Mother: ಕಿಡ್ನಿ ಸಮಸ್ಯೆ ಇರುವ ಮಹಿಳೆಗೆ ತಾಯಿಯಾಗುವ ತವಕ, ತಾಯ್ತನಕ್ಕಾಗಿ ಕೋರ್ಟ್ ಮೊರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಲು ಹೊರಟಿದ್ದ ದಂಪತಿಗಳು ಕೆಲವೊಂದು ನಿಯಮಗಳಿಂದ ನೊಂದಿದ್ದರು ಆದರೆ ಈ ಸಮಯದಲ್ಲಿ ಅವರ ನೆರವಿಗೆ ಬಂದ ಹೈಕೋರ್ಟ್ ಸೂಕ್ತ ನ್ಯಾಯ ದೊರಕಿಸಿಕೊಟ್ಟಿದೆ.

  • Share this:
  • published by :

ತಾಯ್ತನ (Mother) ಎಂಬುದು ಹೆಣ್ಣಿಗೆ ದೇವರು ನೀಡಿರುವ ಅತ್ಯಮೂಲ್ಯ ವರವಾಗಿದೆ. ತಾಯ್ತನ, ಮಗುವಿನ ಲಾಲನೆ ಪಾಲನೆ ಆಕೆ ತನ್ನ ಜೀವಮಾನದಲ್ಲಿ ಅನುಭವಿಸುವ ಬೆಲೆ ಕಟ್ಟಲಾಗದೇ ಇರುವ ಅನುಭೂತಿಯಾಗಿದೆ. ಆದರೆ ಒಮ್ಮೊಮ್ಮೆ ಪರಿಸ್ಥಿತಿಗಳಿಂದಾಗಿ ತಾಯಿಯಾಗುವ ಕನಸು ಕೆಲವರಿಗೆ ಕೈಗೂಡುವುದೇ ಇಲ್ಲ. ಆದರೂ ಆಧುನಿಕ ತಂತ್ರಜ್ಞಾನಗಳಿಂದ (Technology) ಹೆಚ್ಚಿನ ಪೋಷಕರು ಮಕ್ಕಳನ್ನು ಹೊಂದು ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಲು ಹೊರಟಿದ್ದ ದಂಪತಿಗಳು (Couple) ಕೆಲವೊಂದು ನಿಯಮಗಳಿಂದ ನೊಂದಿದ್ದರು ಆದರೆ ಈ ಸಮಯದಲ್ಲಿ ಅವರ ನೆರವಿಗೆ ಬಂದ ಹೈಕೋರ್ಟ್ ಸೂಕ್ತ ನ್ಯಾಯ ದೊರಕಿಸಿಕೊಟ್ಟಿದೆ.


ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಡೋದರದ ಮಹಿಳೆಯೊಬ್ಬರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಳ್ಳುವ ನಿರ್ಧಾರ ಮಾಡಿ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ತಾವು ಬದುಕಿದ್ದಾಗಲೇ ಮಗುವನ್ನು ಆಡಿಸಿ ಲಾಲಿಸಬೇಕೆಂದು ನಿರ್ಧರಿಸಿದರು. ಆದರೆ ಈ ಸಮಯದಲ್ಲಿ ಸಾಕಷ್ಟು ಕಾನೂನು ಸಮಸ್ಯೆಗಳನ್ನು ಅನುಭವಿಸಬೇಕಾಯಿತು.


ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಲು ನಿರ್ಧರಿಸಿದ ದಂಪತಿಗಳು
2015 ರಲ್ಲಿ ಪ್ರಾಣಾಂತಿಕ ಕಿಡ್ನಿ ಸಮಸ್ಯೆ ಇದೆ ಎಂಬುದು ಮಹಿಳೆಗೆ ತಿಳಿದು ಬಂದಿತು. ಈ ಸಮಯದಲ್ಲಿ ತಾಯಿಯಾಗುವುದು ಕಷ್ಟ ಎಂಬ ಅರಿವೂ ಆಕೆಗೆ ಇತ್ತು. ಕೆಲವೊಂದು ವರ್ಷಗಳ ತರುವಾಯ ಗಂಡ ಹೆಂಡತಿ ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದರು.


ಇದನ್ನೂ ಓದಿ: ನಮೀಬಿಯಾದಿಂದ ಭಾರತಕ್ಕೆ ಬಂದು ತಾಯಿಯಾದ ಚಿರತೆ, 4 ಮರಿ ಹಾಕಿರೋ ಬಗ್ಗೆ ಪರಿಸರ ಸಚಿವರ ಟ್ವೀಟ್


ಬಾಡಿಗೆ ತಾಯ್ತನದ ನಿಯಮಗಳೆಲ್ಲಾ ಮುಗಿದು ಇನ್ನೇನು ತಾವು ತಂದೆ ತಾಯಿಗಳಾಗುತ್ತೇವೆಂಬ ಖುಷಿಯಲ್ಲಿದ್ದ ಪತಿ ಪತ್ನಿಗೆ ಒಮ್ಮೆಲೆ ಆಘಾತ ಕಾದಿತ್ತು. ಕೇಂದ್ರವು ಜನವರಿ 2022 ರಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತು ಅಂತೆಯೇ ಈ ಕಾಯ್ದೆಯ ಅನ್ವಯ ಕ್ಲಿನಿಕ್ ರಿಜಿಸ್ಟ್ರೇಶನ್, ಮಗುವನ್ನು ಪಡೆದುಕೊಳ್ಳುವ ದಂಪತಿಗಳು ಹಾಗೂ ಬಾಡಿಗೆ ತಾಯಿ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನೊದಗಿಸಬೇಕು ಎಂಬ ನಿಯಮವನ್ನು ಜಾರಿಗೆ ತಂದಿತು.


ದಂಪತಿಗಳ ದುರಾದೃಷ್ಟವೆಂಬಂತೆ ವಡೋದರ ಯಾವುದೇ ವೈದ್ಯಕೀಯ ಮಂಡಳಿಯನ್ನು ಹೊಂದಿರಲಿಲ್ಲ.


ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ದಂಪತಿಗಳು!
ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯ ಪ್ರಾಧಿಕಾರವನ್ನು ದಂಪತಿಗಳು ಸಂಪರ್ಕಿಸಿದರು ಆ ಸಮಯದಲ್ಲಿ ಮುಂದಿನ ಹಂತಗಳಿಗಾಗಿ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಲು ದಂಪತಿಗಳಿಗೆ ತಿಳಿಸಿದರು. ಆದರೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿಲ್ಲ ಹೀಗಾಗಿ ದಂಪತಿಗಳುಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದರು. ಸಂವಿಧಾನ ಕಾಯ್ದೆ 21 ರ ಅನುಸಾರ ಪೋಷಕರಾಗುವುದು ತಮ್ಮ ಮೂಲಭೂತ ಕರ್ತವ್ಯವಾಗಿದೆ ಎಂದು ನ್ಯಾಯಾಲಯದಲ್ಲಿ ದಂಪತಿಗಳು ವಿನಂತಿ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಇಲ್ಲಿ ಮಗನ ಬದಲಿಗೆ ಮಗಳಿಗೆ ಆಸ್ತಿ, ಎಲ್ಲರಿಗೂ ಆಹಾರ-ವಸತಿ ಫ್ರೀ! ಇದು ವಿಶ್ವದಲ್ಲೇ ವಿಶೇಷ ದೇಶ


ತಾನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರು ಬದುಕಿರುವಾಗಲೇ ತಾಯಿಯಾಗಬೇಕೆಂಬ ಹಂಬಲವನ್ನು ಈಡೇರಿಸಿಕೊಳ್ಳಬೇಕಾಗಿದೆ ಅಂತೆಯೇ ಬಾಡಿಗೆ ತಾಯ್ತನವಿಲ್ಲದೆ ಬೇರಾವ ಆಯ್ಕೆಯೂ ಅವರ ಮುಂದಿಲ್ಲ ಎಂದು ನ್ಯಾಯಾಲಯದಲ್ಲಿ ಮಹಿಳೆ ತಿಳಿಸಿದ್ದಾರೆ. ಅವರ ಪರವಾಗಿ ವಾದಿಸುತ್ತಿದ್ದ ವಕೀಲರು ಕೂಡ ಮಹಿಳೆಗಿರುವ ರೋಗದ ಬಗ್ಗೆ ತಿಳಿಸಿದ್ದು, ಆಕೆಗೆ ಸಮಯಾವಕಾಶ ತುಂಬಾ ಕಡಿಮೆ ಎಂದು ತಿಳಿಸಿದ್ದಾರೆ. ಹಾಗಾಗಿ ಬಾಡಿಗೆ ತಾಯ್ತನದ ವಿಧಿ ವಿಧಾನಗಳನ್ನು ಕೂಡಲೇ ಮುಗಿಸಿಕೊಡಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ವಿನಂತಿಸಿದ್ದಾರೆ.


ವಡೋದರಲ್ಲಿ ಮೆಡಿಕಲ್ ಬೋರ್ಡ್ ರಚಿಸಿದ ರಾಜ್ಯ ಅಧಿಕಾರಿಗಳು


ದಂಪತಿಗಳ ಮನವಿಯನ್ನು ಮನ್ನಿಸಿದ ಹೈಕೋರ್ಟ್ ರಾಜ್ಯ ಪ್ರಾಧಿಕಾರಕ್ಕೆ ನೋಟೀಸ್ ಕಳುಹಿಸಿದೆ. ವಡೋದರದಲ್ಲಿ ಜಿಲ್ಲಾ ಮೆಡಿಕಲ್ ಬೋರ್ಡ್ ಅನ್ನು ರಚಿಸಿದ ರಾಜ್ಯ ಪ್ರಾಧಿಕಾರವು ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದೆ.


top videos    ತಾನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಬದುಕಿರುವಾಗಲೇ ತಾಯಿಯಾಗಬೇಕೆಂಬ ಹಂಬಲವನ್ನು ಈಡೇರಿಸಿಕೊಳ್ಳಬೇಕಾಗಿದೆ ಅಂತೆಯೇ ಬಾಡಿಗೆ ತಾಯ್ತನವಿಲ್ಲದೆ ಬೇರಾವ ಆಯ್ಕೆಯೂ ತನ್ನ ಮುಂದಿಲ್ಲ ಎಂದು ನ್ಯಾಯಾಲಯದಲ್ಲಿ ಮಹಿಳೆ ತಿಳಿಸಿದ್ದಾರೆ. ಅವರ ಪರವಾಗಿ ವಾದಿಸುತ್ತಿದ್ದ ವಕೀಲರು ಕೂಡ ಮಹಿಳೆಗಿರುವ ರೋಗದ ಬಗ್ಗೆ ತಿಳಿಸಿದ್ದು, ಆಕೆಗೆ ಸಮಯಾವಕಾಶ ತುಂಬಾ ಕಡಿಮೆ ಎಂದು ತಿಳಿಸಿದ್ದಾರೆ. ಹಾಗಾಗಿ ಬಾಡಿಗೆ ತಾಯ್ತನದ ವಿಧಿ ವಿಧಾನಗಳನ್ನು ಕೂಡಲೇ ಮುಗಿಸಿಕೊಡಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ವಿನಂತಿಸಿದ್ದಾರೆ.

    First published: