Viral News: ನವಜೋಡಿಗೆ ಪೆಟ್ರೋಲ್, ಡೀಸೆಲ್ ಬಾಟೆಲ್ ಗಿಫ್ಟ್ ನೀಡಿದ ಗೆಳೆಯರ ಬಳಗ
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆ(Price Hike)ಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ತುಂಬಿದ ಬಾಟಲಿಗಳನ್ನು ಉಡುಗೊರೆಯಾಗಿ ದಂಪತಿಗೆ ನೀಡಿದ್ದಾರೆ.
ಮದುವೆಯಾದ ಹೊಸ ದಂಪತಿಗೆ (Couple) ಚಿನ್ನ, ಬೆಳ್ಳಿ ಆಭರಣಗಳು (Gold And Silver Jewellery) ಅಥವಾ ವಿವಿಧ ಬೆಲೆಬಾಳುವ ವಸ್ತುಗಳು ಅಥವಾ ಹೂಗುಚ್ಚ ಕೊಡುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನ, ಬೆಳ್ಳಿಯಷ್ಟೇ ದುಬಾರಿಯಾಗುತ್ತಿರುವ, ಗಗನಕ್ಕೇರಿದ ಮೂಲಭೂತ ವಸ್ತುಗಳನ್ನೇ ಉಡುಗೊರೆ ನೀಡುವ ಪ್ರಸಂಗವು ಹೆಚ್ಚಾಗಿದೆ. ಇದೇ ರೀತಿ ತಮಿಳುನಾಡಿನಲ್ಲಿ ಸಹ ವಧು-ವರರಿಗೆ (Groom And Bride) ಇಂತದ್ದೇ ಒಂದು ವಿಭಿನ್ನ ಉಡುಗೊರೆಯನ್ನು ಸ್ನೇಹಿತರು ನೀಡಿದ್ದಾರೆ. ಹಸೆಮಣೆ ಏರಿದ ದಂಪತಿಗೆ ಅವರ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ಬಾಟಲಿಗಳನ್ನು (Petrol And Diesel Cans) ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಈ ವಿಡಿಯೋ, ಫೋಟೋ(Video And Photos)ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆ(Price Hike)ಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ತುಂಬಿದ ಬಾಟಲಿಗಳನ್ನು ಉಡುಗೊರೆಯಾಗಿ ದಂಪತಿಗೆ ನೀಡಿದ್ದಾರೆ.
ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವೇದಿಕೆಯಲ್ಲಿ ವಧು ಕೀರ್ತನಾ ಮತ್ತು ವರ ಗ್ರೇಸ್ ಕುಮಾರ್ ಅವರಿಗೆ ಅವರ ಸ್ನೇಹಿತರು ಒಂದೊಂದು ಬಾಟಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿ ಆ ಬಾಟಲಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ವೈರಲ್
ವಿಡಿಯೋದಲ್ಲಿ ಸ್ನೇಹಿತರು ಮದುವೆಯಲ್ಲಿ ನವ ದಂಪತಿಗಳಿಗೆ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಉಡುಗೊರೆಯಾಗಿ ನೀಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೀಕ್ಷಕರನ್ನು ಸೆಳೆದಿದೆ.
ಬೆಲೆ ಏರಿಕೆ ಖಂಡಿಸಿ ಗಿಫ್ಟ್
ಇಂತಹ ವಸ್ತುಗಳನ್ನು ಗಿಫ್ಟ್ ನೀಡುವ ಮೂಲಕ ಸಂಚಲನ ಮೂಡಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಈರುಳ್ಳಿ, ಟೊಮ್ಯಾಟೋ, ಆಲೂಗೆಡ್ಡೆ, ಎಲ್ಪಿಜಿ ಬೆಲೆಗಳಲ್ಲಿ ವಿಪರೀತ ಏರಿಕೆಯಾಗಿದ್ದಾಗಲೂ ಇವುಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಬೆಲೆ ಏರಿಕೆ ಬಗ್ಗೆ ಸರ್ಕಾರವನ್ನು ಲೇವಡಿ ಮಾಡಲಾಗಿತ್ತು.
ಈರುಳ್ಳಿ, ಟೊಮ್ಯಾಟೋ, ಇಂಧನ ಬೆಲೆ ಹೆಚ್ಚಾದಾಗ ಟ್ರೋಲ್ಗಳು ಕೂಡ ಹೆಚ್ಚಾಗುತ್ತವೆ. ಪ್ರೇಯಸಿಗೆ ಈರುಳ್ಳಿ ಸರ ಕೊಡುವುದು, ಬೈಕ್ ಕಾರು ಬಿಟ್ಟು ಸೈಕಲ್ನಲ್ಲಿ ಓಡಾಡುವುದು ಹೀಗೆ ಅನೇಕ ಕಾರ್ಟೂನ್ ಟ್ರೋಲ್ಗಳನ್ನು ನಾವು ಈ ಸಂದರ್ಭದಲ್ಲಿ ನೋಡಬಹುದು.
ಈ ಹಿಂದೆಯೂ ಇಂತಹ ಪ್ರಸಂಗಗಳು ನಡೆದಿದ್ದವು
ಫೆಬ್ರವರಿ 2021ರಲ್ಲೂ ತಮಿಳುನಾಡಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ದಂಪತಿಗೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಮತ್ತು ಈರುಳ್ಳಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು. ಮದುವೆ ಸಮಾರಂಭದಲ್ಲಿ ವಧು-ವರರ ಸ್ನೇಹಿತರು ದುಬಾರಿ ಉಡುಗೊರೆ ನೀಡಲು ಯೋಚಿಸಿ, ಒಂದು ಎಲ್ಪಿಜಿ ಸಿಲಿಂಡರ್, ಕ್ಯಾನ್ ಪೆಟ್ರೋಲ್ ಜೊತೆಗೆ ಈರುಳ್ಳಿಯಿಂದ ಮಾಡಿದ ಹೂಮಾಲೆಗಳನ್ನು ತೊಡಿಸಿ ಗಮನ ಸೆಳೆದಿದ್ದರು.
ಇತ್ತೀಚಿನ ದಿನಗಳಲ್ಲಿ ಗ್ಯಾಸ್, ಪೆಟ್ರೋಲ್, ಡೀಸೇಲ್, ಬೇಳೆ-ಕಾಳು, ಅಡುಗೆ ಎಣ್ಣೆಯಿಂದ ಹಿಡಿದು ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ವಿರುದ್ಧ ಈ ರೀತಿಯಾದ ಪ್ರತಿಭಟನೆ ಮಾಡುವ ಮೂಲಕ ಲೇವಡಿ ಮಾಡುತ್ತಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ
ಇನ್ನೂ ದೇಶದಲ್ಲಿ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ಈಗಾಗಲೇ ಪೆಟ್ರೋಲ್ ದರ ಲೀಟರ್ ಗೆ 110ರ ಗಡಿ ದಾಟಿದರೆ, ಡೀಸೆಲ್ ದರ 100ರ ಗಡಿಯಲ್ಲಿದೆ. ತಮಿಳುನಾಡಿನಲ್ಲಿ ಕಳೆದ 15 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂಬತ್ತು ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 110.85 ರೂ ಮತ್ತು ಡೀಸೆಲ್ 100.94 ರೂ.ಗೆ ಮಾರಾಟವಾಗುತ್ತಿದೆ.
Tamil Nadu | A newly married couple was gifted bottles of petrol and diesel by their friends in Cheyyur village of Chengalpattu district.
The prices of petrol and diesel are Rs 110.85 and Rs 100.94 per litre in the state. pic.twitter.com/n85zN0zI0K
ಬುಧವಾರ (ಎಪ್ರಿಲ್ 6) ಇಂಧನ ಬೆಲೆಗಳು ಲೀಟರ್ಗೆ ಇನ್ನೂ 80 ಪೈಸೆಗಳಷ್ಟು ಹೆಚ್ಚಾಗುವುದರೊಂದಿಗೆ, ಕಳೆದ 16 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ 14 ಬಾರಿ ಹೆಚ್ಚಳದ ನಂತರ ಲೀಟರ್ಗೆ 10 ರೂ. ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ 105 ರೂ. ಗಡಿ ದಾಟಿದರೆ, ಮುಂಬೈನಲ್ಲಿ 120 ರೂ ಆಗಿದೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ