• Home
  • »
  • News
  • »
  • trend
  • »
  • Toilet Doors: ಮಾಲ್​ಗಳಲ್ಲಿ ಟಾಯ್ಲೆಟ್ ಬಾಗಿಲುಗಳು ಮೇಲೆ-ಕೆಳಗೆ ಓಪನ್ ಇರೋದು ಇದೇ ಕಾರಣಗಳಿಗೆ!

Toilet Doors: ಮಾಲ್​ಗಳಲ್ಲಿ ಟಾಯ್ಲೆಟ್ ಬಾಗಿಲುಗಳು ಮೇಲೆ-ಕೆಳಗೆ ಓಪನ್ ಇರೋದು ಇದೇ ಕಾರಣಗಳಿಗೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾಲ್​ಗಳಿಗೆ ಹೋಗುವುದು ಅಂದ್ರೆ ಎಷ್ಟು ಜನರಿಗೆ ಇಷ್ಟ? ಹಾಗಾದ್ರೆ ಇಂದು ಮಾಲ್​ಗಳಲ್ಲಿ ಇರುವ ವಾಶ್​ರೂಂ ಬಗ್ಗೆ ತಿಳಿಯೋಣ ಬನ್ನಿ.

  • Share this:

ನಿಮ್ಮಲ್ಲಿ ಎಷ್ಟು ಜನರು ಮಾಲ್​ಗಳಿಗೆ (Mall) ಹೋಗಿದ್ದೀರಾ? ಮಾಲ್​ ಅಂತ ಹೇಳಿದ ಕೂಡಲೇ ಒಬ್ಬೊಬ್ಬರಿಗೆ ಒಂದೊಂದು ನೆನಪಾಗಬಹುದು. ಡ್ರೆಸ್​ ಶಾಪ್​ಗಳು, ಶೂ , ಸ್ಯಾಂಡಲ್​, ಮೇಕ್​ ಅಪ್​, ಆಟೋಟಗಳು, ಫುಡ್​ ಏರಿಯಾ ಹೀಗೆ ನಾನಾ ರೀತಿಯಾಗಿ ನೆನಪಾಗಬಹುದು. ಆದರೆ ಯಾರಿಗಾದ್ರು ಮಾಲ್​ ಅಂತ ಹೇಳಿದ ಕೂಡಲೇ ಅಲ್ಲಿನ ವಾಶ್​ ರೂಮ್​ ನೆನಪು (Memory) ಬರುತ್ತಾ? 100  ಶೇಕಡಲ್ಲಿ 1 ಅಥವಾ 3 ಜನರಷ್ಟರಿಗೆ ಈ ವಾಶ್​ರೂಮ್​ ನೆನಪು ಬರಬಹುದು ಅಲ್ವಾ? ಈ ಮಾಲ್​ನಲ್ಲಿ ಇರುವ ವಾಶ್​ ರೂಮ್​ ಬಗ್ಗೆ ಒಂದಷ್ಟು ವಿಷಯಗಳನ್ನು ಇವತ್ತು ತಿಳಿಯೋಣ ಬನ್ನಿ. ಅರೇ! ಇದೇನಪ್ಪಾ ವಾಶ್​ ರೂಮ್ (Wash Room)​ ಬಗ್ಗೆನಾ ಅಂತ ಆಶ್ಚರ್ಯ ಆಯ್ತ? ಹೌದು, ಮಾಲ್​ನಲ್ಲಿ ವಾಶ್ರೂ​ಮ್​ನ ಬಾಗಿಲಿನ ಕೆಳಗೆ ತುಂಬ ದೊಡ್ಡದಾಗಿ ಓಪನ್​ ಇರುತ್ತೆ ಇದು ಯಾಕೆ ಅಂತ ತಿಳಿಯೋಣ.


ವಾಶ್‌ರೂಮ್‌ಗಳಲ್ಲಿ ಅನೇಕ ಘಟನೆಗಳು ನಡೆಯುವುದನ್ನು ಕೇಳಬಹುದು ಅಥವಾ ನೋಡಬಹುದು. ವಾಶ್ರೂಮ್ಗಳು ಹಲವು ವಿಧಗಳು ಮತ್ತು ಶೈಲಿಗಳಾಗಿವೆ. ನೀವು ಮಾಲ್, ಹೋಟೆಲ್ ಅಥವಾ ಸಾರ್ವಜನಿಕ ಶೌಚಾಲಯಕ್ಕೆ ಹೋದಾಗ, ಅದರ ಬಾಗಿಲು ನಿಮ್ಮ ಮನೆಯ ಶೌಚಾಲಯಕ್ಕಿಂತ ಭಿನ್ನವಾಗಿರುವುದನ್ನು ನೀವು ಗಮನಿಸಿದ್ದೀರಾ. ಮಾಲ್​ನಲ್ಲಿ ಇರುವ ವಾಶ್​ರೂಮ್​ ಬಾಗಿಲುಗಳು ವಿಚಿತ್ರವಾಗಿರುತ್ತದೆ. ಅಂದ್ರೆ ಮೇಲಿನಿಂದ ಮತ್ತು ಕೆಳಗಿನಿಂದ ಸಾಕಷ್ಟು ಗ್ಯಾಪ್​ ಬಿಟ್ಟಿರುತ್ತಾರೆ. ಈ   ಹಿಂದಿನ ಕಾರಣವೂ ವಿಭಿನ್ನ ಮತ್ತು ವಿಶೇಷ.


ನಾವು ಮಾಲ್, ಹೋಟೆಲ್ ಅಥವಾ ಸಾರ್ವಜನಿಕ ಶೌಚಾಲಯಕ್ಕೆ ಹೋದಾಗ, ಶೌಚಾಲಯದ ಬಾಗಿಲುಗಳನ್ನು ಮೇಲಿನಿಂದ ಮತ್ತು ಕೆಳಗಿನಿಂದ ಕತ್ತರಿಸಲಾಗುತ್ತದೆ. ಇದರ ಹಿಂದೆ 1-2 ಅಲ್ಲ 5 ಕಾರಣಗಳಿವೆ.


ತುರ್ತು ಪ್ರವೇಶಕ್ಕಾಗಿ:


ಸಾರ್ವಜನಿಕ ಶೌಚಾಲಯಗಳನ್ನು ಪ್ರತಿದಿನ ಎಷ್ಟು ಜನ ಬಳಸುತ್ತಾರೆ ಎಂಬುದು ತಿಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯಾರಿಗಾದರೂ ವೈದ್ಯಕೀಯ ತುರ್ತುಸ್ಥಿತಿ ಇದ್ದರೆ, ಅವರು ಪ್ರಜ್ಞಾಹೀನರಾಗಿದ್ದರೆ, ಅವರು ಎಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ಸುಲಭ.


ಸ್ವಚ್ಛಗೊಳಿಸಲು ಸುಲಭ:


ಸಾರ್ವಜನಿಕ ಸ್ನಾನಗೃಹಗಳಿಗೆ ವಿವಿಧ ರೀತಿಯ ಜನರು ಭೇಟಿ ನೀಡುತ್ತಾರೆ ಮತ್ತು ಬಳಸುತ್ತಾರೆ. ಆದ್ದರಿಂದ, ಅದರ ಬಾಗಿಲುಗಳು ಬೇಗನೆ ಕೊಳಕು ಆಗುತ್ತವೆ. ಗೇಟ್‌ಗಳು ಚಿಕ್ಕದಾಗಿದ್ದರೆ, ಅವುಗಳನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ.


ಇದನ್ನೂ ಓದಿ: ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರ ಹಡಗು, ಅಮೇರಿಕನ್ಸ್​ ಅಂತೂ ಫುಲ್​ ಖುಷಿ!


ಗಾಳಿಯನ್ನು ಸಂಚಾರ:


ಸಾರ್ವಜನಿಕ ಶೌಚಾಲಯಗಳನ್ನು  ಜನರು ಹೆಚ್ಚಾಗಿ ಬಳಸುತ್ತಾರೆ. ಇಂತಹ ಸ್ಥಿತಿಯಲ್ಲಿ ಗಾಳಿಯ ಸಂಚಾರ ಸರಿಯಾಗಿಲ್ಲದಿದ್ದರೆ ಅಲ್ಲಿ ಉಳಿಯುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಅದರ ಬಾಗಿಲುಗಳು ಮೇಲ್ಭಾಗ ಮತ್ತು ಕೆಳಭಾಗದಲ್ಲಿ ತೆರೆದಿರುತ್ತವೆ.




ವೆಚ್ಚ ಕಡಿಮೆ: 


ಗೇಟ್ ಅನ್ನು ಸಂಪೂರ್ಣವಾಗಿ ನಿರ್ಮಿಸಿದಾಗ, ಆ ಬಾಗಿಲಿಗೆ ಹೆಚ್ಚಿನ ಕೆಲಸಗಳು ಇರುತ್ತದೆ. ಅಂದ್ರೆ ಅದಕ್ಕಾಗಿ ಕೊಂಡಿಗಳು, ಸ್ರ್ಕ್ಯಾಚ್​ ಆಗದೇ ಇರುವ ಹಾಗೆ ಮ್ಯಾಟ್​ಗಳು, ಅಯಸ್ಕಾಂತ ಹೀಗೆ ನಾನಾ ರೀತಿಯ ವಸ್ತುಗಳನ್ನು ಬಳಸಬೇಕಾಗುತ್ತದೆ. ಅದರ ಬದಲು ಈ ರೀತಿಯ ಪುಟ್ಟ ಡೋರ್​ಗಳನ್ನು ಬಳಸಿದರೆ ಸುಲಭ.


ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು:


ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅವಘಡಗಳನ್ನು ತಪ್ಪಿಸಲು ಅವರ ಗೇಟ್‌ಗಳನ್ನು ಚಿಕ್ಕದಾಗಿ ಇರಿಸಲಾಗಿರುತ್ತದೆ. ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು  ತಡೆಗಟ್ಟುವಲ್ಲಿ ಇದು ತುಂಬಾ ಸಹಾಯಕವಾಗಿದೆ.


ಅದೆಷ್ಟೋ ಜನರಿಗೆ ಈ ಬಾಗಿಲುಗಳನ್ನು ನೋಡಿ ಅನುಮಾನ ಬಂದಿರಬಹುದು. ಇದೀಗ ಒಂದಲ್ಲಾ ಎರಡಲ್ಲಾ 5 ಕಾರಣಗಳನ್ನು ನೀಡಿದ್ದೇವೆ. ಇನ್ನು ಮುಂದೆ ನೀವು ಮಾಲ್​ಗಳಿಗೆ ಹೋದಾಗ ಸೂಕ್ಷ್ಮವಾಗಿ ಈ ಬಾಗಿಲುಗಳನ್ನು ಗಮನಿಸಿ.

First published: