• Home
  • »
  • News
  • »
  • trend
  • »
  • Transparent Wood: ಪ್ಲಾಸ್ಟಿಕ್​​ಗೆ ಪರ್ಯಾಯವಾಗಿ ಬರುತ್ತಿದೆ ಟ್ರಾನ್ಸ್ಪರೆಂಟ್‌ ವುಡ್‌ !

Transparent Wood: ಪ್ಲಾಸ್ಟಿಕ್​​ಗೆ ಪರ್ಯಾಯವಾಗಿ ಬರುತ್ತಿದೆ ಟ್ರಾನ್ಸ್ಪರೆಂಟ್‌ ವುಡ್‌ !

ಟ್ರಾನ್ಸ್​​ಪರೆಂಟ್ ವುಡ್

ಟ್ರಾನ್ಸ್​​ಪರೆಂಟ್ ವುಡ್

ಗಾಜು ಅಥವಾ ಪ್ಲಾಸ್ಟಿಕ್‌ಗೆ ಪರಿಸರ ಸ್ನೇಹಿ ಪರ್ಯಾಯವಾಗಿ ಪಾರದರ್ಶಕ ಮರವನ್ನು ಬಳಸಬಹುದು ಎಂದು ಹೊಸ ಅಧ್ಯಯನವೊಂದು ಹೇಳುತ್ತಿದೆ.

  • Share this:

ಪ್ಲಾಸ್ಟಿಕ್‌ ಪರಿಸರಕ್ಕೆ (Environment) ಮಾರಕ ಅನ್ನೋದು ಗೊತ್ತಿರೋ ವಿಚಾರ. ಆದರೆ ಅದಕ್ಕೆ ಸರಿಯಾದ ಬದಲಿ ವ್ಯವಸ್ಯೆಗಳು ಇಲ್ಲದೇ ಹೋಗಿರೋದ್ರಿಂದ ಸಾಕಷ್ಟು ಜನರು ಪ್ಲಾಸ್ಟಿಕ್‌ ಬಳಸುವ ಅನಿವಾರ್ಯತೆಯಲ್ಲಿ (Necessary) ಸಿಲುಕಿದ್ದಾರೆ ಅನ್ನೋದೂ ಕೂಡ ಸತ್ಯ(Truth). ಆದರೆ ಇದಕ್ಕೆಲ್ಲ ಪರಿಹಾರ ಎಂಬಂತೆ ಈ ಪ್ಲಾಸ್ಟಿಕ್ (Plastic)‌ ಹಾಗೂ ಗಾಜಿಗೆ ಬದಲಾಗಿ ಮರದ (Wood) ಸಾಧನಗಳನ್ನು ಎಲ್ಲರೂ ಬಳಸುವ ದಿನಗಳ ದೂರವಿಲ್ಲ.


ಹೌದು, ಗಾಜು ಅಥವಾ ಪ್ಲಾಸ್ಟಿಕ್‌ಗೆ ಪರಿಸರ ಸ್ನೇಹಿ ಪರ್ಯಾಯವಾಗಿ ಪಾರದರ್ಶಕ ಮರವನ್ನು ಬಳಸಬಹುದು ಎಂದು ಹೊಸ ಅಧ್ಯಯನವೊಂದು ಹೇಳುತ್ತಿದೆ. ಗಾಜು ಅಥವಾ ಪ್ಲಾಸ್ಟಿಕ್‌ ಗೆ ಬದಲಿಯಾಗಿ ಕಾರ್ ವಿಂಡ್‌ಶೀಲ್ಡ್‌ಗಳು, ಪಾರದರ್ಶಕ ಪ್ಯಾಕೇಜಿಂಗ್ ಮತ್ತು ಬಯೋಮೆಡಿಕಲ್ ಸಾಧನಗಳನ್ನು ತಯಾರಿಸಲು ಬಳಸಬಹುದು ಎಂದು ಹೇಳಲಾಗಿದೆ.


ಪಾರದರ್ಶಕ ಮರದಿಂದ ದುಷ್ಪರಿಣಾಮ ಕಡಿಮೆ!


ಜರ್ನಲ್ ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ಮೆಂಟ್‌ನಲ್ಲಿ ಪ್ರಕಟವಾದ ಅಧ್ಯಯನವು, ಪಾರದರ್ಶಕ ಮರವು ನವೀಕರಿಸಬಹುದಾದ ಮತ್ತು ಜೈವಿಕ ವಿಘಟನೀಯ ಗುಣಲಕ್ಷಣಗಳಿಂದ ಕೂಡಿದೆ. ಇದರಿಂದ ಪರಿಸರದ ಮೇಲೆ ಆಗುವ ಹಾನಿ ಕೂಡ ಕಡಿಮೆಯೇ.


ಅಲ್ಲದೇ, ಕಡಿಮೆ ವೆಚ್ಚದಲ್ಲಿ, ಗಾಜಿಗಿಂತ 5 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಇದನ್ನು ಬಳಸಬಹುದು ಎಂದಿದೆ ಅಧ್ಯಯನ. ಅಲ್ಲದೇ, ಪಾಲಿಪ್ರೊಪಿಲೀನ್, ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ), ಅಕ್ರಿಲಿಕ್, ಪಾಲಿಥಿಲೀನ್ ಮುಂತಾದ ಪರಿಸರಕ್ಕೆ ಹಾನಿಕಾರಕ ಪೆಟ್ರೋಲಿಯಂ ಆಧಾರಿತ ಪ್ಲಾಸ್ಟಿಕ್‌ಗಳನ್ನು ವಸ್ತುವಾಗಿ ಪಾರದರ್ಶಕ ಮರವು ಬದಲಾಯಿಸುತ್ತದೆ ಎಂದು ಅಧ್ಯಯನದ ಲೇಖಕ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಬಯೋಕೆಮಿಕಲ್ ಎಂಜಿನಿಯರಿಂಗ್ ಸ್ಕೂಲ್‌ ನ ಸಹಾಯಕ ಪ್ರಾಧ್ಯಾಪಕ ಪ್ರೊದ್ಯುತ್ ಧರ್ ಹೇಳಿದ್ದಾರೆ.


ಪ್ರತಿವರ್ಷ 400 ಮಿಲಿಯನ್‌ ಟನ್‌ ಪ್ಲಾಸ್ಟಿಕ್‌ ಉತ್ಪಾದನೆ


ವಿಶ್ವವು ಪ್ರಸ್ತುತ ಪ್ರತಿ ವರ್ಷ ಸುಮಾರು 400 ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಯುಎನ್ ಪರಿಸರ ಕಾರ್ಯಕ್ರಮದ ಪ್ರಕಾರ ಏಕ-ಬಳಕೆಯ ಪ್ಲಾಸ್ಟಿಕ್‌ ಬಳಕೆ ಅತಿಯಾಗಿದ್ದು ಅದನ್ನು ಒಮ್ಮೆ ಬಳಸಿ ನಂತರ ಎಸೆದುಬಿಡಲಾಗುತ್ತದೆ. ಹಾಗಾಗಿ ಪಾರದರ್ಶಕ ಮರವು ಭವಿಷ್ಯದ ಅತ್ಯಂತ ಭರವಸೆಯ ಬದಲಿ ವಸ್ತುಗಳಲ್ಲಿ ಒಂದಾಗಿ ಹೊರಹೊಮ್ಮಬಹುದು.


ಪಾರದರ್ಶಕ ಮರದ ಸಾಧನದ ಬಳಕೆ ಹೇಗೆ ಸಾಧ್ಯ?


ಮೂಲತಃ 1992 ರಲ್ಲಿ ಜರ್ಮನ್ ವಿಜ್ಞಾನಿ ಸೀಗ್‌ಫ್ರೈಡ್ ಫಿಂಕ್ ನಿರ್ಮಿಸಿದ ಮತ್ತು ಇತರ ಸಂಶೋಧಕರು ಸುಧಾರಿಸಿದ ನಂತರ, ಪಾರದರ್ಶಕ ಮರವನ್ನು ಮರದಲ್ಲಿರುವ ಲಿಗ್ನಿನ್ ಅಂಶವನ್ನು ತೆಗೆದುಹಾಕಿ ಮತ್ತು ಅದನ್ನು ಪಾರದರ್ಶಕ, ಪ್ಲಾಸ್ಟಿಕ್ ವಸ್ತುಗಳಿಂದ ಬದಲಾಯಿಸುವ ಮೂಲಕ ತಯಾರಿಸಲಾಗುತ್ತದೆ. ಲಿಗ್ನಿನ್ ನೈಸರ್ಗಿಕವಾಗಿ ಸಂಭವಿಸುವ ಬಯೋಪಾಲಿಮರ್ ಆಗಿದ್ದು ಅದು ಸಸ್ಯ ಅಂಗಾಂಶವನ್ನು ಹೊಂದಿರುತ್ತದೆ. ಪ್ಲಾಸ್ಟಿಕ್‌ಗಳಿಗಿಂತ ಭಿನ್ನವಾಗಿ ಇದು ಜೈವಿಕ ವಿಘಟನೆಗೆ ಒಳಗಾಗಬಹುದು. ಅಲ್ದೇ ಇದು ವಿಷಕಾರಿಯೂ ಅಲ್ಲ.


ಇದು ಪರಿಸರ ಸ್ನೇಹಿ ಪರ್ಯಾಯ ವ್ಯವಸ್ಥೆ


“ಪ್ಲಾಸ್ಟಿಕ್‌ಗಳನ್ನು ಗಾಜಿನ ಬದಲಿಯಾಗಿ ಬಳಸಲಾಗುತ್ತದೆ. ಆದರೆ ಅದು ದುರ್ಬಲವಾಗಿರುತ್ತದೆ. ಆದಾಗ್ಯೂ, ನಮ್ಮ ಜೀವನ ಚಕ್ರ ವಿಶ್ಲೇಷಣೆಯಲ್ಲಿ ಗಮನಿಸಿದಂತೆ ಪರಿಸರ ದೃಷ್ಟಿಕೋನದಿಂದ ಪಾರದರ್ಶಕ ಮರವು ಇನ್ನೂ ಉತ್ತಮ ಪರ್ಯಾಯವಾಗಿದೆ ಎಂದು ಧಾರ್ ಹೇಳಿದ್ದಾರೆ. ಒಂದು ವಿಶ್ಲೇಷಣೆಯ ಪ್ರಕಾರ, ಪಾರದರ್ಶಕ ಮರದ ಸಾಧನವು ಗಾಜಿಗಿಂತ ಕಡಿಮೆ ಪರಿಸರ ಸ್ನೇಹಿಯಾಗಿದೆ ಎಂದು ಸೂಚಿಸುತ್ತದೆ. ಆದರೆ ಪಾಲಿಥಿಲೀನ್ ಅನ್ನು ಉತ್ಪಾದಿಸುವುದಕ್ಕಿಂತ ಇದು ಇನ್ನೂ ಉತ್ತಮವಾಗಿದೆ. ಇದು ಉತ್ಪಾದನಾ ತಂತ್ರಜ್ಞಾನವನ್ನು ಸುಧಾರಿಸುವ ಅಗತ್ಯವನ್ನು ಸೂಚಿಸುತ್ತದೆ" ಎಂದು ಲೇಖಕರು ಹೇಳಿದ್ದಾರೆ.


ಇದನ್ನೂ ಓದಿ: ವಿದೇಶಿಯರಿಂದ ಹನುಮಾನ್‌ ಚಾಲೀಸ ಪಠಣ, ನೆಟ್ಟಿಗರ ಮನಗೆದ್ದ ವಿಡಿಯೋ


ಕೇರಳ ಕೃಷಿ ವಿಶ್ವವಿದ್ಯಾನಿಲಯದ ಫಾರೆಸ್ಟ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯ ಪಾರದರ್ಶಕ ಮರದ ಸಂಶೋಧಕ ಅನೀಶ್ ಎಂ. ಚಾಥೋತ್, ಪಾರದರ್ಶಕ ಮರವನ್ನು ಹೆಚ್ಚಾಗಿ ಮರದ ತೆಳುವಾದ ಹೋಳುಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗುತ್ತದೆ. ಇದು ಸಾಮಾನ್ಯ ಮರದಂತೆ ಉತ್ತಮ ಶಕ್ತಿಯನ್ನು ಹೊಂದಿರುತ್ತದೆ. ಆದರೆ ತೂಕದಲ್ಲಿ ಹಗುರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪಾರದರ್ಶಕ ಮರವನ್ನು ನಿರ್ಮಾಣ, ಶಕ್ತಿ ಸಂಗ್ರಹಣೆ, ಹೊಂದಿಕೊಳ್ಳುವ ಎಲೆಕ್ಟ್ರಾನಿಕ್ಸ್ ಮತ್ತು ಪ್ಯಾಕೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಬಳಸಲಾಗುತ್ತಿದೆ ಎಂದು ಚಾಥೋತ್ ಹೇಳಿದ್ದಾರೆ.


ಇದನ್ನೂ ಓದಿ: ಇಂಟರ್ನೆಟ್​ ಇಲ್ಲದೇ UPI ಪೇಮೆಂಟ್​ ಮಾಡ್ಬಹುದು! ಹೇಗೆ ಅಂತೀರಾ? ಇಲ್ಲಿದೆ ನೋಡಿ


ಅಲ್ಲದೇ, ಪರಿಸರದ ಮೇಲೆ ಪ್ಲಾಸ್ಟಿಕ್‌ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಪರಿಸರದ ಸುಸ್ಥಿರತೆಯ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಕಾಳಜಿಯೇ ಇದಕ್ಕೆ ಕಾರಣವಾಗಿದೆ ಎಂದು ಚಾಥೋತ್‌ ಅಭಿಪ್ರಾಯ ಪಡುತ್ತಾರೆ.

First published: