• Home
  • »
  • News
  • »
  • trend
  • »
  • Tokyo Olympics: ಆಟಗಾರ್ತಿ ಹಾಗೂ ತರಬೇತುದಾರನ ನಡುವೆ ನಡೆಯಿತು ಪ್ರೇಮ ನಿವೇದನೆ!

Tokyo Olympics: ಆಟಗಾರ್ತಿ ಹಾಗೂ ತರಬೇತುದಾರನ ನಡುವೆ ನಡೆಯಿತು ಪ್ರೇಮ ನಿವೇದನೆ!

Tokyo Olympics

Tokyo Olympics

ಅವರ ಹಿಂದೆ ತರಬೇತುದಾರ ಲ್ಯೂಕಾಸ್ ಸೌಸೆಡೊ ನಿಂತಿದ್ದರು. ಈ ಬಗ್ಗೆ ಮಾರಿಯಾ ಅವರಿಗೆ ಅರಿವೇ ಇರಲಿಲ್ಲ. ಮಾಧ್ಯಮದವರೊಂದಿಗೆ ಮಾತನಾಡುತ್ತಲೇ ನಿಂತಿದ್ದರು. ತರಬೇತುದಾರ ಲ್ಯೂಕಾಸ್ ಸೌಸೆಡೊ ನಿಂತಿರುವುದನ್ನು ಕಂಡ ಮಾಧ್ಯಮದವರು ಮಾರಿಯಾ ಅವರಿಗೆ ಹಿಂದೆ ತಿರುಗಿ ನೋಡುವಂತೆ ಹೇಳಿದ್ದಾರೆ.

  • Share this:

    ಜಪಾನ್‍ನ ಟೋಕಿಯೋದಲ್ಲಿ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್ ಎಷ್ಟೋ ಆಟಗಾರರ, ತರಬೇತುದಾರರ ಕನಸಿನ ಲೋಕ. ಇಲ್ಲಿಗೆ ತಲುಪಲು ಗೆಲುವು ಮುಡಿಗೇರಿಸಿಕೊಳ್ಳುವ ಹಂಬಲ, ಪರಿಶ್ರಮ ಅರಿತವರಿಗಷ್ಟೇ ಗೊತ್ತು. ಇಂತಹ ಒಲಂಪಿಕ್‍ನಲ್ಲಿ ಸಾಕಷ್ಟು ಆಟಗಳು ನಡೆಯುತ್ತಿವೆ. ಇದರಲ್ಲಿ ಕೆಲವರು ಜಯಭೇರಿ ಬಾರಿಸಿ ಶ್ರಮಕ್ಕೆ ತಕ್ಕ ಪ್ರತಿಫಲ ಎಂದು ನಡೆದರೆ, ಇನ್ನು ಕೆಲವರು ಸೋಲಿನ ಬೇಸರದಲ್ಲಿ ಮರಳಿ ಯತ್ನ ಮಾಡುವೆ ಎಂಬ ಆತ್ಮವಿಶ್ವಾಸ, ಬೇಸರದಿಂದಲೇ ತೆರಳುತ್ತಿದ್ದಾರೆ.


    ಸೋಲಿನ ನಡುವೆ ಒಂದು ಅಚ್ಚರಿ ಸಿಕ್ಕರೆ ಹೇಗಾಗಬಾರದು ಹೇಳಿ.. ಆ ವ್ಯಕ್ತಿ ಭೂಮಿಯ ಮೇಲೆಯೇ ಇರುವುದಿಲ್ಲ. ಇಂತಹ ಸಾಲಿನಲ್ಲಿ ನಿಂತವರು ಅರ್ಜೆಂಟೀನಾ ದೇಶದ ಫೆನ್ಸರ್ ಕ್ರೀಡೆಯ ಆಟಗಾರ್ತಿ ಮಾರಿಯಾ ಬೆಲೆನ್ ಪೆರೆಜ್ ಮಾರಿಸ್. ಇವರಿಗೆ ಟೋಕಿಯೋ ಒಲಂಪಿಕ್​ ಸತತ ಮೂರನೇ ಕ್ರೀಡಾಕೂಟ.ಸೋಮವಾರ ಮೊದಲ ಸುತ್ತಿನ ’’ಸಾಬ್ರೆ ಅಥವಾ ಫೆನ್ಸಿಂಗ್’’ ಆಟದಲ್ಲಿ ಸೋಲಿನ ಕಹಿ ಉಂಡು ಹೊರನಡೆದಿದ್ದರು.


    ಈ ಬಗ್ಗೆ ಮಾಧ್ಯಮದವರ ಎದುರು ಸೋಲಿನ ಬಗ್ಗೆ ಬೇಸರದ ನುಡಿಗಳನ್ನಾಡುತ್ತಿದ್ದರು. ಆಗ ಅವರ ಹಿಂದೆ ತರಬೇತುದಾರ ಲ್ಯೂಕಾಸ್ ಸೌಸೆಡೊ ನಿಂತಿದ್ದರು. ಈ ಬಗ್ಗೆ ಮಾರಿಯಾ ಅವರಿಗೆ ಅರಿವೇ ಇರಲಿಲ್ಲ. ಮಾಧ್ಯಮದವರೊಂದಿಗೆ ಮಾತನಾಡುತ್ತಲೇ ನಿಂತಿದ್ದರು. ತರಬೇತುದಾರ ಲ್ಯೂಕಾಸ್ ಸೌಸೆಡೊ ನಿಂತಿರುವುದನ್ನು ಕಂಡ ಮಾಧ್ಯಮದವರು ಮಾರಿಯಾ ಅವರಿಗೆ ಹಿಂದೆ ತಿರುಗಿ ನೋಡುವಂತೆ ಹೇಳಿದ್ದಾರೆ.


    ಆಗ ತಿರುಗಿ ನೋಡಿದವರಿಗೆ ಅಚ್ಚರಿ ಕಾದಿತ್ತು ಅವಳ ಕೋಚ್​ ಲ್ಯೂಕಾಸ್ ಸೌಸೆಡೊ ಅವರು ’’ನನ್ನನ್ನು ಮದುವೆ ಆಗುವೆಯಾ’’ ಎಂಬ ಬೋರ್ಡ್ ಹಿಡಿದು ನಿಂತಿದ್ದರು. ಇದನ್ನು ನೋಡಿದ ಮರಿಯಾಗೆ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗಿತ್ತು. ತಕ್ಷಣವೇ ಅವರ ಮದುವೆಯ ಮನವಿಯನ್ನು ಒಪ್ಪಿ ಚುಂಬನದ ಮಳೆಗರೆದರು. ಸೋತ ನೋವಿನ ಮಧ್ಯೆಯೂ ಒಂದು ಭರ್ಜರಿ ಖುಷಿ ಸಿಕ್ಕಿತ್ತು. ಆ ಸಂತೋಷ ತಾಳಲಾರದೆ ಆಟಗಾರ್ತಿ ಆನಂದ ಭಾಷ್ಪ ಸುರಿಸಿದ್ದಾರೆ.


    ಹೊಸ ಜೀವನವನ್ನು ಒಪ್ಪಿ ಪರಸ್ಪರ ಇಬ್ಬರು ತಬ್ಬಿಕೊಂಡು ಚುಂಬಿಸುವ ದೃಶ್ಯವೂ ಮಾಧ್ಯಮಗ: ಕ್ಯಾಮರಾಗಳಲ್ಲಿ ಸೆರೆಯಾಗಿದೆ.ಮಾರಿಯಾ ಮತ್ತು ಅವರ ತರಬೇತುದಾರ ಲ್ಯೂಕಾಸ್ ಸೌಸೆಡೊ ಇವರಿಬ್ಬರು 17 ವರ್ಷಗಳಿಂದ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಇಂದು ಟಿವಿ ಕ್ಯಾಮರಾ ಎದುರೇ ಲ್ಯೂಕಾಸ್ ಮದುವೆ ಪ್ರಪೋಸ್ ಮಾಡಿದ್ದನ್ನು ನೋಡಿ ಮಾರಿಯಾ ಮೂಕವಿಸ್ಮಿತರಾಗಿದ್ದರು. ಹಾಗೇ, ಅರ್ಜೆಂಟೀನಾಕ್ಕೆ ತೆರಳಿ, ಅದ್ದೂರಿಯಾಗಿ, ಸಂಪ್ರದಾಯ ಬದ್ಧವಾಗಿ ಮದುವೆಯಾಗುವುದೊಂದೇ ಬಾಕಿ ಇರುವುದಾಗಿ ಹೇಳಿಕೊಂಡಿದ್ದಾರೆ.


    ಇದನ್ನೂ ಓದಿ: ಬ್ಯಾಂಕ್​ಗಳೇ ಸೇರಿ ನನ್ನನ್ನು ದಿವಾಳಿಯಾಗಿಸುತ್ತಿವೆ: ವ್ಯಂಗ್ಯವಾಡಿ ಟ್ವೀಟ್​ ಮಾಡಿದ ವಿಜಯ್​ ಮಲ್ಯ

    ಈ ಹಿಂದೆ ಫುಟ್‍ಬಾಲ್ ಆಟಗಾರರೊಬ್ಬರು ಕ್ರೀಡಾಂಗಣದಲ್ಲೇ ಮಂಡಿಯೂರಿ ಉಂಗುರ ಹಿಡಿದು ಮದುವೆಯಾಗುವೆಯಾ ಎಂದು ತಮ್ಮ ಪ್ರೇಯಸಿಯನ್ನು ಕೇಳಿದ್ದರು.ಅಮೆರಿಕಾದ ಫುಟ್‌ಬಾಲ್ ಆಟಗಾರ ಹಸ್ಸಾನಿ ಡಾಟ್ಸನ್ ಸ್ಟೆಫನ್ಸನ್ ಮೇಜರ್ ಕ್ಲಬ್ಸ್ ಫುಟ್‌ಬಾಲ್ ಲೀಗ್ ಪಂದ್ಯಗಳು ನಡೆಯುತ್ತಿದ್ದ ಮೈದಾನದಲ್ಲೇ ಗೆಳತಿಯ ಕೈ ಬೆರಳಿಗೆ ಉಂಗುರ ತೊಡಿಸುವ ಮೂಲಕ ತನ್ನ ಪ್ರೀತಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ನನಗೆ ಇಷ್ಟವಾದಳು, ನಾನು ಉಂಗುರ ತೊಡಿಸಿದೆ ಎಂಬ ಅಡಿ ಬರಹ ಹಾಕಿ ವೀಡಿಯೊ ಹಂಚಿಕೊಂಡಿದ್ದರು. ಇವರ ಪ್ರಿಯತಮೆ ಪೆತ್ರಾ ವುಕೋನಿಕ್ ಕೂಡ ಆ ಸಂತಸದ ಹಾಗೂ ಜೀವನದ ಅಮೂಲ್ಯ ಸಮಯವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದರು.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: