• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Bridal Hair Style: ಇಂಟರ್ನೆಟ್‌ನಲ್ಲಿ ವೈರಲ್ ಆದ ಮಹಿಳೆಯ ಚಾಕಲೇಟ್ ಹೇರ್‌ಸ್ಟೈಲ್‌, ಮಕ್ಕಳಿಂದ ದೂರವಿರಿ ಎಂದು ಸಲಹೆ ನೀಡಿದ ನೆಟ್ಟಿಗರು!

Bridal Hair Style: ಇಂಟರ್ನೆಟ್‌ನಲ್ಲಿ ವೈರಲ್ ಆದ ಮಹಿಳೆಯ ಚಾಕಲೇಟ್ ಹೇರ್‌ಸ್ಟೈಲ್‌, ಮಕ್ಕಳಿಂದ ದೂರವಿರಿ ಎಂದು ಸಲಹೆ ನೀಡಿದ ನೆಟ್ಟಿಗರು!

ವೈರಲ್​ ಆದ ಮದುಮಗಳು

ವೈರಲ್​ ಆದ ಮದುಮಗಳು

ಇದೀಗ ಕಾಲಕ್ಕೆ ತಕ್ಕಂತೆ ಬದಲಾವಣೆ ಎಂಬಂತೆ ಎಷ್ಟೆಷ್ಟೋ ಟ್ರೆಂಡಿಯಾಗಿರುವ ಹೇರ್ ಸ್ಟೈಲ್‌ಗಳು ವಿಶೇಷವಾಗಿ ವಧುವಿಗಾಗಿಯೇ ಪ್ರವರ್ಧಮಾನಕ್ಕೆ ಬರುತ್ತಿವೆ.

  • Trending Desk
  • 4-MIN READ
  • Last Updated :
  • Share this:

ಹೇಳಿ ಕೇಳಿ ಇದೀಗ ಮದುವೆ ಸೀಸನ್ (Season). ಅಂದವಾಗಿ ಕಾಣಬೇಕು ವಿಧ ವಿಧ ಫೋಟೋಸ್‌ಗೆ ಫೋಸ್ ಕೊಡಬೇಕು ಜೊತೆಗೆ ಆಕರ್ಷಕ ಕೇಶ ವಿನ್ಯಾಸವನ್ನು ಮಾಡಿಸಿಕೊಳ್ಳಬೇಕು ಎಂಬುದು ಹೆಚ್ಚಿನ ವಧುಗಳ ಆಶಯವಾಗಿರುತ್ತದೆ. ಇದೀಗ ಕಾಲಕ್ಕೆ ತಕ್ಕಂತೆ ಬದಲಾವಣೆ ಎಂಬಂತೆ ಎಷ್ಟೆಷ್ಟೋ ಟ್ರೆಂಡಿಯಾಗಿರುವ ಹೇರ್ ಸ್ಟೈಲ್‌ಗಳು ವಿಶೇಷವಾಗಿ ವಧುವಿಗಾಗಿಯೇ ಪ್ರವರ್ಧಮಾನಕ್ಕೆ ಬರುತ್ತಿವೆ. ಹೂವುಗಳಿಂದ ಜಡೆಯ ಅಲಂಕಾರ, ಆಭರಣಗಳಿಂದ ಅಲಂಕಾರ, ಬರಿಯ ಮಲ್ಲಿಗೆ, ಗುಲಾಬಿ, ಸೇವಂತಿಗೆಗಳಿಂದ ಜಡೆಯ ಅಲಂಕಾರ ಹೀಗೆ ಬೇರೆ ಬೇರೆ ಕೇಶ ವಿನ್ಯಾಸಗಳು ಸೌಂದರ್ಯ ಲೋಕವನ್ನು ಆಳುತ್ತಿವೆ. ಅದಕ್ಕೆ ತಕ್ಕಂತೆ ಬ್ರೈಡಲ್ ಮೇಕಪ್ (Bridal Makeup) ಆರ್ಟಿಸ್ಟ್‌ಗಳು ಕೂಡ ವಿಧ ವಿಧವಾದ ಹೇರ್ ಸ್ಟೈಲ್‌ಗಳೊಂದಿಗೆ ನವ ವಧುವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ. ಹಾಗಾಗಿ ವಿವಾಹ ಸಂದರ್ಭದಲ್ಲಿ ಸುಂದರವಾದ ಜಡೆಗೆ ಹೆಚ್ಚಿನ ಪ್ರಾಶಸ್ತ್ಯ ಎಂಬುದಂತೂ ನಿಜ.


ಇಂಟರ್ನೆಟ್‌ನಲ್ಲಿ ವೈರಲ್ ಆದ ಚಾಕಲೇಟ್ ಜಡೆ


ಆದರೆ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಕೇಶ ವಿನ್ಯಾಸ ಚಾಕಲೇಟ್ ಕೇಶ ವಿನ್ಯಾಸ. ಹೌದು ಚಾಕಲೇಟ್‌ಗಳನ್ನೇ ಬಳಸಿ ಸುಂದರವಾದ ಜಡೆಯನ್ನು ಅಂದಗೊಳಿಸಿದ್ದು ಇದೀಗ ವಿಡಿಯೋ ವೈರಲ್ ಆಗಿದೆ ಅಂತೆಯೇ ಬಳಕೆದಾರರ ಟೀಕೆಗಳನ್ನು, ಹೊಗಳಿಕೆಗಳನ್ನು ಪಡೆದುಕೊಂಡಿದೆ. ಮೇಕಪ್ ಆರ್ಟಿಸ್ಟ್ ಆಗಿರುವ ಚೈತ್ರಾ ಚಾಕಲೇಟ್‌ಗಳಿಂದ ತಯಾರಿಸಿದ ಜಡೆಯನ್ನು ರೂಪದರ್ಶಿಗೆ ಸಿಂಗರಿಸುವ ಮೂಲಕ ಕ್ರಿಯಾತ್ಮಕ ಕಲೆಯನ್ನು ಬಹಿರಂಗಪಡಿಸಿದ್ದಾರೆ.


ಬೇರೆ ಬೇರೆ ಚಾಕಲೇಟ್ ಬಳಸಿ ಜಡೆ ವಿನ್ಯಾಸ


ಮೇಕಪ್ ಆರ್ಟಿಸ್ಟ್ ಒಬ್ಬರು ವಿಧ ವಿಧವಾದ ಚಾಕಲೇಟ್‌ಗಳಿಂದ ಸಿಂಗರಿಸಿದ ಜಡೆಯ ವಿಡಿಯೋವನ್ನು ಇನ್‌ಸ್ಟಾದಲ್ಲಿ ಅಪ್‌ಲೋಡ್ ಮಾಡಿದ್ದು, ಚಾಕಲೇಟ್ ಜಡೆಗೆ ಅಲಂಕಾರವನ್ನು ಹೇಗೆ ಮಾಡಿದ್ದಾರೆ? ಹೇಗೆ ಸಿದ್ಧಪಡಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಈ ಸುದ್ದಿ ಕೇಳಲು ವಿಚಿತ್ರವಾಗಿದ್ದರೂ ಬಳಕೆದಾರರಾದ ­ _chitras_makeup_artist_28 ಅಂತೂ ಅದ್ಭುತ ರೀತಿಯಲ್ಲಿ ಚಾಕಲೇಟ್ ಜಡೆಯನ್ನು ಅಂದವಾಗಿ ಮೂಡಿಸಿದ್ದಾರೆ. ಕಿಟ್‌ಕ್ಯಾಟ್, ಫೈವ್‌ಸ್ಟಾರ್, ಮಿಲ್ಕಿಬಾರ್, ಫೇರಾರೊ ರೊಚರ್, ಮ್ಯಾಂಗೊ ಬೈಟ್ ಹೀಗೆ ಜನಪ್ರಿಯ ಚಾಕಲೇಟ್ ಬ್ರ್ಯಾಂಡ್‌ಗಳ ಚಾಕಲೇಟ್‌ಗಳನ್ನು ಬಳಸಿ ಚೈತ್ರಾ ಜಡೆಯನ್ನು ಅಂಕರಿಸಿದ್ದಾರೆ.


ಇದನ್ನೂ ಓದಿ: ಫೆಬ್ರವರಿಯಲ್ಲಿ ಟ್ರಿಪ್‌ ಹೋಗ್ಬೇಕು ಅಂತ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ಸ್ಥಳಗಳು ನಿಮಗೆ ಒಳ್ಳೆ ಆಯ್ಕೆ


ಮ್ಯಾಂಗೊ ಬೈಟ್‌ನಿಂದ ಸುಂದರವಾದ ಕಿವಿಯಾಭರಣವನ್ನು ಮಾಡಿದ್ದು ರೂಪದರ್ಶಿ ಧರಿಸಿರುವ ಹಳದಿ ದಿರಿಸಿಗೆ ಇದು ಮ್ಯಾಚಿಂಗ್ ಆಗಿ ಸುಂದರವಾಗಿ ಕಾಣುತ್ತಿದೆ.


ಹೆಚ್ಚಿನ ವೀಕ್ಷಣೆ, ಕಾಮೆಂಟ್‌ಗಳನ್ನು ಪಡೆದುಕೊಂಡ ಪೋಸ್ಟ್


ಜನವರಿ 18 ರಂದು ಇನ್‌ಸ್ಟಾದಲ್ಲಿ ಈ ಪೋಸ್ಟ್ ಅನ್ನು ಹಾಕಲಾಗಿದ್ದು, ಪೋಸ್ಟ್ 5.7 ಮಿಲಿಯನ್‌ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೆಲವೊಂದು ಬಳಕೆದಾರರು ಮೋಜಿನ ಕಾಮೆಂಟ್‌ಗಳನ್ನು ರೂಪದರ್ಶಿಗೆ ನೀಡಿದ್ದು, ಮಕ್ಕಳಿಂದ ದೂರವಿರಿ ಎಂಬ ಸಲಹೆಯನ್ನು ನೀಡಿದ್ದಾರೆ.


ಮಕ್ಕಳಿಂದ ದೂರವಿರಲು ಸಲಹೆ ನೀಡಿದ ನೆಟ್ಟಿಗರು


ಬೇರೆ ಬಳಕೆದಾರರು ಪೋಸ್ಟ್‌ಗೆ ತಮಗೆ ಅನಿಸಿದ ರೀತಿಯಲ್ಲಿ ಕಾಮೆಂಟ್‌ಗಳನ್ನು ನೀಡಿದ್ದಾರೆ. ಹೆಚ್ಚಿನವರು ಮಕ್ಕಳಿಂದ ದೂರವಿರಿ ಎಂಬ ಸಲಹೆ ನೀಡಿದರೆ ಇನ್ನು ಕೆಲವರು ಸುಂದರವಾದ ಜಡೆ ಎಂದು ಹೊಗಳಿದ್ದಾರೆ. ಇನ್ನು ಕೆಲವರು ಜನರು ವಿಭಿನ್ನವಾಗಿರಬೇಕೆಂದು ಬಯಸಿ ಹುಚ್ಚರಾಗುತ್ತಿದ್ದಾರೆ ಎಂಬ ತಿವಿತದ ಕಾಮೆಂಟ್ ಅನ್ನು ನೀಡಿದ್ದಾರೆ.


ಬಾಲ್ಯದ ನೆನಪಿಗೆ ಜಾರಿದ ಬಳಕೆದಾರರು


ಬಾಲ್ಯದ ನೆನಪನ್ನು ಈ ಪೋಸ್ಟ್ ನೆನಪಿಸಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ಮೊದಲೆಲ್ಲಾ ಹೂವುಗಳನ್ನು ಬಳಸಿ ಈ ರೀತಿ ಜಡೆಯಾಟ ಆಡುತ್ತಿದ್ದೆವು ಆದರೆ ಚಾಕಲೇಟ್ ಬಳಸಿ ಮಾಡಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ಇನ್ನು ಕೆಲವರು ಇದೊಂದು ರೀತಿಯ ಕ್ರಿಯಾತ್ಮಕತೆ ಹಾಗೂ ಬುದ್ಧಿವಂತಿಕೆಯ ಮಿಳಿತವಾಗಿದೆ. ಅವರ ಕೆಲಸವನ್ನು ಶ್ಲಾಘಿಸಬೇಕೇ ಹೊರತು ಟೀಕಿಸಬಾರದು ಎಂಬ ಸಲಹೆ ನೀಡಿದ್ದಾರೆ.
ಇನ್ನು ಕೆಲವರು ಮೇಕಪ್ ಆರ್ಟಿಸ್ಟ್ ಸುಂದರವಾಗಿ ಮೇಕಪ್ ಮಾಡಿದ್ದಾರೆ ಆದರೆ ಅಸಂಬದ್ಧ ಆಯ್ಕೆಗಳನ್ನು ಮಾಡುವ ಮೂಲಕ ತಮ್ಮ ಶ್ರಮವನ್ನು ವ್ಯರ್ಥಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.

First published: