Books Tree: ಮರದಲ್ಲಿ ಪುಸ್ತಕಗಳು! ಶಿಕ್ಷಕರ ಸಖತ್ ಐಡಿಯಾಗೆ ಮಕ್ಕಳು ಫಿದಾ!

ಈಗಂತೂ 3ಡಿ ಕಥಾ ಪುಸ್ತಕಗಳನ್ನು ಸಹ ಈ ಮರದಲ್ಲಿ ಇತ್ತೀಚೆಗೆ ನೇತು ಹಾಕಲಾಗುತ್ತಿದೆಯಂತೆ!

ಮರಕ್ಕೆಲ್ಲ ಪುಸ್ತಕಗಳು!

ಮರಕ್ಕೆಲ್ಲ ಪುಸ್ತಕಗಳು!

  • Share this:
ಸಾಮಾನ್ಯವಾಗಿ ನಾವು ಚಿಕ್ಕವರಾಗಿದ್ದಾಗ ಶಾಲೆಗೆ ಹೋಗುವಾಗ ರಸ್ತೆ ಬದಿಯಲ್ಲಿ ಯಾವುದಾದರೂ ಮಾವಿನಹಣ್ಣಿನ ಮರಗಳಿದ್ದರೆ, ಅವುಗಳಿಗೆ ಕಲ್ಲು ಹೊಡೆದು ಮಾವಿನಹಣ್ಣುಗಳನ್ನು ಕೆಳಗೆ ಬಿಳಿಸಿಕೊಂಡು ತಿನ್ನುತ್ತಿದ್ದೆವು. ಆದರೆ ಇಲ್ಲೊಂದು ಮರವಿದೆ, ಅದಕ್ಕೆ ನೀವು ಕಲ್ಲು ಹೊಡೆಯುವುದೇ ಬೇಕಾಗಿಲ್ಲ. ಮೇಲಾಗಿ ಆ ಮರದಲ್ಲಿ ಹಣ್ಣುಗಳ ಬದಲಾಗಿ ಜ್ಞಾನ ನೀಡುವಂತಹ ಪುಸ್ತಕಗಳಿವೆಯಂತೆ. ಇದೇನಪ್ಪಾ! ಮರದಲ್ಲಿ ಪುಸ್ತಕಗಳಿವೆಯೇ ಎಂದು ನೀವು ಒಂದು ಕ್ಷಣ ಆಶ್ಚರ್ಯ ಪಡಬಹುದು, ನೀವು ಒಮ್ಮೆ ಮಹಾರಾಷ್ಟ್ರದಲ್ಲಿರುವ (Maharashtra) ಗಡ್‌ಚಿರೋಲಿ ಜಿಲ್ಲೆಯಲ್ಲಿರುವ ಕೋಯಾನ್ಗುಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯ ಅವರಣಕ್ಕೆ ಬಂದರೆ ನಿಮಗೆ ಈ ಹಣ್ಣುಗಳ (Fruits)  ಬದಲಿಗೆ ಪುಸ್ತಕಗಳನ್ನು (Books) ನೀಡುವ ಮರ ಕಣ್ಣಿಗೆ ಬೀಳುತ್ತದೆ.

ಈ ಶಾಲೆಯು ನಕ್ಸಲೀಯರ ಹಾವಳಿ ಹೆಚ್ಚಿರುವಂತಹ ಭಮ್ರಾಘರ್ ತಾಲೂಕಿನಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಶಾಲೆಯ ಆವರಣದಲ್ಲಿರುವ ಒಂದು ದೊಡ್ಡ ಮರದಲ್ಲಿ ಅನೇಕ ರೀತಿಯ ಕಥೆ ಪುಸ್ತಕಗಳನ್ನು ಹಣ್ಣುಗಳಂತೆ ಜೋತು ಹಾಕಿರುತ್ತಾರೆ, ನಿಮಗೆ ಬೇಕಾದ್ದನ್ನು ಹಣ್ಣಿನಂತೆ ಕಿತ್ತುಕೊಂಡು ಓದಿ ಆನಂದಿಸಬಹುದಾಗಿದೆ. ಈ ವಿನೂತನವಾದ ಮತ್ತು ಮಕ್ಕಳ ಮನಸ್ಸಿಗೆ ಇಷ್ಟವಾಗುವ ಯೋಜನೆಯನ್ನು ಜಾರಿಗೆ ತಂದದ್ದು ಶಾಲೆಯ ಶಿಕ್ಷಕ ವಿನೀತ್ ಪಡ್ಮಾವರ್ ಅವರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದು  ಪುಸ್ತಕದ ಮರ
ಈ ಯೋಜನೆಯ ಬಗ್ಗೆ ಮಾತನಾಡುತ್ತಾ ವಿನೀತ್ ಅವರು “ಇದನ್ನು ನಾವು ಪುಸ್ತಕದ ಮರ ಎಂದು ಕರೆಯುತ್ತೇವೆ ಮತ್ತು ಇದನ್ನು ನಾವು ಶಾಲಾ ಮಕ್ಕಳ ಓದುವ ಹವ್ಯಾಸವನ್ನು ಹೆಚ್ಚು ಮಾಡಲು ನಮ್ಮ ಶಾಲೆಗೆ ಅನೇಕ ದಾನಿಗಳು ನೀಡಿರುವಂತಹ ಅನೇಕ ರೀತಿಯ ಕಥೆಯ ಪುಸ್ತಕಗಳನ್ನು ಈ ಮರಕ್ಕೆ ಜೋತು ಹಾಕಲಾಗಿದೆ” ಎಂದು ಹೇಳಿದರು.

ಕಥೆಯ ಪುಸ್ತಕಗಳು ಎಂದರೆ ತುಂಬಾನೇ ಇಷ್ಟ
“ಮಕ್ಕಳಿಗೆ ಬೇಕಾದ್ದನ್ನು ನೀಡುವುದು ಕೆಲವೊಮ್ಮೆ ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ, ಅದಕ್ಕಾಗಿ ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವಂತಹ ಮಕ್ಕಳಾಗಿದ್ದು, ಅವರಿಗೆ ಈ ಕಥೆಯ ಪುಸ್ತಕಗಳು ಎಂದರೆ ತುಂಬಾನೇ ಇಷ್ಟವಿರುತ್ತದೆ ಮತ್ತು ಅವರಿಗೆ ಈ ಪುಸ್ತಕಗಳನ್ನು ಬೇರೆ ರೀತಿಯಲ್ಲಿ ನೀಡಿದರೆ ಅವರು ಅದನ್ನು ಇಷ್ಟಪಡುತ್ತಾರೆ” ಎಂದು ವಿನೀತ್ ಅವರು ಹೇಳಿದರು.

ಮರದಿಂದ ತನಗೆ ಇಷ್ಟವಾದ ಪುಸ್ತಕ ತಕೊಳ್ತಾರೆ
ಈ ಗ್ರಾಮದಲ್ಲಿ ಪುಸ್ತಕ ಮರದ ಯೋಜನೆಯು ತುಂಬಾನೇ ಜನಪ್ರಿಯವಾಗಿದೆ ಮತ್ತು ಜನರು ಸಾಮಾನ್ಯವಾಗಿ ಮರದಿಂದ ಹಣ್ಣುಗಳನ್ನು ಕೀಳುತ್ತಾರೆ. ಅವುಗಳನ್ನು ತಿಂದ ನಂತರವೇ ಅದು ಸಿಹಿಯಾಗಿದೆಯೇ ಅಥವಾ ಹುಳಿಯಾಗಿದೆಯೇ ಎಂದು ತಿಳಿಯುತ್ತೇವೆ. ಇದೇ ಮಾದರಿಯಲ್ಲಿ ವಿದ್ಯಾರ್ಥಿಯು ಆ ಮರದಿಂದ ತನಗೆ ಇಷ್ಟವಾದ ಪುಸ್ತಕವನ್ನು ತೆಗೆದುಕೊಳ್ಳುತ್ತಾನೆ.

ಕುತೂಹಲದಿಂದ ಓದುತ್ತಾರೆ
ಅದರೊಳಗೆ ಎಂತಹ ಕಥೆಗಳು ಇವೆ ಎನ್ನುವುದು ಅವರಿಗೆ ಕುತೂಹಲದ ವಿಷಯವಾಗಿರುತ್ತದೆ ಎಂದು ಶಿಕ್ಷಕರು ಹೇಳುತ್ತಾರೆ. “ಇಲ್ಲಿ ಮಕ್ಕಳು ಆ ಪುಸ್ತಕದ ಮೇಲಿನ ಕವರ್ ಅನ್ನು ನೋಡಿ ಆ ಪುಸ್ತಕವನ್ನು ಹೀಗೆ ಇರಬಹುದೆಂದು ಊಹಿಸುತ್ತಾರೆ'' ಎಂದು ಇವರು ಹೇಳಿದರು.

ಇದನ್ನೂ ಓದಿ: Venice: ಪರಂಪರೆ ರಕ್ಷಣೆಗೆ ಶತಪ್ರಯತ್ನ ನಡೆಸುತ್ತಿದೆ ತೇಲುವ ನಗರ ವೆನಿಸ್! ಏಕೆ ಏನಾಯ್ತು?

“ಅವರು ಮರದಿಂದ ತೆಗೆದುಕೊಂಡ ಆ ಪುಸ್ತಕವನ್ನು ಶಾಲಾ ಮಕ್ಕಳು ತುಂಬಾನೇ ಉತ್ಸಾಹದಿಂದ ಓದಿ ಮುಗಿಸಿರುವುದನ್ನು ನಾನು ನೋಡಿದ್ದೇನೆ, ಅದನ್ನು ಒಮ್ಮೆ ಆ ಮರದಿಂದ ಕೆಳಗಿಳಿಸಿದ ಮೇಲೆ ಅದು ಹೇಗೆ ಇದ್ದರೂ ಸಹ ಅವರು ಅದನ್ನು ಓದಿ ಮುಗಿಸುತ್ತಿದ್ದಾರೆ. ಈ ರೀತಿಯಾದ ವಿನೂತನ ಪದ್ದತಿಯು ಮಕ್ಕಳಿಗೆ ಖುಷಿ ನೀಡುತ್ತಿದೆ ಮತ್ತು ಈ ರೀತಿಯಾಗಿ ಅವರು ತಮ್ಮ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದಾರೆ” ಎಂದು ವಿನೀತ್ ಅವರು ಹೇಳಿದ್ದಾರೆ.

ಈಗಂತೂ 3ಡಿ ಕಥಾ ಪುಸ್ತಕಗಳಿವೆ!
ಆದರೆ ಈ ಮರದಲ್ಲಿ ಪುಸ್ತಕಗಳನ್ನು ಹೀಗೆ ವಾರದಲ್ಲಿ ಒಂದೆರಡು ದಿನಗಳ ಕಾಲ ಅದಕ್ಕೆ ಜೋತು ಹಾಕಿ, ಮಕ್ಕಳಿಗೆ ಅವುಗಳನ್ನು ಓದಲು ಒಂದು ನಿರ್ದಿಷ್ಟವಾದ ಸಮಯವನ್ನು ನಿಗದಿಪಡಿಸಲಾಗುವುದು. ಆ ಪುಸ್ತಕಗಳನ್ನು ಹಾಗೆ ಮರದ ಮೇಲೆ ಬಿಟ್ಟರೆ ಮಳೆ ಮತ್ತು ಧೂಳಿನಿಂದಾಗಿ ಅವುಗಳು ಹಾಳಾಗಬಹುದು ಎಂದು ಶಾಲಾ ಸಿಬ್ಬಂದಿಯವರು ಹೇಳುತ್ತಾರೆ. ಈಗಂತೂ 3ಡಿ ಕಥಾ ಪುಸ್ತಕಗಳನ್ನು ಸಹ ಈ ಮರದಲ್ಲಿ ಇತ್ತೀಚೆಗೆ ನೇತು ಹಾಕಲಾಗುತ್ತಿದೆ ಅಂತೆ.

ಇದನ್ನೂ ಓದಿ: Woman Falls in Toilet: ಟಾಯ್ಲೆಟ್​ನಲ್ಲಿ ಮೊಬೈಲ್ ಬಿದ್ರೆ ನೀವು ಏನ್ ಮಾಡ್ತೀರಾ? ಈ ಮಹಿಳೆ ಮಾಡಿದ್ದೇನು ನೋಡಿ!

ಮಕ್ಕಳಿಗಂತೂ ಆ ಕನ್ನಡಕಗಳನ್ನು ಹಾಕಿಕೊಂಡು ಆ 3ಡಿ ಕಥೆಯ ಪುಸ್ತಕಗಳನ್ನು ಓದುವುದು ತುಂಬಾನೇ ಖುಷಿ ನೀಡುತ್ತಿದೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ. ಈಗ ಮಹಾರಾಷ್ಟ್ರದಲ್ಲಿ ಅನೇಕ ಗ್ರಾಮೀಣ ಶಾಲೆಗಳಲ್ಲಿ ಯುನಿಸೆಫ್ ಸಹಾಯದಿಂದ ಗ್ರಂಥಾಲಯಗಳನ್ನು ಸಹ ಶುರು ಮಾಡಿದ್ದಾರೆ.
Published by:guruganesh bhat
First published: