ಹನಿ ಹನಿ ನೀರಿನಲ್ಲಿ ಲಕ್ಷ ಲಕ್ಷ ಆದಾಯ; ನಾಳೆಯಿಂದ ಅನ್ನದಾತ ವಿಭಿನ್ನ ರೀತಿಯಲ್ಲಿ ಪ್ರಸಾರ ನಿಮ್ಮ ನ್ಯೂಸ್​18 ನಲ್ಲಿ!

ನಾಳೆಯಿಂದ ಪ್ರಸಾರವಾಗಿ ಅನ್ನದಾತ ಕಾರ್ಯಕ್ರಮದ ಇನ್ನೊಂದು ವಿಶೇಷತೆ ಅಂದ್ರೆ ಬಹಳ ವಿಭಿನ್ನವಾಗಿ ಅಂದ್ರೆ ಭೂಮಿಗೆ ಯಾವುದೇ ರಾಸಾಯನಿಕವನ್ನ ಉಪಯೋಗಿಸದೆ ಅಧಿಕ ಇಳುವರಿಯನ್ನು ಪಡೆಯಬಹುದು ಎಂಬುದರ ಕುರಿತ ಮಾಹಿತಿಯನ್ನೂ ಸಹ ನೀಡಲಾಗುತ್ತದೆ.

MAshok Kumar | news18
Updated:July 14, 2019, 12:46 PM IST
ಹನಿ ಹನಿ ನೀರಿನಲ್ಲಿ ಲಕ್ಷ ಲಕ್ಷ ಆದಾಯ; ನಾಳೆಯಿಂದ ಅನ್ನದಾತ ವಿಭಿನ್ನ ರೀತಿಯಲ್ಲಿ ಪ್ರಸಾರ ನಿಮ್ಮ ನ್ಯೂಸ್​18 ನಲ್ಲಿ!
ಅನ್ನದಾತ
MAshok Kumar | news18
Updated: July 14, 2019, 12:46 PM IST
ಸಾಕಷ್ಟು ರೈತರು ಹಾಗೂ ಯುವಜನತೆ ಮೆಚ್ಚಿಕೊಂಡಿರುವ ನ್ಯೂಸ್ 18 ಕನ್ನಡದ ಹೆಮ್ಮೆಯ ಕಾರ್ಯಕ್ರಮ ಅನ್ನದಾತ ನಾಳೆಯಿಂದ ಹೊಸ ರೂಪದಲ್ಲಿ ಪ್ರಸಾರವಾಗಲಿದೆ.

ಇರುವ ಕಡಿಮೆ ಭೂಮಿಯಲ್ಲಿ ಸಮಗ್ರ ಕೃಷಿಯನ್ನ ಅಳವಡಿಸಿಕೊಂಡು ಯಶಸ್ವಿಯಾಗಿರುವ ಮಾದರಿ ರೈತರನ್ನ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ.
ಮೊದಲೆಲ್ಲಾ ಒಂದು ಸಂಚಿಕೆಯಲ್ಲಿ 3 ಜನ ರೈತರ ಕುರಿತಾಗಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.ಆದ್ರೆ ನಾಳೆಯಿಂದ ಪ್ರಾರಂಭವಾಗುವ ಸಂಚಿಕೆಯಲ್ಲಿ ಒಬ್ಬ ರೈತನ ಸಂಪೂರ್ಣ ಕೃಷಿ ಕುರಿತಾಗಿ ಕಾರ್ಯಕ್ರಮ ಮೂಡಿಬರಲಿದೆ.

ನಾಳೆಯಿಂದ ಪ್ರಸಾರವಾಗಿ ಅನ್ನದಾತ ಕಾರ್ಯಕ್ರಮದ ಇನ್ನೊಂದು ವಿಶೇಷತೆ ಅಂದ್ರೆ ಬಹಳ ವಿಭಿನ್ನವಾಗಿ ಅಂದ್ರೆ ಭೂಮಿಗೆ ಯಾವುದೇ ರಾಸಾಯನಿಕವನ್ನ ಉಪಯೋಗಿಸದೆ ಅಧಿಕ ಇಳುವರಿಯನ್ನು ಪಡೆಯಬಹುದು ಎಂಬುದರ ಕುರಿತ ಮಾಹಿತಿಯನ್ನೂ ಸಹ ನೀಡಲಾಗುತ್ತದೆ.

ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಪದ್ದತಿಗಳೇನು?  ಹೈನುಗಾರಿಕೆಯಿಂದ ಹೇಗೆ ಆದಾಯ ಗಳಿಸಬಹುದು? ಜೇನು ಸಾಕಾಣಿಯಿಂದಾಗುವ ಅನುಕೂಲಗಳೇನು? ಸಿರಿಧಾನ್ಯ ಬೆಳೆಗಳಿಂದ ಲಾಭ ಗಳಿಸುವುದು ಹೇಗೆ? ನೈಸರ್ಗಿಕ ಕೃಷಿಯಿಂದಾಗುವ ಅನುಕೂಲಗಳೇನು? ಎಂಬುದರ ಬಗ್ಗೆ ಸ್ವತಹಃ ಮಾದರಿ ರೈತರೇ ಮಾಹಿತಿಯನ್ನ ನೀಡಲಿದ್ದಾರೆ. ಯಶಸ್ವಿ ರೈತ ಮಹಿಳೆಯರ ಕೃಷಿ ಸಾಧನೆ ಹಾಗೂ ಇದರ ಜೊತೆಗೆ ಸಿನಿಮಾ ಸ್ಟಾರ್ ಗಳ ಕೃಷಿಯಲ್ಲಿನ ಸಾಧನೆಯೂ ಸಹ ಈ ಕಾರ್ಯಕ್ರಮದಲ್ಲಿ ಮೂಡಿಬರಲಿದೆ.

ಇದನ್ನೂ ಓದಿ : ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋಕೆ ನಂಗೇನ್ ತಲೆ ಕೆಟ್ಟಿದಿಯಾ; ಬಿ.ಎಸ್. ಯಡಿಯೂರಪ್ಪ
Loading...

First published:July 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...