• Home
  • »
  • News
  • »
  • trend
  • »
  • Garba Dance: ರೈಲು ಬೇಗ ಬಂದ ಖುಷಿಗೆ ರೈಲ್ವೇ ನಿಲ್ದಾಣದಲ್ಲೇ ಗರ್ಬಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಪ್ರಯಾಣಿಕರು, ವಿಡಿಯೋ ವೈರಲ್

Garba Dance: ರೈಲು ಬೇಗ ಬಂದ ಖುಷಿಗೆ ರೈಲ್ವೇ ನಿಲ್ದಾಣದಲ್ಲೇ ಗರ್ಬಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಪ್ರಯಾಣಿಕರು, ವಿಡಿಯೋ ವೈರಲ್

ರೈಲ್ವೇ ನಿಲ್ದಾಣದಲ್ಲಿ ಗರ್ಬಾ ನೃತ್ಯ ಮಾಡಿದ ಪ್ರಯಾಣಿಕರು

ರೈಲ್ವೇ ನಿಲ್ದಾಣದಲ್ಲಿ ಗರ್ಬಾ ನೃತ್ಯ ಮಾಡಿದ ಪ್ರಯಾಣಿಕರು

ನಿಗದಿತ ಸಮಯಕ್ಕಿಂತ 20 ನಿಮಿಷ ಬೇಗ ಬಂದರೆ ಪವಾಡವಲ್ಲದೆ ಮತ್ತೇನು? ಹೌದು, ನಮ್ಮ ದೇಶದ ಯಾವ ಭಾಗದಲ್ಲಿಯೇ ಆಗಲಿ, ರೈಲು ಗಾಡಿಯೊಂದು ಬಹಳ ಬೇಗನೆ ನಿಲ್ದಾಣ ತಲುಪಿತೆಂದರೆ, ಅದು ಪಾರ್ಟಿ ಮಾಡುವ ಸಂಗತಿಯೇ ಬಿಡಿ. ಆದರೆ, ರತ್ಲಾಮ್ ರೈಲು ನಿಲ್ದಾಣದಲ್ಲಿನ ಪ್ರಯಾಣಿಕರ ನೃತ್ಯ, ಪವಾಡ ನಡೆಯಿತೆಂದು ಪಾರ್ಟಿಯಲ್ಲ! ಹಾಗಾದರೆ ನಡೆದದ್ದೇನು ತಿಳಿಯೋಣ.

ಮುಂದೆ ಓದಿ ...
  • Share this:

ಮಧ್ಯ ಪ್ರದೇಶದ (Madhya Pradesh) ರತ್ಲಾಮ್ ರೈಲ್ವೇ ನಿಲ್ದಾಣದಲ್ಲಿ (Ratlam Railway Station) ಬುಧವಾರ ರೈಲೊಂದು (Train) ನಿಗದಿತ ಸಮಯಕ್ಕಿಂತ ಬೇಗ (early) ಬಂದು ತಲುಪಿತಂತೆ. ಬೇಗ ತಲುಪಿತು ಎಂದರೆ, ತುಂಬಾ ಹೊತ್ತು ಫ್ಲಾಟ್ ಫಾರ್ಮ್‍ನಲ್ಲಿ (Flat form) ನಿಲ್ಲುತ್ತದೆ ಎಂದು ಕೂಡ ಅರ್ಥ. ಹಾಗಾದಾಗ ಸಾಮಾನ್ಯವಾಗಿ ಜನ, ರೈಲಿನಿಂದ ಇಳಿದು ಚಹಾ (Tea), ಕಾಫಿ (Coffee) ತಿಂಡಿ (Snacks) ಇತ್ಯಾದಿಗಳನ್ನು ಸೇವಿಸುತ್ತಾರೆ ಇಲ್ಲವೇ, ಅಲ್ಲೇ ಅಡ್ಡಾಡುತ್ತಿರುತ್ತಾರೆ. ಆದರೆ ರತ್ಲಾಮ್ ರೈಲ್ವೇ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರು (Travelers) ಫ್ಲಾಟ್ ಫಾರ್ಮ್‍ಗೆ ಇಳಿದು ಕುಣಿದು (Dance) ಕುಪ್ಪಳಿಸಿದರಂತೆ!


ನಮ್ಮ ದೇಶದ ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಬರುವುದಕ್ಕೆ ಹಿಂದಿನಿಂದಲೂ ಹೆಸರುವಾಸಿಯಾಗಿವೆ. ದೇಶದ ಕೆಲವೊಂದು ಸ್ಥಳಗಳಲ್ಲಂತೂ ರೈಲುಗಳು ಎಷ್ಟು ವಿಳಂಬವಾಗಿ ಬರುತ್ತವೆ ಎಂದರೆ, ಪ್ರಯಾಣಿಕರು ಕಾದು ಕಾದು ಸುಸ್ತಾಗಿ ರೈಲ್ವೇ ಫ್ಲಾಟ್ ಫಾರಂನಲ್ಲೇ ಮಕಾಡೆ ಮಲಗುವುದುಂಟು.


ಹಾಗಿರುವಾಗ, ರೈಲೊಂದು ಬೇಗನೆ, ಅದೂ ನಿಗದಿತ ಸಮಯಕ್ಕಿಂತ 20 ನಿಮಿಷ ಬೇಗ ಬಂದರೆ ಪವಾಡವಲ್ಲದೆ ಮತ್ತೇನು? ಹೌದು, ನಮ್ಮ ದೇಶದ ಯಾವ ಭಾಗದಲ್ಲಿಯೇ ಆಗಲಿ, ರೈಲು ಗಾಡಿಯೊಂದು ಬಹಳ ಬೇಗನೆ ನಿಲ್ದಾಣ ತಲುಪಿತೆಂದರೆ, ಅದು ಪಾರ್ಟಿ ಮಾಡುವ ಸಂಗತಿಯೇ ಬಿಡಿ. ಆದರೆ, ರತ್ಲಾಮ್ ರೈಲು ನಿಲ್ದಾಣದಲ್ಲಿನ ಪ್ರಯಾಣಿಕರ ನೃತ್ಯ, ಪವಾಡ ನಡೆಯಿತೆಂದು ಪಾರ್ಟಿಯಲ್ಲ! ಹಾಗಾದರೆ ನಡೆದದ್ದೇನು ತಿಳಿಯೋಣ.


ರತ್ಲಾಮ್ ರೈಲ್ವೇ ನಿಲ್ದಾಣದಲ್ಲಿ ಗರ್ಬ ನೃತ್ಯ ಮಾಡಿದ ಪ್ರಯಾಣಿಕರು
ಬುಧವಾರ, ರತ್ಲಾಮ್ ರೈಲ್ವೇ ನಿಲ್ದಾಣದಲ್ಲಿ , ಬಾಂದ್ರಾ- ಹರಿದ್ವಾರ್ ಎಕ್ಸ್‍ಪ್ರೆಸ್ ರೈಲು ರಾತ್ರಿ 10.15 ಕ್ಕೆ, ಅಂದರೆ ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷ ಬೇಗ ಬಂದು ತಲುಪಿತು. ರತ್ಲಾಮ್ ಜಂಕ್ಷನ್‍ನಲ್ಲಿ ಆ ರೈಲು ನಿಲ್ಲುವ ಅವಧಿ 10 ನಿಮಿಷಗಳು.


ಇದನ್ನೂ ಓದಿ:  Viral Video: ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲುಗಳು, ನಮಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿದೆ ಎಂದ ನೆಟ್ಟಿಗರು!


ಆದರೆ, ಅದು 20 ನಿಮಿಷ ಬೇಗ ಬಂತು ಎಂದರೆ, ಸುಮಾರು ಅರ್ಧ ಗಂಟೆ ವರೆಗೆ ಅಲ್ಲೇ ನಿಲ್ಲುತ್ತದೆ ಎಂದರ್ಥ. ಈ ವಿಷಯ ಕಿವಿಗೆ ಬಿದ್ದದ್ದೇ ತಡ, ಅಷ್ಟು ಹೊತ್ತು ಕುಳಿತರೆ ಬೋರ್ ಆಗುತ್ತದೆ ಎಂದುಕೊಂಡ ಕೆಲವು ಗುಜರಾತಿ ಪ್ರಯಾಣಿಕರು ಫ್ಲಾಟ್ ಫಾರ್ಮ್ ಸಂಖ್ಯೆ 4 ರಲ್ಲಿ ಇಳಿದು, ಜನಪ್ರಿಯ ಗರ್ಬ ಹಾಡುಗಳನ್ನು ಹಾಕಿ, ಗರ್ಬ ನೃತ್ಯ ಮಾಡಿದರು.


ಗರ್ಬ ಉತ್ಸವದ ವೇದಿಕೆಯಾಗಿ ಬದಲಾದ ರೈಲ್ವೆ ನಿಲ್ದಾಣ
ರೈಲು ಬೇಗ ಬಂದಿದ್ದದ್ದರ ಅರಿವಿಲ್ಲದಿದ್ದ ಇತರ ಸಹ ಪ್ರಯಾಣಿಕರ ಕಿವಿಗೂ ಅದು ತಲುಪಿ, ಅವರು ಕೂಡ ಗರ್ಬ ಮಾಡುತ್ತಿದ್ದವರ ಜೊತೆ ಹೆಜ್ಜೆ ಹಾಕ ತೊಡಗಿದರು. ಕೆಲವೇ ಸಮಯದಲ್ಲಿ ರೈಲ್ವೇ ಫ್ಲಾಟ್ ಫಾರ್ಮ್, ಅದರಲ್ಲೂ ಈ ಸುಡು ಬೇಸಿಗೆಯಲ್ಲಿ ಗರ್ಬ ಉತ್ಸವದ ವೇದಿಕೆಯಾಗಿ ಬದಲಾಯಿತು.ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೇ ಮಂತ್ರಿ
ಹಕ್ಕಿ ಪಿಕ್ಕೆ ಹಾಕಿದರೂ, ಆ ಸುದ್ದಿ ವೈರಲ್ ಆಗುವ ಈ ಕಾಲದಲ್ಲಿ, ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿ ಕುಣಿದು ಕುಪ್ಪಳಿಸಿದರು ಎಂಬ ಸುದ್ದಿ ವೈರಲ್ ಆಗದೇ ಇದ್ದೀತೆ? ರತ್ಲಾಮ್ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಗರ್ಬ ನೃತ್ಯದ ವಿಡಿಯೋ ಕೂಡ ವೈರಲ್ ಆಯಿತು. ಈ ಘಟನೆ, ಕೇಂದ್ರ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಅವರ ಕಣ್ಣಿಗೂ ಬಿತ್ತು. ಅವರು ಅದರ ವಿಡಿಯೋವನ್ನು ಭಾರತದ ಮೈಕ್ರೋ ಬ್ಲಾಗಿಂಗ್ ಸೈಟ್ ಕೂ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ “ಮಜಾಮಾ, ಹ್ಯಾಪಿ ಜರ್ನಿ” ಎಂಬ ಪ್ರತಿಕ್ರಿಯೆಯನ್ನು ಕೂಡ ಬರೆದಿದ್ದಾರೆ.


ಇದನ್ನೂ ಓದಿ: Viral Video: ಮಕ್ಕಳನ್ನು ಅಕ್ಕರೆಯಿಂದ ಶಾಲೆಗೆ ಕರೆದೊಯ್ಯುವ ಅಪ್ಪ! ಪ್ರೀತಿ ಮುಂದೆ ವಿಕಲಾಂಗತೆ ಸಮಸ್ಯೆಯೇ ಅಲ್ಲ


ರತ್ಲಾಮ್ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಗರ್ಬ ನೃತ್ಯದ ವಿಡಿಯೋ ಸಂಗೀತದ ಮಾಂತ್ರಿಕತೆಯ ಬಗ್ಗೆ ಬಹಳಷ್ಟು ಹೇಳುತ್ತದೆ : ಅಷ್ಟುಕ್ಕೂ ಈ ಘಟನೆ ಕೇವಲ ಮನರಂಜನೆ ನೀಡಿದ್ದು ಮಾತ್ರವಲ್ಲ, ಆ ಕ್ಷಣಕ್ಕೆ ಎಲ್ಲಾ ಸಂಸ್ಕೃತಿ, ಭಾಷೆ ಮತ್ತು ರಾಜಕೀಯ ಗಡಿಗಳನ್ನು ಮೀರಿ ಅಲ್ಲಿದ್ದ ಜನರನ್ನು ಒಂದುಗೂಡಿಸಿತ್ತು. ಮಕ್ಕಳಿಂದ ಹಿಡಿದು ಮುದುಕರಾದಿಯಾಗಿ ಎಲ್ಲಾ ವಯೋಮಾನದ ಜನರು ಖುಷಿಯಿಂದ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿದರು.

Published by:Ashwini Prabhu
First published: