World Costliest Shoes: ಈ ಶೂಗೆ ಬರೋಬ್ಬರಿ 163 ಕೋಟಿ ರೂಪಾಯಿ! ವಿಶ್ವದ 5 ದುಬಾರಿ ಶೂಗಳ ವಿವರ ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬುರ್ಜ್ ಖಲೀಫಾ ಮಾದರಿಯಲ್ಲಿರುವ ಈ ಶೂ ಅನ್ನು 2017 ರಲ್ಲಿ ಆಂಟೋನಿಯೊಸ್ ವಿಯಾಟ್ರಿ ಎಂಬ ಬ್ರಿಟಿಷ್​ ಡಿಸೈನರ್​ ತಯಾರಿಸಿದ್ದಾರೆ. ಇದಕ್ಕೆ 30 ಕ್ಯಾರೆಟ್ ಡೈಮಂಡ್ಸ್ ಅಳವಡಿಸಲಾಗಿದೆ. ಈ ಶೂ ಹಿಮ್ಮಡಿಯು ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ಅದರ ವ್ಯಾಂಪ್ ಅನ್ನು ವಜ್ರಗಳಿಂದ ಕವರ್​ ಮಾಡಲಾಗಿದೆ. ಇದನ್ನ 18 ಕ್ಯಾರೆಟ್‍ನ ಚಿನ್ನದ ನೂಲಿನಲ್ಲಿ ಹೊಲಿಯಲಾಗಿದೆ.

ಮುಂದೆ ಓದಿ ...
  • Share this:

ನವದೆಹಲಿ: ಇಡೀ ಜಗತ್ತಿನಲ್ಲಿ ಒಂದು ಜೊತೆ ಶೂ (Shoe) ಬೆಲೆ ಎಷ್ಟು ಎಂದು ಯಾರಾದರೂ ನಿಮ್ಮನ್ನು ಕೇಳಿದರೆ, ಬಹುಶಃ ನಿಮ್ಮ ಉತ್ತರ ಸಾವಿರಗಳಿಂದ ಒಂದಷ್ಟು ಲಕ್ಷ ರೂಪಾಯಿಗಳು ಎಂದು ಹೇಳಬಹುದು. ಆದರೆ, ವಿಶ್ವದ ಅತ್ಯಂತ ದುಬಾರಿ ಶೂಗಳ (World Costliest Shoes) ಬೆಲೆ ಬಹುಶಃ ನಾವು ನೀವೆಲ್ಲರೂ ಊಹಿಸಿಕೊಳ್ಳಲು ಸಾದ್ಯವಿಲ್ಲದಷ್ಟಿದೆ. ವಿಶ್ವದ ಅತ್ಯಂತ ದುಬಾರಿ ಶೂ ಆಗಿರುವ ಮೂನ್ ಸ್ಟಾರ್ ಶೂ (Moon Star Shoe) ಬೆಲೆ ಕೇಳಿದರೆ ಖಂಡಿತ ಎಂತಹವರಾದರೂ ಬೆಚ್ಚಿ ಬೀಳಬಹುದು. ಏಕೆಂದರೆ ಈ ಶೂ ಬೆಲೆ ಕೇವಲ ಸಾವಿರ, ಲಕ್ಷಗಳಲ್ಲ, ಇದರ ಬೆಲೆ ಬರೋಬ್ಬರಿ 163 ಕೋಟಿ ರೂಪಾಯಿ. ಏಕೆಂದರೆ ಈ ಶೂ ಅನ್ನ ಚಿನ್ನದಿಂದ (Gold) ಮತ್ತು ವಜ್ರಗಳಿಂದ (Diamond) ಮಾಡಲಾಗಿದೆ. ಈ ದುಬಾರಿ ಬೆಲೆಯ ಶೂ ಅನ್ನು ಪ್ರದರ್ಶನಕ್ಕಿಟ್ಟರೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುತ್ತದೆ.


ಈ ಶೂ ತಯಾರಿಸಲು ಉಲ್ಕಾಶಿಲೆಯ ವಸ್ತುವನ್ನು ಬಳಸಲಾಗಿದೆ. ಬುರ್ಜ್ ಖಲೀಫಾ ಮಾದರಿಯಲ್ಲಿರುವ ಈ ಶೂ ಅನ್ನು 2017 ರಲ್ಲಿ ಆಂಟೋನಿಯೊಸ್ ವಿಯಾಟ್ರಿ ಎಂಬ ಬ್ರಿಟಿಷ್​ ಡಿಸೈನರ್​ ತಯಾರಿಸಿದ್ದಾರೆ. ಇದಕ್ಕೆ 30 ಕ್ಯಾರೆಟ್ ಡೈಮಂಡ್ಸ್ ಅಳವಡಿಸಲಾಗಿದೆ. ಈ ಶೂವಿನ ಹಿಮ್ಮಡಿಯು ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ಅದರ ವ್ಯಾಂಪ್ ಅನ್ನು ವಜ್ರಗಳಿಂದ ಕವರ್​ ಮಾಡಲಾಗಿದೆ. ಇದನ್ನ 18 ಕ್ಯಾರೆಟ್‍ನ ಚಿನ್ನದ ನೂಲಿನಲ್ಲಿ ಹೊಲಿಯಲಾಗಿದೆ. ಚಪ್ಪಲಿಯ ಒಳಭಾಗದಲ್ಲೂ ಚಿನ್ನದ ನೂಲಿನಿಂದ ಅಲಂಕಾರ ಮಾಡಲಾಗಿದೆ.


ಪ್ಯಾಷನ್ ಡೈಮಂಡ್ ಶೂಸ್


ಪ್ಯಾಷನ್ ಡೈಮಂಡ್ ಶೂ ವಿಶ್ವದ ಎರಡನೇ ಅತ್ಯಂತ ದುಬಾರಿ ಶೂ ಆಗಿದೆ. ಇದರ ಬೆಲೆ 17 ಮಿಲಿಯನ್ ಡಾಲರ್​ ಅಥವಾ 139 ಕೋಟಿ ರೂಪಾಯಿಯಾಗಿದೆ. ಇದನ್ನು ಜಡಾ ದುಬೈ ಮತ್ತು ಪ್ಯಾಷನ್ ಜ್ಯುವೆಲರ್ಸ್ ಜಂಟಿಯಾಗಿ ತಯಾರಿಸಿದ್ದಾರೆ. ಜಡಾ ದುಬೈ ವಜ್ರದ ಬೂಟುಗಳನ್ನು ತಯಾರಿಸಲು ಪ್ರಸಿದ್ಧವಾಗಿದೆ. ದುಬೈನ ಪತ್ರಿಕೆ ಖಲೀಜ್ ಟೈಮ್ಸ್‌ನ ಪ್ರಕಾರ, ಈ ಐಷಾರಾಮಿ ಶೂ ವಜ್ರಗಳು ಮತ್ತು ಚಿನ್ನದಿಂದ ಮಾಡಲ್ಪಟ್ಟಿದೆ. ಶುದ್ಧ ಚಿನ್ನದಿಂದ ಮಾಡಿದ ಈ ಶೂ ವಿನ್ಯಾಸ ಮತ್ತು ತಯಾರಿಸಲು ಬರೋಬ್ಬರಿ 9 ತಿಂಗಳು ತೆಗೆದುಕೊಂಡಿತು ಎಂದು ತಿಳಿದುಬಂದಿದೆ.


ಇದನ್ನೂ ಓದಿ: ವಿಶ್ವದ ದುಬಾರಿ ಶೂ: ಬೆಲೆ ಕೇಳಿದ್ರೆ ಶಾಕ್ ಆಗ್ತೀರ !


ಡೆಬ್ಬಿ ವಿಂಗ್​ಹ್ಯಾಮ್ ಹೈ ಹೀಲ್ಸ್ 


ಡೆಬ್ಬಿ ವಿಂಗ್​ಹ್ಯಾಮ್ ಹೈ ಹೀಲ್ಸ್ (Debbie wingham high heels) ಬೆಲೆ 15.1 ಮಿಲಿಯನ್ ಡಾಲರ್ ಅಥವಾ 124 ಕೋಟಿ ರೂಪಾಯಿಗಳು. ಇದು ವಿಶ್ವದ ಮೂರನೇ ಅತ್ಯಂತ ದುಬಾರಿ ಶೂ ಆಗಿದೆ. ಡೆಬ್ಬಿ ವಿಂಗ್‌ ಹ್ಯಾಮ್‌ಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಶೂ ಮಾಡಲು ಆದೇಶಿಸಲಾಗಿತ್ತು. ಪ್ರಪಂಚದ ಅಮೂಲ್ಯ ರತ್ನಗಳಿಂದ ಮಾಡಲಾಗಿದೆ. ಶೂನ ಮೇಲ್ಭಾಗವನ್ನು ಡಿಸೈನ್​ಗಾಗಿ ಪ್ಲಾಟಿನಂ ಬಳಸಲಾಗಿದೆ ಮತ್ತು ಶೂನ ಹೊರಭಾಗವನ್ನು 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. 18 ಕ್ಯಾರೆಟ್ ಚಿನ್ನದ ದಾರದಿಂದ ಶೂಗೆ ಹೊಲಿಗೆ ಹಾಕಲಾಗಿದೆ.




ಹ್ಯಾರಿ ವಿನ್‌ಸ್ಟನ್ ರೂಬಿ ಸ್ಲಿಪ್ಪರ್


ಹ್ಯಾರಿ ವಿನ್‌ಸ್ಟನ್ ರೂಬಿ ಸ್ಲಿಪ್ಪರ್ (Stuart Weitzman Rita Hayworth Heels)​ ಅನ್ನು 4,600 ಮಾಣಿಕ್ಯಗಳನ್ನು ಬಳಸಿಕೊಂಡು ಶ್ರಮದಾಯಕವಾಗಿ ರಚಿಸಲಾಗಿದೆ. 1350 ಹಾಗೂ 50 ಕ್ಯಾರೆಟ್ ವಜ್ರಗಳ ಜೊತೆಯಾಗಿ ಬಳಸಿ ತಯಾರಿಸಿರುವ ಈ ರೂಬಿ ಸ್ಲೀಪರ್ಸ್ ಬೆಲೆ 24.7 ಕೋಟಿ ರೂಪಾಯಿ ಎಂದು ತಿಳಿದುಬಂದಿದ್ದು, ಇದು ವಿಶ್ವದ ಅತ್ಯಂತ ದುಬಾರಿ ಶೂಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.


ಇದನ್ನೂ ಓದಿ: Business Trip: ವಿಶ್ವದ ಅತ್ಯಂತ ದುಬಾರಿ ನಗರಗಳು, ಇಲ್ಲಿ ಬ್ಯುಸಿನೆಸ್​ ಟ್ರಿಪ್​ ಮಾಡೋಕೂ ಬೇಕು ಲಕ್ಷ ಲಕ್ಷ!


ಸ್ಟುವರ್ಟ್ ವೈಟ್ಜ್‌ಮನ್ ರೀಟಾ ಹೇವರ್ತ್ ಹೀಲ್ಸ್

top videos


    ಸ್ಟುವರ್ಟ್ ವೈಟ್ಜ್‌ಮನ್ ರೀಟಾ ಹೇವರ್ತ್ ಹೀಲ್ಸ್ (Stuart Weitzman Rita Hayworth Heels ) ದುಬಾರಿ ಶೂಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಇದರ ಬೆಲೆ 24 ಕೋಟಿ ರೂಪಾಯಿಗಳಾಗಿದೆ. 1940 ರ ದಶಕದ ಸುಪ್ರಸಿದ್ಧ ಅಮೇರಿಕನ್ ನಟಿ ರೀಟಾ ಹೇವರ್ತ್ ಅವರ ಕಿವಿಯೋಲೆಗಳನ್ನು ಬಳಸಿ ಡಿಸೈನರ್ ಸ್ಟುವರ್ಟ್ ವೈಟ್ಜ್‌ಮನ್ ಶೂ ತಯಾರಿಸಿದ್ದಾರೆ. ಕಿವಿಯೋಲೆಗಳನ್ನು ಶೂಗಳ ಮಧ್ಯದಲ್ಲಿ ಹೊಂದಿಸಲಾಗಿದೆ. ವಜ್ರಗಳು, ನೀಲಮಣಿಗಳು ಮತ್ತು ಮಾಣಿಕ್ಯಗಳನ್ನು ಟೋ ಸುತ್ತಲೂ ಹೊಂದಿಸಲಾಗಿದೆ.

    First published: