Viral Video: ಅಮ್ಮಾ ಎನ್ನಲಿಲ್ಲ ಈ ಮಗು! ಮೊದಲ ಬಾರಿ ಆಡಿದ ಮಾತೇ ಡಾಗ್! ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಮುದ್ದಾದ ವೀಡಿಯೋದಲ್ಲಿ, ಅಂಬೆಗಾಲಿಡುವ ಮಗುವು ತನ್ನ ಮೊದಲ ಪದವನ್ನು ಹೇಳಿದ್ದು, ಅದು ಅವಳ ತಾಯಿಗೆ ತುಂಬಾನೇ ಖುಷಿ ಕೊಟ್ಟಿದೆ ಎಂದು ಹೇಳಬಹುದು. ಆ ಮಗುವು ತನ್ನ ಮೊದಲ ಪದವಾಗಿ ಹೇಳಿದ್ದನ್ನು ನೀವು ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತದೆ.

ಮಗು

ಮಗು

  • Share this:
ಸಾಮಾನ್ಯವಾಗಿ ಮನೆಯಲ್ಲಿ ಒಂದು ಪುಟ್ಟ ಮಗು (Baby) ಇದೆ ಎಂದರೆ ಅದರ ತಂದೆ ತಾಯಿ ಇಬ್ಬರು ಆ ಮಗು ಯಾವಾಗ ಮೊದಲ ಬಾರಿಗೆ ಅಂಬೆಗಾಲಿಡುತ್ತದೆ, ಆನಂತರ ಮೊದಲ ಬಾರಿಗೆ ಯಾವಾಗ ತನ್ನ ಕಾಲ ಮೇಲೆ ನಿಂತು ಕೊಂಡು ಒಂದೆರಡು ಹೆಜ್ಜೆಗಳನ್ನು (Step) ಇಡುತ್ತೆ ಮತ್ತು ಯಾವಾಗ ಮಾತಾಡುವುದನ್ನು ಶುರು ಮಾಡುತ್ತೆ ಅಂತ ಒಂದೇ ಸಮನೆ ಉಸಿರು ಬಿಗಿ ಹಿಡಿದುಕೊಂಡವರಂತೆ ತುಂಬಾನೇ ಕಾತುರತೆಯಿಂದ ಕಾಯುತ್ತಿರುವುದನ್ನು ನಾವೆಲ್ಲಾರೂ ನೋಡಿರುತ್ತೇವೆ. ತಮ್ಮ ಮಗುವು ಮೊದಲ ಪದವನ್ನು (First Word) ಮಾತನಾಡುವುದನ್ನು ಕೇಳಿದಾಗ ಪೋಷಕರಿಗೆ ಆಗುವ ಆನಂದ ಅಷ್ಟಿಷ್ಟಲ್ಲ ಬಿಡಿ. ಇದು ಆ ಮಗುವಿನ ಪೋಷಕರಿಗೆ (Parents) ಅತ್ಯಂತ ವಿಶೇಷ ನೆನಪುಗಳಲ್ಲಿ ಒಂದಾಗಿರುತ್ತದೆ ಎಂದು ಹೇಳಬಹುದು, ಏಕೆಂದರೆ ಅವರು ಅದನ್ನು ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಮಗು ಹೇಳಿದ ಆ ಮೊದಲ ಪದ
ಸಾಮಾನ್ಯವಾಗಿ ಮಕ್ಕಳು ಹುಟ್ಟಿನಿಂದ ಸ್ವಲ್ಪ ಮಾತನಾಡಲು ಮತ್ತು ನಡೆಯಲು ಕಲಿಯುವವರೆಗೆ ತಾಯಿಯೊಂದಿಗೆ ಹೆಚ್ಚಾಗಿ ಸಮಯ ಕಳೆಯುವುದರಿಂದ ಅದು ಆಡುವ ಮೊದಲ ಪದವು ಸಹಜವಾಗಿಯೇ ‘ಅಮ್ಮ’ ಎಂಬುದಾಗಿರುತ್ತದೆ. ಆದರೆ ಇಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೋದಲ್ಲಿ ಈ ಮಗು ಬೇರೆ ಪದವನ್ನೇ ಹೇಳಿದೆ ನೋಡಿ. ಈ ಮಗು ಮಾತನಾಡಿದ ಮೊದಲ ಪದವಾದರೂ ಏನು ಅಂತ ಈ ವೀಡಿಯೋದಲ್ಲಿ ಒಮ್ಮೆ ನೋಡಿ.

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಮುದ್ದಾದ ವೀಡಿಯೋದಲ್ಲಿ, ಅಂಬೆಗಾಲಿಡುವ ಮಗುವು ತನ್ನ ಮೊದಲ ಪದವನ್ನು ಹೇಳಿದ್ದು, ಅದು ಅವಳ ತಾಯಿಗೆ ತುಂಬಾನೇ ಖುಷಿ ಕೊಟ್ಟಿದೆ ಎಂದು ಹೇಳಬಹುದು. ಆ ಮಗುವು ತನ್ನ ಮೊದಲ ಪದವಾಗಿ ಹೇಳಿದ್ದನ್ನು ನೀವು ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತದೆ.

ಸಿಕಾಪಟ್ಟೆ ವೈರಲ್ಈ ಆದ ವಿಡಿಯೋ
ವೀಡಿಯೋವನ್ನು ಮೇ 28 ರಂದು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಇಲ್ಲಿಯವರೆಗೆ 2.3 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ ಮತ್ತು ಇದಕ್ಕೆ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳು ಸಹ ಲಭಿಸಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ತನ್ನ ಮಗಳು ಮೊದಲ ಬಾರಿಗೆ ಮಾತನಾಡಿದ್ದನ್ನು ನೋಡಿದ ಆ ತಾಯಿಯ ಉತ್ಸಾಹ ಈ ವೀಡಿಯೋದಲ್ಲಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ: Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಅವಳು ಮಾತನಾಡಿದ ಮೊದಲ ಪದ- 'ಡಾಗ್'
ವೀಡಿಯೋದಲ್ಲಿ, ಮಹಿಳೆ ತಾನು ಮನೆಯಲ್ಲಿರುವ ಸಾಕು ನಾಯಿಗಳಿಗೆ ಆಹಾರ ನೀಡಲು ಹೋದೆ ಎಂದು ಹೇಳುತ್ತಾಳೆ ಮತ್ತು "ನೀನು ನಾಯಿಗಳಿಗೆ ಆಹಾರವನ್ನು ನೀಡಲು ಬಯಸುವೆಯಾ" ಎಂದು ತನ್ನ ಮಗಳನ್ನು ಕೇಳಿದಾಗ, ಆ ಅಂಬೆಗಾಲಿಡುವ ಮಗು "ಡಾಗ್" ಎಂದು ಹೇಳುವ ಮೂಲಕ ಪ್ರೀತಿಯಿಂದ ಪ್ರತಿಕ್ರಿಯಿಸುತ್ತದೆ. ಅಂಬೆಗಾಲಿಡುವ ಮಗು 'ಡಾಗ್’ ಎಂಬ ಪದವನ್ನು ಅನೇಕ ಬಾರಿ ಕೇಳಿರಬೇಕು ಮತ್ತು ಅವಳು ಮಾತನಾಡಲು ಶುರು ಮಾಡಿದಾಗ ತನ್ನ ಮೊದಲ ಪದವಾಗಿ ಅದನ್ನು ಹೇಳಿರುವುದು ತಾಯಿಗೆ ತುಂಬಾನೇ ಖುಷಿ ಕೊಟ್ಟಿದೆ. "ಅವಳು ಮಾತನಾಡಿದ ಮೊದಲ ಪದ" ಎಂದು ವೀಡಿಯೋದ ಶೀರ್ಷಿಕೆ ಹೇಳುತ್ತದೆ.










View this post on Instagram






A post shared by The Dashleys (@thedashleys)




ಈ ಮುದ್ದಾದ ವೀಡಿಯೋಗೆ 250ಕ್ಕೂ ಹೆಚ್ಚು ಕಾಮೆಂಟ್ ಗಳು
ಈ ಮುದ್ದಾದ ವೀಡಿಯೋ ನೋಡಿ ಸುಮಾರು 250ಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋ ನೋಡಿ "ಹಾ.. ಹಾ.. ಇದು ತುಂಬಾನೇ ಮುದ್ದಾಗಿದೆ ವೀಡಿಯೋ" ಎಂದು ಕಾಮೆಂಟ್ ಮಾಡಿದ್ದಾರೆ. "ಅವಳ, ತುಂಬಾ ಮುದ್ದಾದ ವೀಡಿಯೋ, ನಾನು ತುಂಬಾನೇ ಇಷ್ಟಪಟ್ಟಿದ್ದೇನೆ" ಎಂದು ಇನ್ನೊಬ್ಬರು ಬರೆದಿದ್ದಾರೆ. "ನಿಮ್ಮ ಮುಖದಲ್ಲಿ ಮತ್ತು ನಿಮ್ಮ ಧ್ವನಿಯಲ್ಲಿನ ಆ ಉತ್ಸಾಹವನ್ನು ನಾವು ನೋಡಬಹುದು ಮತ್ತು ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಏಕೆಂದರೆ ಅದು ಅಮೂಲ್ಯವಾಗಿದೆ" ಎಂದು ಮೂರನೆಯವನು ಹೇಳಿದ್ದಾರೆ.

ಇದನ್ನೂ ಓದಿ: Brave Girl: ಒಂದೇ ಕಾಲಲ್ಲಿ ಶಾಲೆಗೆ ಕಿಲೋಮೀಟರ್​ಗಟ್ಟಲೇ ನಡೆಯುವ ಬಾಲಕಿ! ವಿಡಿಯೋ ನೋಡಿ

ಇನ್ನೊಬ್ಬ ವ್ಯಕ್ತಿಯು ಈ ವೀಡಿಯೋ ನೋಡಿ "ನಿಮ್ಮ ಮಗುವಿಗಿಂತ ಕ್ಯೂಟ್ ಆಗಿರುವ ಮಗು ಇನ್ನೊಂದು ಇರಲಿಕ್ಕಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: