ತಾಯ್ತನ ಎಂಬುದು ಹೆಣ್ಣಿಗೆ ದೇವರು ನೀಡಿರುವ ಅತ್ಯಮೂಲ್ಯ ವರವಾಗಿದೆ. ತಾಯ್ತನ, ಮಗುವಿನ ಲಾಲನೆ ಪಾಲನೆ ಆಕೆ ತನ್ನ ಜೀವಮಾನದಲ್ಲಿ ಅನುಭವಿಸುವ ಬೆಲೆ ಕಟ್ಟಲಾಗದೇ ಇರುವ ಅನುಭೂತಿಯಾಗಿದೆ. ಅದೆಷ್ಟೋ ತಾಯಂದಿರು ಮಾತೃತ್ವದಿಂದ ವಂಚಿತರಾಗಿದ್ದಾರೆ ಹಾಗೂ ಬೇರೆ ಬೇರೆ ವಿಧಾನಗಳ ಮೂಲಕ ತಾಯಿಯಾಗುವ ಆ ಅಹ್ಲಾದಕತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ತಾಯಿಯಾಗ ಬಯಸಿದ್ದ ಮಹಿಳೆಗೆ ಕಿಡ್ನಿ(kidney) ಸಮಸ್ಯೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಡೋದರದ ಮಹಿಳೆಯೊಬ್ಬರು ಬಾಡಿಗೆ ತಾಯ್ತನದ ಮೂಲಕ ಅಮ್ಮನಾಗುವ ಖುಷಿಯಲ್ಲಿದ್ದರು. ಆದರೆ ಬಾಡಿಗೆ ತಾಯ್ತನವನ್ನು ಅಧಿಕೃತಗೊಳಿಸಲು ಗೊತ್ತುಪಡಿಸಿದ ಮಂಡಳಿಯ ವಿಳಂಬ ನೀತಿಯಿಂದ ಮಹಿಳೆ ಹಾಗೂ ಆಕೆಯ ಪತಿ ಹೈಕೋರ್ಟ್ (High Court) ಮೊರೆ ಹೋಗಿದ್ದು, ಮನವಿ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಬಾಡಿಗೆ ತಾಯ್ತನ (Mother) ನಿಯಂತ್ರಣ ಕಾಯಿದೆ ಜಾರಿಗೆ ಬಂದಾಗಿನಿಂದ ಕಾರ್ಯವಿಧಾನ ನಿಧಾನಗೊಳ್ಳುತ್ತಿದೆ ಅಂತೆಯೇ ತನಗೆ ಬದುಕುವ ಕಾಲಾವಕಾಶ ಕೂಡ ಕಡಿಮೆ ಇದೆ ಎಂದು ಮಹಿಳೆ ತಿಳಿಸಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಲು ನಿರ್ಧರಿಸಿದ ದಂಪತಿಗಳು
2015 ರಲ್ಲಿ ಪ್ರಾಣಾಂತಿಕ ಕಿಡ್ನಿ ಸಮಸ್ಯೆ ಇದೆ ಎಂಬುದು ಮಹಿಳೆಗೆ ತಿಳಿದು ಬಂದಿತು. ಈ ಸಮಯದಲ್ಲಿ ತಾಯಿಯಾಗುವುದು ಕಷ್ಟ ಎಂಬ ಅರಿವೂ ಆಕೆಗೆ ಇತ್ತು. ಕೆಲವೊಂದು ವರ್ಷಗಳ ತರುವಾಯ ಗಂಡ ಹೆಂಡತಿ ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದರು.
ಡಿಸೆಂಬರ್ 2021 ರಲ್ಲಿ ಭ್ರೂಣಗಳನ್ನು ಸಂರಕ್ಷಿಸುವ ಅಗತ್ಯ ವೈದ್ಯಕೀಯ ವಿಧಿವಿಧಾನಗಳಿಗೆ ಒಳಗಾದರು. ಬಾಡಿಗೆ ತಾಯ್ತನದ ನಿಯಮಗಳೆಲ್ಲಾ ಮುಗಿದು ತಾವು ತಂದೆ ತಾಯಿಗಳಾಗುತ್ತೇವೆಂಬ ಖುಷಿಯಲ್ಲಿದ್ದ ಪತಿ ಪತ್ನಿಗೆ ಒಮ್ಮೆಲೆ ಆಘಾತ ಕಾದಿತ್ತು. ಕೇಂದ್ರವು ಜನವರಿ 2022 ರಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತು ಅಂತೆಯೇ ಈ ಕಾಯ್ದೆಯ ಅನ್ವಯ ಕ್ಲಿನಿಕ್ ರಿಜಿಸ್ಟ್ರೇಶನ್, ಉದ್ದೇಶಿತ ಪೋಷಕರು ಹಾಗೂ ಗರ್ಭಾವಸ್ಥೆಯ ಬಾಡಿಗೆ ತಾಯ್ತನದ ಅಗತ್ಯವನ್ನು ಹೊಂದಿರುವ ಬಾಡಿಗೆ ತಾಯಿ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನೊದಗಿಸಬೇಕು ಎಂಬ ನಿಯಮ ರೂಪಿಸಿತು. ಅದಾಗ್ಯೂ ದಂಪತಿಗಳಿಗೆ ವಡೋದರದಲ್ಲಿ ಯಾವುದೇ ವೈದ್ಯಕೀಯ ಮಂಡಳಿ ಇಲ್ಲ ಎಂಬ ಅಂಶ ಅರಿವಾಯಿತು.
ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ದಂಪತಿಗಳು
ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯ ಪ್ರಾಧಿಕಾರವನ್ನು ಸಂಪರ್ಕಿಸಿದ ದಂಪತಿಗಳು, ಮುಂದಿನ ಪ್ರಕ್ರಿಯೆಗೆ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಲು ತಿಳಿಸಿತು. ಆದರೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿಲ್ಲ ಹೀಗಾಗಿ ದಂಪತಿಗಳು ದಂಪತಿಗಳು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದರು. ಸಂವಿಧಾನ ಕಾಯ್ದೆ 21 ರ ಅನುಸಾರ ಪೋಷಕರಾಗುವುದು ತಮ್ಮ ಮೂಲಭೂತ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಈ ವರ್ಷ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದು 3 ಕೋಟಿಗೂ ಹೆಚ್ಚು ಇಡ್ಲಿ! 8428 ಪ್ಲೇಟ್ ಒಬ್ಬನೇ ಬುಕ್ ಮಾಡಿದ್ದ ಭೂಪ!
ದುರಾದೃಷ್ಟವಶಾತ್ ಮಹಿಳೆ ಜೀವಕ್ಕೆ ಅಪಾಯಕಾರಿಯಾಗಿರುವ ರೋಗದೊಂದಿಗೆ ಹೋರಾಡುತ್ತಿದ್ದು ಬಾಡಿಗೆ ತಾಯ್ತನವಲ್ಲದೆ ತಂದೆ ತಾಯಿಯಾಗಲು ಬೇರೆ ವಿಧಾನಗಳಿಲ್ಲ ಎಂಬುದಾಗಿ ಕೋರ್ಟ್‌ಗೆ ಸೂಚಿಸಿದ್ದಾರೆ. ಅವರ ಪರವಾಗಿ ವಾದಿಸುತ್ತಿದ್ದ ವಕೀಲರು ಕೂಡ ಮಹಿಳೆಯು ಜೀವಕ್ಕೆ ಹಾನಿಯುಂಟು ಮಾಡುವ ರೋಗದಿಂದ ಬಳಲುತ್ತಿದ್ದು ಹೆಚ್ಚು ಸಮಯ ದಂಪತಿಗಳಿಗೆ ಕಾಯುವ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಬಾಡಿಗೆ ತಾಯ್ತನದ ವಿಧಿ ವಿಧಾನಗಳನ್ನು ಕೂಡಲೇ ಮುಗಿಸಿಕೊಡಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ವಿನಂತಿಸಿದ್ದಾರೆ.
ವಡೋದರಲ್ಲಿ ಮೆಡಿಕಲ್ ಬೋರ್ಡ್ ರಚಿಸಿದ ರಾಜ್ಯ ಅಧಿಕಾರಿಗಳು
ಮಹಿಳೆ ಜೀವಂತವಿರುವಾಗಲೇ ತನ್ನ ಮಗುವನ್ನು ಕಣ್ತುಂಬಿಕೊಳ್ಳಬೇಕೆಂಬ ಬಯಕೆಯನ್ನು ನಡೆಸಿಕೊಡಬೇಕು ಎಂದು ದಂಪತಿಗಳು ಹೈಕೋರ್ಟ್‌ನಲ್ಲಿ ವಿನಂತಿಸಿಕೊಂಡಿದ್ದಾರೆ. ದಂಪತಿಗಳ ಮನವಿಯನ್ನು ಮನ್ನಿಸಿದ ಹೈಕೋರ್ಟ್ ರಾಜ್ಯ ಪ್ರಾಧಿಕಾರಕ್ಕೆ ನೋಟೀಸ್ ಕಳುಹಿಸಿದೆ. ವಡೋದರದಲ್ಲಿ ಜಿಲ್ಲಾ ಮೆಡಿಕಲ್ ಬೋರ್ಡ್ ಅನ್ನು ರಚಿಸಿದ ರಾಜ್ಯ ಪ್ರಾಧಿಕಾರವು ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಹೈಕೋರ್ಟ್ ಮುಂದೂಡಿದೆ.
ಒಟ್ಟಿನಲ್ಲಿ ವೈದ್ಯಕೀಯ ಮಂಡಳಿಯ ಸಂವಿಧಾನದಲ್ಲಿನ ಸಡಿಲತೆ ಅನೇಕ ದಂಪತಿಗಳಿಗೆ ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ