Viral Videos of 2021: ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಮದ್ವೆ ವಿಡಿಯೋಗಳು ಇವೇ ನೋಡಿ..!
2021 Viral Video: ರಾಜಸ್ಥಾನದ ಅಜ್ಮೇರ್ನಲ್ಲಿ ನಡೆದಿದ್ದ ಮದುವೆಯಾ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಈ ವಿಡಿಯೋದಲ್ಲಿ ಕುದುರೆ ಮೂಲಕ ಮದುವೆ ಮನೆ ಪ್ರವೇಶ ಮಾಡಲು ಯತ್ನಿಸುತ್ತಿದ್ದ ವರ ಕುದುರೆ ಮಾಡಿದ ಅವಾಂತರದಿಂದ ಸಾಕಷ್ಟು ಟ್ರೋಲ್ ಆಗಿದ್ದ
2021 ಕ್ಕೆ ವಿದಾಯ(Good Bye)ಹೇಳಲು ಕೆಲವೇ ಕೆಲವು ದಿನಗಳು ಬಾಕಿ ಇವೆ.. 2021ರಲ್ಲಿ ಏನೇನೋ ಆಯಿತು ಅಂತ ಒಮ್ಮೆ ಹಿಂದೆ ತಿರುಗಿ ನೋಡಿದಾಗ ಹಲವಾರು ಸಿಹಿ ಕಹಿ ಘಟನೆಗಳು(Incidents)ನಮ್ಮ ಕಣ್ಣಮುಂದೆ ಬರುತ್ತವೆ.. ಅದ್ರಲ್ಲೂ ಇಂಟರ್ನೆಟ್(Internet)ಅಲ್ಲಿ ಸಾಕಷ್ಟು ವೈರಲ್ ಆದ ಸುದ್ದಿಗಳು ಪದೇಪದೇ ನಮ್ಮ ಗಮನ ಸೆಳೆಯುವುದರಲ್ಲಿ ಒಮ್ಮೆ ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಈ ರೀತಿ 2021 ರಲ್ಲಿ ಸಾಕಷ್ಟು ವೈರಲ್ (Viral) ಆಗಿದ್ದು ಫನ್ನಿ(Funny)ಮದುವೆ (Marriage)ವಿಡಿಯೋಗಳು. ಈ ವಿಡಿಯೋಗಳಲ್ಲಿ ವಿಭಿನ್ನವಾಗಿ ಮದುವೆ ಆಗಲು ಹೋಗಿ ವಧು-ವರರು ಟ್ರೋಲ್ ಗಳಿಗೆ ಆಹಾರ ಕೂಡ ಆಗಿದ್ದರು.. ಆಗಿ 2021ರಲ್ಲಿ ವಿಭಿನ್ನವಾಗಿ ಮದುವೆ ಆಗಲು ಹೋಗಿ ವೈರಲ್ ಆದ ಕೆಲವು ಘಟನೆಗಳ ಮಾಹಿತಿ ಇಲ್ಲಿದೆ
1)ಮಧು ಮಗನ ಜೊತೆ ಓಡಿ ಹೋಗಿದ್ದ ಕುದುರೆ: ರಾಜಸ್ಥಾನದ ಅಜ್ಮೇರ್ನಲ್ಲಿ ನಡೆದಿದ್ದ ಮದುವೆಯಾ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಈ ವಿಡಿಯೋದಲ್ಲಿ ಕುದುರೆ ಮೂಲಕ ಮದುವೆ ಮನೆ ಪ್ರವೇಶ ಮಾಡಲು ಯತ್ನಿಸುತ್ತಿದ್ದ ವರ ಕುದುರೆ ಮಾಡಿದ ಅವಾಂತರದಿಂದ ಸಾಕಷ್ಟು ಟ್ರೋಲ್ ಆಗಿದ್ದ.ಈ ವಿಡಿಯೋದಲ್ಲಿ ಮದುವೆ ಮನೆ ಪ್ರವೇಶಿಸಲು ಕಾಯುತ್ತಿದ್ದ ಮದುಮಗನ ಬರಮಾಡಿಕೊಳ್ಳಲು ಸಿಡಿಸಿದ ಪಟಾಕಿಗೆ ಗಾಬರಿಗೊಂಡ ಕುದುರೆ ನಿಯಂತ್ರಣ ತಪ್ಪಿ ಅಲ್ಲಿಂದ ಓಡಿ ಹೋಗಿತ್ತು. ನಾಲ್ಕು ಕಿಮೀಗಳವರೆಗೂ ಕುದುರೆಯನ್ನು ಅಟ್ಟಿಸಿಕೊಂಡು ಹೋದ ಮಂದಿ, ವರನನ್ನು ಸುರಕ್ಷಿತವಾಗಿ ಮದುವೆ ಮನೆಗೆ ಕರೆತರಲಾಗಿತ್ತು.
2) ಹೆಲಿಕಾಪ್ಟರ್ ಮದುವೆ: ಇತ್ತೀಚಿನ ವರ್ಷಗಳಲ್ಲಿ ವಧು ಅಥವಾ ವರ ಹೆಲಿಕಾಫ್ಟರ್ ಮೂಲಕ ಮದುವೆ ಮಂಟಪ ಪ್ರವೇಶಿಸುವುದು ಸಾಕಷ್ಟು ಟ್ರೆಂಡ್ ಆಗಿದೆ.. ಅದೇ ರೀತಿ ರಾಜಸ್ಥಾನದಲ್ಲಿ ಹೆಲಿಕಾಪ್ಟರ್ ಮದುವೆಯೊಂದನ್ನೂ ಆಯೋಜನೆ ಮಾಡಲಾಗಿತ್ತು.. ಈ ವಿಡಿಯೋದಲ್ಲಿ ಮಜಾ ಅಂದ್ರೆ ಹೆಲಿಕಾಫ್ಟರ್ ಮದುವೆ ಹೇಗೆ ಆಗುತ್ತಿದೆ ಎಂದು ವಿವರಿಸಲು ಬಂದಿದ್ದ ನಿರೂಪಕನ ಕಾಮೆಂಟರಿ. ಈ ನಿರೂಪಕನ ಸಖತ್ ಕಾಮೆಂಟರಿ ನೆಟ್ಟಿಗರನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡಿತ್ತು.
This is the story about Shekhawati , Rajasthan (my village is situated in same area). A bizarre new trend of helicopter wedding have started in this region. Watch to know more about this new ritual in these remote areas of Rajasthan. Part 1/2 👇🏽👇🏽 pic.twitter.com/aL8Jc7Dnj8
3) ಮೇಕಪ್ ಮಾಡಿಸಿಕೊಳ್ಳಲು ಹಠಹಿಡಿದಿದ್ದ ವರ: ಮದುವೆಯ ದಿನ ಹುಡುಗಿಯರು ಸಾಕಷ್ಟು ಮೇಕಪ್ ಮಾಡಿಸಿಕೊಂಡು ತಯಾರಾಗುತ್ತಾರೆ.ಆದ್ರೆ ಇನ್ಸ್ಟಾಗ್ರಾಂನಲ್ಲಿ ಅಕ್ಟೋಬರ್ ತಿಂಗಳಲ್ಲಿ ವೈರಲ್ ಆಗಿದ್ದ ಈ ವಿಡಿಯೋದಲ್ಲಿ ದೇಸೀ ವರನೊಬ್ಬ ತನ್ನ ಭಾವೀ ಪತ್ನಿಗಿಂತ ಮೊದಲು ತನಗೆ ಮೇಕಪ್ ಮಾಡಬೇಕೆಂದು ಹಠ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
4) ಜೆಸಿಬಿ ಅಲ್ಲಿ ಕುಳಿತು ಊರು ಪ್ರವೇಶಿಸಿದ್ದ ವಧು-ವರರು: ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ಟಾನ್ ಪ್ರದೇಶದ ಹುಂಜ಼ಾ ಪ್ರದೇಶದಲ್ಲಿ ಮದುವೆ ಮುಗಿದ ಬಳಿಕ ನವಜೋಡಿ ಒಂದು, ಮದುವೆಯ ಧಿರಿಸಿನಲ್ಲಿ ಜೆಸಿಬಿಯ ಮುಂಬದಿಯ ಬಕೆಟ್ನಲ್ಲಿ ಕುಳಿತು ಆಗಮಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Bride and Groom arrive in their village in an excavator
5)ಡ್ಯಾನ್ಸ್ ಮಾಡುವಾಗ ಕೆಳಗೆಬಿದ್ದ ನವ ಜೋಡಿ: ಮದುವೆ ಸಮಾರಂಭದ ವೇಳೆ ಪರಸ್ಪರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾ ಸ್ಟೆಪ್ ಹಾಕುತ್ತಿದ್ದ ಮದುಮಕ್ಕಳು, ಕ್ಲಾಸಿಕ್ ರೊಮ್ಯಾಂಟಿಕ್ ಸ್ಟೆಪ್ ಹಾಕುವ ಭರದಲ್ಲಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು.
ಪ್ರೀತಿಯಲ್ಲಿ ಬೀಳೋದು ಅಂದ್ರೆ ಹೀಗೂ ಇರುತ್ತಾ,ಎಂಬರ್ಥ ಕ್ಯಾಪ್ಷನ್ ಈ ವಿಡಿಯೋಗೆ ಭಾರೀ ಆಪ್ಯಾಯಮಾನವಾಗಿ ಕಂಡಿತ್ತು.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ