Viral News: ಈ ಗ್ರಾಮದಲ್ಲಿ ಇಂದಿಗೂ ನಡೆಯುತ್ತೆ ಸ್ವಯಂವರ: ತಮ್ಮ ಸಂಗಾತಿಯನ್ನ ಯುವತಿಯರೇ ಆಯ್ಕೆ ಮಾಡಿಕೊಳ್ತಾರೆ

ಸ್ವಯಂವರದಲ್ಲಿ ಯುವತಿ ಯುವಕನೋರ್ವನನ್ನು ನೋಡಿ ಪಾನ್ (ಎಲೆ) ತಿಂದರೆ ಸಂಬಂಧ ನಿಶ್ಚಯವಾದಂತೆ. ಮಾಲಿನಿ ಗ್ರಾಮದಲ್ಲಿ ಪಟ್ಟಾ ಹೆಸರಿನಲ್ಲಿ ಈ ಜಾತ್ರೆ ನಡೆಯುತ್ತದೆ.

ಸ್ವಯಂವರ

ಸ್ವಯಂವರ

  • Share this:
ಭಾರತೀಯ ಸಂಸ್ಕೃತಿಯಲ್ಲಿ (Indian Culture) ಬಹಳ ಹಿಂದಿನಿಂದಲೂ ಯುವತಿಯರಿಗೆ (Girls) ತಮ್ಮ ಸಂಗಾತಿಯನ್ನು (Life Partner) ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಅದಕ್ಕಾಗಿ ಈ ಹಿಂದೆ ಸ್ವಯಂವರಗಳು (Swayamvara) ನಡೆಯುತ್ತಿರುತ್ತವೆ. ಈ ಸ್ವಯಂವರದಲ್ಲಿ ಯುವತಿ ತಾನು ಮೆಚ್ಚುವ ಯುವಕನನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ರೀತಿಯ ಸ್ವಯಂವರಗಳು ರಾಮಯಾಣದಲ್ಲಿಯೂ (Ramayana) ಉಲ್ಲೇಖ ಇದೆ. ಆದರೆ ಕಾಲ ಬದಲಾದಂತೆ ಸಮಾಜದಲ್ಲಿ ಬದಲಾವಣೆ ಆಗುತ್ತಿದೆ. ಸದ್ಯ ಜನ ಸಾಮಾನ್ಯರ ಜೀವನ ಶೈಲಿಯೂ ಬದಲಾಗಿದ. ಆದರೆ ಯುವಕ-ಯುವತಿಯರು ತಮ್ಮ ಸ್ವಂತ ಇಚ್ಛೆಯಿಂದಲೇ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಆಚರಣೆಗಳು ವಿಭಿನ್ನ ರೂಪದಲ್ಲಿ ಇನ್ನೂ ಜೀವಂತವಾಗಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಬಿಹಾರದ ಪೂರ್ಣಿಯಾ (Purnima, Bihar) ಜಿಲ್ಲೆಯಲ್ಲಿ ಅಂತಹ ಒಂದು ಸಂಪ್ರದಾಯದ ಇನ್ನೂ ಜೀವಂತ ಇದೆ. ಪೂರ್ಣಿಮಾ ಜಿಲ್ಲೆಯಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ ಇದನ್ನು ಪಟ್ಟ ಮೇಳ ಎಂದು ಕರೆಯಲಾಗುತ್ತದೆ, ಇದರಲ್ಲಿ ಹುಡುಗಿಯರು ತಮ್ಮ ಇಷ್ಟದ ವರನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಜಾತ್ರೆಗಳು ನಾಗರಿಕತೆ ಮತ್ತು ಸಂಸ್ಕೃತಿಯ ವಾಹಕಗಳಾಗಿವೆ ಎಂದು ಹಿರಿಯರು ಹೇಳುತ್ತಾರೆ. ಪುರ್ನಿಯಾದ ಬನ್ಮಂಖಿಯ ಮಾಲಿನಿಯಾ ಗ್ರಾಮದಲ್ಲಿ ದೀರ್ಘಕಾಲದವರೆಗೆ ಇಂತಹ ಜಾತ್ರೆ ನಡೆಯುತ್ತದೆ. ಅಲ್ಲಿ ಯುವಕ ಮತ್ತು ಯುವತಿಯರು ತಮ್ಮ ಆಯ್ಕೆಗೆ ಅನುಗುಣವಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ.

ಸ್ವಯಂವರದಲ್ಲಿ ಯುವತಿ ಯುವಕನೋರ್ವನನ್ನು ನೋಡಿ ಪಾನ್ (ಎಲೆ) ತಿಂದರೆ ಸಂಬಂಧ ನಿಶ್ಚಯವಾದಂತೆ. ಮಾಲಿನಿ ಗ್ರಾಮದಲ್ಲಿ ಪಟ್ಟಾ ಹೆಸರಿನಲ್ಲಿ ಈ ಜಾತ್ರೆ ನಡೆಯುತ್ತದೆ. ಇದು ಬುಡಕಟ್ಟು ಜನಾಂಗದವರ ಜಾತ್ರೆ ಅನ್ನೋದು ಮತ್ತೊಂದು ವಿಶೇಷ. ಈ ಜಾತ್ರೆಗೆ ದೂರ ದೂರದ ಊರುಗಳಿಂದ ಯುವಕ ಮತ್ತು ಯುವತಿಯರು ಆಗಮಿಸಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ:  Viral News: ಮಾಡೋದಕ್ಕೆ ಕೆಲಸ ಇಲ್ಲ: 30 ದಿನ ನಿದ್ದೆ ಮಾಡಿದ್ರೆ ಕೈ ತುಂಬ ಸಿಗುತ್ತೆ ಐದಂಕಿಯ ಸಂಬಳ

ಒಪ್ಪಂದ ಮತ್ತು ನಿರಾಕರಣೆಯ ವಿಶಿಷ್ಟ ವಿಧಾನ

ಹುಡುಗ ಹುಡುಗಿಯನ್ನು ಇಷ್ಟಪಟ್ಟರೆ, ಅವನು ಯುವತಿಗೆ ತಿನ್ನಲು ಪಾನ್ ನೀಡುವ ಮೂಲಕ ಮದುವೆ ಆಗುವಂತೆ ತನ್ನ ಪ್ರಸ್ತಾಪನೆ ಸಲ್ಲಿಸುತ್ತಾನೆ. ಒಂದು ವೇಳೆ ಯುವತಿ ಆತ ನೀಡಿದ ಪಾನ್ ತಿಂದ್ರೆ ಮದುವೆಗೆ ಒಪ್ಪಿಗೆ ಸೂಚಿಸದಂತೆ. ಅಲ್ಲಿಯೇ  ಎಲ್ಲರ ಒಪ್ಪಿಗೆ ಪಡೆದು ಯುವಕ ಯುವತಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಬಹುದು.

ಜೊತೆಯಾಗಿ ಹೋದ ಜೋಡಿ ಒಂದಿಷ್ಟು ಸಮಯ ಒಟ್ಟಿಗೆ ಕಳೆಯುತ್ತಾರೆ. ಈ ಸಮಯದಲ್ಲಿ, ಹುಡುಗ ಮತ್ತು ಹುಡುಗಿ ಪರಸ್ಪರ ಅರ್ಥಮಾಡಿಕೊಳ್ಳುತ್ತಾರೆ. ಅದರ ನಂತರ ಇಬ್ಬರೂ ಮದುವೆಯ ಬಂಧದಲ್ಲಿ ಬಂಧಿಯಾಗುತ್ತಾರೆ. ಇದಾದ ನಂತರ ಇಬ್ಬರಲ್ಲಿ ಯಾರಾದರೂ ಮದುವೆಯಾಗಲು ನಿರಾಕರಿಸಿದರೆ, ಬುಡಕಟ್ಟು ಸಮುದಾಯದ ಜನರು ಅವರಿಗೆ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸುತ್ತಾರೆ.

ವಿಶೇಷ ಬಿದಿರಿನ ಗೋಪುರದ ಮೇಲೆ ಪೂಜೆ

ಈ ಜಾತ್ರೆಯಲ್ಲಿ ವಿಶೇಷವಾದ ಬಿದಿರಿನ ಗೋಪುರವನ್ನು ಸ್ಥಾಪಿಸಲಾಗಿರುತ್ತದೆ. ಆ ಗೋಪುರವನ್ನು ಏರುವ ಮೂಲಕ ವಿಶೇಷ ರೀತಿಯ ಪೂಜೆಯನ್ನು ಮಾಡಲಾಗುತ್ತದೆ. ಇದಲ್ಲದೇ ಈ ಜಾತ್ರೆಯಲ್ಲಿ ಬುಡಕಟ್ಟು ಯುವಕ-ಯುವತಿಯರು ಡೊಳ್ಳು-ಕುಣಿತಕ್ಕೆ ತಕ್ಕಂತೆ ಕುಣಿಯುತ್ತಾರೆ. ಪರಸ್ಪರ ಧೂಳು ಮತ್ತು ಮಣ್ಣನ್ನು ಎರಚಿಕೊಂಡು ಜಾತ್ರೆಯನ್ನು ಸಂಭ್ರಮದದಿಂದ ಆಚರಿಸುತ್ತಾರೆ. ಈ ಮೇಳದಲ್ಲಿ ಭಾಗವಹಿಸಲು ಜನರು ನೇಪಾಳದಿಂದ ಬರುತ್ತಾರೆ.

ಇದನ್ನೂ ಓದಿ:  Dance Video: ಸ್ನೇಹಿತನ ಮದುವೆಯಲ್ಲಿ ಸೈನಿಕನ ಸಖತ್ ಸ್ಟೆಪ್! ನೀವೂ ಒಮ್ಮೆ ನೋಡಿ ಆ ಸ್ಪೆಷಲ್ ಡ್ಯಾನ್ಸ್‌

ಎರಡು ದಿನ ನಡೆಯುವ ಜಾತ್ರೆ

ಬೈಸಾಖಿ ಮತ್ತು ಶಿರ್ವ ಹಬ್ಬದ ಸಂದರ್ಭದಲ್ಲಿ ಎರಡು ದಿನ ಈ ಜಾತ್ರೆ ನಡೆಯುತ್ತದೆ. ಈ ಪ್ರದೇಶದಲ್ಲಿ ಈ ಜಾತ್ರೆ ಬಹಳ ಜನಪ್ರಿಯವಾಗಿದೆ. ಹಿಂದೂ ಮಹಿಳೆಯರಲ್ಲಿ ಪರ್ದಾ ಪದ್ಧತಿ ಇದ್ದಾಗಲೂ ಇಲ್ಲಿನ ಬುಡಕಟ್ಟು ಮಹಿಳೆಯರ ಮೇಲೆ ಯಾವುದೇ ನಿಬಂದನೆಗಳು ಇರಲಿಲ್ಲ. ಅಂದಿನ ಕಾಲದಲ್ಲಿಯೂ ಇಲ್ಲಿನ ಮಹಿಳೆಯರು ತಮ್ಮ ಸಂಗಾತಿಯನ್ನ ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇಂದಿಗೂ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ  ಸ್ವಯಂವರ ನಡೆಯುತ್ತದೆ.
Published by:Mahmadrafik K
First published: