ವಿದೇಶಗಳಲ್ಲಿ ಟಾಯ್ಲೆಟ್‌ಗಳಲ್ಲಿ (Toilet) ಹೆಚ್ಚಾಗಿ ಟಿಶ್ಯೂ ಪೇಪರ್‌ಗಳನ್ನು ಬಳಸಲಾಗುತ್ತದೆ. ನೀರಿನ ಬದಲಿಗೆ ಇಲ್ಲಿ ಟಾಯ್ಲೆಟ್ ಟಿಶ್ಯೂ ಪೇಪರ್‌ಗಳೇ (Tissue Papers) ಹೆಚ್ಚು ಬಳಕೆಯಾಗುವುದು.ಇದೀಗ ಕ್ರೊಯೇಷಿಯಾದ ಮೂಲದ ಸರ್ಬಿಯನ್ ಯೂಟ್ಯೂಬರ್ (Serbian YouTuber) ಅಂತೆಯೇ ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ಡೇವಿಡ್ ವುಜಾನಿಕ್ ಫಿಪಾ 2022 ರ ವಿಶ್ವಕಪ್ ಸಮಯದಲ್ಲಿ ಕತಾರ್‌ಗೆ (Qatar) ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ರೆಸ್ಟ್‌ರೂಮ್‌ಗಳಲ್ಲಿ ಸೋಜಿಗದ ಸಂಗತಿಯೊಂದನ್ನು ಕಂಡುಕೊಂಡಿದ್ದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆ ಸೋಜಿಗ ಏನು ಗೊತ್ತೇ? ಹೇಳುತ್ತೇವೆ ನೋಡಿ.
ಕತಾರ್‌ನಲ್ಲಿ ಟಾಯ್ಲೆಟ್ ಪೇಪರ್ ಬದಲಿಗೆ ಜೆಟ್ ಸ್ಪ್ರೇ ಬಳಕೆ
ಅಲ್ಲಿನ ಶೌಚಾಲಯಗಳಲ್ಲಿ ಟಾಯ್ಲೆಟ್ ಪೇಪರ್‌ನ ಬದಲಿಗೆ ಹ್ಯಾಂಡ್ ಜೆಟ್ ಸ್ಪ್ರೇಗಳನ್ನು ಅಳವಡಿಸಿದ್ದನ್ನು ನೋಡಿ ಆತ ಬೆರಗಾಗಿದ್ದು ಮಾತ್ರವಲ್ಲದೆ ವಿದೇಶಗಳಲ್ಲಿ ಇಂತಹ ವ್ಯವಸ್ಥೆ ಯಾಕಿಲ್ಲ ಹಾಗೂ ಇದು ಅತ್ಯಂತ ಹೆಚ್ಚು ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ.
ಸೋಜಿಗಗೊಂಡ ಇನ್‌ಫ್ಲುಯನ್ಸರ್
ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಟ್ವಿಟರ್ ತಾಣವನ್ನು ಬಳಸಿಕೊಂಡಿರುವ ಡೇವಿಡ್, ಕತಾರ್‌ನಲ್ಲಿ ಒಂದು ತಿಂಗಳವರೆಗೆ ಟಾಯ್ಲೆಟ್ ಶವರ್ ಅನ್ನು ಬಳಸುತ್ತಿರುವೆ.
ಆದರೆ ಯುರೋಪ್ ಹಾಗೂ ಇನ್ನಿತರ ಪಾಶ್ಚಾತ್ಯ ದೇಶಗಳಲ್ಲಿ ನಾವು ಮಾತ್ರವೇ ಟಾಯ್ಲೆಟ್ ಪೇಪರ್‌ಗಳನ್ನು ಬಳಸುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡಿರುವೆ ಇದು ಅತ್ಯಂತ ಉತ್ತಮವಾದ ವಿಷಯ ನಿಜಕ್ಕೂ ಅಳವಡಿಸಿಕೊಳ್ಳಬೇಕಾದುದೇ ಎಂದು ತಿಳಿಸಿದ್ದಾರೆ.
ಶವರ್ ಬಳಸಲು ಸುಲಭ ಎಂದ ಯೂಟ್ಯೂಬರ್
ಫ್ರಾನ್ಸ್‌ನಲ್ಲಿ ಬಿಡೆಡ್ (ಅಂಡಾಕಾರದ ವಾಶ್ ಬೇಸಿನ್) ಅನ್ನು ಬಳಸಿರುವೆ ಆದರೆ ಅದು ತುಂಬಾ ದೊಡ್ಡದಾಗಿದೆ. ಇದು ತುಂಬಾ ಸರಳ ಹಾಗೂ ಹೆಚ್ಚು ಒತ್ತಡದ ಶವರ್ ಆಗಿದ್ದು ಸುಲಭವಾಗಿ ಬಳಸಬಹುದಾಗಿದೆ. ನಾನು ಲಂಡನ್‌ಗೆ ಮರಳಿದಾಗ ಖಂಡಿತ ಇದನ್ನು ಅಳವಡಿಸಿಕೊಳ್ಳುತ್ತೇನೆ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಪ್ರತಿಕ್ರಿಯೆ
ಕತಾರ್‌ನ ಟಾಯ್ಲೆಟ್ ರೂಮ್‌ಗಳಲ್ಲಿದ್ದ ಜೆಟ್ ಸ್ಪ್ರೇಗಳಿಂದ ಡೇವಿಡ್ ಪ್ರಭಾವಿತರಾಗಿದ್ದು ಮಾತ್ರವಲ್ಲದೆ ನಾನು ಕೂಡ ನನ್ನ ರೆಸ್ಟ್ ರೂಮ್‌ನಲ್ಲಿ ಇಂತಹುದ್ದೇ ಒಂದು ಜೆಟ್ ಸ್ಪ್ರೇಯನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಾನು ಕೂಡ ಟಾಯ್ಲೆಟ್ ಪೇಪರ್ ಅನ್ನು ಬಳಸುತ್ತಿದ್ದೆ ಅದಾಗ್ಯೂ ಕೆಲವೊಮ್ಮೆ ನೀರನ್ನು ಬಳಸುವ ಅನಿವಾರ್ಯತೆ ಇರುತ್ತದೆ ಎಂದು ಇನ್ನೊಂದು ಟ್ವೀಟ್‌ನಲ್ಲಿ ಡೇವಿಡ್ ತಿಳಿಸಿದ್ದಾರೆ.
ತನ್ನ ಟಿ ಶರ್ಟ್‌ಗಳಲ್ಲಿ ಕೂಡ ಜೆಟ್ ಶವರ್‌ನ ಚಿತ್ರವನ್ನು ಹಾಕಿಸಿಕೊಳ್ಳುವುದಾಗಿ ಆತ ಹೇಳಿದ್ದು ನಾನು ಇದುವರೆಗೆ ಕಂಡಿರದ ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ. ನಾನೀಗ ಶತಾಫ ಅಲ್ಟ್ರಾಸ್ ಗುಂಪಿನ ಸ್ವಯಂ ಘೋಷಿತ ಸ್ಥಾಪಕ ಎಂದು ಡೇವಿಡ್ ಹೇಳಿಕೊಂಡಿದ್ದಾರೆ.
ಟ್ವಿಟರ್ ಬಳಕೆದಾರರ ಅನಿಸಿಕೆ ಹೇಗಿತ್ತು?
ಟ್ವಿಟರ್‌ನಲ್ಲಿ ಡೇವಿಡ್ ಅವರ ಆಶ್ಚರ್ಯಚಿಕಿತ ಟ್ವೀಟ್ ಅತ್ಯಂತ ಆಸಕ್ತಿದಾಯಕ ಎಂದೆನಿಸಿದ್ದು, ಅವರ ಟ್ವೀಟ್ ಹಾಗೂ ಚಿತ್ರಗಳಿಗೆ ಅಷ್ಟೇ ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಹರಿದುಬಂದಿದೆ.
ಡೇವಿಡ್ ವುಜಾನಿಕ್ ಟ್ವೀಟ್ ಅನ್ನು 63,000 ಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದರೆ ಇನ್ನು 1000 ಕ್ಕೂ ಹೆಚ್ಚು ಟ್ವಿಟರ್ ಬಳಕೆದಾರರು ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಡೇವಿಡ್ ಕಾಮೆಂಟ್‌ಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಸಂಜಯ್ ಹೆಸರಿನ ಬಳಕೆದಾರರು ಭಾರತದಲ್ಲಿ ಇದು ಸಾಮಾನ್ಯವಾದುದು ಆದರೆ ಪಾಶ್ಚಾತ್ಯರು ಏಕೆ ತಮ್ಮ ಟಾಯ್ಲೆಟ್‌ಗಳಲ್ಲಿ ಶವರ್‌ಗಳನ್ನು ಕಡ್ಡಾಯಗೊಳಿಸಿಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನು ಕೆಲವರು ನೀವು ಕೂಡ ಜೆಟ್ ಸ್ಪ್ರೇಯನ್ನು ಬಳಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನೀರನ್ನು ಬಳಸಿ ನಂತರ ಟಾಯ್ಲೆಟ್ ಪೇಪರ್ ಅನ್ನು ಉಪಯೋಗಿಸುತ್ತೀರಾ ಎಂದು ಕೆಲವು ಬಳಕೆದಾರರು ಕುತೂಹಲಕಾರಿಯಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:Explainer: ಪೆರು ರಾಜಕೀಯ ಬಿಕ್ಕಟ್ಟು; ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದೇಕೆ?
ಇನ್ನು ಕೆಲವರು ಮೋಜಿನ ಕಾಮೆಂಟ್‌ಗಳ ಮೂಲಕ ಡೇವಿಡ್ ಅವರ ಕಾಲೆಳೆದಿದ್ದಾರೆ ಹಾಗೂ ಏಷ್ಯಾದ ಅಂಗಡಿಗಳಲ್ಲಿ ದೊರೆಯುವ ಲೋಟಾವನ್ನು ನೀವು ಲಂಡನ್‌ಗೆ ಮರಳಿದಾಗ ಖರೀದಿಸಿ ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ ಹ್ಯಾಂಡ್ ಹೆಲ್ಡ್ ಜೆಟ್ ಸ್ಪ್ರೇ ಹಾಗೂ ಟಾಯ್ಲೆಟ್ ಪೇಪರ್ ನಡುವೆ ಟ್ವೀಟ್‌ಗಳ ಸರಮಾಲೆಯೇ ಬಹಿರಂಗಗೊಂಡಿದೆ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ