ವಿದೇಶ ಸುತ್ತುವ ಯೋಚನೆ ಇದ್ದರೆ ಪ್ಲ್ಯಾನ್ ಮಾಡಿ: ನೀವು ಈಗ ಯಾವ ದೇಶಗಳಿಗೆ ಹೋಗಬಹುದು ಗೊತ್ತಾ?

ರಷ್ಯಾ, ಕಾಮನ್‍ವೆಲ್ತ್‌ನ ಸ್ವತಂತ್ರ ರಾಜ್ಯಗಳಾದ ಉಕ್ರೇನ್, ಈಜಿಪ್ಟ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಕಿಂಗ್‍ಡಮ್, ಕೆನಡಾ, ಯುನೈಟೆಡ್ ಸ್ಟೇಟ್ಸ್, ಯುರೋಪ್, ಯುನೈಟೆಡ್ ಅರಬ್ ಎಮಿರೇಟ್ಸ್, ಹಾಂಗ್‍ಕಾಂಗ್, ಥೈಲಾಂಡ್ ಮತ್ತು ಶ್ರೀಲಂಕಾ ಸೇರಿದಂತೆ ಕೆಲವು ರಾಷ್ಟ್ರಗಳು ಕೆಲವು ಷರತ್ತುಗಳೊಂದಿಗೆ ಭಾರತೀಯ ಪ್ರವಾಸಿಗರಿಗೆ ಬಾಗಿಲು ತೆರೆದಿದೆ.

Photo: Google

Photo: Google

  • Share this:

ಬೇಸಿಗೆ ಪ್ರವಾಸದ ಯೋಚನೆಯಲ್ಲಿದ್ದೀರಾ? ವಿದೇಶದ ಕಡೆ ಹೋಗುವ ಆಲೋಚನೆಯಿದ್ದರೆ ಕೆಲವು ರಾಷ್ಟ್ರಗಳು ಭಾರತದ ಪ್ರವಾಸಿಗರಿಗೆ ಅನುಮತಿ ನೀಡಿದೆ. ನಿರಾಯಾಸವಾಗಿ ಪ್ರಯಾಣ ಮಾಡಬಹುದು, ವಿದೇಶಗಳನ್ನು ಸುತ್ತಬಹುದು. ಕೊರೋನಾ ಎರಡನೇ ಅಲೆಯ ಕಾರಣ ಸಾಕಷ್ಟು ರಾಷ್ಟ್ರಗಳು ಭಾರತೀಯ ಪ್ರವಾಸಿಗರಿಗೆ ನಿಷೇಧ ಹೇರಿತ್ತು. ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ್ದವು. ಇದೀಗ ಹಲವು ರಾಷ್ಟ್ರಗಳು ಕೆಲವು ನಿಬಂಧನೆಗಳೊಂದಿಗೆ ಭಾರತದ ಪ್ರವಾಸಿಗರು ಬೇಸಿಗೆಯ ಮೋಜನ್ನು ಅನುಭವಿಸಲು ಅನುವು ಮಾಡಿದೆ.


ರಷ್ಯಾ, ಕಾಮನ್‍ವೆಲ್ತ್‌ನ ಸ್ವತಂತ್ರ ರಾಜ್ಯಗಳಾದ ಉಕ್ರೇನ್, ಈಜಿಪ್ಟ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಕಿಂಗ್‍ಡಮ್, ಕೆನಡಾ, ಯುನೈಟೆಡ್ ಸ್ಟೇಟ್ಸ್, ಯುರೋಪ್, ಯುನೈಟೆಡ್ ಅರಬ್ ಎಮಿರೇಟ್ಸ್, ಹಾಂಗ್‍ಕಾಂಗ್, ಥೈಲಾಂಡ್ ಮತ್ತು ಶ್ರೀಲಂಕಾ ಸೇರಿದಂತೆ ಕೆಲವು ರಾಷ್ಟ್ರಗಳು ಕೆಲವು ಷರತ್ತುಗಳೊಂದಿಗೆ ಭಾರತೀಯ ಪ್ರವಾಸಿಗರಿಗೆ ಬಾಗಿಲು ತೆರೆದಿದೆ.


ಕಳೆದ ತಿಂಗಳು ಮಾಲ್ಡೀವ್ಸ್, ನೇಪಾಳ, ಮತ್ತು ಯುಎಇ ರಾಷ್ಟ್ರಗಳು ಭಾರತೀಯ ಪ್ರವಾಸಿಗರ ಪ್ರವಾಸಿ ವೀಸಾವನ್ನು ನಿರಾಕರಿಸಿದ್ದವು. ಈ ನಿಬಂಧನೆ ಇನ್ನೂ ಮುಂದುವರೆದಿದೆ. ಮಾಲ್ಡೀವ್ಸ್, ದುಬೈ, ಸೀಶೆಲ್ಸ್‌, ನೇಪಾಳ ರಾಷ್ಟ್ರಗಳು ಆದಷ್ಟು ಬೇಗ ಮುಕ್ತಗೊಳ್ಳಬೇಕೆಂಬ ಆಶಯ ಇದೆ. ಆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಅನ್ಯ ದೇಶಗಳು ಇ-ವೀಸಾವನ್ನು ಸಹ ನೀಡುತ್ತಿಲ್ಲ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಟೂರ್ ಆಪರೇಟರ್ಸ್ (ಐಎಟಿಒ) ಅಧ್ಯಕ್ಷ ರಾಜೀವ್ ಮೆಹ್ರಾ ಹೇಳಿದರು.


ರಷ್ಯಾ


ಪ್ರವಾಸಿ ವೀಸಾಗಳ ಮೂಲಕ ಭಾರತೀಯರು ಬರಲು ಅವಕಾಶ ನೀಡುವ ಕೆಲವೇ ದೇಶಗಳಲ್ಲಿ ರಷ್ಯಾವೂ ಒಂದು. ಆದರೆ ಪ್ರಸ್ತುತ ಸಂದರ್ಭದಲ್ಲಿ ಕಡಿಮೆ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದು, ಜನರು ಹೊರಹೋಗಲು ಸಹ ಯೋಗ್ಯವಾದ ಸಮಯವಾಗಿಲ್ಲ. ಅಲ್ಲದೆ, 'ಲಸಿಕೆ ರಜಾದಿನಗಳು' ಎಂಬ ಭರವಸೆಗಳು ಸುಳ್ಳಾಗಿವೆ, ಏಕೆಂದರೆ ರಷ್ಯಾದ ಅಧಿಕಾರಿಗಳು ಇಂಡಿಯಾ ಟುಡೆ ಟೆಲಿವಿಷನ್‍ಗೆ ದೇಶವು ಪ್ರವಾಸಿಗರಿಗೆ ವ್ಯಾಕ್ಸಿನೇಷನ್ ನೀಡುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ.


ಟರ್ಕಿ


ಟರ್ಕಿ ದೇಶವು ಭಾರತೀಯ ಪ್ರವಾಸಿಗರಿಗೆ ಬರಲು ಅನುಮತಿ ನೀಡಿದೆ. ಆದರೆ ಬಂದವರು 14 ದಿನ ಕ್ವಾರಂಟೈನ್‍ಗೆ ಒಳಪಡಬೇಕು ಎಂದು ಹೇಳಿದೆ. ಪ್ರವಾಸಿಗರು 14ನೇ ದಿನ RTPCR ಪರೀಕ್ಷೆಗೊಳಪಡಬೇಕು. ವರದಿ ನೆಗೆಟಿವ್ ಬಂದರೆ ಮಾತ್ರ ಕ್ವಾರಂಟೈನ್‍ನಿಂದ ಹೊರಬರಬಹುದು.


ಈಜಿಪ್ಟ್


ಈಜಿಪ್ಟ್ ಭಾರತೀಯ ಪ್ರವಾಸಿಗರಿಗೂ ಮುಕ್ತ ತಾಣವಾಗಿದೆ, ಆದರೆ ದೇಶಕ್ಕೆ ಆಗಮಿಸಿದ ನಂತರ ಶೀಘ್ರ ಡಿಎನ್‍ಎ ಪರೀಕ್ಷೆಗೆ ಒಳಪಡಬೇಕು. ಅಕಸ್ಮಾತ್ ವರದಿ ಪಾಸಿಟಿವ್ ಬಂದಲ್ಲಿ, ಪ್ರಯಾಣಿಕರಿಗೆ ಅವರ ಸ್ಥಳಕ್ಕೆ ವಾಪಸ್ ಹೋಗಲು ಕೇಳಲಾಗುತ್ತದೆ ಅಥವಾ ಕನಿಷ್ಠ 14 ದಿನಗಳವರೆಗೆ ಕ್ವಾರಂಟೈನ್‍ನಲ್ಲಿರಲು ತಿಳಿಸಲಾಗುತ್ತದೆ.


ದಕ್ಷಿಣ ಆಫ್ರಿಕಾ


ದಕ್ಷಿಣ ಆಫ್ರಿಕಾವು ಭಾರತೀಯ ಪ್ರವಾಸಿಗರಿಗೆ ಯಾವುದೇ ಪ್ರಯಾಣ ನಿರ್ಬಂಧವನ್ನು ಇನ್ನೂ ವಿಧಿಸಿಲ್ಲ ಆದರೆ ವಿಮಾನ ಸೌಲಭ್ಯಗಳು ಮಾತ್ರ ಸೀಮಿತವಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಪ್ರಸ್ತುತ ಕರ್ಫ್ಯೂ ಒಂದನೇ ಹಂತ ಜಾರಿಯಲ್ಲಿದೆ.


ಭಾರತದಲ್ಲಿ ಕೊರೋನಾ ನಿಯಂತ್ರಣ ದೊಡ್ಡ ಸವಾಲಾಗಿದೆ. ಭಾರತದಲ್ಲಿ ಪ್ರತಿನಿತ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ಲಕ್ಷಕ್ಕಿಂತ ಕಡಿಮೆಯಾಗುವುದನ್ನು ಎಲ್ಲಾ ದೇಶಗಳು ಕಾಯುತ್ತಿದೆ. ಇದೀಗ ಇದರ ಬೆನ್ನಲೇ ಕಪ್ಪು ಶಿಲೀಂಧ್ರಗಳು ಸಹ ಭಾರತದ ಬೆನ್ನು ಬಿದ್ದಿದೆ. ಇದು ಜುಲೈ ಮತ್ತು ಆಗಸ್ಟ್ ತಿಂಗಳವರೆಗೂ ಕಡಿಮೆಯಾಗುವಂತೆ ತೋರುತ್ತಿಲ್ಲ. ಅಲ್ಲದೇ ವಿದೇಶಿಗರು ಸಹ ಮುಂದಿನ ವರ್ಷ ಭಾರತಕ್ಕೆ ಹೋಗಲು ಸಾಧ್ಯವಾಗುತ್ತದೆಯೇ ವಿನಃ ಅದಕ್ಕೂ ಮೊದಲು ಅಸಾಧ್ಯ ಎನ್ನುತ್ತಾರೆ ರಾಜೀವ್ ಮೆಹ್ರಾ.


ಪ್ರವಾಸೋದ್ಯಮ ಇಲಾಖೆಯ ಮಾರ್ಚ್ 31, 2021ರಷ್ಟರ ಅಂಕಿ ಅಂಶಗಳ ಪ್ರಕಾರ ಪ್ರತ್ಯಕ್ಷವಾಗಿ 2 ಲಕ್ಷ ಕೋಟಿ ನಷ್ಟ ಅನುಭವಿಸಿದಂತಾಗಿದೆ. ಪರೋಕ್ಷವಾಗಿ ಸುಮಾರು 6 ಲಕ್ಷ ಕೋಟಿ ನಷ್ಟ ಕಂಡಿದೆ. ಅಲ್ಲದೇ ಒಟ್ಟಾರೆ ಪ್ರವಾಸಕ್ಕೆ ಸಂಬಂಧಿಸಿದಂತೆ 15 ಲಕ್ಷ ಕೋಟಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.


ಮೊದಲ ಹಂತವಾಗಿ ಲಸಿಕೆ ಹಾಕಿದವರಿಗೆ ಅಥವಾ ಲಸಿಕೆ ಪಾಸ್‍ಪೋರ್ಟ್‍ಗಳು ಹೊಂದಿರುವವರಿಗೆ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಎಸ್‍ಟಿಐಸಿ ಟ್ರಾವೆಲ್‍ನ ಅಧ್ಯಕ್ಷ ಸುಭಾಷ್ ಗೋಯಲ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯನ್ನು ಇನ್ನೂ ಪಡೆಯದಿರುವ ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್‌ ಅನ್ನು ಉಲ್ಲೇಖಿಸಿ, ಯುಎಇಯಂತಹ ಭಾರತೀಯ ಪ್ರವಾಸಿಗರನ್ನು ಅವಲಂಬಿಸಿರುವ ದೇಶಗಳು ತಮ್ಮ ಅನುಮೋದನೆಯನ್ನು ನೀಡಬೇಕಾಗುತ್ತದೆ ಎಂದು ಗೋಯಲ್ ಗಮನ ಸೆಳೆದರು. ವಿಶೇಷವಾಗಿ ಅವರು ಮೊದಲು ನೆಗೆಟಿವ್ RTPCR ಪರೀಕ್ಷೆಯ ಆಧಾರದ ಮೇಲೆ ಪ್ರವೇಶವನ್ನು ಅನುಮತಿ ನೀಡಬೇಕು ಎಂದು ಹೇಳಿದರು.


ಪ್ರವಾಸೋದ್ಯಮದ ಮುಖಂಡರು ಡಬ್ಲ್ಯುಎಚ್‍ಒದಿಂದ ಅಗತ್ಯ ಅನುಮೋದನೆಯನ್ನು ತ್ವರಿತವಾಗಿ ಕೇಳಿದ್ದಾರೆ. ಅಂತೆಯೇ, ಲಸಿಕೆ ಹಾಕಿದ ವಿದೇಶಿಯರು ಭಾರತಕ್ಕೆ ಬರುವ ಮಾರ್ಗವನ್ನು ತೆರವುಗೊಳಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಪ್ರವಾಸೋದ್ಯಮದ ಕುರಿತು ಮಾತನಾಡಿದ ಗೋಯಲ್, "2021 ಕೊರೋನಾದಿಂದಾಗಿ ಸಂಪೂರ್ಣವಾಗಿ ಹೀನಾಯ ಪರಿಸ್ಥಿತಿ ತಲುಪಿದೆ. ಈ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ವರ್ಷ ಜನವರಿಯಿಂದ ವಿದೇಶಿ ಪ್ರವಾಸಿಗರು ಬರಲು ಪ್ರಯತ್ನಿಸಬಹುದು. ಅಂತಿಮವಾಗಿ, ನಾವು ಈ ಕೊರೋನಾ ಬದುಕಲು ಕಲಿಯಬೇಕು ಎಂದು ಹೇಳಿದರು.


First published: