HOME » NEWS » Trend » TOP 10 MOST EXPENSIVE CAT BREEDS IN THE WORLD HG

ಈ ಬೆಕ್ಕಿನ ಬೆಲೆ ಒಂದಲ್ಲ ಎರಡಲ್ಲ 76 ಲಕ್ಷ ರೂಪಾಯಿ; ಇಲ್ಲಿವೆ ವಿಶ್ವದ ದುಬಾರಿ ಕ್ಯಾಟ್​​ಗಳು

ನಾಯಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಂದು ಸಾಕಿದಂತೆ ಬೆಕ್ಕನ್ನು ಯಾರೂ ಸಾಕುವುದಿಲ್ಲ. ಆದರೆ, ಇತ್ತೀಚೆಗೆ ಟ್ರೆಂಡ್​ ಬದಲಾಗಿದೆ. ಪರ್ಷಿಯನ್​ ಕ್ಯಾಟ್​ ಸೇರಿ ಬೇರೆ ಬೇರೆ ಜಾತಿಯ ಬೆಕ್ಕನ್ನು ದುಡ್ಡುಕೊಟ್ಟು ತಂದು ಸಾಕಲಾಗುತ್ತಿದೆ.

news18-kannada
Updated:January 8, 2021, 10:12 PM IST
ಈ ಬೆಕ್ಕಿನ ಬೆಲೆ ಒಂದಲ್ಲ ಎರಡಲ್ಲ 76 ಲಕ್ಷ ರೂಪಾಯಿ; ಇಲ್ಲಿವೆ ವಿಶ್ವದ ದುಬಾರಿ ಕ್ಯಾಟ್​​ಗಳು
ಬೆಕ್ಕು
  • Share this:
ಮನೆಯಲ್ಲಿ ಇಲಿಗಳ ಉಪಟಳ ಹೆಚ್ಚಾದರೆ ಅದಕ್ಕೆ ಇರುವ ಒಂದೇ ಮಾರ್ಗ ಬೆಕ್ಕನ್ನು ಸಾಕುವುದು. ಬೆಕ್ಕನ್ನು ಸಾಕುವ ಪ್ರಮುಖ ಉದ್ದೇಶವೇ ಇದು. ಇನ್ನು, ಕೆಲವರು ಪ್ರಾಣಿ ಪ್ರೀತಿಯಿಂದಲೂ ಬೆಕ್ಕನ್ನು ಸಾಕುತ್ತಾರೆ. 

ನಾಯಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಂದು ಸಾಕಿದಂತೆ ಬೆಕ್ಕನ್ನು ಯಾರೂ ಸಾಕುವುದಿಲ್ಲ. ಆದರೆ, ಇತ್ತೀಚೆಗೆ ಟ್ರೆಂಡ್​ ಬದಲಾಗಿದೆ. ಪರ್ಷಿಯನ್​ ಕ್ಯಾಟ್​ ಸೇರಿ ಬೇರೆ ಬೇರೆ ಜಾತಿಯ ಬೆಕ್ಕನ್ನು ದುಡ್ಡುಕೊಟ್ಟು ತಂದು ಸಾಕಲಾಗುತ್ತಿದೆ.

ಅಂದಹಾಗೆಯೇ ದುಬಾರಿ ಬೆಲೆಯ ಬೆಕ್ಕುಗಳಿವೆ. ಲಕ್ಷ ಲಕ್ಷ ಕೊಟ್ಟು ಖರೀದಿಸಿ ಸಾಕುತ್ತಾರೆ. ಅದರಂತೆ ಬಣ್ಣ, ಜಾತಿ ಇದರ ಆಧಾರದ ಮೇಲೂ ಬೆಕ್ಕನ್ನು ಮಾರಾಟ ಮಾಡುತ್ತಾರೆ. ಅದರಂತೆ ಈ ವಿಡಿಯೋದಲ್ಲಿ ದುಬಾರಿ ಬೆಕ್ಕುಗಳಿವೆ. ಅವುಗಳ ಬೆಲೆ ತಿಳಿದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ.

Youtube Video

ಅದರಂತೆ 76 ಲಕ್ಷ ರೂಪಾಯಿ ಬೆಲೆಯ ಬೆಕ್ಕು ಇದೆ ಎಂದರೆ ನೀವು ನಂಬೂತ್ತೀರಾ? ಹೌದು, ಅಷೇರಾ ಹೆಸರಿನ ಜಾತಿಯ ಬೆಕ್ಕಿಗೆ ಬರೋಬ್ಬರಿ 76 ಲಕ್ಷ ರೂಪಾಯಿ ಇದೆಯಂತೆ. ಇದೇ ರೀತಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಕ್ಕುಗಳಿದ್ದು, ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.
First published: January 8, 2021, 10:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories