• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Video: ಮನೆಗೆ ಬಂದ ಸಹೋದರನನ್ನು ಖುಷಿಯಿಂದ ಹೇಗೆ ತಬ್ಬಿಕೊಂಡಿದ್ದಾಳೆ ನೋಡಿ ಈ ಪುಟಾಣಿ! ಇವ್ರ ಪ್ರೀತಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್

Viral Video: ಮನೆಗೆ ಬಂದ ಸಹೋದರನನ್ನು ಖುಷಿಯಿಂದ ಹೇಗೆ ತಬ್ಬಿಕೊಂಡಿದ್ದಾಳೆ ನೋಡಿ ಈ ಪುಟಾಣಿ! ಇವ್ರ ಪ್ರೀತಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್

ಆರಿಯಾ ಮತ್ತು ಲ್ಯೂಕ್

ಆರಿಯಾ ಮತ್ತು ಲ್ಯೂಕ್

ಸಾಮಾಜಿಕ ಮಾಧ್ಯಮದಲ್ಲಿರುವ ವಿಡಿಯೋವೊಂದು ಅಂಥದ್ದೇ ಬಾಂಧವ್ಯವನ್ನು ತೋರಿಸುವ ಮೂಲಕ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಪುಟ್ಟ ಹುಡುಗಿಯೊಬ್ಬಳು ತನ್ನ ಪುಟಾಣಿ ಸಹೋದರನನ್ನು ಕಂಡು ಉತ್ಸಾಹಗೊಳ್ಳುವ ವಿಡಿಯೋ ಇದು...

 • Share this:

ಒಡಹುಟ್ಟಿದವರ ನಡುವಿನ ಬಾಂಧವ್ಯ ತುಂಬಾ ಗಾಢವಾದದ್ದು. ಬಾಲ್ಯದಲ್ಲಿ ನಮಗೆ ಎಷ್ಟೇ ಸ್ನೇಹಿತರು ಇದ್ದರೂ, ಬಹುಷಃ ಒಡಹುಟ್ಟಿದವರಿಗಿಂತ ಆತ್ಮೀಯವಾದ ಕುಚ್ಚಿಕ್ಕು ಫ್ರೆಂಡ್ (Friend) ಯಾರೂ ಇರಲಾರರು. ಹೌದು, ಬಾಲ್ಯದಲ್ಲಂತೂ ಸಹೋದರ ಸಹೋದರಿಯರೇ ನಮ್ಮ ಬೆಸ್ಟ್ ಫ್ರೆಂಡ್ಸ್. ಒಡಹುಟ್ಟಿದವರ ಜೊತೆ, ಎಷ್ಟೇ ಜಗಳವಾಡಿದರೂ , ಕಿತ್ತಾಡಿಕೊಂಡರೂ ಮತ್ತೇ ರಾಜಿಯಾಗಿ ಎಲ್ಲವನ್ನು ಮರೆತು ಆಟವಾಡುತ್ತಿದ್ದ ಬಾಲ್ಯವನ್ನು ಪ್ರತಿಯೊಬ್ಬರೂ ಮಿಸ್ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿರುವ (Social Media) ವಿಡಿಯೋವೊಂದು ಅಂತದ್ದೇ ಬಾಂಧವ್ಯವನ್ನು ತೋರಿಸುವ ಮೂಲಕ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಪುಟ್ಟ ಹುಡುಗಿಯೊಬ್ಬಳು (Girl) ತನ್ನ ಪುಟಾಣಿ ಸಹೋದರನನ್ನು ಕಂಡು ಉತ್ಸಾಹಗೊಳ್ಳುವ ವಿಡಿಯೋ ಅದು.


ಪುಟ್ಟ ಮಕ್ಕಳಿಗೆ ತಮ್ಮ ಸಹೋದರ ಸಹೋದರಿಯನ್ನು ಕಂಡಾಗ ಖುಷಿಯಾಗುವುದು ಸಹಜ, ಈ ವಿಡಿಯೋದಲ್ಲಿ ಅಂತದ್ದೇನು ವಿಶೇಷ ಇದೆ ಎನ್ನುತ್ತೀರಾ? ಅದು ಕೇವಲ ಕಣ್ಣಿಗೆ ಕಾಣುವಂತದ್ದಲ್ಲ, ಮನಸ್ಸಿಗೆ ಅರ್ಥವಾಗುವಂತಹ ವಿಶೇಷ?


ವಿಡಿಯೋದಲ್ಲಿನ ದೃಶ್ಯ ಹೀಗಿದೆ 
ಚಿಕ್ಕ ಬಾಲೆಯೊಬ್ಬಳು , ಮನೆಯ ಹೊರಗೆ ತನ್ನ ಸಹೋದರ ಬಂದಿದ್ದಾನೆ ಎಂಬುವುದು ತಿಳಿಯುತ್ತಲೇ, ಅತ್ಯಂತ ಉತ್ಸಾಹದಿಂದ ಮನೆಯ ಬಾಗಿಲಿನ ಕಡೆಗೆ ಓಡಿ, ಬಾಗಿಲಿನ ಗಾಜಿನಲ್ಲಿ ಹೊರ ನೋಡುತ್ತಾಳೆ. ಅಲ್ಲಿ ತನ್ನ ಪುಟ್ಟ ಸಹೋದರ ಕಾರಿನಿಂದ ಇಳಿದದ್ದು ಕಾಣುತ್ತಲೇ, ಅವಸರದಿಂದ ಬಾಗಿಲನ್ನು ತೆರೆದು ಹೊರಗೆ ಹೋಗುತ್ತಾಳೆ ಮತ್ತು ತನ್ನ ಸಹೋದರನ ಬಳಿಗೆ ಓಡುತ್ತಾಳೆ.ತನ್ನ ಅಕ್ಕನನ್ನು ಕಂಡ ಆತ ಕೂಡ ಸಂತಸ ಮತ್ತು ಉತ್ಸಾಹದಿಂದ ‘ಆರಿಯಾ’ ಎಂದು ಕೂಗುತ್ತಾ ಆಕೆಯ ಕಡೆ ಓಡಿಬರುತ್ತಾನೆ. ಅಕ್ಕ ತಮ್ಮ ಇಬ್ಬರೂ ಪರಸ್ಪರ ತಬ್ಬಿಕೊಳ್ಳುತ್ತಾರೆ. ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋದಲ್ಲಿ, ಆ ಬಾಲಕಿಗೆ ಮನೆಗೆ ಮರಳಿದ ತಮ್ಮನನ್ನು ಕಂಡಾಗ ಆಗುವ ಖುಷಿಯನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ನೀವು ಕೂಡ ವಿಡಿಯೋವನ್ನು ನೋಡಿದಾಗ, ಆಹ್ ಎಷ್ಟು ಮುದ್ದಾದ ಬಾಂಧವ್ಯ ಎಂದು ಖಂಡಿತಾ ಭಾವಿಸುತ್ತೀರಿ.


ವೈರಲ್ ಆಯ್ತು ಅಣ್ಣ ತಂಗಿಯ ವಿಡಿಯೋ
ಇನ್‍ಸ್ಟಾಗ್ರಾಂನ ಆರಿಯಾ ಅಂಡ್ ಲ್ಯೂಕ್ ಎಂಬ ಹೆಸರಿನ ಖಾತೆಯಲ್ಲಿ ಜೂನ್ 19 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋಗೆ 2.42 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಗಳು ದೊರಕಿವೆ. ಈ ವಿಡಿಯೋವನ್ನು ಆರಿಯಾ ಮತ್ತು ಲ್ಯೂಕ್ ಎಂಬ ಹೆಸರಿನ ಆ ಪುಟಾಣಿ ಅಕ್ಕ ಮತ್ತು ತಮ್ಮನಿಗೆ ಡೆಡಿಕೇಟ್ ಮಾಡಲಾಗಿದೆ.


ಇದನ್ನೂ ಓದಿ: Life Advice: ಉತ್ತಮ ಜೀವನ ನಡೆಸುವುದು ಹೇಗೆ ಗೊತ್ತಾ? 95 ವರ್ಷದ ವೃದ್ದೆ ಏನ್ ಹೇಳಿದ್ದಾರೆ ನೋಡಿ


“ಪುಟ್ಟ ತಮ್ಮ ಮನೆಗೆ ಬಂದಿದ್ದಾನೆ. ಸೋ ಸ್ವೀಟ್” ಎಂಬ ಬರಹವನ್ನು ಕೂಡ ಆ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋಗೆ “ಓಹ್ ನನ್ನ ದೇವರೇ, ಅವರು ನನ್ನ ಹೃದಯವನ್ನು ಕರಗಿಸಿದರು!” ಎಂಬ ಹೃದಯದ ಇಮೋಜಿಗಳನ್ನು ಹೊಂದಿರುವ ಅಡಿಬರಹವನ್ನು ಕೂಡ ನೀಡಲಾಗಿದೆ. ಈ ವಿಡಿಯೋವನ್ನು ಕಂಡು ಸಾಕಷ್ಟು ಮಂದಿ ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಮತ್ತು ವಿಡಿಯೋಗೆ 20,000 ಕ್ಕೂ ಹೆಚ್ಚಿನ ಮೆಚ್ಚುಗೆಗಳು ದೊರಕಿವೆ.


ವಿಡಿಯೋ ನೋಡಿ ಜನ ಕಾಮೆಂಟ್ ಮಾಡಿದ್ದು ಹೀಗೆ
“ಆಹ್, ಮಕ್ಕಳು ಎಲ್ಲರಿಗೂ ಮತ್ತು ಎಲ್ಲದಕ್ಕೂ ನೀಡಲು ಬೇಕಾಗುವಷ್ಟು ಅತ್ಯಧಿಕ ಪ್ರೀತಿ ತುಂಬಿದ ಪರಿಶುದ್ಧ ಹೃದಯವನ್ನು ಹೊಂದಿರುತ್ತಾರೆ” ಒಬ್ಬ ಇನ್‍ಸ್ಟಾಗ್ರಾಂ ಬಳಕೆದಾರ ಬರೆದುಕೊಂಡಿದ್ದರೆ.


ಇನ್ನೊಬ್ಬರು “ಈ ಮಕ್ಕಳ ನಗುವನ್ನು ನೋಡುವುದು ತುಂಬಾ ಚೆಂದ. ಅದು ನನ್ನ ಹೃದಯವನ್ನು ಕರಗಿಸಿ ಮತ್ತು ನನ್ನ ಮುಖದಲ್ಲಿ ನಗುವನ್ನು ಮೂಡಿಸಿತು. ನನ್ನ ಒಡಹುಟ್ಟಿದವರ ಜೊತೆ ಇಂತಹ ಕ್ಷಣಗಳನ್ನು ಹಂಚಿಕೊಳ್ಳಲು ಯಾವತ್ತೂ ಅವಕಾಶ ಸಿಗಲಿಲ್ಲ. ನನ್ನ ಮಕ್ಕಳು ಭವಿಷ್ಯದಲ್ಲಿ ಹೀಗೆ ಬದುಕಲಿ ಎಂಬುವುದಷ್ಟೆ ನನ್ನ ಪ್ರಾರ್ಥನೆ” ಎಂದು ಬರೆದಿದ್ದಾರೆ.


ಇದನ್ನೂ ಓದಿ: Photoshoot: ಈ ವಧು-ವರರ ಮದುವೆಯ ಫೋಟೋಶೂಟ್ ನೋಡಿ! ಇವರ ಜೊತೆ ಇದ್ದ ಮಗು ಯಾರದ್ದಾಗಿರಬಹುದು? 

top videos


  “ಅವರು ತುಂಬಾ ಅಮೂಲ್ಯ ಮತ್ತು ಪ್ರೀತಿಯಿಂದ ತುಂಬಿರುತ್ತಾರೆ” ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. “ಅವರು ಪರಿಶುದ್ಧವಾಗಿದ್ದಾರೆ, ಓಹ್ ಇವರನ್ನು ನೋಡಿ ನನಗೆ ಅಳು ಬರುತ್ತಿದೆ” ಎಂದು ಇನ್ನೊಬ್ಬರು ಬರೆದಿದ್ದಾರೆ.

  First published: