Burger Story: ಅಮ್ಮನ ಮೊಬೈಲ್​ನಲ್ಲಿ ಫುಡ್ ಆರ್ಡರ್ ಮಾಡಿದ ಪುಟ್ಟ ಮಗು! ಮನೆಗೆ ಬಂತು ರಾಶಿ ರಾಶಿ ಬರ್ಗರ್

ಅಂಬೆಗಾಲಿಡುವ ಮಗು ಅಮ್ಮನ ಕಣ್ಣು ತಪ್ಪಿಸಿ ಮೊಬೈಲ್ ತೆಗೆದುಕೊಂಡಿದೆ. ಮೊಬೈಲ್ ತೆಗೆದುಕೊಂಡಿದ್ದರೆ ತೊಂದರೆ ಇರಲಿಲ್ಲ. ತೊಂದರೆಯಾಗಿದ್ದು ಬರ್ಗರ್ ಆರ್ಡರ್ ಮಾಡಿ ಮನೆ ಬಾಗಿಲಿಗೆ ರಾಶಿ ಬರ್ಗರ್ ಬಂದಾಗ. ಸಖತ್ ಫನ್ನಿಯಾಗಿರುವ ಘಟನೆಗೆ ಸುಸ್ತಾಗಿರೋ ಅಮ್ಮ ಅದೇ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುಟ್ಟ ಮಕ್ಕಳು ಅಮ್ಮನ ಮೊಬೈಲ್ ಕಂಡರೆ ಖುಷಿಯಾಗುತ್ತಾರೆ. ಅಪ್ಪನ ಕೈಯಿಂದ ಮೊಬೈಲ್ (Mobile) ಸಿಗುತ್ತದೋ ಇಲ್ಲವೋ ಆದರೆ ಅಮ್ಮನ ಫೋನ್​ ಎಲ್ಲರ ಕೈಗೂ ಸಿಗುತ್ತದೆ. ಚಿಕ್ಕ ಮಕ್ಕಳಿಗೂ ಅಮ್ಮನ ಮೊಬೈಲ್​ನಲ್ಲಿ ಯೂಟ್ಯೂಬ್ (YouTube) ಹಾಗೂ ಗೇಮ್ಸ್ ಚೆನ್ನಾಗಿ ಅಭ್ಯಾಸವಾಗಿರುತ್ತದೆ. ಇದೀಗ ಮಕ್ಕಳು ಅಮ್ಮನ ಫೋನ್​ನಿಂದ ಏನಾದರೂ ಆರ್ಡರ್ ಮಾಡಿ ಸಿಕ್ಕಿಹಾಕಿಕೊಳ್ಳುವ ಘಟನೆ ನಡೆಯುತ್ತಲೇ ಇರುತ್ತದೆ. ಇದೀಗ ಪುಟ್ಟ ಮಕ್ಕಳೂ ಕೆಲವೊಮ್ಮೆ ಅಮ್ಮನ ಫೋನ್ (Mobile) ತೆಗೆದು ಏನಾದರೂ ಆರ್ಡರ್ ಮಾಡಿ ಅಮ್ಮಂದಿರನ್ನು ತೊಂದರೆಗೆ ಸಿಕ್ಕಿಸಿಹಾಕಿಸುತ್ತದೆ. ಅಂಬೆಗಾಲಿಡುವ ಮಗು (Baby) ಅಮ್ಮನ ಕಣ್ಣು ತಪ್ಪಿಸಿ ಮೊಬೈಲ್ ತೆಗೆದುಕೊಂಡಿದೆ. ಮೊಬೈಲ್ ತೆಗೆದುಕೊಂಡಿದ್ದರೆ ತೊಂದರೆ ಇರಲಿಲ್ಲ. ತೊಂದರೆಯಾಗಿದ್ದು ಬರ್ಗರ್ ಆರ್ಡರ್ ಮಾಡಿ ಮನೆ ಬಾಗಿಲಿಗೆ ರಾಶಿ ಬರ್ಗರ್ (Burger) ಬಂದಾಗ. ಸಖತ್ ಫನ್ನಿಯಾಗಿರುವ ಘಟನೆಗೆ ಸುಸ್ತಾಗಿರೋ ಅಮ್ಮ ಅದೇ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ (Social Media) ಶೇರ್ ಮಾಡಿಕೊಂಡಿದ್ದಾರೆ.

ಅಮ್ಮನ ಫೋನ್ ಬಳಸಿ ಎಂಥಾ ಅವಾಂತರ ಮಾಡಿದೆ ನೋಡಿ. 2 ವರ್ಷದ ಬಾಲಕ ತನ್ನ ತಾಯಿಯ ಸ್ಮಾರ್ಟ್‌ಫೋನ್ ಬಳಸಿ ಸ್ಥಳೀಯ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ನಿಂದ 31 ಚೀಸ್‌ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದಾನೆ. ಮಾತ್ರವಲ್ಲ ಜತೆಗೆ ಭರ್ಜರಿ ಟಿಪ್ ಕೂಡಾ ನೀಡಿದ್ದಾನೆ.

31 ಚೀಸ್‌ಬರ್ಗರ್‌ ಡೆಲಿವರಿ

ಮಕ್ಕಳ ಕೈಗೆ ಮೊಬೈಲ್ ಸಿಕ್ಕಾಗ ಯಾವುದೋ ನಂಬರ್‌ಗೆ ಕಾಲ್, ಮೆಸೇಜ್ ಹೋಗುವುದು, ಪೋಟೋ, ವಿಡಿಯೋ ಸೆಂಡ್ ಆಗುವುದು ಮೊದಲಾದ ಎಡವಟ್ಟುಗಳು ಆಗುತ್ತವೆ. ಆದರೆ ಇಲ್ಲಿ ಮಗುವಿನ ಕೈಗೆ ಮೊಬೈಲ್ ಸಿಕ್ಕಿದ ಕಾರಣ ಮನೆಗೆ 31 ಚೀಸ್‌ಬರ್ಗರ್‌ ಡೆಲಿವರಿ ಆಗಿದೆ.

ಇದನ್ನೂ ಓದಿ: Cats: ನಿಮ್ಮ ಮನೆಯ ಬೆಕ್ಕಿಗೆ ಒಂದು ಸೂಪರ್ ಪವರ್ ಇದ್ಯಂತೆ ನೋಡಿ!

ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದರೆ ಬರೀ ಅವಾಂತರವೇ

ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದರೆ ಬಹಳಷ್ಟು ಬಾರಿ ಇಂಥದ್ದೇ ಘಟನೆಗಳಾಗುತ್ತವೆ. ಇನ್ನು ಪೋಷಕರು ಯಾವುದಾದರೂ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರಂತೂ ಮುಗಿಯಿತು. ಆಫೀಸ್ ಗ್ರೂಪ್​ಗಳಲ್ಲಿ, ಇನ್ನೂ ಹಲವು ಗ್ರೂಪ್​ಗಳಲ್ಲಿ ತಮ್ಮ ಮೆಸೇಜ್​ಗಳನ್ನು ಹಾಕಿಬಿಡುತ್ತಾರೆ. ಇದರಿಂದ ಪೋಷಕರಿಗೂ ಸಮಸ್ಯೆಗಳಾಗುವುದು ತುಂಬಾ ಕಾಮನ್.

ಈ ಹಿಂದೆಯೂ ನಡೆದಿತ್ತು ಇಂಥಹ ಘಟನೆ

ಟೆಕ್ಸಾಸ್‌ನಲ್ಲಿ 2 ವರ್ಷದ ಬಾಲಕ ತನ್ನ ತಾಯಿಯ ಸ್ಮಾರ್ಟ್‌ಫೋನ್ ಬಳಸಿ ಸ್ಥಳೀಯ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ನಿಂದ 31 ಚೀಸ್‌ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದಾನೆ. ಜೊತೆಗೆ 1,200 ರೂ. ಟಿಪ್ ಸಹ ಸೇರಿಸಿದ್ದಾನೆ. ಕೆಲ್ಸೆ ಬುರ್ಖಾಲ್ಟರ್ ಗೋಲ್ಡನ್ ಈ ಘಟನೆಯನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Python Story: ಹೆಬ್ಬಾವು ಮೊಟ್ಟೆಗಳ ಮರಿ ಮಾಡಲು 50 ದಿನ ಹೈವೇ ಕಾಮಗಾರಿಯೇ ಸ್ಟಾಪ್!

ಮಗ ಬ್ಯಾರೆಟ್ ತನ್ನ ಡೋರ್‌ಡ್ಯಾಶ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬರ್ಗರ್‌ಗಳ ಬೃಹತ್ ಲೋಡ್ ಆರ್ಡರ್ ಮಾಡಿರುವುದಾಗಿ ತಿಳಿಸಿದ್ದಾರೆ. ಪೋಸ್ಟ್‌ನೊಂದಿಗೆ 2 ವರ್ಷದ ಮಗು ತನ್ನ ಚೀಸ್‌ಬರ್ಗರ್‌ಗಳ ರಾಶಿಯ ಪಕ್ಕದಲ್ಲಿ ಕುಳಿತಿರುವ ಫೋಟೋ ಪೋಸ್ಟ್ ಮಾಡಲಾಗಿದೆ.

ಯಾರಾದರೂ ಆಸಕ್ತಿ ಹೊಂದಿದ್ದರೆ ನಾನು ಮೆಕ್‌ಡೊನಾಲ್ಡ್ಸ್‌ನಿಂದ 31 ಉಚಿತ ಚೀಸ್ ಬರ್ಗರ್‌ಗಳನ್ನು ಹೊಂದಿದ್ದೇನೆ. ಸ್ಪಷ್ಟವಾಗಿ ನನ್ನ 2 ವರ್ಷ ವಯಸ್ಸಿನವರಿಗೆ ಡೋರ್‌ಡ್ಯಾಶ್ ಅನ್ನು ಹೇಗೆ ಆರ್ಡರ್ ಮಾಡಬೇಕೆಂದು ತಿಳಿದಿದೆ ಎಂದು ಆಕೆ ಬರೆದಿದ್ದಾರೆ.

ಇದನ್ನೂ ಓದಿ: Viral Wedding: ಪಾರ್ಟಿ, ಡ್ಯಾನ್ಸ್ ಮಾಡ್ತಾ ಲೇಟಾಗಿ ಬಂದ ವರ, ಸಿಟ್ಟಾಗಿ ವಧು ಮಾಡಿದ ಕೆಲಸ ನೋಡಿ, ಈತ ಇನ್ಯಾವತ್ತೂ ಪಾರ್ಟಿ ಮಾಡಲ್ಲ

ಮಗ ನನ್ನ ಫೋನ್ ಬಳಸುತ್ತಿರುವುದನ್ನು ನಾನು ಗಮನಿಸಿದ್ದೇನೆ ಆದರೆ ಅವನು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ನಾನು ಭಾವಿಸಿದೆ. ಆದರೆ ಮನೆಗೆ ಬರ್ಗರ್ ಡೆಲಿವರಿ ಆದಾಗ ನಿಜಾಂಶ ತಿಳಿಯಿತು ಎಂದು ಕೆಲ್ಸೆ ಹೇಳಿದ್ದಾರೆ.
Published by:Divya D
First published: