HOME » NEWS » Trend » TOURIST LEFT STRANDED ON 330 FT HIGH GLASS BRIDGE SHATTERED BY HIGH WINDS IN CHINA STG LG

ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಚೂರು ಚೂರಾಯ್ತು ಚೀನಾದ 330 ಅಡಿ ಎತ್ತರದ ಗಾಜಿನ ಸೇತುವೆ...!

ಚೀನಾದ ಪರ್ವತದ ರೆಸಾರ್ಟ್‌ಗಳಲ್ಲಿ ಸಾಕಷ್ಟು ಪ್ರಸಿದ್ಧವಾದ ಗಾಜಿನ ತಳವನ್ನು ಹೊಂದಿರುವ ಗಾಜಿನ ಸೇತುವೆಗಳಿದ್ದು, ಇವು ಪ್ರವಾಸಿ ಆಕರ್ಷಣ ತಾಣಗಳಾಗಿವೆ. ಚೀನಾದ ಹುನಾನ್ ಪ್ರಾಂತ್ಯದ ವಾಯುವ್ಯದಲ್ಲಿರುವ ಜಾಂಗ್ಜಿಯಾಜಿ ನಗರವು ಪ್ರಸಿದ್ಧ ಗಾಜಿನ ಸೇತುವೆಯನ್ನು ಹೊಂದಿದ್ದು ಅದು ನೆಲದಿಂದ 300 ಮೀಟರ್ ಎತ್ತರದಲ್ಲಿದೆ.

news18-kannada
Updated:May 12, 2021, 10:20 AM IST
ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಚೂರು ಚೂರಾಯ್ತು ಚೀನಾದ 330 ಅಡಿ ಎತ್ತರದ ಗಾಜಿನ ಸೇತುವೆ...!
ಗಾಜಿನ ಸೇತುವೆ
  • Share this:
ಭೀಕರವಾದ ಬಿರುಗಾಳಿಗೆ ಚೀನಾದ ಪ್ರಸಿದ್ಧ ಗಾಜಿನ ಸೇತುವೆ ಚೂರು ಚೂರಾಗಿದೆ. ಈ ಸೇತುವೆಯ ಗಾಜಿನ ಫಲಕಗಳು ಮುರಿದು ಬಿದ್ದ ಬಳಿಕ ಪ್ರವಾಸಿಗರೊಬ್ಬರು ‘ಗಾಜಿನ ಸೇತುವೆ’ಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಚೀನಾದ ಲಾಂಗ್‌ಜಿಂಗ್ ನಗರದ ಸಮೀಪವಿರುವ ಜಿಲಿನ್ ಪ್ರಾಂತ್ಯದ ಪಿಯಾನ್ ಪರ್ವತದಲ್ಲಿ ಈ ಘಟನೆ ನಡೆದಿದೆ. ಇನ್ನು ಈ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗ 330 ಅಡಿ ಎತ್ತರದಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿದ್ದಾರೆ. ಆ ಪ್ರಖರ ಬಿರುಗಾಳಿಗೆ ಸೇತುವೆ ಛಿದ್ರವಾಗಿದೆ. 100 ಮೀಟರ್ ಗಾಳಿಯಲ್ಲಿ ತೂಗಾಡುತ್ತಾ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗನನ್ನು ನಂತರ ರಕ್ಷಣೆ ಮಾಡಿದ್ದು, ಸದ್ಯ ಅವರು ಸುರಕ್ಷಿತವಾಗಿದ್ದಾರೆ.

ಈ ಭಯಾನಕ ಘಟನೆಯನ್ನು ಚೀನಾದ ಸಾಮಾಜಿಕ ಮಾಧ್ಯಮದ ವೇದಿಕೆ ವಿಬೋದಲ್ಲಿ ಪೋಸ್ಟ್ ಮಾಡಲಾಗಿದೆ. ಇದು 4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಮ್ಯಾಟ್ ನೈಟ್ ಎಂಬ ಟ್ವಿಟ್ಟರ್ ಬಳಕೆದಾರರು ತಮ್ಮ ಪುಟದಲ್ಲಿ ಇದರ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ.

ಡೈಲೀ ಮೇಲ್ ವರದಿಯ ಪ್ರಕಾರ ಗಂಟೆಗೆ 150 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿತ್ತು. ಇದೇ ಕಾರಣದಿಂದ ಸೇತುವೆಯ ಅಷ್ಟೂ ಗಾಜಿನ ಫಲಕಗಳು ನಾಶವಾಗಿವೆ. ಅಷ್ಟೇ ಅಲ್ಲದೇ ಪ್ರವಾಸಿಗನನ್ನು ಅತಂತ್ರಕ್ಕೆ ಸಿಲುಕಿಸಿದೆ. ಆತ ಸುಮಾರು ಒಂದು ಗಂಟೆ ಕಾಲ ಅಲ್ಲಿಯೇ ತೂಗಾಡುತ್ತಿದ್ದರು, ಪೊಲೀಸರು, ಅಗ್ನಿಶಾಮಕ ದಳದವರು ಮತ್ತು ಅರಣ್ಯಾಧಿಕಾರಿಗಳು ಕೂಡಲೇ ಕಾರ್ಯತತ್ಪರರಾಗಿ ಆ ವ್ಯಕ್ತಿಯನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಆ ನಂತರ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಜೊತೆಗೆ ಮಾನಸಿಕವಾಗಿ ಆರೋಗ್ಯ ಸ್ಥಿರವಾಗಿಡಲು ಸಮಾಲೋಚನೆ ಕೂಡ ಮಾಡಲಾಯಿತು.

Petrol Diesel Price: ಸತತವಾಗಿ 3ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರ್ಕಾರ

ಇದೇ ಸಮಯದಲ್ಲಿ ರೆಸಾರ್ಟ್ ಮುಚ್ಚಲಾಗಿದ್ದು, ಈ ಗಾಜಿನ ಫಲಕಗಳು ಮುರಿದು ಬಿದ್ದಿದ್ದು ಹೇಗೆ? ಎನ್ನುವುದನ್ನು ತನಿಖೆ ಮಾಡಲಾಗುತ್ತಿದೆ. ಲಾಂಗ್‌ಜಿಂಗ್ ನಗರ ಸರ್ಕಾರವು ಇದನ್ನೇ ಪ್ರಶ್ನಿಸಿದೆ.

ಚೀನಾದ ಪರ್ವತದ ರೆಸಾರ್ಟ್‌ಗಳಲ್ಲಿ ಸಾಕಷ್ಟು ಪ್ರಸಿದ್ಧವಾದ ಗಾಜಿನ ತಳವನ್ನು ಹೊಂದಿರುವ ಗಾಜಿನ ಸೇತುವೆಗಳಿದ್ದು, ಇವು ಪ್ರವಾಸಿ ಆಕರ್ಷಣ ತಾಣಗಳಾಗಿವೆ. ಚೀನಾದ ಹುನಾನ್ ಪ್ರಾಂತ್ಯದ ವಾಯುವ್ಯದಲ್ಲಿರುವ ಜಾಂಗ್ಜಿಯಾಜಿ ನಗರವು ಪ್ರಸಿದ್ಧ ಗಾಜಿನ ಸೇತುವೆಯನ್ನು ಹೊಂದಿದ್ದು ಅದು ನೆಲದಿಂದ 300 ಮೀಟರ್ ಎತ್ತರದಲ್ಲಿದೆ. ಎರಡು ಕಡಿದಾದ ಬಂಡೆಗಳ ನಡುವೆ ನಿರ್ಮಿಸಲಾದ ಈ ಸೇತುವೆ 430 ಮೀ ಉದ್ದ ಮತ್ತು 6 ಮೀ ಅಗಲವಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಗೊಂದಲಕ್ಕೆ ಸಿಲುಕಿಸಿದೆ. ಈ ಸೇತುವೆ ಅಸ್ತಿತ್ವದ ಬಗ್ಗೆ ಅಪನಂಬಿಕೆಗಳಿದ್ದವು.
Youtube Video
ಈ ಸೇತುವೆ ಬೆಂಡಿಂಗ್ ಸೇತುವೆ ಎಂದು ತನ್ನ ಆಕಾರದಿಂದ ಪ್ರಸಿದ್ಧವಾಗಿತ್ತು. ಇದನ್ನು 2017 ರಲ್ಲಿ ಉದ್ಘಾಟಿಸಲಾಗಿತ್ತು. ಅಲ್ಲದೇ ಕಳೆದ ವರ್ಷವಷ್ಟೇ ಇದನ್ನು ಸ್ಥಳೀಯರ ಪ್ರವೇಶಕ್ಕೆ ತೆರೆಯಲಾಗಿತ್ತು. ಇದು ದೇಶದಲ್ಲೇ ಪ್ರಮುಖ ಪ್ರವಾಸಿ ತಾಣವೆಂಬ ಹೆಗ್ಗಳಿಕೆ ಗಳಿಸಿದೆ.
Published by: Latha CG
First published: May 12, 2021, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories