Online Shoppingನಲ್ಲಿ 1.4 ಲಕ್ಷದ ಫರ್ನಿಚರ್ ಖರೀದಿಸಿದ ಪುಟ್ಟ ಪೋರ, ಆರ್ಡರ್ ಕಂಡು ಅಮ್ಮನಿಗೆ ಫುಲ್ ಶಾಕ್!

ಕೇವಲ 22 ತಿಂಗಳ ವಯಸ್ಸಿನ ಅಯಾಂಶ್ ಕುಮಾರ್ ಇನ್ನೂ ಅಂಬೆಗಾಲಿಡುವ ಮಗು. ಆ ಮಗು ತನ್ನ ಪೋಷಕರ ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್‌ ಮೂಲಕ 2,000 ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 1.4 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಆರ್ಡರ್ ಮಾಡಿದ್ದಾನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಈಗಂತೂ ಬಹುತೇಕ ಪೋಷಕರು (Parents) ತಮ್ಮ ಪುಟ್ಟ (Little Child) ಮಗು ಸ್ವಲ್ಪ ಅತ್ತರೆ ಸಾಕು ಅದನ್ನು ಬೇಗನೆ ಸಮಾಧಾನ ಪಡಿಸಲು ಅದರ ಕೈಗೆ ತಮ್ಮ ಮೊಬೈಲ್ ಫೋನ್ (Mobile Phone) ಅನ್ನು ಕೊಟ್ಟು ಬಿಡುತ್ತಾರೆ. ಈ ಸಾಧನಗಳಿಂದಾಗಿ ಮಗುವಿನ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದು ಮತ್ತು ಎಂತಹ ಎಡವಟ್ಟುಗಳಾಗಬಹುದು ಎಂಬುದರ ಪರಿಜ್ಞಾನ ಬಹಳಷ್ಟು ಪೋಷಕರಿಗೆ ಇರುವುದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ -ಮೊಬೈಲ್ ಫೋನ್‌ಗಳನ್ನು ತಮ್ಮ ಪುಟ್ಟ ಮಕ್ಕಳ ಕೈಗೆ ಕೊಡಬೇಡಿ, ಏಕೆಂದರೆ ಅವುಗಳಿಗೆ ಗೊತ್ತಾಗದೇ ಯಾವುದೋ ಸಂಖ್ಯೆಯನ್ನು ಡಯಲ್ ಮಾಡಿ ಯಾರಿಗಾದರೂ ಕರೆಯನ್ನು ಮಾಡಬಹುದು ಅಥವಾ ಯಾವುದೋ ಎಮೋಜಿಗಳನ್ನು ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಕಳುಹಿಸಿ ನೀವು ಮುಜುಗರ ಪಡುವಂತೆ ಆಗುತ್ತದೆ. ಈ ರೀತಿಯ ಸಾಧನಗಳು ಮತ್ತು ಗ್ಯಾಜೆಟ್‌ಗಳನ್ನು(Gadgets) ಪುಟ್ಟ ಮಕ್ಕಳಿಂದ ದೂರವಿಡಬೇಕು ಎಂದು ತಜ್ಞರು (Experts) ಅನೇಕ ಬಾರಿ ಪೋಷಕರಿಗೆ ಹೇಳುತ್ತಲೇ ಇರುತ್ತಾರೆ.

ಅಮೆರಿಕದ ನ್ಯೂಜೆರ್ಸಿಯ ಪ್ರಕರಣ
ನಿಮ್ಮ ಮೊಬೈಲ್ ಫೋನ್ ನಿಮ್ಮ ಮಗುವಿನ ಕೈಗೆ ನೀಡಿದರೆ ಅದಕ್ಕೆ ಅರಿವಿಲ್ಲದೆ ಮೊಬೈಲ್‌ನಲ್ಲಿ ಅಥವಾ ಇತರ ಯಾವುದೇ ಇಂಟರ್ನೆಟ್-ಸಕ್ರಿಯಗೊಳಿಸಿದ ಸಾಧನದಲ್ಲಿ ಬಹಳಷ್ಟು ಬದಲಾಯಿಸಲಾಗದ ವಿಷಯಗಳಿಗೆ ಕಾರಣವಾಗಬಹುದು. ನೀವು ಯಾವಾಗಲೂ ನಿಮ್ಮ ಫೋನ್ ಅನ್ನು ಲಾಕ್ ಮಾಡಬೇಕು ಅಥವಾ ನಿಮ್ಮ ಮಕ್ಕಳ ಕೈಗೆಟುಕದಂತೆ ಏಕೆ ಇಡಬೇಕು ಎಂಬುದಕ್ಕೆ ಅಮೆರಿಕದ ನ್ಯೂಜೆರ್ಸಿಯ ಈ ಪ್ರಕರಣವು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಬಹುದು.

ಕೇವಲ 22 ತಿಂಗಳ ವಯಸ್ಸಿನ ಅಯಾಂಶ್ ಕುಮಾರ್ ಇನ್ನೂ ಅಂಬೆಗಾಲಿಡುವ ಮಗು. ಆ ಮಗು ತನ್ನ ಪೋಷಕರ ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್‌ ಮೂಲಕ 2,000 ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 1.4 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಆರ್ಡರ್ ಮಾಡಿದ್ದಾನೆ ನೋಡಿ.

ಇದನ್ನೂ ಓದಿ: Online Fraud: ನಿಮಗೆ ಗೊತ್ತಿಲ್ಲದೇ ಖಾತೆಯಲ್ಲಿ ಹಣ ಡ್ರಾ ಆಯ್ತಾ? ಹೀಗೆ ಮಾಡಿದ್ರೆ 72 ಗಂಟೆಯಲ್ಲಿ ನಿಮ್ಮ ದುಡ್ಡು ಸಿಗುತ್ತೆ!

ವಾಲ್‌ಮಾರ್ಟ್ ವೆಬ್‌ಸೈಟ್‌
ಹೀಗೆ ಎಲ್ಲಾ ಪೀಠೋಪಕರಣಗಳನ್ನು ಆರ್ಡರ್ ಮಾಡು ಅಂತ ಇವನ ಪೋಷಕರು ಇವನಿಗೆ ಹೇಳಿಲ್ಲ, ಅಯಾಂಶ್ ತಾಯಿ ಮಧು ತಮ್ಮ ಹೊಸ ಮನೆಗೆ ಬೇಕಾಗುವ ಪೀಠೋಪಕರಣಗಳನ್ನು ಖರೀದಿಸಲು ವಾಲ್‌ಮಾರ್ಟ್ ವೆಬ್‌ಸೈಟ್‌ನಲ್ಲಿ ಹೋಗಿ ಎಲ್ಲವನ್ನೂ ಅಯ್ಕೆ ಮಾಡಿ ಶಾಪಿಂಗ್ ಕಾರ್ಟ್‌ನಲ್ಲಿ ಇರಿಸಿದ್ದಾರೆ. ನಂತರ ಅದನ್ನು ಖರೀದಿಸುವ ಯೋಚನೆಯಲ್ಲಿದ್ದರು. ಅವರ ಮಗುವಿಗೆ ಅವರು ಪೋನ್ ಕೊಟ್ಟಿದ್ದಾರೆ, ಆ ಮಗು ಶಾಪಿಂಗ್ ಕಾರ್ಟ್‌ನಲ್ಲಿ ಇರುವ ಸಾಕಷ್ಟು ವಸ್ತುಗಳನ್ನು ಆಕಸ್ಮಿಕವಾಗಿ ಯಾವುದೋ ಬಟನ್ ಒತ್ತಿ ಆರ್ಡರ್ ಮಾಡಿದ್ದಾನೆ.

ಅಯಾಂಶ್ ತಾಯಿ ಮಧು ಇನ್ನೂ ಅವಳ ಹೊಸ ಮನೆಗೆ ಹೋದ ನಂತರ ಅವುಗಳನ್ನು ಆರ್ಡರ್ ಮಾಡಿದರೆ ಆಯಿತು ಎಂದು ಸುಮ್ಮನಿದ್ದಳು, ಆದರೆ ಆ ಮಗು ಈಗಲೇ ಆರ್ಡರ್ ಮಾಡಿರುವ ಘಟನೆ ನಡೆದಿದೆ. "ಅವನು ಇದನ್ನು ಮಾಡಿದ್ದಾನೆ ಎಂದು ನಂಬುವುದು ನಿಜವಾಗಿಯೂ ಕಷ್ಟ, ಆದರೆ ಆರ್ಡರ್ ಮಾಡಿದ್ದಂತೂ ಸತ್ಯ" ಎಂದು ಅಯಾಂಶ್ ಅವರ ತಂದೆ ಪ್ರಮೋದ್ ಕುಮಾರ್ ಹೇಳಿದರು.

ಪೋಷಕರು ಆಶ್ಚರ್ಯ
ಹೊಸ ಪೀಠೋಪಕರಣಗಳ ಪೆಟ್ಟಿಗೆಯನ್ನು ಅವರ ವಿಳಾಸಕ್ಕೆ ತಲುಪಿಸಲು ಪ್ರಾರಂಭಿಸಿದಾಗ ಪೋಷಕರು ಆಶ್ಚರ್ಯಚಕಿತರಾದರು. ಕೆಲವು ಪ್ಯಾಕೇಜ್‌ಗಳು ಎಷ್ಟು ದೊಡ್ಡದಾಗಿದ್ದವೆಂದರೆ ಅವು ಬಾಗಿಲ ಮೂಲಕ ಒಳಗಡೆ ತೆಗೆದುಕೊಂಡು ಬರಲು ಆಗುವುದೇ ಇಲ್ಲ. ನಂತರ ತಾಯಿ ತನ್ನ ವಾಲ್‌ಮಾರ್ಟ್ ಖಾತೆಯನ್ನು ಪರಿಶೀಲಿಸಿದಾಗ, ತನ್ನ ಮಗ ಕುರ್ಚಿಗಳು, ಹೂವಿನ ಸ್ಟ್ಯಾಂಡ್‌ಗಳು ಮತ್ತು ಅವರಿಗೆ ಅಗತ್ಯವಿಲ್ಲದ ಇತರ ಬಹಳಷ್ಟು ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ ಎಂದು ಅವಳು ಕಂಡುಕೊಂಡಳು.

ಇದನ್ನೂ ಓದಿ: Money Transfer: ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ? ಹಾಗಾದ್ರೆ ಏನು ಮಾಡಬೇಕು?

"ಅವನು ತುಂಬಾ ಚಿಕ್ಕವ, ಅವನು ತುಂಬಾ ಮುದ್ದಾಗಿದ್ದಾನೆ, ಅವನು ಈ ಎಲ್ಲಾ ವಸ್ತುಗಳನ್ನು ಆರ್ಡರ್ ಮಾಡಿದ್ದನ್ನು ನೋಡಿ ನಾವು ತುಂಬಾನೇ ನಕ್ಕಿದ್ದೇವೆ" ಎಂದು ತಾಯಿ ಮಧು ಹೇಳಿದರು. ಈವಾಗ ತಮ್ಮ ಸಾಧನಗಳಲ್ಲಿ ಕಠಿಣವಾದ ಪಾಸ್‌ವರ್ಡ್‌ಗಳು ಮತ್ತು ಮುಖ ಗುರುತಿಸುವಿಕೆಯನ್ನು ಬಳಸಲು ಪ್ರಾರಂಭಿಸುತ್ತೇವೆ ಎಂದು ಪ್ರಮೋದ್ ಹೇಳಿದರು.
Published by:vanithasanjevani vanithasanjevani
First published: