ಮಗು ಮಾಡಿದ ಎಡವಟ್ಟು; ಐಪ್ಯಾಡ್ ಅನ್​ಲಾಕ್​ ಆಗಲು ಬೇಕು 48 ವರ್ಷ

news18
Updated:April 10, 2019, 7:41 PM IST
ಮಗು ಮಾಡಿದ ಎಡವಟ್ಟು; ಐಪ್ಯಾಡ್ ಅನ್​ಲಾಕ್​ ಆಗಲು ಬೇಕು 48 ವರ್ಷ
ಐಪ್ಯಾಡ್
  • News18
  • Last Updated: April 10, 2019, 7:41 PM IST
  • Share this:
ಕೆಲವೊಮ್ಮೆ ನಮ್ಮ ಮೊಬೈಲ್​ ಪೋನಿನ ಪಾಸ್​ವರ್ಡ್​ ಮರೆತರೆ ಜಗತ್ತೇ ತಲೆಕೆಳಗಾದಂತೆ ಟೆನ್ಶ್ಯನ್​​​ಗೆ ಒಳಗಾಗುತ್ತೇವೆ. ಆದರೆ 10 ನಿಮಿಷ ಬಿಟ್ಟು ನೆನಪಿಸಿ ಫಾಸ್​ವರ್ಡ್​ ನಮೂದಿಸಿದರೆ ಮೊಬೈಲ್​ ಅನ್​ ಲಾಕ್​ ಆಗಿಬಿಡುತ್ತದೆ. ಹೀಗಿರುವಾಗ ಅಮೇರಿಕಾದ ಜರ್ನಲಿಸ್ಟ್​ವೊಬ್ಬರ ಐಪ್ಯಾಡ್​ ಲಾಕ್​ ಆಗಿದ್ದು, ಅನ್​ಲಾಕ್​ ಮಾಡಲು ಮುಂದಿನ 48 ವರ್ಷದ ಕಾಯಬೇಕಾದ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಹೌದು, ಅಮೇರಿಕಾದ ಇವನ್​ ಒಸ್ನೋಸ್​ ಎಂಬ ಜರ್ನಲಿಸ್ಟ್​ ತಮ್ಮ ಐಪ್ಯಾಡ್​ಗೆ ಲಾಕ್​ ಹಾಕಿದ್ದಾರೆ. ಮನೆಯಿಂದ ಹೊರಗೆ ತೆರಳುವಾಗ ಐಪ್ಯಾಡ್​ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಆದರೆ ಇವರ ಮೂರು ವರ್ಷದ ಮಗು ಆಟವಾಡುವ ಸಮಯದಲ್ಲಿ ಒಸ್ನೋಸ್​ ಅವರ ಐಪ್ಯಾಡ್​ ನೋಡಿ, ಅದರ ಲಾಕ್​ ಒಪನ್​ ಮಾಡಲು ಪ್ರಯತ್ನಿಸಿದೆ. ಪದೇ-ಪದೇ ರಾಂಗ್​ ಪಾಸ್​ವರ್ಡ್​ ಮೂಲಕ ಐಪ್ಯಾಡ್​ ಲಾಕ್​ ಒಪನ್​ ಮಾಡಲು ವಿಫಲವಾಗಿದೆ. ಇದೀಗ ಐಪ್ಯಾಟ್​ ಲಾಕ್​ ಆಗಿದ್ದು ಓಪನ್​ ಆಗಲು 25,536,442 ನಿಮಿಷದಷ್ಟು ಸಮಯವನ್ನು ಕೇಳುತ್ತಿದೆ.

ಇದನ್ನೂ ಓದಿ: ಸಾಲ ಕಟ್ಟದ್ದಕ್ಕೆ ವಿದೇಶದಲ್ಲಿ ಜೆಟ್ ಏರ್​ವೇಸ್ ವಿಮಾನ ಸೀಜ್ ಮಾಡಿದ ಕಾರ್ಗೋ ಏಜೆನ್ಸಿ

ಲಾಕ್​ ಆಗಿರುವ ಐಪ್ಯಾಡ್​ ಕೇಳುವ ಸಮಯವನ್ನು ನೋಡಿ ಒಸ್ನೋಸ್​ ಬೆಚ್ಚಿಬಿದ್ದಿದ್ದಾರೆ. ತನ್ನ ಐಪ್ಯಾಡ್​ನ ಲಾಕ್​ ಓಪನ್​ ಮಾಡಲು ಬರೋಬ್ಬರಿ 48 ವರ್ಷ 59 ದಿನ ಕಾಯಬೇಕಾಗಿದೆ. ಈ ಕುರಿತು ನ್ಯೂಯಾರ್ಕ್​ ಡೈಲಿ ನ್ಯೂಸ್​ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಒಸ್ನೋಸ್​ ಐಪ್ಯಾಡ್​ ಲಾಕ್​ ಓಪನ್​ ಮಾಡಲು 2067 ರ ವರೆಗೆ ಕಾಯಬೇಕಾದ ಪ್ರಸಂಗ ಎದುರಾಗಿದೆ.

ಇದನ್ನೂ ಓದಿ:Video Viral: ಚುನಾವಣಾ ಪ್ರಚಾರದ ವೇಳೆ ನಾಗಿಣಿ ಡ್ಯಾನ್ಸ್​ಗೆ ಮೈ ಬಳುಕಿಸಿದ ಸಚಿವ ಎಂಟಿಬಿ ನಾಗರಾಜ್!

ಇನ್ನೂ ಲಾಕ್​ ಆಗಿರುವ ಐಪ್ಯಾಡ್​ ಕುರಿತು ಐಪ್ಯಾಡ್​ ಮೇಕರ್ಸ್​ ಸಲಹೆ ನೀಡಿದ್ದು, ಐಪ್ಯಾಡ್​ ರಿಸ್ಟೋರ್​ ಮಾಡುವ ಮೂಲಕ ಅನ್​ ಲಾಕ್​ ಮಾಡಬಹುದು ಎಂದು ಹೇಳಿದ್ದಾರೆ. ಆದರೆ ಐಪ್ಯಾಡ್​ನಲ್ಲಿ ಸ್ಟೋರ್​ ಆಗಿರುವ ಹಳೆಯ ಡಾಟಾ ಡಿಲೀಟ್​ ಆಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಚಿತ್ರ ಪ್ರಸಂಗವನ್ನು ಒಸ್ನೋಸ್​ ತನ್ನ ಟ್ಟಿಟ್ಟರ್​ನಲ್ಲಿ ಶೇರ್​ ಮಾಡಿದ್ದು, ನನ್ನ ಮಗ ರಾಂಗ್​ ಪಾಸ್​ವರ್ಡ್​ ಹಾಕಿದ್ದ ಪರಿಣಾಮ ಲಾಕ್​ ಆಗಿದೆ ಎಂದು ತಿಳಿಸಿದ್ದಾರೆ
First published: April 10, 2019, 7:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading