Viral Video: ವಿಡಿಯೋ ಕಾಲ್​ನಲ್ಲಿ ಕುಚಿಕು ಗೆಳತಿಯ ನೋಡಿದ ನಾಯಿ ಮಾಡಿದ್ದೇನು ಗೊತ್ತಾ?; ಇಲ್ಲಿದೆ ವಿಡಿಯೋ

Viral Video: ಲೈಕಾ ಮತ್ತು ಹೆನ್ರಿ ಎಂಬ 2 ನಾಯಿಗಳು ಆಪ್ತ ಸ್ನೇಹಿತರಾಗಿದ್ದವು. ಲಾಕ್​ಡೌನ್​ನಿಂದಾಗಿ ಬಹಳ ದಿನಗಳ ಬಳಿಕ ವಿಡಿಯೋ ಕಾಲ್​ನಲ್ಲಿ ಮುಖ ನೋಡಿಕೊಂಡ ಅವರಿಬ್ಬರ ಸಂಭ್ರಮದ ವಿಡಿಯೋ ಇಲ್ಲಿದೆ...

Sushma Chakre | news18-kannada
Updated:May 4, 2020, 3:51 PM IST
Viral Video: ವಿಡಿಯೋ ಕಾಲ್​ನಲ್ಲಿ ಕುಚಿಕು ಗೆಳತಿಯ ನೋಡಿದ ನಾಯಿ ಮಾಡಿದ್ದೇನು ಗೊತ್ತಾ?; ಇಲ್ಲಿದೆ ವಿಡಿಯೋ
ವಿಡಿಯೋ ಕಾಲ್​ನಲ್ಲಿ ನಾಯಿಗಳ ಭೇಟಿ
  • Share this:
ಲಾಕ್​ಡೌನ್​ನಿಂದಾಗಿ ಹೊರಗೆ ಬಾರದಂತಾಗಿದೆ. ಗೆಳೆಯರು, ಸಂಬಂಧಿಕರನ್ನು ನೋಡಿ ತಿಂಗಳುಗಳೇ ಕಳೆದುಹೋಗಿವೆ. ಮನೆಯಲ್ಲೇ ಕುಳಿತು ಬೇಸರವಾದಾಗ ವಿಡಿಯೋ ಕಾಲ್​ ಮೂಲಕ ಆಪ್ತರ ಮುಖ ನೋಡುವ ಪರಿಸ್ಥಿತಿ ಎದುರಾಗಿದೆ. ಅದೇರೀತಿ ಎರಡು ನಾಯಿಗಳು ಕೂಡ ವಿಡಿಯೋ ಕಾಲ್ ಮೂಲಕ ಉಭಯಕುಶಲೋಪರಿ ವಿಚಾರಿಸಿಕೊಂಡಿರುವ ವಿಡಿಯೋ ಫೇಸ್​ಬುಕ್​ನಲ್ಲಿ ವೈರಲ್ ಆಗಿದೆ.

ಐರ್ಲೆಂಡ್​ನಲ್ಲಿ ಒಂದೇ ಮನೆಯಲ್ಲಿದ್ದ ಲೈಕಾ ಮತ್ತು ಹೆನ್ರಿ ಎಂಬ 2 ನಾಯಿಗಳು ಆಪ್ತ ಸ್ನೇಹಿತರಾಗಿದ್ದವು. ಹೆನ್ರಿಯನ್ನು ಬೇರೆ ಮನೆಗೆ ಕರೆದುಕೊಂಡು ಹೋಗಿ ಬಹಳ ದಿನಗಳಾಗಿದ್ದವು. ಬೇರೆ ಊರಿನಲ್ಲಿದ್ದ ತನ್ನ ಗೆಳತಿ ಹೆನ್ರಿಯನ್ನು ನೋಡದೆ ಲೈಕಾ ಎಂಬ ಹಸ್ಕಿ ನಾಯಿಗೆ ಬೇಸರವಾಗಿತ್ತು. ಅವರಿಬ್ಬರನ್ನೂ ಭೇಟಿ ಮಾಡಿಸಲು ಜೂಮ್​ ಮೂಲಕ ವಿಡಿಯೋ ಕಾಲ್ ಮಾಡಲಾಯಿತು.

ಇದನ್ನೂ ಓದಿ: Viral Video: ನಮ್ಮ ಟೀಚರ್​ಗೆ ಬುದ್ಧಿ ಹೇಳಿ!; ಪೊಲೀಸರಿಗೆ ದೂರು ನೀಡಿದ ಪುಟ್ಟ ಹುಡುಗನ ವಿಡಿಯೋ ವೈರಲ್

ವಿಡಿಯೋ ಕಾಲ್​ನಲ್ಲಿ ಪರಸ್ಪರರನ್ನು ನೋಡಿ ಲೈಕಾ ಮತ್ತು ಹೆನ್ರಿ ಜೋರಾಗಿ ಊಳಿಟ್ಟು, ಮನೆಯ ತುಂಬ ಕುಣಿಯುತ್ತಾ ತಮ್ಮ ಸಂಭ್ರಮವನ್ನು ಹೊರಹಾಕಿರುವ ವಿಡಿಯೋ ವೈರಲ್ ಆಗಿದೆ. ಎರಡೂ ನಾಯಿಗಳು ತಮ್ಮದೇ ಭಾಷೆಯಲ್ಲಿ ಮಾತುಕತೆ ನಡೆಸಿದ ವಿಡಿಯೋ ಇಲ್ಲಿದೆ...

First published: May 4, 2020, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading