Viral Video: ಮನೆಯಿಲ್ಲದೆ ಬೀದಿಗೆ ಬಿದ್ದವನನ್ನು ಅರಸಿ ಬಂತು ಸಾಕು ನಾಯಿ; ಅಪೂರ್ವ ಮಿಲನದ ವಿಡಿಯೋ ವೈರಲ್

Pet Dog Video: ತನ್ನ ಮಾಲೀಕನನನ್ನು ಅರಸಿಬಂದ ನಾಯಿ ಆತನ ಮೈಮೇಲೆ ಹಾರಿ, ಮುಖವನ್ನೆಲ್ಲ ನೆಕ್ಕಿ, ಕೊನೆಗೂ ಸಿಕ್ಕೇಬಿಟ್ಟೆಯಲ್ಲ ಎಂದು ಕುಣಿದಾಡುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದೆ.

ಮಾಲೀಕನನ್ನು ಸೇರಿದ ನಾಯಿ

ಮಾಲೀಕನನ್ನು ಸೇರಿದ ನಾಯಿ

  • Share this:
ಕೆಲವೊಮ್ಮೆ ಮನುಷ್ಯರು ಮನುಷ್ಯತ್ವ ಮರೆತು ಕ್ರೂರಿಗಳಾಗಿ ಬಿಡುತ್ತಾರೆ. ಆದರೆ, ಪ್ರಾಣಿಗಳಿವೆ ಕಿಂಚಿತ್ ಪ್ರೀತಿ ತೋರಿಸಿದರೂ ಅವರು ಆತನನ್ನು ಜೀವನಪರ್ಯಂತ ಮರೆಯುವುದಿಲ್ಲ. ತನ್ನವರು, ಮನೆ ಯಾವುದೂ ಇಲ್ಲದೆ ಶೆಲ್ಟರ್ ಸೇರಿದ್ದ ವ್ಯಕ್ತಿಯೋರ್ವನ ಬಳಿ ಓಡಿಬಂದ ಸಾಕು ನಾಯಿ ಯಾವೆಲ್ಲ ರೀತಿ ಆತನ ಮೇಲೆ ಪ್ರೀತಿಯ ಮಳೆಗರೆಯುತ್ತದೆ ಎಂಬ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ.

ಮನೆಯಿಲ್ಲದೆ ಬೀದಿಗೆ ಬಿದ್ದಿದ್ದ ವ್ಯಕ್ತಿಯನ್ನು ಶೆಲ್ಟರ್​ ಹೋಂನಲ್ಲಿ ಇರಿಸಿಕೊಳ್ಳಲಾಗಿತ್ತು. ತನ್ನವರನ್ನೆಲ್ಲ ಕಳೆದುಕೊಂಡಿದ್ದ ಆತನ ಪ್ರೀತಿಯ ನಾಯಿ ಕೂಡ ಆತನಿಂದ ದೂರವಾಗಿತ್ತು. ಆದರೆ, ತನ್ನ ಮಾಲೀಕನನನ್ನು ಅರಸಿ ಬಂದ ನಾಯಿ ಆತನ ಮೈಮೇಲೆ ಹಾರಿ, ಮುಖವನ್ನೆಲ್ಲ ನೆಕ್ಕಿ, ಕೊನೆಗೂ ಸಿಕ್ಕೇಬಿಟ್ಟೆಯಲ್ಲ ಎಂದು ಕುಣಿದಾಡುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Viral Video: ಮಲಗಿದವನ ಜೀನ್ಸ್​ ಪ್ಯಾಂಟ್​ ಒಳ ಸೇರಿತ್ತು ಬುಸ್​ ಬುಸ್​ ಹಾವು!; ಆಮೇಲೇನಾಯ್ತು ಗೊತ್ತಾ?

ಹರಕಲು ಶರ್ಟ್​ ಹಾಕಿಕೊಂಡು, ಕೊಳೆಯಾದ ಹಾಫ್ ಪ್ಯಾಂಟ್ ಹಾಕಿಕೊಂಡು ನಿಂತಿದ್ದ ವ್ಯಕ್ತಿಯ ಮೇಲೆ ಥಟ್ಟಂತೆ ಓಡಿಬಂದ ನಾಯಿಯೊಂದು ಹಾರಿ ಮುಖವೆಲ್ಲ ನೆಕ್ಕುತ್ತದೆ. ನಾಯಿ ಹಾರಿದ ರಭಸಕ್ಕೆ ಆತ ನೆಲದ ಮೇಲೆ ಕುಳಿತು ಆ ನಾಯಿಯನ್ನು ಮುದ್ದಾಡುತ್ತಿರುವ ವೈರಲ್ ವೈರಲ್ ಆಗಿದೆ.



ಐಎಫ್​ಎಸ್​ ಅಧಿಕಾರಿ ಸುಶಾಂತ ನಂದ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಮನೆಯಿಲ್ಲದಿದ್ದರೇನಂತೆ? ಈ ಮನುಷ್ಯನರ ಹೃದಯದ ತುಂಬ ಪ್ರೀತಿ ತುಂಬಿದೆ. ಮನೆಯಿಲ್ಲದ ಮನುಷ್ಯ ಶೆಲ್ಟರ್​ನಲ್ಲಿ ತನ್ನ ಸಾಕುನಾಯಿಯನ್ನು ಭೇಟಿಯಾದ ಕ್ಷಣ ಎಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತನ್ನ ಪ್ರೀತಿಯ ನಾಯಿಯನ್ನು ನೋಡಿ ಆ ವ್ಯಕ್ತಿ ಕೂಡ ಭಾವುಕನಾಗಿ ನೆಲದಲ್ಲಿ ಕೂತು, ಆ ನಾಯಿಯನ್ನು ಅಪ್ಪಿ ಹಿಡಿದಿರುವ ದೃಶ್ಯ ನೋಡಿದರೆ ಎಂಥವರ ಕಣ್ಣಂಚೂ ಒದ್ದೆಯಾಗುತ್ತದೆ.
Published by:Sushma Chakre
First published: