HOME » NEWS » Trend » TOP TIPS FOR HOW TO ACE YOUR ONLINE VIDEO JOB INTERVIEW STG LG

Online Interview: ಆನ್​ಲೈನ್​ ಸಂದರ್ಶನ ಎದುರಿಸುವ ಮುನ್ನ ಈ ಟಿಪ್ಸ್ ನೆನಪಿರಲಿ...!

ನಿಮ್ಮ ಮಾತಿನ ನಿರರ್ಗಳತೆ ಮತ್ತು ದಕ್ಷತೆಯಿಂದ ಸಂದರ್ಶಕರನ್ನು ಮೆಚ್ಚಿಸಬೇಕು ಎನ್ನುವುದಾದರೆ, ನೀವು ಮೊದಲೇ ಅದಕ್ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿರಬೇಕು. ಮಾಕ್ ಇಂಟರ್​​ವ್ಯೂ ಅಭ್ಯಾಸ ಮಾಡಿದ್ದರೆ, ನೈಜ ಸಂದರ್ಶನದಲ್ಲಿ ನೀವು ಇನ್ನಷ್ಟು ಆತ್ಮವಿಶ್ವಾಸದಿಂದ ಭಾಗಿಯಾಗಬಹುದು.

news18-kannada
Updated:March 31, 2021, 6:07 PM IST
Online Interview: ಆನ್​ಲೈನ್​ ಸಂದರ್ಶನ ಎದುರಿಸುವ ಮುನ್ನ ಈ ಟಿಪ್ಸ್ ನೆನಪಿರಲಿ...!
ಸಾಂದರ್ಭಿಕ ಚಿತ್ರ
  • Share this:
ಈ ಸಾಂಕ್ರಾಮಿಕ ಸಮಯದಲ್ಲಿ ಮನೆಯಿಂದಲೇ ಆಫೀಸ್​ ಕೆಲಸ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ಆನ್​ಲೈನ್ ಸಂದರ್ಶನವನ್ನು ಎಲ್ಲರೂ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಿದ್ದಾರೆ. ಈ ಕಾಲಘಟ್ಟದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲದವರಿಗೆ ಆನ್​ಲೈನ್​ ಸಂದರ್ಶನ ನೆರವಿಗೆ ಬರುತ್ತದೆ. ಮಾಡರ್ನ್​ ಟೆಕ್ನಾಲಜಿ ಮತ್ತು ಆ್ಯಪ್‌ಗಳು ಆಡಿಯೋ ಮತ್ತು ವಿಡೀಯೋ ಕಮ್ಯೂನಿಕೇಷನ್​ಗಳನ್ನು ಬಹಳ ಸುಲಭ ಮಾಡಿದೆ. ಈ ನಿಟ್ಟಿನಲ್ಲಿ ನೀವು ನಿಮ್ಮ ಮೆಚ್ಚಿನ ಕೆಲಸವನ್ನು ಪಡೆಯಲು ಆನ್​ಲೈನ್​​ ಸಂದರ್ಶನ ಎದುರಿಸಲು ಸಿದ್ಧರಾಗಿದ್ದರೆ ನಿಮಗಾಗಿ ಇಲ್ಲಿವೆ ಕೆಲವು ಸಲಹೆಗಳು.

ಸರಿಯಾದ ಲೊಕೇಷನ್ ಆಯ್ಕೆ ಮಾಡಿಕೊಳ್ಳಿ

ನಿಮ್ಮ ಮನೆಯಲ್ಲಿ ಸೂರ್ಯನ ಬೆಳಕು ಬೀಳುವ ಕಾರ್ನರ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇದು ಇಂಟರ್​ವ್ಯೂ ಮಾಡುವವರಿಗೆ ನಿಮ್ಮ ಮುಖ ಸ್ಪಷ್ಟವಾಗಿ ಕಾಣುವಂತೆ ತೋರುತ್ತದೆ. ಯಾವುದೇ ರೀತಿಯಲ್ಲೂ ನಿಮ್ಮ ಸಂದರ್ಶನಕ್ಕೆ ತೊಂದರೆಯಾಗದ ರೀತಿಯಲ್ಲಿ ಸದ್ದು ಗದ್ದಲ್ಲವಿರದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇನ್ನು, ನಿಮ್ಮ ಸುತ್ತಳತೆ ತನಕ ಅಂದರೆ ಪಾಸ್​ಪೋರ್ಟ್​ ಸೈಜ್ ಫೋಟೋವಿನಲ್ಲಿ ಕಾಣುವಷ್ಟು ಮಾತ್ರ ನೀವು ಕಾಣುವ ಹಾಗೇ ಕ್ಯಾಮರಾವನ್ನು ಸೆಟ್​​ ಮಾಡಬೇಕು.

ನಿಮ್ಮ ಸಂದರ್ಶನಕ್ಕೆ ಬಳಸುವ ಕ್ಯಾಮರಾ, ಲ್ಯಾಪ್​ಟಾಪ್​ ಮೊದಲೇ ಪರೀಕ್ಷಿಸಿಕೊಳ್ಳಿ

ಆಡಿಯೋ, ಮೈಕ್ರೋಫೋನ್, ಕ್ಯಾಮರಾ ಮತ್ತು ಬಹಳ ಮುಖ್ಯವಾಗಿ ನಿಮ್ಮ ಇಂಟರ್​ನೆಟ್​ ಕನೆಕ್ಷನ್​ ಎಲ್ಲವೂ ಸರಿ ಇದೆಯೇ ನೋಡಿಕೊಳ್ಳಿ. ಸಾಮಾನ್ಯವಾಗಿ ಗ್ಲಿಚ್ಚಸ್​ ಕಂಡುಬರಬಹುದು. ಆದರೆ ನೀವು ಸಂದರ್ಶನಕ್ಕೂ ಮೊದಲೇ ಎಲ್ಲಾವನ್ನು ರೀ ಚೆಕ್ ಮಾಡಿಕೊಂಡಿದ್ದರೆ ನಂತರದಲ್ಲಿ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ. ಸರಿಯಾದ ಹಾರ್ಡ್​ವೇರ್​ ಬಳಸಿ, ಸ್ಮಾರ್ಟ್​ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್​ಟಾಪ್​ ಇದರಲ್ಲಿ ನಿಮಗೆ ಕಂಫರ್ಟ್ ಇರುವುದನ್ನು ಮಾತ್ರ ಬಳಸಿ.

Kitchen Tips: ಶುಂಠಿಯ ಸಿಪ್ಪೆ ತೆಗೆಯುವ ಸುಲಭ ವಿಧಾನಗಳು ಇಲ್ಲಿವೆ ನೋಡಿ...!

ಸಂದರ್ಶನಕ್ಕೂ ಮುನ್ನ ಪ್ರಾಕ್ಟೀಸ್ ಇರಲಿನಿಮ್ಮ ಮಾತಿನ ನಿರರ್ಗಳತೆ ಮತ್ತು ದಕ್ಷತೆಯಿಂದ ಸಂದರ್ಶಕರನ್ನು ಮೆಚ್ಚಿಸಬೇಕು ಎನ್ನುವುದಾದರೆ, ನೀವು ಮೊದಲೇ ಅದಕ್ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿರಬೇಕು. ಮಾಕ್ ಇಂಟರ್​​ವ್ಯೂ ಅಭ್ಯಾಸ ಮಾಡಿದ್ದರೆ, ನೈಜ ಸಂದರ್ಶನದಲ್ಲಿ ನೀವು ಇನ್ನಷ್ಟು ಆತ್ಮವಿಶ್ವಾಸದಿಂದ ಭಾಗಿಯಾಗಬಹುದು. ಪೀಠಿಕೆಗೆ ಸಂಬಂಧಿಸಿದಂತೆ ನೀವೇ ಒಂದಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಅದನ್ನು ಉತ್ತರಿಸುವ ಕ್ರಮವನ್ನು ಅಭ್ಯಾಸ ಮಾಡಿದ್ದರೆ ಅದ್ಭುತ ಫಲಿತಾಂಶ ನಿಮ್ಮದಾಗುತ್ತದೆ. ಈ ಮಾಕ್​ ಇಂಟರ್​ವ್ಯೂ ಅಭ್ಯಾಸಕ್ಕೆ ನಿಮ್ಮ ಸ್ನೇಹಿತರು ಇಲ್ಲವೇ ಕುಟುಂಬ ಸದಸ್ಯರ ಸಹಾಯ ಪಡೆದುಕೊಳ್ಳಿ.

ಗ್ಲಿಚ್ಚಸ್​​ ಸಮಸ್ಯೆಗೆ ಮೊದಲೇ ಸಿದ್ಧರಾಗಿರಿ

ಮೊದಲಿಗೆ ಗ್ಲಿಚ್ಚಸ್ ಕಾಣಿಸಿಕೊಂಡರೆ, ಆಫ್​ ಆದರೆ ಒತ್ತಡಕ್ಕೆ ಒಳಗಾಗಬೇಡಿ. ಯಾವಾಗಲೂ ಏನಾದರೂ ತೊಂದರೆಯಾದರೆ ಒಂದು ಬ್ಯಾಕ್​ ಅಪ್​ ಪ್ಲ್ಯಾನ್ ಸಿದ್ಧವಾಗಿಟ್ಟುಕೊಂಡಿರಿ. ಒಂದು ವೇಳೆ ನಿಮ್ಮ ಲ್ಯಾಪ್​ಟಾಪ್​ ಕೈ ಕೊಟ್ಟರೆ, ಫೋನ್ ಆಡಿಯೋ, ವಿಡಿಯೋವನ್ನು ರೆಡಿ ಮಾಡಿಟ್ಟುಕೊಂಡಿರಿ. ಒಂದು ವೇಳೆ ನಿಮ್ಮ ವೈಫೈ ಕೈಕೊಟ್ಟರೆ, ಮೊಬೈಲ್ ಡೇಟಾ ಅಥವಾ ಇನ್ನೊಂದು ಬ್ಯಾಕ್ ಅಪ್ ರೆಡಿ ಮಾಡಿಟ್ಟುಕೊಂಡಿರಿ.

ಬಾಡಿ ಲ್ಯಾಂಗ್ವೇಜ್​

ನಿಮ್ಮ ಬಾಡಿ ಲ್ಯಾಂಗ್ವೇಜ್​ ನೇರವಾಗಿರಲಿ, ಸ್ಥಿರವಾಗಿರಲಿ. ನಿಮ್ಮ ಆತ್ಮವಿಶ್ವಾಸವನ್ನು ತೋರುವಂತೆ ಆಗಾಗ ಮುಖದಲ್ಲಿ ಮಂದಹಾಸವಿರಲಿ. ಆಫೀಸ್​​ನಲ್ಲಿಯೇ ಇಂಟರ್​ವ್ಯೂ ನಡೆಯುತ್ತಿದೆ ಎನ್ನುವಷ್ಟು ಜಾಗ್ರತೆಯಿಂದ ನಿಮ್ಮ ಉಡುಗೆ ತೊಡುಗೆಯಿರಲಿ. ಕ್ಯಾಮರಾವನ್ನೇ ನೇರವಾಗಿ ನೋಡಿ, ಸಂದರ್ಶಕರನ್ನೇ ನೇರವಾಗಿ ಗಮನಿಸಿ. ಎಲ್ಲಿಯೂ ಸಹ ನಿಮ್ಮ ಹಿಂಜರಿಕೆ ಮತ್ತು ಭಯ ಕಾಣದಂತೆ ನೋಡಿಕೊಳ್ಳಿ.

ವಿಡಿಯೋ ಕಾಲ್​ಗಳಲ್ಲಿ ಉತ್ತರಿಸುವಾಗ ತಾಳ್ಮೆ ಇರಲಿ

ಕೆಲವೊಮ್ಮೆ ಇಂಟರ್​ನೆಟ್​ ಸಮಸ್ಯೆಯಿಂದ ವೀಡಿಯೋ ಕಾಲ್ ದೀರ್ಘವಾಗಬಹುದು. ಇದು ಸಂದರ್ಶಕರು ಪ್ರಶ್ನೆಯನ್ನು ಮುಗಿಸುವಷ್ಟರಲ್ಲೇ ನೀವು ಉತ್ತರಿಸಲು ಅವಕಾಶವಾಗಬಹುದು. ಇದು ಅಸಹನೆ ಮಾತ್ರವಲ್ಲದೇ ಅಗೌರವ ಸೂಚಕವೂ ಆಗಿರುತ್ತದೆ. ಆದ್ದರಿಂದ ಪ್ರಶ್ನೇ ಕೇಳಿ ಮುಗಿಸಿದ ಕೆಲವು ಸೆಕೆಂಡ್ಸ್​ ಬಳಿಕ ನೀವು ಉತ್ತರಿಸಿ. ಇದು ಆನ್​ಲೈನ್​ನಲ್ಲಿ ಉತ್ತರಿಸುವ ಸರಿಯಾದ ಕ್ರಮವಾಗಿದೆ.

ಬೋನಸ್ ಟಿಪ್

ಸಂದರ್ಶನಕ್ಕೆಂದು ನೀವು ಮಾಡಿಕೊಂಡ ಟಿಪ್ಪಣಿಗಳು ಸ್ಕ್ರೀನ್​ನಲ್ಲೇ ನಿಮಗೆ ನೆರವಾಗುವಂತೆ ಇರಿಸಿಕೊಳ್ಳಿ. ಇದು ನಿಮಗೆ ಸಂದರ್ಶನದಲ್ಲಿ ನೆರವಿಗೆ ಬರಬಹುದು.

ವೀಡಿಯೋ ಇಂಟರ್​ವ್ಯೂಗಾಗಿ ಸರಿಯಾದ ಬ್ಯಾಕ್‌ಗ್ರೌಂಡ್​ ಆಯ್ಕೆ ಮಾಡಿಕೊಳ್ಳಿ

ಅತ್ಯಂತ ವೃತ್ತಿಪರ ಬ್ಯಾಕ್‌ಗ್ರೌಂಡ್​ ಆಯ್ಕೆ ಮಾಡಿಕೊಳ್ಳಿ. ಸಂದರ್ಶಕರಿಗೆ ಕಿರಿಕಿರಿಯುಂಟು ಮಾಡುವ ಬ್ಯಾಕ್​ಡ್ರಾಪ್​ ಬೇಡ. ಸಾಧ್ಯವಾದರೆ ವರ್ಚುವಲ್ ಬ್ಯಾಕ್‌ಗ್ರೌಂಡ್​ ಆಯ್ಕೆ ಮಾಡಿಕೊಳ್ಳಿ. ಇದಕ್ಕೆ ಅತ್ಯುತ್ತಮ ದರ್ಜೆಯ ಫೋನ್ ಅಥವಾ ಲ್ಯಾಪ್​ಟಾಪ್ ಅಗತ್ಯವಿದೆ.
Youtube Video

ಮೊಬೈಲ್​​​ನ ಎಲ್ಲಾ ನೋಟಿಫಿಕೇಷನ್ ಆಫ್​ ಮಾಡಿ

ಒಂದು ವೇಳೆ ಸಂದರ್ಶನಕ್ಕೆ ಮೊಬೈಲ್​ ಬಳಸುತ್ತಿದ್ದರೆ ಎಲ್ಲಾ ಆ್ಯಪ್‌​ಗಳ ನೋಟಿಫಿಕೇಷನ್ ಆಫ್​ ಮಾಡಿ. ಆಗ ಪಾಪ್​ ಅಪ್​ಗಳ ಸಮಸ್ಯೆ ಇಲ್ಲದೇ ಸಂದರ್ಶನ ಮುಗಿಸಬಹುದು.
Published by: Latha CG
First published: March 31, 2021, 6:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories