2021ಕ್ಕೆ ವಿದಾಯ ಹೇಳಿ(Good bye)2022ರ ಸ್ವಾಗತ(Welcome)ಮಾಡಿಕೊಳ್ಳಲು ಕೆಲವೇ ಕೆಲವು ದಿನಗಳು ಬಾಕಿ ಇದೆ. ಸಿಹಿ ಕಹಿ ಘಟನೆಗಳ ಮಿಶ್ರಾ ಸಂಗಮವಾಗಿರುವ 2021ರಲ್ಲಿ ಹಲವಾರು ಮಹತ್ವದ(Important)ವಿಷಯಗಳು ನಡೆದಿದೆ.. ಅದ್ರಲ್ಲೂ 2021ರಲ್ಲಿ ಕೆಲವು ವ್ಯಕ್ತಿಗಳು(Person)ತಮ್ಮ ಹಿಂದಿನ ಚಾರ್ಮ್ ಉಳಿಸಿಕೊಂಡು ಜಗತ್ತಿನಾದ್ಯಂತ(World) ಸಾಕಷ್ಟು ಪ್ರಸಿದ್ಧರಾಗಿದ್ದಾರೆ.. ಜೊತೆಗೆ ಇನ್ನೂ ಹೆಚ್ಚಿನ ಜನರನ್ನು ತಮ್ಮ ಅಭಿಮಾನಿಗಳನ(Fans) ಸಂಪಾದನೆ ಮಾಡಿದ್ದಾರೆ. ಬ್ರಿಟಿಷ್ ಸಂಸ್ಥೆಯ ಪ್ರಕಾರ 38 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 42,000ಕ್ಕಿಂತ ಹೆಚ್ಚು ಜನರನ್ನು ಸಮೀಕ್ಷೆಗೆ ಬಳಸಿದ್ದು, ಪ್ರಪಂಚದ ಅತ್ಯಂತ ಮೆಚ್ಚುಗೆ ಪಡೆದ ಪುರುಷರು ಮತ್ತು ಮಹಿಳೆಯರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಇನ್ನು ಈ ಪಟ್ಟಿಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಪ್ರಧಾನಿ ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸೇರಿ ಹಲವು ಜನರು, 2021ರಲ್ಲಿ ಸಾಕಷ್ಟು ಫೇಮಸ್ಸಾದ ವ್ಯಕ್ತಿಗಳು ಆಗಿದ್ದಾರೆ.ಹಾಗಿದ್ರೆ 2021ರಲ್ಲಿ ಅತಿ ಹೆಚ್ಚು ಫೇಮಸ್ಸಾದ ವ್ಯಕ್ತಿಗಳು ಯಾರ್ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
1) ಬರಾಕ್ ಒಬಾಮ: ಅಂತರಾಷ್ಟ್ರೀಯ ಸಮೀಕ್ಷೆಯೊಂದರ ಪ್ರಕಾರ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2021ರಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗಳಿಸಿದ ವ್ಯಕ್ತಿ ಗಳ ಸಾಲಿನಲ್ಲಿ ಮೊದಲಿಗರಾಗಿದ್ದಾರೆ.
ಇದನ್ನೂ ಓದಿ: ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸಿದ ಪ್ರಮುಖ ವಿದ್ಯಮಾನಗಳು
2)ಬಿಲ್ ಗೇಟ್ಸ್: ಬರಾಕ್ ಒಬಾಮರ ನಂತರದ ಸ್ಥಾನವನ್ನು ದಿಗ್ಗಜ ಉದ್ಯಮಿ ಬಿಲ್ ಗೇಟ್ಸ್ ಅವರು ಪಡೆದುಕೊಂಡಿದ್ದಾರೆ.. ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಬಿಲ್ ಗೇಟ್ಸ್ ಅವರು ಇಂದು ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು.. ಇವರು 2021ರಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿದ ವ್ಯಕ್ತಗಳ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
3)ಜಿನ್ಪಿಂಗ್: ಕ್ಸಿ ಜಿನ್ಪಿಂಗ್ ಅವರು 2013 ರಿಂದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾಗಿದ್ದಾರೆ. ಅವರು ಈ ಹಿಂದೆ ಚೀನೀ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು 2012 ರಿಂದ ಸೆಂಟ್ರಲ್ ಮಿಲಿಟರಿ ಕಮಿಷನ್ನ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ.
4) ಕ್ರಿಸ್ಟಿಯಾನೋ ರೊನಾಲ್ಡೊ: ಪುಟ್ಬಾಲ್ ದಂತಕತೆ ಕ್ರಿಶ್ಚಿಯನ್ ರೋನಾಲ್ಡೋ 2021ರಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಪುರುಷರ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಪೋರ್ಚುಗಲ್ ರಾಷ್ಟ್ರೀಯ ಪುಟ್ಬಾಲ್ ಆಟಗಾರರಾಗಿರುವ ಕ್ರಿಸ್ಟಿಯಾನೋ ರೊನಾಲ್ಡೊ ಪ್ರಪಂಚದಾದ್ಯಂತ ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
5)ಜಾಕಿ ಚಾನ್: ನಟ, ಸಮರ ಕಲಾವಿದ, ನಿರ್ದೇಶಕ ಮತ್ತು ಸ್ಟಂಟ್ಮ್ಯಾನ್ ಆಗಿದ್ದು, ಅವರು ತಮ್ಮ ಸ್ಲ್ಯಾಪ್ಸ್ಟಿಕ್ ಚಮತ್ಕಾರಿಕ ಹೋರಾಟದ ಶೈಲಿಗೆ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಅಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಪ್ರಸಿದ್ಧರಾದ ವ್ಯಕ್ತಿಗಳ ಸಾಲಿನಲ್ಲಿ ಜಾಕಿಜಾನ್ ಐದನೇ ಸ್ಥಾನದಲ್ಲಿದ್ದಾರೆ.
6) ಎಲೋನ್ ಮಸ್ಕ್: ಎಲೆಕ್ಟ್ರಿಕಲ್ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಪ್ರಪಂಚದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದ ವ್ಯಕ್ತಿಗಳ ಸಾಲಿನಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.
7)ಲಿಯೋನೆಲ್ ಮೆಸ್ಸಿ: ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಟಗರ ಲಿಯೋನಲ್ ಮೆಸ್ಸಿ ಪ್ರಪಂಚದಾದ್ಯಂತ ಸಾವಿರಾರು ಸಂಖ್ಯೆಯ ಫುಟ್ಬಾಲ್ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.. ಕ್ರಿಸ್ಟಿಯಾನೋ ರೊನಾಲ್ಡೊರಷ್ಟೇ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಮೆಸ್ಸಿ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ವ್ಯಕ್ತಿಗಳ ಸಾಲಿನಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.
8) ನರೇಂದ್ರ ಮೋದಿ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ವ್ಯಕ್ತಿಗಳ ಸಾಲಿನಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.. ಭಾರತದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ವ್ಯಕ್ತಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 2014ರಿಂದ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.. ಗುಜರಾತ್ ಮುಖ್ಯಮಂತ್ರಿಯಾಗಿ ಸಾಕಷ್ಟು ಮುನ್ನೆಲೆಗೆ ಬಂದ ಪ್ರಧಾನಿ ಅವರು ಇಂದು ವಿಶ್ವದಾದ್ಯಂತ ಹಲವಾರು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.
ಇದನ್ನೂ ಓದಿ: ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಮದ್ವೆ ವಿಡಿಯೋಗಳು ಇವೇ ನೋಡಿ..!
9)ವ್ಲಾಡಿಮಿರ್ ಪುಟಿನ್: ವ್ಲಾಡಿಮಿರ್ ವ್ಲಾಡಿಮಿರೊವಿಚ್ ಪುಟಿನ್ ಅವರು 2012 ರಿಂದ ರಷ್ಯಾದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಅವರು ಈ ಹಿಂದೆ 1999 ರಿಂದ 2008 ರವರೆಗೆ ಈ ಹುದ್ದೆಯನ್ನು ಹೊಂದಿದ್ದರು. ರಷ್ಯಾದ ರಾಜಕಾರಣಿ ಮತ್ತು ಮಾಜಿ ಗುಪ್ತಚರ ಅಧಿಕಾರಿ 2021 ರ ಅತ್ಯಂತ ಪ್ರಶಂಸನೀಯ ಪುರುಷರಲ್ಲಿ ಒಬ್ಬರು.
10) ಜಾಕ್ ಮಾ: ಚೈನೀಸ್ ಉದ್ಯಮಿ, ಹೂಡಿಕೆದಾರ ಮತ್ತು ಲೋಕೋಪಕಾರಿ ಜ್ಯಾಕ್ ಮಾ ಯುನ್ ಅಲಿಬಾಬಾ ಗ್ರೂಪ್ನ ಸಹ-ಸ್ಥಾಪಕ ಮತ್ತು ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ