ಪ್ರಚಾರದ ವೇಳೆ ‌ನರೇಂದ್ರ ಸ್ವಾಮಿ‌ ಬದಲಿ ನರೇಂದ್ರ ‌ಮೋದಿ‌ ಎಂದ ಸಿಎಂ ಸಿದ್ದರಾಮಯ್ಯ


Updated:May 8, 2018, 3:16 PM IST
ಪ್ರಚಾರದ ವೇಳೆ ‌ನರೇಂದ್ರ ಸ್ವಾಮಿ‌ ಬದಲಿ ನರೇಂದ್ರ ‌ಮೋದಿ‌ ಎಂದ ಸಿಎಂ ಸಿದ್ದರಾಮಯ್ಯ

Updated: May 8, 2018, 3:16 PM IST
ನ್ಯೂಸ್​ 18 ಕನ್ನಡ 

ಮಂಡ್ಯ: ಮಳವಳ್ಳಿಯ ಕಾಂಗ್ರೆಸ್​ ಅಭ್ಯರ್ಥಿ ನರೇಂದ್ರ ಸ್ವಾಮಿ ಹೆಸರು ಹೇಳುವ ಬದಲು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿರುವ ಸಿದ್ದರಾಮಯ್ಯರ ವೀಡಿಯೋ ವೈರಲ್​ ಆಗಿದೆ.

ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್​ ಅಭರ್ಥಿ ನರೇಂದ್ರ ಸ್ವಾಮಿ ಪರ ರೋಡ್ ಶೋ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಆ ಪ್ರದೇಶದಲ್ಲಿದ ಬೆಳವಣಿಗೆ ಕುರಿತು ಸಾಕಷ್ಟು ಹೇಳಿಕೊಳ್ಳುತ್ತಿದ್ದರು. ಆದರೆ ಮಾತಿನ ಮಧ್ಯೆ ಬಾಯಿ ತಪ್ಪಿ ಇಲ್ಲಿನ  ಅಭಿವೃದ್ಧಿ, ಎಲ್ಲವೂ ನರೇಂದ್ರ ಮೋದಿಯಿಂದ, ನರೇಂದ್ರ ಮೋದಿಗೆ ಮತ ಕೊಟ್ಟರೆ ನನಗೆ ಕೊಟ್ಟ ಹಾಗೆ ಎಂದು ಹೇಳಿದ್ದಾರೆ.

ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ಶೇರ್​ ಆಗಿದ್ದು, ತಮ್ಮ ತಪ್ಪಿನ ಅರಿವಾಗಿ ಕೂಡಲೇ ಸಿಎಂ, ನರೇಂದ್ರ ಮೋದಿ ಮಿತ್ಯ, ನರೇಂದ್ರ ಸ್ವಾಮಿ ಸತ್ಯ ಎಂದು ಹೇಳಿದ್ದಾರೆ.
First published:May 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...