• Home
  • »
  • News
  • »
  • trend
  • »
  • Viral Video: ಹುಲಿ ಘರ್ಜಿಸೋದು ಗೊತ್ತು, ಆದ್ರೆ ಸೀನೋದು ಗೊತ್ತಾ? ಟೈಗರ್ ಆ್ಯಕ್ಶಿ ಅಂದ್ರೆ ಹೇಗಿರುತ್ತೆ ಅಂತ ನೀವೇ ನೋಡಿ!

Viral Video: ಹುಲಿ ಘರ್ಜಿಸೋದು ಗೊತ್ತು, ಆದ್ರೆ ಸೀನೋದು ಗೊತ್ತಾ? ಟೈಗರ್ ಆ್ಯಕ್ಶಿ ಅಂದ್ರೆ ಹೇಗಿರುತ್ತೆ ಅಂತ ನೀವೇ ನೋಡಿ!

ಹುಲಿಯ ವಿಡಿಯೋ ವೈರಲ್​

ಹುಲಿಯ ವಿಡಿಯೋ ವೈರಲ್​

ಮನುಷ್ಯ ಸೀನುವುದು ಸಾಮಾನ್ಯ. ಆದರೆ ಹುಲಿ ಸೀನುವುದನ್ನು ನೀವು ಬಹುಶಃ ನೋಡಿರುವುದಿಲ್ಲ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

  • Share this:

ಹುಲಿ (Tiger) ನಮ್ಮ ರಾಷ್ಟ್ರೀಯ ಪ್ರಾಣಿ ಎಂದು ಎಲ್ಲರಿಗೂ ಗೊತ್ತು. ಈ ಪ್ರಾಣಿ ಅಂದ್ರೆ ಅದೇನೋ ಒಂದು ರೀತಿಯ ಭಯ ಅಲ್ವಾ. ಇದರ ಘರ್ಜನೆಯನ್ನು ಕೇಳ್ತಾ ಇದ್ರೆ ಎದೆಯಲ್ಲಿ ಒಂದು ರೀತಿಯ ನಡುಕ ಬರುತ್ತದೆ. ನಾವು ಝೂಗಳಿಗೆ ಹೋದಾಗ ಅಲ್ಲಿ ಕೂಡ ಹುಲಿ, ಸಿಂಹಗಳು ಇರುತ್ತದೆ.  ನಾವು ದೋರದಿಂದ ನೋಡಿ, ಅಲ್ಲೇ ಮನರಂಜಿಸಬೇಕೇ ಹೊರತು ಅವುಗಳಿಗೆ ಯಾವುದೇ ಕಾರಣಕ್ಕೂ  ತೊಂದರೆಯನ್ನು ಕೊಡಬಾರದು.  ಪ್ರಾಣಿಗಳನ್ನು (Animals) ಅವುಗಳ ಪಾಡಿಗೆ ಬಿಟ್ಟರೆ ಎಷ್ಟು  ಮುಗ್ಧವಾಗಿ ಓಡಾಡಿಕೊಂಡು ಇರುತ್ತದೆ ಎಂದು ನೋಡುವುದಕ್ಕೇ ಒಂದು ರೀತಿಯಾಗಿ  ಖುಷಿ ಅಲ್ವಾ? ಅವುಗಳು ತಮ್ಮ ಕುಟುಂಬದ (Family) ಜೊತೆಗೆ ಇರುವ ರೀತಿ, ಜೀವನ ಶೈಲಿಗಳೇ (Lifestyle) ಚೆಂದ. ಇದೀಗ ಹುಲಿಯಿ ಸೀನುವ ವಿಡಿಯೋ ವೈರಲ್ (Video Viral)​ ಆಗಿದೆ.


ಅರೇ ಇದೇನಪ್ಪಾ ಹುಲಿ ಸೀನುವುದಾ ಅಂತ ಆಶ್ಚರ್ಯ ಆಗ್ತಾ ಇದ್ದೀರಾ? ಹೌದು, ಆ ಸೀನುವುದ್ರಲ್ಲೂ ಒಂದು ರೀತಿಯಾದ ಖಡಕ್​, ಸ್ಟೈಲ್​ ಇದೆ. ಅದ್ರಲ್ಲೂ ಈ ವಿಡಿಯೋದಿಂದ ಇನ್ನಷ್ಟು ಹತ್ತಿರದಿಂದ ನಾವು ಈ ಹುಲಿ ಸೀನುವುದನ್ನು ಕಾಣಬಹುದಾಗಿದೆ. ಅದೇ ರೀತಿಯಾಗಿ ಸಾಕಷ್ಟು ಲೈಕ್ಸ್​ ಮತ್ತು ಕಮೆಂಟ್ಸ್​ಗಳು ಬಂದಿವೆ.


ನಾವು ವಾಸಿಸುವ ಪ್ರದೇಶಗಳಲ್ಲಿ ಸಾಕಷ್ಟು ಧೂಳು ಮತ್ತು ವಾಯು ಮಾಲಿನ್ಯವಿದೆ. ಇಂತಹ ವಸ್ತುಗಳು ನಮ್ಮ ಮೂಗಿನ ಮೂಲಕ ಶ್ವಾಸಕೋಶಕ್ಕೆ ಹೋಗುವ ಅಪಾಯವಿದ್ದಾಗ, ಮೆದುಳು ಎಚ್ಚರಗೊಳ್ಳುತ್ತದೆ. ಅವುಗಳನ್ನು ಸೀನುವಿಕೆಯ ರೂಪದಲ್ಲಿ ಮೂಗಿನ ಮೂಲಕ ಹೊರಹಾಕಲಾಗುತ್ತದೆ. ಧೂಳು ಹೋಗುವವರೆಗೂ ಸೀನುಗಳು ಬರುತ್ತಲೇ ಇರುತ್ತವೆ. ಸೀನುವಾಗ ಮೂಗಿನಿಂದ ಗಾಳಿ ಎಷ್ಟು ವೇಗವಾಗಿ ಬರುತ್ತದೆ ಗೊತ್ತಾ? ವೇಗದಲ್ಲಿ ಗಂಟೆಗೆ 160 ಕಿ.ಮೀ. ಯಾಕೆಂದರೆ ನಾವು ಅಷ್ಟು ವೇಗದಲ್ಲಿ ಸೀನುತ್ತೇವೆ. ಮೂಗಿನಲ್ಲಿ ಏನು ಸಿಕ್ಕಿಕೊಂಡರೂ ಹೊರಹೋಗುತ್ತದೆ.


ಇದನ್ನೂ ಓದಿ: ಈ ಮಾರುಕಟ್ಟೆಯಲ್ಲಿ ನಿಮಗೆ ಬೇಕಾಗಿದ್ದು ಕೊಂಡುಕೊಳ್ಳಬಹುದು, ಇಲ್ಲಿ ಮುಟ್ಟಿದ್ದಕ್ಕೆಲ್ಲಾ ಕಡಿಮೆ ಬೆಲೆ!







ಜನರು ಸೀನುವುದು ಸಾಮಾನ್ಯವಾಗಿದೆ. ಆದರೆ ಕಾಡು ಹುಲಿ ಸೀನುವುದನ್ನು ನಾವು ಬಹುಶಃ ನೋಡಿರೋದಿಲ್ಲ. ಹುಲಿಗಳು ಹೆಚ್ಚು ಸೀನುವುದಿಲ್ಲ, ಆದರೂ ಅವು ಯಾವಾಗಲೂ ಘರ್ಜಿಸುತ್ತವೆ. ಆಗ ಕಾಡಿನಲ್ಲಿ ಮಾಲಿನ್ಯರಹಿತ ವಾತಾವರಣವನ್ನು ಹೊಂದಿರುತ್ತದೆ ಎಂದು ಅರ್ಥ.  ಹಾಗಾಗಿ  ಸೀನುವ ಕೆಲಸವಿಲ್ಲ ಆ ಪ್ರಾಣಿಗಳಿಗೆ. ಒಂದು ಹುಲಿ ಎರಡು ಬಾರಿ ಸೀನಿದೆ. ಈ ವೀಡಿಯೊವನ್ನು ಜನವರಿ 16, 2023 ರಂದು ರೆಡ್ಡಿಟ್‌ನಲ್ಲಿ helenarycroft23 ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವೀಡಿಯೊ 23 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. "ನೀವು ಹುಲಿ ಸೀನುವುದನ್ನು ನೋಡಿದ್ದೀರಾ? ಅದು ತುಂಬಾ ಸುಂದರವಾಗಿ ಸೀನುತ್ತದೆ" ಎಂದು ಅವರು ಶೀರ್ಷಿಕೆ ನೀಡಿದ್ದಾರೆ.




ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರನು "ಅದು ಸೀನಿದಾಗ ಅದರ ಮುಖವು ಬದಲಾಗುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ ಮತ್ತು ಇನ್ನೊಬ್ಬ ಬಳಕೆದಾರರು "ನಾನು ಸೀನುವಂತೆಯೇ ಸೀನುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, "ನನಗೆ ಸೀನಲು ಇಷ್ಟ. ಸೀನುವ ನಂತರ ನಾನು ಶಾಂತವಾಗಿರುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ. ಇವೆಲ್ಲವೂ ಹಾಸ್ಯಾಸ್ಪದವಾಗಿದೆ ಅಲ್ವಾ? ಹುಲಿ ಸೀನುವುದು ಅಷ್ಟೊಂದು ಏನು ವಿಶೇಷ ಅಲ್ಲ ಅಂತ ನಿಮಗೆ ಅನಿಸಬಹುದು. ಆದ್ರೆ ಇವುಗಳು ಸೀನುವುದು ತುಂಬಾ ಅಪರೂಪ.









ಮನುಷ್ಯರಂತೆ ಪ್ರಾಣಿಗಳೂ ಆಕಳಿಸುತ್ತವೆ, ಸೀನುತ್ತವೆ ಮತ್ತು ಅಳುತ್ತವೆ. ಆದರೆ ಮನುಷ್ಯ ನಗುವಂತೆ ಪ್ರಾಣಿಗಳು ನಗಲಾರವು. ಈ ವೈಶಿಷ್ಟ್ಯವು ಮನುಷ್ಯನನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತದೆ. ಈ ವಿಡಿಯೋ ನೋಡಿದ್ರೆ ನಿಮಗೇ ಗೊತ್ತಾಗುತ್ತೆ.











First published: