ಪ್ರತಿ ವರ್ಷ ಅಕ್ಟೋಬರ್ 23 ರಂದು ರಾಷ್ಟ್ರೀಯ ಆಯುರ್ವೇದ ದಿನವನ್ನು (National Ayurveda Day) ಆಚರಣೆ ಮಾಡಲಾಗುತ್ತದೆ. ಧನ್ವಂತರಿ ಜಯಂತಿ ದಿನದಂದು ಆಯುರ್ವೇದ ದಿನವನ್ನು ಆಚರಣೆ ಮಾಡಲಾಗುತ್ತದೆ. ಧನ್ವಂತರಿ ಆಚರ್ಯ ಅವರನ್ನು ಆಯುರ್ವೇದದ ಪಿತಾಮಹ ಎಂದು ಕರೆಯುತ್ತಾರೆ. ಭಾರತದ (India) ಜನರಿಗೆ (People) ಅತ್ಯಂತ ಹಳೆಯ ವೈದ್ಯಕೀಯ ಪದ್ಧತಿ ಆಗಿರುವ ಆಯುರ್ವೇದದ ಬಗ್ಗೆ ಅರಿವು (Awareness) ಮೂಡಿಸುವುದು ಆಯುರ್ವೇದ ದಿನವನ್ನು ಆಚರಿಸುವ ಉದ್ದೇಶ ಆಗಿದೆ.
ಆಯುರ್ವೇದದಲ್ಲಿ ಹಲವು ಗಿಡಮೂಲಿಕೆಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಆಯುರ್ವೇದ ತಜ್ಞ ಡಾ.ಶರದ್ ಕುಲಕರ್ಣಿ ವಿವರಣೆ ನೀಡಿದ್ದಾರೆ. ಇದು ಕನಿಷ್ಠ 100 ವಿಧದ ರೋಗಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಪ್ರಯೋಜನಕಾರಿ ಆಗಿದೆ.
ಆಯುರ್ವೇದ ಗಿಡಮೂಲಿಕೆಗಳು ಸಾಮಾನ್ಯವಾಗಿ ಅಡ್ಡ ಪರಿಣಾಮ ಹೊಂದಿಲ್ಲ. ಆದರೂ ಅವುಗಳನ್ನು 10 ರಿಂದ 15 ದಿನಗಳ ಮಧ್ಯಂತರದಲ್ಲಿ ಇವುಗಳನ್ನು ಸೇವನೆ ಮಾಡಬೇಕು. ಅಲ್ಲದೆ ಅವುಗಳನ್ನು ಸೇವನೆ ಮಾಡುವ ಮೊದಲು ಆಯುರ್ವೇದ ತಜ್ಞರನ್ನು ಸಂಪರ್ಕಿಸಬೇಕು.
ಆಯುರ್ವೇದ ಗಿಡಮೂಲಿಕೆ ಹರಿತಕಿ
ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಹರಿತಕಿ ಅನೇಕ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಉಪಯುಕ್ತ ಾಗಿದೆ. ಇದು ಮುಖ್ಯವಾಗಿ ಜೀರ್ಣಕ್ರಿಯೆ ಸುಧಾರಿಸುವುದು, ತೂಕ ನಷ್ಟ, ವಯಸ್ಸಾದ ವಿರೋಧಿ, ಮಲಬದ್ಧತೆ ನಿವಾರಿಸುವುದು, ಮಧುಮೇಹ ನಿಯಂತ್ರಣ, ಕ್ಷಯರೋಗದಲ್ಲಿ ಕಡಿಮೆ ಮಾಡುವ ಮತ್ತು ಹೋಗಲಾಡಿಸುವ ಮೂಲಕ ಮುಂತಾದ ಆರೋಗ್ಯ ಪ್ರಯೋಜನ ನೀಡುತ್ತದೆ.
ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು
ಅಲ್ಲದೆ ದೀರ್ಘಕಾಲದ ಕೆಮ್ಮು, ಗುದದ ಬಿರುಕು, ಪೈಲ್ಸ್ ಮುಂತಾದ ಸುಮಾರು ನೂರಾರು ಕಾಯಿಲೆಗಳಲ್ಲಿ ಇದರ ಸೇವನೆಯು ಪ್ರಯೋಜನಕಾರಿ ಆಗಿದೆ. ಹರಿತಕಿ ಚೂರ್ಣವನ್ನು ಬೆಚ್ಚಗಿನ ನೀರು, ಜೇನುತುಪ್ಪ ಅಥವಾ ಮಜ್ಜಿಗೆಯೊಂದಿಗೆ ಬೆರೆಸಿ ಸೇವನೆ ಮಾಡಲಾಗುತ್ತದೆ.
ಆಯುರ್ವೇದ ಗಿಡಮೂಲಿಕೆ ಆಮ್ಲ
ಆಮ್ಲಾ ಒಂದು ಹುಳಿ ಹಣ್ಣು. ಇದನ್ನು ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಬಳಕೆ ಮಾಡಲಾಗುತ್ತದೆ. ಆಮ್ಲಾವನ್ನು ಮುಖ್ಯವಾಗಿ ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ.
ಅಲ್ಲದೇ ಬಾಯಿ ಹುಣ್ಣು, ಮಲಬದ್ಧತೆ, ಬೊಜ್ಜು, ಮಧುಮೇಹ, ಹೃದ್ರೋಗ ಸೇರಿದಂತೆ ಹಲವು ಕಾಯಿಲೆಗಳಲ್ಲಿ ಇದರ ಸೇವನೆ ಪ್ರಯೋಜನಕಾರಿ. ಇದನ್ನು ಪುಡಿ ಅಥವಾ ಜ್ಯೂಸ್ ರೂಪದಲ್ಲಿ ಸೇವನೆ ಮಾಡಬಹುದು.
ಆಯುರ್ವೇದ ಗಿಡಮೂಲಿಕೆ ಅಶ್ವಗಂಧ
ಅಶ್ವಗಂಧವನ್ನು ಆಯುರ್ವೇದ ಗಿಡಮೂಲಿಕೆಗಳ ರಾಜ ಎಂದು ಪರಿಗಣಿಸಲಾಗಿದೆ. ಅಶ್ವಗಂಧವನ್ನು ಆಯುರ್ವೇದದ ಗುರುಗಳು 3000 ವರ್ಷಗಳಿಂದ ವಿವಿಧ ದೈಹಿಕ ಮತ್ತು ಮಾನಸಿಕ ಕಾಯಿಲೆ ನಿಯಂತ್ರಿಸಲು ಮತ್ತು ಹೋಗಲಾಡಿಸಲು ಚಿಕಿತ್ಸೆ ನೀಡಲು ಬಳಸುತ್ತಾರೆ.
ಆಯುರ್ವೇದ ಗಿಡಮೂಲಿಕೆ ತುಳಸಿ
ತುಳಸಿ ಒಂದು ಸಸ್ಯ. ಧಾರ್ಮಿಕ ನಂಬಿಕೆಗಳಿಂದ ಪೂಜಿಸಲಾಗುತ್ತದೆ. ಇದು ದೀರ್ಘಕಾಲದವರೆಗೆ ಪೂಜಿಸಲ್ಪಟ್ಟಿದೆ. ಅದೇ ವೇಳೆ ಆಯುರ್ವೇದದಲ್ಲಿ ತುಳಸಿ ಸಸ್ಯವನ್ನು ಅನೇಕ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಬಳಸುತ್ತಾರೆ.
ತುಳಸಿ ಎಲೆಗಳು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತವೆ. ಜೊತೆಗೆ ತುಳಸಿ ಶೀತ, ಸೈನುಟಿಸ್, ಮೂಗು ಸೋರುವಿಕೆ, ಚರ್ಮ ರೋಗಗಳು, ಖಿನ್ನತೆ, ಮೂತ್ರಪಿಂಡದ ಕಲ್ಲುಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಪ್ರಯೋಜನಕಾರಿ ಆಗಿದೆ.
ಆಯುರ್ವೇದ ಗಿಡಮೂಲಿಕೆ ಲೋಳೆಸರ
ಅಲೋವೆರಾವನ್ನು ಆಯುರ್ವೇದ ಭಾಷೆಯಲ್ಲಿ ಘೃತಕುಮಾರಿ ಎಂದು ಕರೆಯುತ್ತಾರೆ. ತ್ವಚೆ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. ಯಕೃತ್ ಸಂಬಂಧಿತ ಸಮಸ್ಯೆಗಳಲ್ಲೂ ಇದು ಪ್ರಯೋಜನಕಾರಿಯಾಗಿದೆ. ಇದು ಅಲೋವೆರಾ ಸೇವನೆಯು ಹಾಲಿಟೋಸಿಸ್, ಪಿತ್ತಕೋಶದ ಕಲ್ಲು, ಮಲಬದ್ಧತೆ, ಅಧಿಕ ರಕ್ತದ ಸಕ್ಕರೆಯಂತಹ ಅನೇಕ ಕಾಯಿಲೆಗಳಲ್ಲಿ ಪ್ರಯೋಜನಕಾರಿ ಆಗಿದೆ.
ಆಯುರ್ವೇದ ಗಿಡಮೂಲಿಕೆ ಶುಂಠಿ
ಊಟಕ್ಕೆ ಮೊದಲು ಸಣ್ಣ ತುಂಡು ಶುಂಠಿ ಉಪ್ಪಿನೊಂದಿಗೆ ಸೇವಿಸುವುದು ಮಲಬದ್ಧತೆ, ಗ್ಯಾಸ್, ಅಸಿಡಿಟಿ ಜೀರ್ಣಕಾರಿ ಸಮಸ್ಯೆ ಬರಲ್ಲ ಎನ್ನುತ್ತಾರೆ ಆಯುರ್ವೇದ ತಜ್ಞರು. ಶುಂಠಿ ಸೇವನೆ ಪೈಲ್ಸ್, ಫಿಶರ್, ತೂಕ ನಷ್ಟ, ಅಸ್ಥಿಸಂಧಿವಾತ, ಮಧುಮೇಹ, ಮುಟ್ಟಿನ ಸೆಳೆತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳಲ್ಲಿ ಪರಿಣಾಮಕಾರಿ ಆಗಿದೆ.
ಇದನ್ನೂ ಓದಿ: ಬಿರುಕು ಬಿಟ್ಟ ಪಾದಗಳ ಸಮಸ್ಯೆ ಹೋಗಲಾಡಿಸಲು ಇಲ್ಲಿದೆ ಕೆಲವು ಸುಲಭ ಟಿಪ್ಸ್!
ಆಯುರ್ವೇದ ಗಿಡಮೂಲಿಕೆ ನುಗ್ಗೆಕಾಯಿ
ನುಗ್ಗೆಕಾಯಿ ಪ್ರತಿಯೊಂದು ಭಾಗದಲ್ಲೂ ಔಷಧೀಯ ಗುಣಗಳಿವೆ. ಆಯುರ್ವೇದದಲ್ಲಿ ಸುಮಾರು 300 ರೋಗಗಳ ಚಿಕಿತ್ಸೆಗಾಗಿ ಇದನ್ನು ಬಳಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ