Match Making: ಅವ್ರೇ ಮದುವೇನೂ ಮಾಡಿಸ್ತಾರೆ, ಸಂಬಳನೂ ಡಬಲ್ ಮಾಡ್ತಾರೆ; ಐಟಿ ಉದ್ಯೋಗಿಗಳಿಗೆ ಬಂಪರ್ ಆಫರ್

ಮದುವೆಯಾಗಲು ಬಯಸುವವರಿಗೆ ಸೂಕ್ತವಾದ ಸಂಬಂಧ ಹುಡುಕಿಕೊಡುವ ಪ್ರಯತ್ನ ನಡೆಸುತ್ತಿದೆ. ಮತ್ತು ಮದುವೆಯಾದವರಿಗೆ ವರ್ಷಕ್ಕೆ ಎರಡು ಬಾರಿ ಸಂಬಳ ಹೆಚ್ಚಿಸುವ ಕ್ರಮ ಅನುಸರಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
+ಒಂದು ಕಂಪನಿ (Company) ಅಂದರೆ ಅದು ತನ್ನ ಉದ್ಯೋಗಸ್ಥನಿಗೆ ಕೆಲಸ, ಸಂಬಳ, ಆರೋಗ್ಯ ವಿಮೆ ಸೇರಿ ಇನ್ನಿತರೆ ಕೆಲವು ಅನುಕೂಲಗಳನ್ನು ಮಾಡಿಕೊಡುತ್ತವೆ. ಆದರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಸ್ಥರನ್ನು(Employers)  ಉಳಿಸಿಕೊಳ್ಳಲು ನೀಡಿರುವ ಬಂಪರ್ ಆಫರ್ ಕೇಳಿದ್ರೆ ನಿಮಗೆ ಆಶ್ಚರ್ಯವಾಗುತ್ತದೆ. ಇತ್ತೀಚೆಗೆ ಐಟಿ ಕಂಪನಿಗಳಿಗೆ (IT Company) ತನ್ನ ಉದ್ಯೋಗಿಗಳನ್ನು ಹಿಡಿದಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿದೆ. ಅದಕ್ಕಂತಾನೇ ಸಂಬಳ, ಇನ್ಕ್ರಿಮೆಂಟ್ (Increment) ಎಲ್ಲವನ್ನೂ ಹೆಚ್ಚಿಸುತ್ತಿವೆ. ಆದರೆ ಮಧುರೈ ಮೂಲದ ಎಸ್ಎಂಐ (ಶ್ರೀ ಮೂಕಾಂಬಿಕಾ ಇನ್ಫೋಸೊಲ್ಯೂಷನ್ಸ್) ಐಟಿ ಕಂಪನಿ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಉದ್ಯೋಗಿಗಳಿಗೆ ಬಂಪರ್ ಆಫರ್ (Offer) ಘೋಷಿಸಿದೆ.

ಮದುವೆ ಆಗದವರಿಗೆ ಮದುವೆ ಮಾಡಿಸ್ತಾರೆ

ಎಸ್ಎಂಐ ತನ್ನ ಉದ್ಯೋಗಿಗಳಿಗೆ ಮ್ಯಾಚ್‌ಮೇಕಿಂಗ್ ಅಂದರೆ ಮದುವೆಯಾಗಲು ಬಯಸುವವರಿಗೆ ಸೂಕ್ತವಾದ ಸಂಬಂಧ ಹುಡುಕಿಕೊಡುವ ಪ್ರಯತ್ನ ನಡೆಸುತ್ತಿದೆ. ಮತ್ತು ಮದುವೆಯಾದವರಿಗೆ ವರ್ಷಕ್ಕೆ ಎರಡು ಬಾರಿ ಸಂಬಳ ಹೆಚ್ಚಿಸುವ ಕ್ರಮ ಅನುಸರಿಸುತ್ತಿದೆ. ಕಂಪನಿಯು ಮದುವೆಯಾಗಲು ಬಯಸುವ ವ್ಯಕ್ತಿಗೆ ಉಚಿತವಾಗಿ ಅವರಿಗೆ ಹೊಂದುವಂತ ಸಂಬಂಧವನ್ನು ನೋಡುವ ಮತ್ತು ಮದುವೆಯಾದ ಉದ್ಯೋಗಿಗಳಿಗೆ ವರ್ಷಕ್ಕೆ ಎರಡು ಬಾರಿ ಸಂಬಳ ಹೆಚ್ಚಳ ಮಾಡುವ ಯೋಜನೆಯನ್ನು ಹಾಕೊಕೊಂಡಿದೆ.

ಕೆಲಸ ಬಿಟ್ಟು ಹೋಗದಂತೆ ಹಿಡಿದಿಟ್ಟುಕೊಳ್ಳಲು ಪ್ಲಾನ್​

ಕೆಲವು ಈ ರೀತಿಯಾದ ಯೋಜನೆಗಳಿಂದಾಗಿ ಹಲವು ವರ್ಷಗಳಿಂದ ನೌಕರರು ಸಂಸ್ಥೆಯಿಂದ ನಿರ್ಗಮಿಸುವ ಪ್ರಕರಣಗಳು 10%ಕ್ಕಿಂತ ಕಡಿಮೆಯಾಗಿದೆ. ಮತ್ತು ಎಸ್ಎಂಐ ಕಂಪನಿಯಲ್ಲಿ ಒಟ್ಟು 750 ಉದ್ಯೋಗಿಗಳಿದ್ದು, ಅವರಲ್ಲಿ ಶೇ.40ರಷ್ಟು ಮಂದಿ ಐದು ವರ್ಷಕ್ಕೂ ಹೆಚ್ಚು ಕಾಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ಎಸ್ಎಂಐ ಕಂಪನಿ ಮೊದಲು 2006ರಲ್ಲಿ ಶಿವಕಾಶಿಯಲ್ಲಿ ಪ್ರಾರಂಭವಾಯಿತು. ಉದ್ಯೋಗಿಗಳ ಸಂಖ್ಯೆ ಮತ್ತು ಉದ್ಯಮ ಏರಿಕೆಯಾಗುತ್ತಾ ಹೋಯಿತು. ಹೀಗಾಗಿ 2010ರಲ್ಲಿ ಮಧುರೈಗೆ ಕಂಪನಿಯನ್ನು ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: Tallest Dog: ವಿಶ್ವದ ಅತಿ ಎತ್ತರದ ನಾಯಿ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಜೀಯಸ್

ಕೆಲಸ ಬಿಟ್ಟು ಕಂಪನಿ ಕಟ್ಟಿದ್ರು

"ನಮ್ಮ ಕಂಪನಿ ಕಠಿಣ ಪರಿಶ್ರಮದಲ್ಲಿ ನಂಬಿಕೆಯನ್ನು ಹೊಂದಿದೆ. ಟೈರ್-1 ನಗರದಲ್ಲಿ ಇಂತಹ ಕಂಪನಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಕಠಿಣ ಪರಿಶ್ರಮದಿಂದ ಎಲ್ಲವೂ ನಡೆಯಿತು” ಎನ್ನುತ್ತಾರೆ ಎಸ್ಎಂಐ ಸಂಸ್ಥಾಪಕ ಮತ್ತು ಸಿಇಒ ಎಂಪಿ ಸೆಲ್ವ ಗಣೇಶ್. ಎಸ್ಎಂಐ ಕಂಪನಿ ಪ್ರಸ್ತುತ ಸುಮಾರು 100 ಕೋಟಿ ಆದಾಯವನ್ನು ಗಳಿಸುತ್ತಿದೆ. ಸೆಲ್ವ ಗಣೇಶ್ ತಿರುಪುರದ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಐಟಿ ಕಂಪನಿ ಸೇರಿ ಐಬಿಎಂನಲ್ಲೂ ಕೆಲಸ ಮಾಡಿದರು. ಆದರೆ ಎಸ್ಐಎಂ ಕಂಪನಿ ಕಟ್ಟುವ ಆಸೆ ಹೊಂದಿದ್ದ ಸೆಲ್ವ ಗಣೇಶ್ ಅಂತಿಮವಾಗಿ ಕೆಲಸ ಬಿಟ್ಟು ಕಂಪನಿ ಕಟ್ಟುವತ್ತ ಗಮನ ಹರಿಸಿದರು.

ಆರಂಭದಲ್ಲಿ ಎಸ್‌ಎಂಐ, ಮಧುರೈ ಮೂಲದ ಸ್ಟಾರ್ಟಪ್ ಎಂಬ ಹಣೆಪಟ್ಟಿ ಹೊಂದಿದ್ದರೂ ನೌಕರರನ್ನು ಆಕರ್ಷಿಸುವುದು ಇದಕ್ಕೆ ಸವಾಲಾಗಿತ್ತು. ನಂತರ ಕೆಲವು ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಂಪನಿಯು ಸಬಲೀಕರಣಗೊಂಡಿತು. ‘ನಿಧಾನವಾಗಿ ಕಂಪನಿ ನೆಲೆಗೊಳ್ಳುತ್ತಿದ್ದಂತೆ ನಾವು ವೃತ್ತಿಪರ ಶ್ರೇಷ್ಠತೆಯ ಬೇಡಿಕೆಯನ್ನು ಪ್ರಾರಂಭಿಸಿದ್ದೆವು ಮತ್ತು ಫಲಿತಾಂಶಗಳು ಅದ್ಭುತವಾಗಿತ್ತು’ ಎನ್ನುತ್ತಾರೆ ಸೆಲ್ವ ಗಣೇಶ್.

'ಮದುವೆನೂ ಮಾಡಿಸುತ್ತಾರೆ, ಸಂಬಳನ್ನೂ ಡಬಲ್ ಮಾಡ್ತಾರೆ:'

ಕಂಪನಿಯ ಪ್ರಾರಂಭದ ಮೊದಲ ದಿನದಿಂದ ಮದುವೆ ಇನ್ಕ್ರಿಮೆಂಟ್‌ ಇತ್ತು. ಆದರೆ ಮ್ಯಾಚ್ ಮೇಕಿಂಗ್ ಯೋಜನೆಯನ್ನು ನಂತರದ ದಿನಗಳಲ್ಲಿ ಕಂಪನಿ ಅಳವಡಿಸಿಕೊಂಡಿತು. "ಸಿಬ್ಬಂದಿಗಳು ನನ್ನನ್ನು ಸಹೋದರನಂತೆ ನೋಡುತ್ತಾರೆ ಮತ್ತು ಅವರಲ್ಲಿ ಹಲವರು ಹಳ್ಳಿಗಳಿಂದ ಬಂದವರು, ವಯಸ್ಸಾದ ಪೋಷಕರಿದ್ದಾರೆ. ಅವರಿಗೆ ಸಹಾಯ ಮಾಡಲು ಸಂಬಳ ಹೆಚ್ಚಳದಂತ ಕ್ರಮಗಳನ್ನು ಅನುಸರಿಸುತ್ತಿದ್ದೇನೆ ಎಂದಿದ್ದಾರೆ.

ಮದುವೆಯಾಗಲು ಬಯಸುವವರಿಗೆ ಕಂಪನಿಯೇ ಒಳ್ಳೆ ಸಂಬಂಧವನ್ನು ಹುಡುಕಲು ಸಹಾಯ ಮಾಡುತ್ತದೆ ಮತ್ತು ಕಂಪನಿಯು ವರ್ಷಕ್ಕೆ ಎರಡು ಬಾರಿ ಸ್ಥಿರವಾದ 6% -8% ಸಂಬಳ ಹೆಚ್ಚಳ ಮಾಡುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಸಿಇಒ ತಿಳಿಸಿದರು. ಇಂತಹ ಅವಕಾಶವು ಉದ್ಯೋಗಿಗಳನ್ನು ಇತರ ಕಂಪನಿಗಳಿಗೆ ಬದಲಾಯಿಸುವುದನ್ನು ತಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚುತ್ತಿರುವ ವೆಚ್ಚಕ್ಕೆ ಅನುಗುಣವಾಗಿ ನೌಕರರಿಗೆ ಇನ್ಕ್ರಿಮೆಂಟ್‌ ನೀಡಲಾಗುತ್ತಿದೆ ಎಂದರು. ಅದೇ ರೀತಿ, ತಮ್ಮ ಕಂಪನಿಗೆ ಸೇರುವ ಉದ್ಯೋಗಿಗೆ ಮೊದಲ ದಿನದಿಂದ ನಿಗದಿತ ಇನ್ಕ್ರಿಮೆಂಟ್ ಇರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Viral News: ಫ್ಲಾಟ್​ನಲ್ಲಿ ಸೇರಿಕೊಳ್ಳಬೇಕಂದ್ರೆ ಈ ಪ್ರಶ್ನೆಗಳಿಗೆಲ್ಲಾ ಉತ್ತರಿಸಬೇಕಾ? ಇಲ್ಲಿದೆ ನೋಡಿ ವೈರಲ್ ಪ್ರಶ್ನಾವಳಿ

2021ರಲ್ಲಿ ಎಲ್ಲಾ ಕಂಪನಿಗಳ ಉದ್ಯೋಗಿಗಳ ಆಟ್ರಿಷನ್ ದರವು ಹೆಚ್ಚುತ್ತಿರುವಾಗ ನಮ್ಮ ಕಂಪನಿ ಮಾತ್ರ ಅದ್ಯಾವುದೇ ಸಮಸ್ಯೆ ಅನುಭವಿಸಿಲ್ಲ ಮತ್ತು ಆದಾಯದಲ್ಲಿ ಗರಿಷ್ಠ ಏರಿಕೆ ಕಂಡಿದೆ ಎಂದು ಸೆಲ್ವಗಣೇಶ್ ಹೇಳಿದರು.

ನೌಕರರು ತಮ್ಮ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೇರವಾಗಿ ನನ್ನನ್ನು ಸಂಪರ್ಕಿಸುತ್ತಾರೆ. ಸವಾಲುಗಳನ್ನು ಪರಿಹರಿಸಲು ನಾವು ಹಣ ಮತ್ತು ಸಮಯ ಹೂಡಿಕೆ ಮಾಡಬೇಕಾಗುತ್ತದೆ. ಕೆಲವೊಮ್ಮೆ ಉದ್ಯೋಗಿಗಳಿಗೆ ವ್ಯವಹಾದರಾಚೆಗೆ ಸಹಾಯ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
Published by:Pavana HS
First published: