Viral Post: ಸರ್ಕಾರಿ ಉದ್ಯೋಗ ಪಡೆಯಲು ಖತರ್ನಾಕ್​ ಐಡಿಯಾ; ಶಾಕ್​ ಆದ ಮೇಲ್ವಿಚಾರಕರು

ಈಗಂತೂ ಸರ್ಕಾರಿ ಕೆಲಸ ಸಿಗುವುದು ತುಂಬಾನೇ ಕಷ್ಟವಾಗಿದೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಪಾಸಾದರೆ ಸಾಕು ಅಂತ ಕೆಲವರು ಅಂದು ಕೊಂಡರೆ, ಇನ್ನೂ ಕೆಲವರು ಹೇಗಾದರೂ ಮಾಡಿ ಪರೀಕ್ಷೆಯನ್ನು ಪಾಸು ಮಾಡಬೇಕು ಅಂತ ಕೆಲವು ಅಡ್ಡದಾರಿಗಳನ್ನು ಹಿಡಿಯುತ್ತಾರೆ. ಇಲ್ಲೊಬ್ಬ ವ್ಯಕ್ತಿ ಸರ್ಕಾರಿ ಕೆಲಸ ಗಿಟ್ಟಿಸಲು ಏನೆಲ್ಲಾ ಸರ್ಕಸ್ ಮಾಡಿದ್ದಾನೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಸರ್ಕಾರಿ ಕೆಲಸ (Government Job) ಸಿಗುವುದು ತುಂಬಾನೇ ಕಷ್ಟವಾಗಿದೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಪಾಸಾದರೆ ಸಾಕು ಅಂತ ಕೆಲವರು ಅಂದು ಕೊಂಡರೆ, ಇನ್ನೂ ಕೆಲವರು ಹೇಗಾದರೂ ಮಾಡಿ ಪರೀಕ್ಷೆಯನ್ನು (Exam) ಪಾಸು ಮಾಡಬೇಕು ಅಂತ ಕೆಲವು ಅಡ್ಡದಾರಿಗಳನ್ನು ಹಿಡಿಯುತ್ತಾರೆ. ಇಲ್ಲೊಬ್ಬ ವ್ಯಕ್ತಿ ಸರ್ಕಾರಿ ಕೆಲಸ ಗಿಟ್ಟಿಸಲು ಏನೆಲ್ಲಾ ಸರ್ಕಸ್ ಮಾಡಿದ್ದಾನೆ ನೋಡಿ. ರೈಲ್ವೆ ಉದ್ಯೋಗವನ್ನು (Railway Jobs) ಪಡೆಯುವ ಹತಾಶ ಪ್ರಯತ್ನದಲ್ಲಿ, ಅಭ್ಯರ್ಥಿಯು ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ಪ್ಯಾನ್ ಬಳಸಿ ತೆಗೆದು ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿದ್ದಾನೆ. ಅವನು ಬಯೋಮೆಟ್ರಿಕ್ ಪರಿಶೀಲನೆಯನ್ನು ಪಾಸು ಮಾಡಿದರೆ ಅವನ ಸ್ಥಾನದಲ್ಲಿ ನೇಮಕಾತಿ ಪರೀಕ್ಷೆಗೆ (Recruitment Test) ಹಾಜರಾಗುತ್ತಾನೆ ಎಂಬ ಭರವಸೆಯೊಂದಿಗೆ ಅದನ್ನು ಮಾಡಿದ್ದಾನೆ ನೋಡಿ.

ಸ್ಯಾನಿಟೈಸರ್ ಸಿಂಪಡಿಸಿದಾಗ ಬೆರಳಿನಿಂದ ಎದು ಬಂದ ಚರ್ಮ
ಆದರೆ, ಆಗಸ್ಟ್ 22 ರಂದು ಗುಜರಾತ್ ನ ವಡೋದರಾ ನಗರದಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ನಡೆಸುವ ಮೊದಲು ಬಯೋಮೆಟ್ರಿಕ್ ಪರಿಶೀಲನೆಯ ಸಮಯದಲ್ಲಿ ಪರೀಕ್ಷಾ ಮೇಲ್ವಿಚಾರಕರು ಸ್ಯಾನಿಟೈಸರ್ ಅನ್ನು ಸಿಂಪಡಿಸಿದಾಗ ಪ್ರಾಕ್ಸಿಯ ಕೈಯಲ್ಲಿ ಅಂಟಿಸಿದ ಹೆಬ್ಬೆರಳಿನ ಚರ್ಮವು ಸಡಿಲಗೊಂಡು ಕೆಳಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ವಡೋದರಾ ಪೊಲೀಸರು ಬುಧವಾರ ಬಿಹಾರದ ಮುಂಗೇರ್ ಜಿಲ್ಲೆಯ ಅಭ್ಯರ್ಥಿ ಮನೀಶ್ ಕುಮಾರ್ ಮತ್ತು ಅವರ ಪ್ರಾಕ್ಸಿ ರಾಜ್ಯಗುರು ಗುಪ್ತಾ ಅವರನ್ನು ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಎಂ.ವರೋಟಾರಿಯಾ ತಿಳಿಸಿದ್ದಾರೆ.

ಇಬ್ಬರೂ 20 ವರ್ಷ ವಯಸ್ಸಿನ ಆಸುಪಾಸಿನವರಾಗಿದ್ದು, ಈ ಹಿಂದೆ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಎಂದು ಅವರು ಹೇಳಿದರು. ವಡೋದರಾದ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರಕಾರ, ರೈಲ್ವೆಯಿಂದ ಅಧಿಕೃತಗೊಂಡ ಖಾಸಗಿ ಕಂಪನಿಯೊಂದು ಆಗಸ್ಟ್ 22 ರಂದು ಲಕ್ಷ್ಮಿಪುರ ಪ್ರದೇಶದ ಕಟ್ಟಡವೊಂದರಲ್ಲಿ ರೈಲ್ವೆ 'ಡಿ' ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಆಯೋಜಿಸಿತ್ತು.

ಪರೀಕ್ಷಾ ಮೇಲ್ವಿಚಾರಕರಿಗೆ ಅನುಮಾನ ಮೂಡಿದ್ದು ಹೇಗೆ?
"ಯಾವುದೇ ರೀತಿಯ ವಂಚನೆಯನ್ನು ತಡೆಗಟ್ಟಲು, ಎಲ್ಲಾ ಅಭ್ಯರ್ಥಿಗಳು ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು, ನಂತರ ಅದನ್ನು ಪರೀಕ್ಷೆಗೆ ಮೊದಲು ಬಯೋಮೆಟ್ರಿಕ್ ಸಾಧನದ ಮೂಲಕ ಅವರ ಆಧಾರ್ ಡೇಟಾದೊಂದಿಗೆ ಹೊಂದಿಸಲಾಯಿತು. ಆ ಸಮಯದಲ್ಲಿ, ಪದೇ ಪದೇ ಪ್ರಯತ್ನಿಸಿದರೂ ಮನೀಶ್ ಕುಮಾರ್ ಎಂಬ ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ನೋಂದಾಯಿಸಲು ಸಾಧನವು ವಿಫಲವಾಯಿತು" ಎಂದು ವರೋಟಾರಿಯಾ ಹೇಳಿದರು.

ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!

ಅಭ್ಯರ್ಥಿಯು ತನ್ನ ಎಡಗೈಯನ್ನು ತನ್ನ ಪ್ಯಾಂಟ್ ನ ಜೇಬಿನಲ್ಲಿಟ್ಟುಕೊಂಡು ಏನನ್ನೋ ಮರೆಮಾಚಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಿಗೆ ಇವರ ಬಗ್ಗೆ ಅನುಮಾನ ಮೂಡಿತು. "ಮೇಲ್ವಿಚಾರಕರು ತಮ್ಮ ಎಡಗೈ ಹೆಬ್ಬೆರಳಿಗೆ ಸ್ಯಾನಿಟೈಸರ್ ಸಿಂಪಡಿಸಿದಾಗ, ಅದರ ಮೇಲೆ ಅಂಟಿಸಿದ ಆ ಚರ್ಮವು ಕೆಳಕ್ಕೆ ಉದುರಿತು" ಎಂದು ಅಧಿಕಾರಿ ಹೇಳಿದರು.

ವಂಚನೆಯ ಬಗ್ಗೆ ತಿಳಿದ ನಂತರ, ಏಜೆನ್ಸಿಯು ಪೊಲೀಸರಿಗೆ ಕರೆ ಮಾಡಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ಫೋರ್ಜರಿ), 419 (ಮೋಸ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ದೂರು ದಾಖಲಿಸಿದೆ ಎಂದು ಅವರು ಹೇಳಿದರು.

ತನ್ನ ತಪ್ಪನ್ನು ಒಪ್ಪಿಕೊಂಡ ರಾಜ್ಯಗುರು ಗುಪ್ತಾ
ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜ್ಯಗುರು ಗುಪ್ತಾ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಮತ್ತು ಅವನು ತನ್ನ ಸ್ನೇಹಿತ ಮನೀಶ್ ಕುಮಾರ್ ನಂತೆ ನಟಿಸಿ ಪರೀಕ್ಷೆಗೆ ಹಾಜರಾಗಲು ಬಂದಿದ್ದಾಗಿ ತಪ್ಪನ್ನು ಒಪ್ಪಿಕೊಂಡನು. ಗುಪ್ತಾ ಓದಿನಲ್ಲಿ ಸ್ವಲ್ಪ ಉತ್ತಮರಾಗಿದ್ದರಿಂದ, ರೈಲ್ವೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಕುಮಾರ್, ನಕಲಿ ಗುರುತನ್ನು ಬಳಸಿಕೊಂಡು ಗುಪ್ತಾನನ್ನು ನೇಮಕಾತಿ ಪರೀಕ್ಷೆಗೆ ಕಳುಹಿಸುವ ಪ್ಲ್ಯಾನ್ ಮಾಡಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:  Viral Video: ಪ್ಲೀಸ್, ನನಗೇ ಮತ ಹಾಕಿ; ಯುವತಿಯರ ಕಾಲಿಗೆ ಬಿದ್ದು ಮತಯಾಚನೆ

"ಪರೀಕ್ಷೆಗೆ ಒಂದು ದಿನ ಮೊದಲು, ಕುಮಾರ್ ತನ್ನ ಎಡಗೈ ಹೆಬ್ಬೆರಳನ್ನು ಬಿಸಿ ಪ್ಯಾನ್ ಮೇಲೆ ಇರಿಸಿದನು, ಆಗ ಬೆರಳಿನ ಮೇಲೆ ಗುಳ್ಳೆಗಳು ಬಂದವು. ನಿಜವಾದ ಗುರುತನ್ನು ಕಂಡು ಹಿಡಿಯಲು ಪರೀಕ್ಷಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಪರಿಶೀಲನೆ ನಡೆಸಲಾಗುವುದು ಎಂದು ತಿಳಿದಿದ್ದರಿಂದ ಕುಮಾರ್ ಬ್ಲೇಡ್ ಬಳಸಿ ಚರ್ಮವನ್ನು ತೆಗೆದು ಗುಪ್ತಾ ಅವರ ಎಡ ಹೆಬ್ಬೆರಳಿಗೆ ಅಂಟಿಸಿದರು" ಎಂದು ಅವರು ಹೇಳಿದರು. "ಗುಪ್ತಾ ಮತ್ತು ಕುಮಾರ್ ಇಬ್ಬರನ್ನೂ ನಾವು ಬಂಧಿಸಿದ್ದೇವೆ" ಎಂದು ಅಧಿಕಾರಿ ಹೇಳಿದರು.
Published by:Ashwini Prabhu
First published: