Bengaluru: 72 ವರ್ಷಗಳ ದಾಂಪತ್ಯ ಜೀವನದ ರಹಸ್ಯ ಬಿಚ್ಚಿಟ್ಟ ಬೆಂಗಳೂರು ದಂಪತಿ; ವೈರಲ್ ಆಯ್ತು ಅಜ್ಜ-ಅಜ್ಜಿಯ ವಿಡಿಯೋ

Viral Video: ಬೆಂಗಳೂರಿನ 101 ವರ್ಷದ ಪತಿ ಮತ್ತು 90 ವರ್ಷದ ಪತ್ನಿ 70 ದಶಕಗಳ ತಮ್ಮ ಯಶಸ್ವಿ ದಾಂಪತ್ಯದ ಹಿಂದಿರುವ ರಹಸ್ಯದ ಬಗ್ಗೆ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ದಂಪತಿ

ಬೆಂಗಳೂರಿನ ದಂಪತಿ

  • Share this:
ಮದುವೆ ಎನ್ನುವುದೇ ಬಹುದೊಡ್ಡ ಸವಾಲಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸೂಕ್ತ ಸಂಗಾತಿ ಸಿಗುವುದೇ ಕಷ್ಟ ಎನ್ನುವ ಯುಗದಲ್ಲಿ ಇಂದಿನ ಯುವ ಸಮೂಹ ನಿಂತಿದೆ. ಇನ್ನು, ಇವತ್ತಿನ ಮದುವೆಗಳು ದೀರ್ಘಕಾಲ ಉಳಿಯಬೇಕು ಅನ್ನೋ ಆಸೆ ಎಷ್ಟರ ಮಟ್ಟಿಗೆ ನಿಜವಾಗುತ್ತಿದೆ? ಎನ್ನುವುದು ನಮ್ಮ ಸುತ್ತಮುತ್ತಲಿನಲ್ಲೇ ಕಾಣುತ್ತಿದೆ. ಹೀಗಿರುವಾಗ ಇಲ್ಲೊಬ್ಬರು ಬೆಂಗಳೂರಿನ ಅಪರೂಪದ ದಂಪತಿ ತಮ್ಮ 72 ವರ್ಷಗಳ ಸುದೀರ್ಘ ದಾಂಪತ್ಯದ ಮೂಲಕ ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ. ಕಥೆ, ಕಾದಂಬರಿಗಳಲ್ಲಿ ಮಾತ್ರ ಕೇಳುವ ಇಂತಹ ಘಟನೆಗಳು ನಿಜ ಜೀವನದಲ್ಲೂ ಸಾಧ್ಯ ಎನ್ನುವುದನ್ನು ಈ ಹಿರಿಯ ದಂಪತಿ ತೋರಿಸಿಕೊಟ್ಟಿದ್ದಾರೆ.

Humans of Bombay ಎನ್ನುವ ಇನ್​ಸ್ಟಾಗ್ರಾಂ ಪೇಜ್ ಈ ದಂಪತಿಯ ವೀಡಿಯೋವನ್ನು ಶೇರ್​ ಮಾಡಿದ್ದು, ವಿಡಿಯೋಗೆ ಅಪಾರ ಮೆಚ್ಚುಗೆ ಸಿಕ್ಕಿದೆ. ಇನ್ನು Humans of Bombay ಪೇಜ್​ ಇಂತಹ ಹೃದಯಸ್ಪರ್ಶಿ ವಿಡಿಯೋಗಳನ್ನು ಅಪ್​ಲೋಡ್​ ಮಾಡುವ ಮೂಲಕ ತನ್ನ ಹಿಂಬಾಲಕರ ಕಂಟೆಂಟ್​ ಬಯಕೆಯನ್ನು ತಣಿಸುತ್ತಲೇ ಇದೆ. ಬೆಂಗಳೂರಿನ 101 ವರ್ಷದ ಪತಿ ಮತ್ತು 90 ವರ್ಷದ ಪತ್ನಿ 70 ದಶಕಗಳ ತಮ್ಮ ಯಶಸ್ವಿ ದಾಂಪತ್ಯದ ಹಿಂದಿರುವ ರಹಸ್ಯದ ಬಗ್ಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಇವತ್ತಿನ ಯುವ ಸಮೂಹಕ್ಕೂ ಟಿಪ್ಸ್​ ನೀಡಿದ್ದಾರೆ.

ಈ ವಿಡಿಯೋ ಕ್ಲಿಪ್ ನೋಡಿದರೆ ಖಂಡಿತವಾಗಿಯೂ ನಿಮ್ಮ ಮನಸು ತಿಳಿಯಾಗೋದು ಗ್ಯಾರಂಟಿ. ಅಲ್ಲದೆ, ಬದುಕಿನ ಬಗ್ಗೆ ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುವುದಂತೂ ಸತ್ಯ. ಈ ವಿಡಿಯೋದಲ್ಲಿ ಬರ್ಫಿ ಚಿತ್ರದ 'ಇತ್ನಿ ಸಿ ಖುಷಿ' ಎನ್ನುವ ಹಾಡನ್ನು ಬ್ಯಾಕ್​ಗ್ರೌಂಡ್​ ಗಾಯನವಾಗಿ ಬಳಸಲಾಗಿದ್ದು, ವಿಡಿಯೋವನ್ನು ಇನ್ನಷ್ಟು ಮನ ಮುಟ್ಟುವಂತೆ ಮಾಡಿದೆ.
'72 ವರ್ಷಗಳು ಮತ್ತು ಇಂದಿಗೂ ಮುಂದುವರೆಯುತ್ತಲಿರುವ ಈ ದಂಪತಿಯ ಅನುಬಂಧದ ರಹಸ್ಯವೇನು? ಇಷ್ಟು ಸುದೀರ್ಘ ಪಯಣ ಸಾಧ್ಯವಾಗಿದ್ದು ಹೇಗೆ?' ಎಂದು Humans of Bombay ವೀಡಿಯೋ ಪೋಸ್ಟ್ ಮಾಡಿ, ಕ್ಯಾಪ್ಷನ್ ಹಾಕಿದೆ.

ಸುದೀರ್ಘ ಯಶಸ್ವಿ ದಾಂಪತ್ಯ ಜೀವನದ ಬಗ್ಗೆ ಹಿರಿಯ ಜೀವಗಳು ಹಂಚಿಕೊಳ್ಳುವುದು ಹೀಗೆ 'ಪ್ರತಿದಿನ ಒಂದು ಹೊತ್ತಿಗಾದರೂ ನಿಮ್ಮ ಸಂಗಾತಿಯ ಜೊತೆಗೆ ಕೂತು ಊಟ ಮಾಡಿ. ಏನೇ ಸಮಸ್ಯೆಗಳಿರಲಿ, ನೀವಿಬ್ಬರೂ ಎಂಥದ್ದೇ ಕೋಪ-ತಾಪಗಳಲ್ಲಾದರೂ ಇರಿ ನಿಮ್ಮಿಬ್ಬರ ಕೈಯನ್ನು ಸದಾ ಹಿಡಿದುಕೊಂಡಿರಿ. ಸಂಬಂಧಗಳಲ್ಲಿ ಘರ್ಷಣೆಗಳು ಸಹಜ, ಮನಸ್ತಾಪಗಳು ಕೂಡ ಮನುಷ್ಯ ಸಹಜ ಗುಣ. ಆದರೆ, ಅದೇನೇ ಇರಲಿ, ಮರೆತು ಬಿಡಿ. ಮೊದಲು ನೀವೇ ಕ್ಷಮೆ ಕೇಳಿ ಬಿಡಿ. ಏನೇ ಸಮಸ್ಯೆಗಳಿರಲಿ, ನೀವಿಬ್ಬರೂ ಎಂದೆಂದಿಗೂ ಜೊತೆಯಾಗಿಯೇ ಇರುತ್ತೀರಿ ಎಂದು ಒಬ್ಬರಿಗೊಬ್ಬರು ಪ್ರಮಾಣ ತೆಗೆದುಕೊಳ್ಳಿ. ಇದೇ ದೀರ್ಘಕಾಲದ ಯಶಸ್ವಿ ದಾಂಪತ್ಯದ ಗುಟ್ಟು' ಎಂದು ಈ ಹಿರಿಯ ದಂಪತಿ ತಮ್ಮ ದೀರ್ಘ ಕಾಲದ ದಾಂಪತ್ಯದ ರಹಸ್ಯವನ್ನು ತೆರೆದಿಟ್ಟಿದ್ದಾರೆ.
ನಿಮ್ಮ ಸಂಗಾತಿಗಾಗಿ ನೀವು ಮಾಡುವ ಚಿಕ್ಕ ಚಿಕ್ಕ ಕೆಲಸಗಳು ಪ್ರಾಮುಖ್ಯತೆ ಪಡೆಯುತ್ತವೆ. ಉಳಿದವೆಲ್ಲ ನಂತರದ ಆದ್ಯತೆಗಳಾಗುತ್ತವೆ ಎನ್ನುವ ಅಂಶ ಈ ವೀಡಿಯೋ ನೋಡಿದ ಕೂಡಲೇ ಮನವರಿಕೆಯಾಗುತ್ತದೆ.

3 ಲಕ್ಷ ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, ಹಲವು ನೆಟ್ಟಿಗರು ತಮ್ಮ ಪ್ರೀತಿಯನ್ನು ಕಮೆಂಟ್ಸ್​ನಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡುತ್ತಾ 'ಅಜ್ಜ ಕೈ ಎತ್ತಲು ಅಜ್ಜಿ ಹೇಗೆ ಉತ್ಸಾಹಭರಿತರಾಗಿ ಸಹಾಯ ಮಾಡಿದರು. ನಮ್ಮ ದಿನ ಮುಕ್ತಾಯವಾಗುವ ವೇಳೆ ನಮ್ಮ ಜೀವನದಲ್ಲೂ ಇಂತಹ ಜೀವವೊಂದು ಜೊತೆಗಿರಬೇಕು' ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರು ಕೂಡ ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಡಾಲಿ ಸಿಂಗ್​ ಈ ವಿಡಿಯೋಗೆ ಕಮೆಂಟ್​ ಮಾಡಿದ್ದು 'ಅಯ್ಯೋ ದೇವರೆ, ನಾನೇಕೆ ಅಳುತ್ತಿದ್ದೇನೆ' ಎಂದು ಭಾವುಕರಾಗಿದ್ದಾರೆ. ಈ ವಿಡಿಯೋವಿನ​ ಕಮೆಂಟ್​ ವಿಭಾಗ ಲವ್, ಎಮೋಜಿ ಮತ್ತು ಭಾವನಾತ್ಮಕ ಸಂದೇಶಗಳಿಂದಲೇ ತುಂಬಿ ಹೋಗಿದ್ದು, ನೆಟ್ಟಿಗರು ಈ ವಿಡಿಯೋವನ್ನು ಮನಸು ತುಂಬಿಕೊಂಡಿದ್ದಾರೆ. ಇನ್ನು ಈ ಹಿರಿಯ ಜೋಡಿ The Daily Grandparent ಎನ್ನುವ ತಮ್ಮದೇ ಇನ್​ಸ್ಟಾಗ್ರಾಂ ಪೇಜ್ ಹೊಂದಿದ್ದು, ಅದರಲ್ಲಿ ತಮ್ಮ ಪಿಕ್ಚರ್ ಮತ್ತು ವಿಡಿಯೋವನ್ನು ಶೇರ್​ ಮಾಡುವುದಲ್ಲದೆ ಅವರ ಕ್ಯೂಟ್​ನೆಸ್​​ನಿಂದ ಎಲ್ಲರನ್ನೂ ಸೆಳೆಯುತ್ತಿದ್ದಾರೆ.
Published by:Sushma Chakre
First published: