದು, ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್, ಆರ್​ಸಿ, ಇನ್ಷುರೆನ್ಸ್ ಮುಂತಾದ ಎಲ್ಲ ದಾಖಲೆಗಳನ್ನೂ ಟ್ರಾಫಿಕ್ ಪೊಲೀಸರಿಗೆ ತೋರಿಸಿ ಅವರು ಎಲ್ಲವೂ ಸರಿಯಾಗಿದೆ ಎಂದರೆ ಮಾತ್ರ ಮನೆಗೆ ಹೋಗಿ ಗಾಡಿ ಹೊರಗೆ ತೆಗೆಯಬೇಕಾಗುತ್ತದೆ. ಇಷ್ಟೆಲ್ಲ ದುಬಾರಿ ದಂಡ ವಿಧಿಸುವ ಬದಲು ಅದೇ ದುಡ್ಡಿನಲ್ಲಿ ಹೆಲ್ಮೆಟ್ ಧರಿಸದಿದ್ದವರಿಗೆ ಹೆಲ್ಮೆಟ್ ಕೊಡಿಸಿದರೆ ಮುಂದಿನ ಬಾರಿ ಅವರು ಸುರಕ್ಷಿತವಾಗಿ ವಾಹನ ಚಲಾಯಿಸುತ್ತಾರೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.
First published: September 10, 2019, 4:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading