Coronavirus: ವಿಚಿತ್ರ ಎನಿಸಿದರೂ ಸತ್ಯ; ಟಾಯ್ಲೆಟ್​ ಫ್ಲಶ್​ ಮಾಡೋದ್ರಿಂದ ಕೊರೋನಾ ವೈರಸ್​ ಹರಡುತ್ತೆ!

ಟಾಯ್ಲೆಟ್​ ಫ್ಲಶ್​ ಮಾಡುವ ಸಂದರ್ಭದಲ್ಲಿ ಕೊರೋನಾ ವೈರಸ್​ ಹರಡೋ ಸಾಧ್ಯತೆ ಅಧಿಕವಾಗಿದೆಯಂತೆ! ಇದು ಹೇಗೆ ಅಂತೀರಾ? ಇದಕ್ಕೆ ತಜ್ಞರು ಉತ್ತರ ನೀಡುತ್ತಾರೆ.

news18-kannada
Updated:June 23, 2020, 10:19 AM IST
Coronavirus: ವಿಚಿತ್ರ ಎನಿಸಿದರೂ ಸತ್ಯ; ಟಾಯ್ಲೆಟ್​ ಫ್ಲಶ್​ ಮಾಡೋದ್ರಿಂದ ಕೊರೋನಾ ವೈರಸ್​ ಹರಡುತ್ತೆ!
Coronavirus
  • Share this:
ಭಾರತದಲ್ಲಿ ಈಗಾಗಲೇ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೂಡ ಕೈಗೊಳ್ಳುತ್ತಿದೆ. ಈ ಮಧ್ಯೆ ಯಾವ ಯಾವ ರೀತಿಯಲ್ಲಿ ಕೊರೋನಾ ವೈರಸ್​ ಹರಡಬಹುದು ಎನ್ನುವ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಈ ವೇಳೆ ಅಚ್ಚರಿಯ ವಿಚಾರ ಒಂದು ಕೇಳಿ ಬಂದಿದೆ.

ಅದೇನೆಂದರೆ, ಟಾಯ್ಲೆಟ್​ ಫ್ಲಶ್​ ಮಾಡುವ ಸಂದರ್ಭದಲ್ಲಿ ಕೊರೋನಾ ವೈರಸ್​ ಹರಡೋ ಸಾಧ್ಯತೆ ಅಧಿಕವಾಗಿದೆಯಂತೆ! ಇದು ಹೇಗೆ ಅಂತೀರಾ? ಇದಕ್ಕೆ ತಜ್ಞರು ಉತ್ತರ ನೀಡುತ್ತಾರೆ. ನೀವು ಫ್ಲಶ್​ ಮಾಡಿದಾಗ ನೀರಿನ ಸುಳಿಗಳು ಉಂಟಾಗುತ್ತವೆ. ಈ ಸುಳಿಗಳಿಂದ ಹಾರಿದ ಕೆಲ ಹನಿಗಳು ನಿಮ್ಮ ದೇಹಕ್ಕೆ ತಾಗುವ ಸಾಧ್ಯತೆ ಇರುತ್ತದೆ. ಈ ಮೊದಲು ಅದೇ ಟಾಯ್ಲೆಟ್​ನಲ್ಲಿ ಕೊರೋನಾ ವ್ಯಕ್ತಿ ಮಲ ಮೂತ್ರ ಮಾಡಿದ್ದರೆ, ಅದರಿಂದ ನಿಮಗೂ ಕೊರೋನಾ ವೈರಸ್​ ಹರಡಿ ಬಿಡುತ್ತದೆ ಎನ್ನುತ್ತದೆ ಅಧ್ಯಯನ.


ಈಗಾಗಲೇ ವಿದೇಶಗಳಲ್ಲಿ ಪಬ್ಲಿಕ್​ ಟಾಯ್ಲೆಟ್ ಬಳಕೆ ಮಾಡುವುದರ ಮೇಲೆ ನಿಷೇಧ ಹೇರಲಾಗಿದೆ. ಇನ್ನು, ಹೆಚ್ಚು ಸುರಕ್ಷತೆ, ಮುಂಜಾಗೃತೆವಹಿಸುವ ಕಡೆಗಳಲ್ಲಿ ಮಾತ್ರ ಟಾಯ್ಲೆಟ್​ ಬಳಕೆಗೆ ಅವಕಾಶ ನೀಡಲಾಗಿದೆ.
First published:June 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading