Dating Tips: ವಿಚ್ಛೇದಿತ ಮಹಿಳೆಯ ಜೊತೆ ಡೇಟಿಂಗ್ ಪ್ಲಾನ್? ಹಾಗಿದ್ರೆ ಈ ವಿಚಾರ ಗಮನದಲ್ಲಿರಲಿ

Dating Tips: ಈಗಾಗಲೇ ಮದುವೆ, ಗಂಡ ಎನ್ನುವ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಡಿವೋರ್ಸ್ ಪಡೆದಿದ್ದ ಮಹಿಳೆಯ ಮನಸ್ಸಿನಲ್ಲಿ ಮತ್ತೆ ಆ ನಂಬಿಕೆ, ಪ್ರೀತಿ ತುಂಬುವುದು ತುಂಬಾ ಕಷ್ಟದ ಕೆಲಸವೇ ಸರಿ. ನೀವು ಡಿವೋರ್ಸ್ ಆದ ಮಹಿಳೆಯನ್ನು ಡೇಟ್ ಮಾಡುವಂತಿದ್ದರೆ ಇಲ್ಲಿ ಕೆಲವು ಟಿಪ್ಸ್ಗಳು ಇವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಯಾವುದೇ ಸಂಬಂಧವು ಗಟ್ಟಿಯಾಗಿ ತುಂಬಾ ದಿನಗಳವರೆಗೆ ಕಾಪಾಡಿಕೊಂಡು ಹೋಗಬೇಕೆಂದರೆ ನಂಬಿಕೆ ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ವೈವಾಹಿಕ ಜೀವನ ಎಂಬ ಎತ್ತಿನಗಾಡಿ ಸರಾಗವಾಗಿ ಸಾಗಬೇಕೆಂದರೆ ಗಂಡ ಹೆಂಡತಿ ಇಬ್ಬರೂ ಸಮನಾಗಿ ಜೋಡು ಎತ್ತುಗಳ ಹಾಗೆ ಸಂಸಾರದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ನಡೆಯಬೇಕಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮನಸ್ಥಾಪಗಳಿಗೆ ಗಂಡ ಹೆಂಡತಿ ವಿವಾಹ ವಿಚ್ಛೇದನ ಪಡೆಯುತ್ತಿದ್ದು, ಸಂಬಂಧಕ್ಕೆ ಯಾವುದೇ ಬೆಲೆ ಇಲ್ಲದಂತೆ ಆಗಿರುವುದು ಮತ್ತು ಇಂತಹ ಸಂದರ್ಭಗಳಲ್ಲಿ ಮಕ್ಕಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಯಾರು ಚಿಂತಿಸದೇ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ತುಂಬಾ ವಿಷಾದಕರವಾಗಿದೆ.ಈಗಾಗಲೇ ಮದುವೆ, ಗಂಡ ಎನ್ನುವ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಡಿವೋರ್ಸ್ ಪಡೆದಿದ್ದ ಮಹಿಳೆಯ ಮನಸ್ಸಿನಲ್ಲಿ ಮತ್ತೆ ಆ ನಂಬಿಕೆ, ಪ್ರೀತಿ ತುಂಬುವುದು ತುಂಬಾ ಕಷ್ಟದ ಕೆಲಸವೇ ಸರಿ. ನೀವು ಡಿವೋರ್ಸ್ ಆದ ಮಹಿಳೆಯನ್ನು ಡೇಟ್ ಮಾಡುವಂತಿದ್ದರೆ ಇಲ್ಲಿ ಕೆಲವು ಟಿಪ್ಸ್ಗಳು ಇವೆ.


ಆಕೆಯ ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳಿ:


ಡಿವೋರ್ಸ್ ಪಡೆದ ಮಹಿಳೆಯ ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಏಕೆಂದರೆ ಮಹಿಳೆ ಒಂದು ಸಂಬಂಧ ತೊರೆದು ಇನ್ನೊಂದು ಹೊಸ ಸಂಬಂಧಕ್ಕೆ ಕಾಲಿಡುತ್ತಿರುವಾಗ ಗೊಂದಲಕ್ಕೀಡಾಗುವುದು ಸಹಜ. ಆಕೆಯ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಆಕೆಯ ಮನಸ್ಸಿನಲ್ಲಿ ಹೊಸ ನಂಬಿಕೆಯನ್ನು ತುಂಬುವುದು ಅವಶ್ಯಕ. ನೀವು ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರೆ ಅದರ ನಿರೀಕ್ಷೆಗಳೇ ಬೇರೆ ಹಾಗು ಡಿವೋರ್ಸ್ ಆದ ಮಹಿಳೆಯನ್ನು ಡೇಟ್ ಮಾಡಲು ಹೊರಟಾಗ ಅಲ್ಲಿರುವ ಸವಾಲುಗಳೇ ಬೇರೆ. ಅದಕ್ಕಾಗಿ ಮಹಿಳೆಯ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ನಡೆಯುವುದಕ್ಕೆ ತುಂಬಾ ತಾಳ್ಮೆ ಅವಶ್ಯಕವಾಗಿರುತ್ತದೆ.


ಇದನ್ನೂ ಓದಿ: Vitamin D Deficiency: ವಿಟಮಿನ್ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳಿವು..!

ಆಕೆಯ ಮಕ್ಕಳನ್ನು ಮರೆಯಬೇಡಿ:


ಡಿವೋರ್ಸ್ ಆದ ಮಹಿಳೆಗೆ ಮಕ್ಕಳಿದ್ದರೆ ಅವರನ್ನು ಸಹ ನೀವು ತುಂಬಾ ತಾಳ್ಮೆಯಿಂದ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ತಮ್ಮ ಕುಟುಂಬದಲ್ಲಿ ಮತ್ತು ತಾಯಿಯ ಜೀವನದಲ್ಲಿ ಹೊಸದಾಗಿ ಬರುವಂತಹ ವ್ಯಕ್ತಿಯನ್ನು ಬಹುಬೇಗನೆ ಹೊಂದಿಕೊಳ್ಳುವುದು ಅಷ್ಟೊಂದು ಸರಳವಾದ ವಿಷಯವಲ್ಲ. ನೀವು ಆ ಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ತಾಳ್ಮೆಯಿಂದ ಮಾತನಾಡಿಸಿ ಅವರೊಂದಿಗೆ ಹೊಂದಿಕೊಳ್ಳುವುದು ತುಂಬಾ ಅವಶ್ಯಕ ಮತ್ತು ಇದು ನಿಮ್ಮ ಮತ್ತು ಈಗಾಗಲೇ ವಿಚ್ಛೇದನ ಪಡೆದ ಮಹಿಳೆಯ ಹೊಸ ಜೀವನಕ್ಕೆ ಸಹಾಯಕವಾಗುತ್ತದೆ.


ನಿಮ್ಮಿಂದ ಆಕೆ ತುಂಬಾ ನಿರೀಕ್ಷೆ ಮಾಡಬಹುದು:


ಈಗಾಗಲೇ ವಿಚ್ಛೇದನ ಪಡೆದ ಮಹಿಳೆಗೆ ನಿಮಗಿಂತಲೂ ವೈವಾಹಿಕ ಜೀವನದಲ್ಲಿ ಮುಂದೆ ಆಗುವಂತಹ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿದಿರುತ್ತದೆ ಮತ್ತು ಆಕೆ ನಿಮ್ಮಿಂದ ತುಂಬಾ ನಿರೀಕ್ಷೆಯನ್ನು ಮಾಡಬಹುದಾಗಿದೆ. ನೀವು ತುಂಬಾ ಜವಾಬ್ದಾರಿಯುತವಾಗಿ ಮತ್ತು ತುಂಬಾನೇ ದೊಡ್ಡ ಮನಸ್ಸಿನಿಂದ ಆಲೋಚನೆ ಮಾಡುವ ಗುಣಗಳನ್ನು ನಿಮ್ಮಲ್ಲಿ ಹುಡುಕುವುದುಂಟು. ಏಕೆಂದರೆ ಈಗಾಗಲೇ ಒಬ್ಬರ ಜೊತೆಯಲ್ಲಿ ಸಮಸ್ಯೆ ಉಂಟಾಗಿದ್ದು, ಹೊಸದಾಗಿ ಶುರುವಾಗುವ ಜೀವನ ಮತ್ತೆ ಹಳೆಯ ಜೀವನದಂತೆ ಆಗಬಾರದೆಂದು ಆಕೆ ನಿಮ್ಮಲ್ಲಿ ಹೆಚ್ಚು ನಿರೀಕ್ಷೆ ಮಾಡುವುದು ಸಹಜವಾದ ವಿಷಯವಾಗಿದೆ.


ಕಠಿಣ ಸವಾಲನ್ನು ಎದುರಿಸಲು ಸಿದ್ಧರಾಗಿರಿ:


ಕೆಲವೊಮ್ಮೆ ವಿಚ್ಛೇದನ ಪಡೆಯಲಿರುವ ಮಹಿಳೆ ಆಕೆಯ ಮಾಜಿ ಗಂಡನೊಂದಿಗೆ ಮತ್ತೆ ಸಂಧಾನ ಮಾಡಿಕೊಂಡು ಒಂದಾಗುವಂತಹ ಅವಕಾಶಗಳು ಇರುತ್ತವೆ. ಹೀಗೇನಾದರೂ ಆದರೆ ನೀವು ಕಠಿಣ ಸವಾಲುಗಳನ್ನು ಎದುರಿಸಲು ಮೊದಲೇ ಮಾನಸಿಕವಾಗಿ ಸಿದ್ಧರಾಗಿರುವುದು ಒಳ್ಳೆಯದು.




ಬೇರೆ ಸಮಸ್ಯೆಗಳ ಬಗ್ಗೆ ನಿಮಗೆ ಅರಿವು ಇರಲಿ:

ತನ್ನ ಮೊದಲನೆಯ ಗಂಡನ ಜೊತೆ ವಿಚ್ಛೇದನ ಪಡೆದ ಮಹಿಳೆಗೆ ನೀವು ತುಂಬಾ ಇಷ್ಟವಾಗಿ ಸಂಬಂಧವು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವ ಅವಕಾಶಗಳು ಜಾಸ್ತಿ ಇರುತ್ತವೆ ಮತ್ತು ಕೆಲವೊಮ್ಮೆ ನಿಮ್ಮೊಂದಿಗೆ ಆಕೆ ತುಂಬಾ ದೀರ್ಘಕಾಲದವರೆಗೆ ಜೀವನ ನಡೆಸಬಹುದಾಗಿದೆ. ಸಹಬಾಳ್ವೆಯ ಜೀವನ ತುಂಬಾ ದೀರ್ಘವಾಗಿರಬೇಕೆಂದರೆ ತುಂಬಾ ನಿಧಾನವಾಗಿ ಸಂಬಂಧವನ್ನು ತೆಗೆದುಕೊಂಡು ಹೋಗಬೇಕು. ಕೆಲವೊಮ್ಮೆ ಆಕೆಗೆ ನೀವು ಇಷ್ಟವಾಗದೇ ನಿಮ್ಮ ಜೊತೆಗಿನ ಸಂಬಂಧವನ್ನು ಅಲ್ಪ ಸಮಯದಲ್ಲಿಯೇ ಮುರಿದುಕೊಳ್ಳಬಹುದು. ಅದಕ್ಕಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿರುವುದು ಮತ್ತು ಆ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ತುಂಬಾ ಅವಶ್ಯಕವಾಗಿರುತ್ತದೆ.

Published by:Soumya KN
First published: