• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Trending News: ಕೆಲಸ ಹುಡುಕೋದಕ್ಕಿಂತ ಕಷ್ಟ ಬೆಂಗಳೂರಲ್ಲಿ ಮನೆ ಹುಡುಕೋದು, ಕಷ್ಟ ಬಿಚ್ಚಿಟ್ಟ ಗೂಗಲ್‌ ಉದ್ಯೋಗಿ!

Trending News: ಕೆಲಸ ಹುಡುಕೋದಕ್ಕಿಂತ ಕಷ್ಟ ಬೆಂಗಳೂರಲ್ಲಿ ಮನೆ ಹುಡುಕೋದು, ಕಷ್ಟ ಬಿಚ್ಚಿಟ್ಟ ಗೂಗಲ್‌ ಉದ್ಯೋಗಿ!

ವೈರಲ್ ನ್ಯೂಸ್​

ವೈರಲ್ ನ್ಯೂಸ್​

ಗೂಗಲ್ ಇಂಟರ್ವ್ಯೂ ನಲ್ಲಿ ಪಾಸಾಗಿ ಕೆಲಸ ಗಿಟ್ಟಿಸಿಕೊಂಡರೂ ಬಾಡಿಗೆಮನೆಯವರ ಮೊದಲ ಪರೀಕ್ಷೆಯನ್ನು ಕ್ಲೀಯರ್‌ ಮಾಡಲಾಗಲಿಲ್ಲ ಎಂಬುದಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.

  • Trending Desk
  • 3-MIN READ
  • Last Updated :
  • Bangalore, India
  • Share this:
  • published by :

ದೊಡ್ಡ ದೊಡ್ಡ ಸಿಟಿಗಳಲ್ಲಿ ಬಾಡಿಗೆ ಮನೆಗಳು ಬೇಕಾದಷ್ಟಿರುತ್ತವೆ. ಆದರೆ ನಮಗೆ ಬೇಕಾದಂತ ಬಾಡಿಗೆ ಮನೆ ಸಿಗೋದು ಕೆಲವೊಮ್ಮೆ ಕಷ್ಟವಾಗುತ್ತದೆ. ಇಂಥದ್ದೇ ಅನುಭವ ಸಾಕಷ್ಟು ಜನರಿಗೆ ಆಗಿರುತ್ತದೆ. ಗೂಗಲ್‌ನಲ್ಲಿ ಇಂಜಿನಿಯರ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಪಟ್ಟ ಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ವಿವರಿಸಿದ್ದಾರೆ. ಗೂಗಲ್‌ನಲ್ಲಿ ಇಂಜಿನಿಯರಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ರಿಪು ದಮನ್ ಭಡೋರಿಯಾ ಬೆಂಗಳೂರಿನಲ್ಲಿ (Bengaluru) ಬಾಡಿಗೆಗೆ ಮನೆ ಹುಡುಕಲು ಪಟ್ಟ ಕಷ್ಟ ಏನೆಂಬುದನ್ನು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಗೂಗಲ್ (Google)‌ ಇಂಟರ್ವ್ಯೂ ನಲ್ಲಿ ಪಾಸಾಗಿ ಕೆಲಸ ಗಿಟ್ಟಿಸಿಕೊಂಡರೂ ಬಾಡಿಗೆಮನೆಯವರ ಮೊದಲ ಪರೀಕ್ಷೆಯನ್ನು ಕ್ಲೀಯರ್‌ (Clear) ಮಾಡಲಾಗಲಿಲ್ಲ ಎಂಬುದಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.


ಕೊನೆಗೂ ಅವರು ಬಾಡಿಗೆ ಮನೆ ಹುಡುಕುವಲ್ಲಿ ಹೇಗೆ ಸಫಲರಾದರು ಎಂಬ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಬಾಡಿಗೆ ವಸತಿ ಹುಡುಕುವಾಗ ಎದುರಿಸುವ ತೊಂದರೆಗಳ ಬಗ್ಗೆ ಬಹಳಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಬಾಡಿಗೆ ಮನೆ ಪಡೆಯೋದು ಕಷ್ಟ!


ರಿಪು ಭಡೋರಿಯಾ ಅವರು 2022 ರಲ್ಲಿ ಸಿಯಾಟಲ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆದರೆ ಸಾಂಕ್ರಾಮಿಕ ಕೋವಿಡ್ ನಂತರದ ಹೆಚ್ಚಿನ ಬೇಡಿಕೆಯಿಂದಾಗಿ ಬಾಡಿಗೆಗೆ ಯೋಗ್ಯವಾದ ಸ್ಥಳವನ್ನು ಕಂಡುಹಿಡಿಯುವುದು ಕಷ್ಟಕರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಇಲ್ಲಿ ದಂಪತಿಗಳು ಬೇರೆ ಬೇರೆ ಮಲಗ್ತಾರಂತೆ, ಕಾರಣ ನಿಜಕ್ಕೂ ವಿಭಿನ್ನವಾಗಿದೆ!


ಬಾಡಿಗೆ ಮನೆಗೆ ಬೇಡಿಕೆ ಹೆಚ್ಚಾದಂತೆ ಮನೆ ಮಾಲೀಕರ ನಿರೀಕ್ಷೆಗಳು ಹೆಚ್ಚಾಗಿದ್ದವು. ಹಾಗೆಯೇ ಅನೇಕ ಅಪಾರ್ಟ್ಮೆಂಟ್ ಮಾಲೀಕರು ಬಾಡಿಗೆ ಬರಲು ಇಚ್ಛಿಸುವವರ ಸಂದರ್ಶನಗಳನ್ನು ನಡೆಸಲು ಪ್ರಾರಂಭಿಸಿದರು. “ನಾನು ಆ ಶೋಚನೀಯ ಸಂದರ್ಶನದಲ್ಲಿ ವಿಫಲನಾದೆ. ಆಗಲೇ ನನಗೆ ಗೊತ್ತಾಗಿದ್ದು ಅದು ಗೂಗಲ್‌ ಇಂಟರ್ವ್ಯೂಗಿಂತಲೂ ಕಷ್ಟದ್ದು ಅನ್ನುವುದು” ಎಂದು ಭಡೋರಿಯಾ ಹೇಳಿಕೊಂಡಿದ್ದಾರೆ.


ಸಂದರ್ಶನದ ಫೀಡ್‌ಬ್ಯಾಕ್‌ ಪಡೆದ ಬಳಿಕ ಕಾರಣ ಗೊತ್ತಾಯ್ತು!


ನಂತರದಲ್ಲಿ ರಿಪು ಭಡೋರಿಯಾ ಬಾಡಿಗೆದಾರರ ಸಂದರ್ಶನದಲ್ಲಿ ಉತ್ತೀರ್ಣರಾಗಲು ಒಂದು ತಂತ್ರವನ್ನು ಕಂಡುಕೊಂಡರು. ನಂತರ ಅವರು ಸಂದರ್ಶನದ ಬಗ್ಗೆ ನೇರವಾಗಿ ಮನೆ ಮಾಲೀಕರ ಪ್ರತಿಕ್ರಿಯೆ ಕೇಳಿದರು. ಅವರು ನಿಜವಾದ ಫೀಡ್‌ಬ್ಯಾಕ್‌ ನೀಡಿದರು. ಜೊತೆಗೆ ಅವರ ನಿರಾಕರಣೆಯ ಹಿಂದಿನ ಕಾರಣವನ್ನು ವಿವರಿಸಿದರು.


"ನಾನು ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವುದರಿಂದ ನಾನು ಮನೆಯನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಅವರು ನಂಬಿದ್ದರು. ಹಾಗಾಗಿ ತನಗೆ ಬಾಡಿಗೆ ಮನೆ ನೀಡಲಿಲ್ಲ" ಎಂಬುದಾಗಿ ರಿಪು ಬರೆದುಕೊಂಡಿದ್ದಾರೆ. ಅಲ್ಲದೇ ನಾನು ಗೂಗಲ್‌ನಲ್ಲಿ ಕೆಲಸ ಮಾಡುವುದು ಇಷ್ಟು ಅನನುಕೂಲಕರವಾಗಿರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.


ಕೊನೆಗೆ ಭಡೋರಿಯಾ ಅಂತಿಮವಾಗಿ ಎರಡನೇ ಸಂದರ್ಶನದಲ್ಲಿ ಯಶಸ್ವಿಯಾಗಿ, ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್ಮೆಂಟ್ ಪಡೆದಿದ್ದಾರೆ.


ಇದನ್ನೂ ಓದಿ: ಎಲ್ರೂ ತೂಕ ಇಳಿಸೋಕೆ ಊಟ ಬಿಟ್ರೆ, ತಿಂದು ತಿಂದೂ ತೂಕ ಇಳಿಸಿದ್ರು ಈ ಜೋಡಿ!


ಇನ್ನು ರಿಪು ಅವರ ಪೋಸ್ಟ್‌ಗೆ ಸಾಕಷ್ಟು ಜನರು ತಮ್ಮ ಅನುಭವಗಳನ್ನು ಕಾಮೆಂಟ್‌ ಮಾಡಿದ್ದಾರೆ. ಹೆಚ್ಚಿನ ಬಳಕೆದಾರರು ಹಾಸ್ಯದ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. “ನಾನು 2016 ರಲ್ಲಿ ಅಲ್ಲಿದ್ದೆ. ನೀವು ಚಿಕ್ಕ ಸ್ಕರ್ಟ್‌ಗಳನ್ನು ಧರಿಸುತ್ತೀರಾ? ಅಥವಾ ನಿಮ್ಮ ಸ್ಥಳಕ್ಕೆ ಪುರುಷ ಸ್ನೇಹಿತರು ಬರುತ್ತಾರೆಯೇ ಎಂಬ ಪ್ರಶ್ನೆಗಳನ್ನು ನನಗೆ ಕೇಳಲಾಯಿತು” ಎಂದು ಒಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.


“ನೋಟು ಅಮಾನ್ಯೀಕರಣ ಸಂಭವಿಸಿದೆ ಎಂದು ಮನೆ ಮಾಲೀಕರು ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ನಾನು ಟಿಸಿಎಸ್‌ನಲ್ಲಿ ಇದ್ದುದರಿಂದ ನನಗೆ ವಾಸಿಸಲು ಸ್ಥಳ ಸಿಕ್ಕಿತು. ಬೇರೆ ಕಂಪನಿಯಲ್ಲಿದ್ದ ನನ್ನ ಗೆಳೆಯನಿಗೆ 2 ತಿಂಗಳಾದರೂ ಇರಲು ಮನೆ ಸಿಗಲಿಲ್ಲ!” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.




ಒಟ್ಟಿನಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಬೇಟೆಯು ಹೆಚ್ಚು ತಲೆನೋವಾಗಿ ಪರಿಣಮಿಸುತ್ತಿದೆ. ಜನರು ಹೆಚ್ಚುತ್ತಿರುವ ಬಾಡಿಗೆ ಮತ್ತು ಹೆಚ್ಚಿನ ಡೆಪಾಸಿಟ್‌ ನೀಡಲಾಗದೇ ಕಷ್ಟ ಅನುಭವಿಸುತ್ತಿರುವುದಂತೂ ಹೌದು.

top videos
    First published: