• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • New Rules: ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳದಂತೆ ತಡೆಯಲು ಆಸ್ಟ್ರಿಯಾ ಹೊಸ ಪ್ಲ್ಯಾನ್​

New Rules: ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳದಂತೆ ತಡೆಯಲು ಆಸ್ಟ್ರಿಯಾ ಹೊಸ ಪ್ಲ್ಯಾನ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ವಿಶ್ವಪ್ರಸಿದ್ಧ ನೋಟದೊಂದಿಗೆ ಕೆಲವು ಸೆಲ್ಫಿಗಳನ್ನು ಕ್ಲಿಕ್ಕಿಸುವ ಭರವಸೆಯೊಂದಿಗೆ ಈ ಪಟ್ಟಣಕ್ಕೆ ಬರುತ್ತಾರೆ.

  • Share this:

ಎಷ್ಟೋ ಸಲ ಪ್ರಕೃತಿಯ (Nature) ಮಡಿಲಲ್ಲಿ ಇರುವ ಒಂದು ಸುಂದರವಾದ ಸ್ಥಳವು ಅನೇಕ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಆದರೆ ಈ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ, ಪ್ರವಾಸಿಗರು ಮಾಡುವ ಅನೇಕ ಕೆಲಸಗಳು ಅಲ್ಲಿಯೇ ಇರುವ ನಿವಾಸಿಗಳಿಗೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸುವುದು ಸಹ ಅಷ್ಟೇ ಸತ್ಯ ನೋಡಿ. ಸುಂದರವಾದ ಪರ್ವತಗಳಿಂದ ತುಂಬಿರುವ ಆಸ್ಟ್ರಿಯಾದ ಪಟ್ಟಣವಾದ ಹಾಲ್‌ಸ್ಟಾಟ್ ಅಂತ ಹೇಳಿದರೆ ಸಾಕು, ಅನೇಕರಿಗೆ ಡಿಸ್ನಿಯ 'ಫ್ರೋಝನ್' ಚಿತ್ರ ನೆನಪಾಗುತ್ತದೆ. ಏಕೆಂದರೆ ಇಲ್ಲಿನ ಸುಂದರವಾದ ಪರ್ವತಗಳ (Hill) ಹಿನ್ನೆಲೆಯು ಡಿಸ್ನಿಯ ಫ್ರೋಝನ್ ಸಾಮ್ರಾಜ್ಯವಾದ ಅರೆಂಡೆಲ್ ಪಾತ್ರಕ್ಕೆ ಸ್ಫೂರ್ತಿ ನೀಡಿತು ಎಂದು ನಂಬಲಾಗಿದೆ. ಆದ್ದರಿಂದ, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ವಿಶ್ವಪ್ರಸಿದ್ಧ ನೋಟದೊಂದಿಗೆ ಕೆಲವು ಸೆಲ್ಫಿಗಳನ್ನು ಕ್ಲಿಕ್ಕಿಸುವ (Photo Click) ಭರವಸೆಯೊಂದಿಗೆ ಈ ಪಟ್ಟಣಕ್ಕೆ ಬರುತ್ತಾರೆ.


ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಗೋಡೆ ನಿರ್ಮಿಸಿದ್ದಾರಂತೆ.


ಪ್ರವಾಸಿಗರು ಈ ಪಟ್ಟಣದಲ್ಲಿ ಎಷ್ಟು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆಂದರೆ, ಸಂದರ್ಶಕರು ಈ ಸುಂದರವಾದ ಪರ್ವತಗಳ ಮುಂದೆ ನಿಂತು ತಮ್ಮ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ತಡೆಯಲು ಅಧಿಕಾರಿಗಳು ಇತ್ತೀಚೆಗೆ ಅಲ್ಲಿ ಒಂದು ಮರದಿಂದ ಮಾಡಿದ ದೊಡ್ಡ ಗೋಡೆಯನ್ನು ನಿರ್ಮಿಸಿದ್ದಾರೆ.


ಡಿಸ್ನಿಯ 'ಫ್ರೋಝನ್' ಚಿತ್ರಕ್ಕೆ ಸ್ಫೂರ್ತಿ ನೀಡಿದ ಇಲ್ಲಿನ ಸುಂದರವಾದ ಭೂದೃಶ್ಯಗಳ ಮುಂದೆ ನಿಂತುಕೊಂಡು ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಇಲ್ಲಿನ ಅಧಿಕಾರಿಗಳು ಈ ಗೋಡೆಯೊಂದನ್ನು ನಿರ್ಮಿಸಿದ್ದಾರಂತೆ.


ತಾತ್ಕಾಲಿಕವಾಗಿ ಒಂದು ಮರದ ರಚನೆಯು ಪ್ರಾಯೋಗಿಕ ಯೋಜನೆಯ ಭಾಗವಾಗಿದೆ ಮತ್ತು ಸಂದರ್ಶಕರ ಒಳಹರಿವನ್ನು ಮಿತಿಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿರುವ ಹಲವಾರು ಕ್ರಮಗಳಲ್ಲಿ ಇದು ಸಹ ಒಂದಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.


ಈ ಸ್ಥಳ ಯುನೆಸ್ಕೋ ಸಂರಕ್ಷಿತ ತಾಣವಂತೆ


ಈ ಸ್ಥಳವು ಯುನೆಸ್ಕೋ ಸಂರಕ್ಷಿತ ತಾಣವಾಗಿದ್ದು, ಇದು ಸುಮಾರು 800 ಜನಸಂಖ್ಯೆಯನ್ನು ಹೊಂದಿದೆ. ಆದಾಗ್ಯೂ, ಸಂದರ್ಶಕರ ಸಂಖ್ಯೆ ದಿನಕ್ಕೆ 10,000 ತಲುಪಬಹುದು ಎಂದು ಬಿಬಿಸಿ ತಿಳಿಸಿದೆ.


ಇದನ್ನೂ ಓದಿ: ನೀರಿನ ಬರದಿಂದಾಗಿ ಅಪಾಯ ಎದುರಿಸುತ್ತಿರುವ ಏಷ್ಯಾದ 16 ದೇಶಗಳಿವು!


ಇಲ್ಲಿನ ಮೇಯರ್ ಅಲೆಕ್ಸಾಂಡರ್ ಸ್ಕೀಟ್ಜ್ ಅವರು ಪ್ರವಾಸಿಗರ ಸಂಖ್ಯೆಯನ್ನು ಕನಿಷ್ಠ ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡಲು ಬಯಸಿದ್ದರು ಎಂದು ಸ್ಥಳೀಯ ಪತ್ರಿಕೆಯ ವರದಿಯೊಂದು ತಿಳಿಸಿದೆ.


ಇತ್ತೀಚಿನ ವರ್ಷಗಳಲ್ಲಿ ಹಲವಾರು ಯುರೋಪಿಯನ್ ಹಾಟ್ ಸ್ಪಾಟ್ ಗಳಿಗೆ ಓವರ್ ಟೂರಿಸಂ ಹೆಚ್ಚು ಒತ್ತಡದ ಸಮಸ್ಯೆಯಾಗಿದೆ, ವೆನಿಸ್ ಮತ್ತು ಬಾರ್ಸಿಲೋನಾದಂತಹ ತಾಣಗಳು ಜನರನ್ನು ದೂರವಿರಲು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿವೆ.


ಪ್ರಪಂಚದಾದ್ಯಂತದ ಪ್ರಯಾಣಿಕರಲ್ಲಿ, ಸಾಮಾಜಿಕ ಮಾಧ್ಯಮವು ಆಗಾಗ್ಗೆ ಅಂತಹ ಪ್ರದೇಶಗಳ ಬಗ್ಗೆ ಆಸಕ್ತಿಯನ್ನು ಇನ್ನಷ್ಟು ಪ್ರೇರೇಪಿಸಿದೆಯಂತೆ.


ಪ್ರವಾಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಇನ್ನೂ ಅನೇಕ ಕ್ರಮಗಳನ್ನು ಕೈಗೊಂಡ ಅಧಿಕಾರಿಗಳು


ಜನಸಂದಣಿಯನ್ನು ಎದುರಿಸಲು, ಇತರ ಗ್ರಾಮಗಳು ಮತ್ತು ನಗರಗಳು ಸಹ ಪ್ರವಾಸಿಗರನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿವೆ. ಉದಾಹರಣೆಗೆ, ಫ್ಲಾರೆನ್ಸ್ ನಲ್ಲಿ ಪಾದಚಾರಿ ಮಾರ್ಗದಲ್ಲಿ ಮತ್ತು ಅಂಗಡಿಗಳ ಮುಂದೆ ಮನೆ ಬಾಗಿಲಲ್ಲಿ ನಿಂತುಕೊಂಡು ಆಹಾರ ಪದಾರ್ಥಗಳನ್ನು ತಿನ್ನುವ ಪ್ರವಾಸಿಗರ ಮೇಲೆ 500 ಅಥವಾ 555 ಡಾಲರ್ ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ ಅಂತ ದಿ ಟೆಲಿಗ್ರಾಫ್ ವರದಿ ಮಾಡಿತ್ತು.


ಆದಾಗ್ಯೂ, ಪ್ರವಾಸಿಗರ ಸೆಲ್ಫಿಗೆ ಬ್ರೇಕ್ ಹಾಕಲು ತೆಗೆದುಕೊಂಡ ಈ ಕ್ರಮಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಜನರಿಂದ ತುಂಬಾನೇ ವಿರೋಧ ವ್ಯಕ್ತವಾಯಿತು ಮತ್ತು ಈಗ ಆ ಗೋಡೆಯನ್ನು ತೆಗೆದು ಹಾಕಲಾಗಿದೆ.


ಇದನ್ನೂ ಓದಿ: ಭಾರತೀಯ ರಾಜಕಾರಣಿಗಳು ಏಕೆ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಫ್ಯಾಕ್ಟ್​


ಈ ಸ್ಥಳದಲ್ಲಿ ನಿವಾಸಿಗಳು ಸಹ ಇದ್ದಾರೆ ಅಂತ ನೆನಪಿಸುವ ಬ್ಯಾನರ್ ಅನ್ನು ಇರಿಸುವುದಾಗಿ ಹಾಲ್‌ಸ್ಟಾಟ್ ನ ಮೇಯರ್ ಅಲೆಕ್ಸಾಂಡರ್ ಸ್ಕೀಟ್ಜ್ ಅವರು ಹೇಳಿದ್ದಾರೆ.


ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಮೊದಲು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಈ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದರು. ಹಾಲ್‌ಸ್ಟಾಟ್ ಈಗ ಒಂದು ಜನಪ್ರಿಯ ತಾಣವಾಗಿ ಮಾರ್ಪಟ್ಟಿದೆ, ವಿಶೇಷವಾಗಿ ಪೂರ್ವ ಮತ್ತು ಆಗ್ನೇಯ ಏಷ್ಯಾದ ಪ್ರವಾಸಿಗರಿಗೆ ಅಂತ ಹೇಳಬಹುದು.




ಈಗ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಮತ್ತು ಪಟ್ಟಣವು ಅತಿಯಾದ ಪ್ರವಾಸೋದ್ಯಮವನ್ನು ನಿಗ್ರಹಿಸಲು ಯೋಜಿಸುತ್ತಿದೆ. ಹಾಲ್‌ಸ್ಟಾಟ್ ನಲ್ಲಿ ಅಧಿಕಾರಿಗಳು ಪಟ್ಟಣಕ್ಕೆ ಪ್ರವೇಶಿಸಬಹುದಾದ ಬಸ್ಸುಗಳು ಮತ್ತು ಕಾರುಗಳ ಸಂಖ್ಯೆಯಲ್ಲಿ ಈಗಾಗಲೇ ದೈನಂದಿನ ಮಿತಿಗಳನ್ನು ಪರಿಚಯಿಸಿದ್ದಾರೆ.

top videos
    First published: