Viral Video: ರೈಲು ಸ್ಪೀಡಾಗಿ ಹೋಗ್ತಿದ್ಯಾ.. ನಿಧಾನಕ್ಕೆ ಹೋಗ್ತಿದ್ಯಾ..? ಗೊಂದಲದಲ್ಲಿ ನೆಟ್ಟಿಗರು..!

Train Speed: ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಗೊಂದಲಕ್ಕೀಡುಮಾಡಿದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:

ಇತ್ತೀಚೆಗೆ ಸಾಮಾನ್ಯವಾಗಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ ಫೋನ್‌ ಇರುತ್ತದೆ. ಅಲ್ಲದೆ, ಕೊರೊನಾ ಸಾಂಕ್ರಾಮಿಕ, ಲಾಕ್‌ಡೌನ್‌ ಸಮಯದಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಅಂತರ್ಜಾಲ ಬಳಕೆಯೂ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ವಿಡಿಯೋಗಳನ್ನು ನೆಟ್ಟಿಗರು ನೋಡುತ್ತಿರುತ್ತಾರೆ. ಇದೇ ರೀತಿ, ಇಂಟರ್‌ನೆಟ್‌ನಲ್ಲಿ ಅನೇಕ ಆಪ್ಟಿಕಲ್ ಇಲ್ಯೂಷನ್ ಫೋಟೊಗಳು ಮತ್ತು ವಿಡಿಯೋಗಳು ಅರ್ಥವಾಗುವುದು ಕಷ್ಟ. ಅವುಗಳಲ್ಲಿ ಹೆಚ್ಚಿನವು ವಿನ್ಯಾಸದ ಅಂಶಗಳೊಂದಿಗೆ ರಚಿಸಲ್ಪಟ್ಟಿದ್ದರೆ, ಅನೇಕ ನೈಸರ್ಗಿಕ ದೃಶ್ಯಗಳು ನೆಟ್ಟಿಗರ ತಲೆ ಕೆರೆದುಕೊಳ್ಳುವಂತೆ ಮಾಡಿವೆ. ಕಾಡಿನಲ್ಲಿ ಓಡುವ ಮನುಷ್ಯನ ಛಾಯಾಚಿತ್ರ ನೆನಪಿದೆಯೇ? ಅಥವಾ ಅದು ನಾಯಿಯೇ? ಇನ್ನೂ ಡೌಟಿದ್ರೆ, ಆ ವಿಡಿಯೋವನ್ನು ನೀವು ಮತ್ತೊಮ್ಮೆ ನೋಡಬಹುದು.


ಈಗ, ಚಲಿಸುತ್ತಿರುವ ರೈಲನ್ನು ಒಳಗೊಂಡ ಒಂದು ಹೊಸ ವಿಡಿಯೋ ರೆಡ್ಡಿಟ್‌ ಬಳಕೆದಾರರು ಮತ್ತು ಇತರ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.


ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಗೊಂದಲಕ್ಕೀಡುಮಾಡಿದೆ. ಏಕೆಂದರೆ, ನೀವು ರೈಲಿನ ಯಾವ ಕಿಟಕಿಯಿಂದ ನೋಡುತ್ತಿದ್ದೀರಿ ಎಂಬುದರ ಆಧಾರದ ಮೇಲೆ ರೈಲು ವಿಭಿನ್ನ ವೇಗದಲ್ಲಿ ಚಲಿಸುತ್ತಿರುವಂತೆ ಕಾಣುತ್ತದೆ.


ರೈಲಿನ ಕಂಪಾರ್ಟ್ಮೆಂಟ್ ಒಳಗಡೆ ಇರುವ ಕಿಟಕಿಯ ವಿಡಿಯೋ ಶಾಟ್‌ನಿಂದ ಈ ವೈರಲ್‌ ವಿಡಿಯೋ ಆರಂಭವಾಗುತ್ತದೆ. ರೈಲು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಪ್ರಯಾಣಿಕರು ಕಿಟಕಿಯನ್ನು ವಿಡಿಯೋ ಮಾಡುತ್ತಾರೆ. ಎಡ ಕಿಟಕಿಯ ಮೇಲೆ ಹಾದುಹೋಗುವ ದೃಶ್ಯಗಳು ರೈಲು ನಿಜವಾಗಿಯೂ ವೇಗವಾಗಿ ಚಲಿಸುತ್ತಿದೆ ಎಂದು ನಮಗೆ ತಿಳಿಸುತ್ತದೆ. ಆದರೆ ಪ್ರಯಾಣಿಕರು ಕ್ಯಾಮರಾವನ್ನು ಗಾಡಿಯ ಬಲಭಾಗಕ್ಕೆ ಸರಿಸಿದಾಗ, ರೈಲು ಬಹಳ ನಿಧಾನವಾಗಿ ಚಲಿಸುತ್ತಿರುವಂತೆ ಕಾಣುತ್ತದೆ. ಅಯ್ಯೋ, ಸುಳ್ಳು ಹೇಳ್ತಿದ್ದೀವಿ ಅನ್ಕೊಂಡ್ರಾ.. ಈ ವಿಚಿತ್ರವಾದ ವೈರಲ್‌ ವಿಡಿಯೋವನ್ನು ನೀವೇ ನೋಡಿ..ಗೊಂದಲವಾಯಿತೇ..? ನೀವು ಒಬ್ಬರೇ ಅಲ್ಲ. ಈ ವಿಡಿಯೋ ಕ್ಲಿಪ್‌ಗೆ ಸುಮಾರು 50,000 ನೆಟ್ಟಿಗರು ಅಪ್‌ವೋಟ್‌ಗಳನ್ನು ಮಾಡಿದ್ದು, ಸುಮಾರು 900 ಮಂದಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಏಕೆಂದರೆ ಅನೇಕ ಬಳಕೆದಾರರು ಈ ವಿಡಿಯೋ ನೋಡಿದ್ದರಿಂದ ಇನ್ನೂ ಗೊಂದಲಕ್ಕೊಳಗಾಗಿದ್ದಾರೆ.


ಅನೇಕರು ಇದನ್ನು ಕಟ್ಟಡ ಚಿತ್ರಗಳು ಮತ್ತು ಚಲಿಸುವ ವಸ್ತುಗಳನ್ನು ಕನಸಿನ ಅನುಕ್ರಮದಲ್ಲಿ ನಿಯಂತ್ರಿಸುವ ಇನ್ಸೆಪ್ಷನ್‌ (Inception) ಚಿತ್ರಕ್ಕೆ ಹೋಲಿಸಿದ್ದಾರೆ.

ಇದನ್ನೂ ಓದಿ: ಫ್ಯಾಷನ್ ಶೋ ವೇಳೆ ಜಾರಿಬಿದ್ದ ಮಾಡೆಲ್‌: ವೈರಲ್‌ ವಿಡಿಯೋ ನೋಡಿ..

"ಇದು ಲಿವರ್‌ಪೂಲ್ ಲೈಮ್ ಸೇಂಟ್. ಯಾವುದೇ ತಿರುವುಗಳಿಲ್ಲ, ಇದು ಪ್ಯಾರಲ್ಲಾಕ್ಸ್‌ ಎಫೆಕ್ಟ್‌ ಅಥವಾ ಭ್ರಂಶ ಪರಿಣಾಮವಾಗಿದೆ. ಸುಮಾರು 14 ಮೀ/46 ಅಡಿ ಅಗಲ ಕಟ್ಟಿಂಗ್ ಇದೆ'' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಅನೇಕರು ಅನೇಕ ಸಿದ್ಧಾಂತಗಳನ್ನು ಹೇಳಲು ಪ್ರಯತ್ನಿಸಿದಾಗ, ಕೆಲವು ಬಳಕೆದಾರರು ಮತ್ತೊಂದು ರೈಲು ಹಾದುಹೋಗುವ ಕಾರಣ ರೈಲು ಎಡಭಾಗದಲ್ಲಿ ವೇಗವಾಗಿ ಚಲಿಸುತ್ತಿರುವಂತೆ ಕಾಣುತ್ತಿದೆ ಎಂದು ಸೂಚಿಸಿದರು.


"ಇದು ಕಿಟಕಿಯ ಮೂಲಕ ಇನ್ನೊಂದಕ್ಕಿಂತ ಹೆಚ್ಚಿನ ದೂರದಲ್ಲಿ ನೋಡುವ ಸಂಯೋಜಿತ ಪರಿಣಾಮವಾಗಿದೆ; ಮತ್ತು ಭ್ರಂಶದ ಪರಿಣಾಮ, ಅಂದರೆ ಗೋಡೆಯು ಬಹುಶಃ ಆ ಬದಿಯ ರೈಲಿಗೆ ಹತ್ತಿರವಾಗಿರುತ್ತದೆ. ಇದರಿಂದ ಎಲ್ಲಾ ವ್ಯತ್ಯಾಸಗಳನ್ನು ಮಾಡುತ್ತದೆ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: