Viral Video: ಮಹಿಳೆಯ ಬ್ಯಾಗ್ ಕದಿಯಲು ಶತಪ್ರಯತ್ನ! ವೈರಲ್ ವೀಡಿಯೋ ನೋಡಿ

ನೀವು ಅಮೇರಿಕನ್ ಭಯಾನಕ ಚಲನಚಿತ್ರವಾದ ‘ಚೈಲ್ಡ್ಸ್ ಪ್ಲೇ’ ನೋಡಿದ್ದರೆ ಅದರಲ್ಲಿರುವ ‘ಚಕ್ಕಿ’ ಪಾತ್ರದ ಮುಖ ನಿಮಗೆ ಚೆನ್ನಾಗಿಯೇ ನೆನಪಿರುತ್ತದೆ. ಕಳ್ಳತನ ಮತ್ತು ಈ ಅಮೆರಿಕನ್ ಚಿತ್ರದ ಪಾತ್ರಕ್ಕೂ ಹೇಗೆ ಸಂಬಂಧ ಅಂತ ನೀವು ತುಂಬಾನೇ ತಲೆ ಕೆಡೆಸಿಕೊಳ್ಳುತ್ತಾ ಇರಬಹುದು ಅಲ್ಲವೇ? ಇಲ್ಲೊಂದು ಘಟನೆ ನಡೆದಿದ್ದು, ಇದು ಇವೆರಡಕ್ಕೂ ಸಂಬಂಧ ಕಲ್ಪಿಸುತ್ತದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ರೈಲ್ವೆ ನಿಲ್ದಾಣಗಳಲ್ಲಿ(Railway Station) , ಬಸ್ ನಿಲ್ದಾಣಗಳಲ್ಲಿ (Bus Stand) ಮತ್ತು ಜನ ಜಂಗುಳಿ ಇರುವಂತಹ ಮಾರುಕಟ್ಟೆ ಪ್ರದೇಶಗಳಲ್ಲಿ ನಾವು ‘ಜೇಬುಗಳ್ಳರಿದ್ದಾರೆ ಎಚ್ಚರಿಕೆ’, ‘ನಿಮ್ಮ ಚಿನ್ನಾಭರಣ ಮತ್ತು ಬ್ಯಾಗುಗಳ ಬಗ್ಗೆ ಕಾಳಜಿ ಇರಲಿ, ಕಳ್ಳರಿದ್ದಾರೆ ಎಚ್ಚರಿಕೆ’ ಮತ್ತು 'ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು’ ಅಂತಹ ಅನೇಕ ರೀತಿಯ ಬರಹಗಳನ್ನು ಮತ್ತು ಚಿತ್ರ ಸಮೇತ ವಿವರಿಸುವ ಪೋಸ್ಟರ್ ಗಳನ್ನು (Poster) ಅನೇಕ ಸ್ಥಳಗಳಲ್ಲಿ ನೋಡುತ್ತೇವೆ. ಇಷ್ಟೊಂದು ಬಾರಿ ಜನರನ್ನು ಎಚ್ಚರಿಸಿದಾಗಲೂ ಸಹ ಅವರ ವಸ್ತುಗಳನ್ನು ಈ ಜನ ಜಂಗುಳಿ ಪ್ರದೇಶಗಳಲ್ಲಿ ಕಳೆದುಕೊಳ್ಳುತ್ತಾರೆ ಅಥವಾ ಯಾರಾದರೂ ಕದಿಯುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವು ಕಳ್ಳರು (Thief) ಹಿಂದಿನಿಂದ ಬಂದು ನಮಗೆ ಗೊತ್ತಾಗದಂತೆಯೇ ನಮ್ಮ ಬಳಿ ಇರುವ ಪಾಕೆಟ್ ಗಳನ್ನು ಮತ್ತು ಬ್ಯಾಗ್ ಗಳನ್ನು ಎಗರಿಸಿಕೊಂಡು ಹೋಗಿರುತ್ತಾರೆ.

ಮುಖಕ್ಕೆ ಪೂರ್ತಿಯಾಗಿ ಮುಖವಾಡಗಳನ್ನು ಹಾಕಿಕೊಂಡು ಕಳ್ಳತನ

ಇನ್ನೂ ಕೆಲವು ಕಳ್ಳರು ನಿರ್ಜನ ಪ್ರದೇಶಗಳನ್ನು ನೋಡಿ ಮುಖವನ್ನು ಗೊತ್ತಾಗಬಾರದೆಂದು ಪೂರ್ತಿಯಾಗಿ ಮುಚ್ಚಿಕೊಂಡು ಬಂದು ಚಾಕು ತೋರಿಸಿ ಹಣ, ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಾರೆ. ಹೀಗೆ ಅನೇಕ ರೀತಿಯ ಕಳ್ಳತನಗಳನ್ನು ನಾವು ನೋಡಬಹುದು. ಇದರಲ್ಲಿ ಇನ್ನೊಂದು ಹೊಸದಾಗಿ ಸೇರ್ಪಡೆಯಾಗಿದೆ ನೋಡಿ. ಅದೇನು ಅಂತೀರಾ? ಮುಖಕ್ಕೆ ಪೂರ್ತಿಯಾಗಿ ಮುಖವಾಡಗಳನ್ನು ಹಾಕಿಕೊಂಡು ಮುಂದೆಯಿಂದಲೇ ಬ್ಯಾಗುಗಳನ್ನು ಕದಿಯೋದು.

ನೀವು ಅಮೇರಿಕನ್ ಭಯಾನಕ ಚಲನಚಿತ್ರವಾದ ‘ಚೈಲ್ಡ್ಸ್ ಪ್ಲೇ’ ನೋಡಿದ್ದರೆ ಅದರಲ್ಲಿರುವ ‘ಚಕ್ಕಿ’ ಪಾತ್ರದ ಮುಖ ನಿಮಗೆ ಚೆನ್ನಾಗಿಯೇ ನೆನಪಿರುತ್ತದೆ. ಕಳ್ಳತನ ಮತ್ತು ಈ ಅಮೆರಿಕನ್ ಚಿತ್ರದ ಪಾತ್ರಕ್ಕೂ ಹೇಗೆ ಸಂಬಂಧ ಅಂತ ನೀವು ತುಂಬಾನೇ ತಲೆ ಕೆಡೆಸಿಕೊಳ್ಳುತ್ತಾ ಇರಬಹುದು ಅಲ್ಲವೇ? ಇಲ್ಲೊಂದು ಘಟನೆ ನಡೆದಿದ್ದು, ಇದು ಇವೆರಡಕ್ಕೂ ಸಂಬಂಧ ಕಲ್ಪಿಸುತ್ತದೆ ನೋಡಿ.

ಇದನ್ನೂ ಓದಿ: Last rites: ಆರತಿ ಎತ್ತಿ, ರಾಮ ನಾಮ ಹೇಳಿ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಕುಟುಂಬ!

ರೈಲಿನಲ್ಲಿ ಬಂದು ಮಹಿಳೆಯ ಬ್ಯಾಗು ಕದಿಯಲು ಯತ್ನ

ಭಯಾನಕ ಮುಖವಾಡ ಧರಿಸಿದ ವೇಷಧಾರಿಯೊಬ್ಬ ನ್ಯೂಯಾರ್ಕ್ ನಗರದ ಸುರಂಗಮಾರ್ಗದ ರೈಲಿನಲ್ಲಿ ಬಂದು ಮಹಿಳೆಯೊಬ್ಬರ ಬಳಿ ಇರುವಂತಹ ಒಂದು ಬ್ಯಾಗನ್ನು ಕದಿಯಲು ಪ್ರಯತ್ನಿಸಿದನು.ಈ ಘಟನೆ ಎಷ್ಟೊಂದು ಭಯಾನಕವಾಗಿತ್ತು ಎಂದರೆ, ಅದು ರೈಲಿನಲ್ಲಿದ್ದ ಜನರನ್ನು ತುಂಬಾನೇ ಭಯಭೀತಗೊಳಿಸಿತು. ‘ಚೈಲ್ಡ್ಸ್ ಪ್ಲೇ’ ಎಂಬ ಭಯಾನಕ ಚಲನಚಿತ್ರದ ‘ಚಕ್ಕಿ’ ಎಂಬ ಪಾತ್ರದ ವೇಷವನ್ನು ಆ ವ್ಯಕ್ತಿಯು ಧರಿಸಿದ್ದನು. ಈ ವ್ಯಕ್ತಿಯ ಎತ್ತರ ನೋಡಲು ಚಿಕ್ಕ ಹುಡುಗನಾಗಿರಬೇಕು ಇಲ್ಲವೇ ಕುಬ್ಜ ವ್ಯಕ್ತಿಯಾಗಿರಬೇಕು ಎಂದು ಅಂದಾಜಿಸಲಾಗುತ್ತಿದೆ.

‘ಚಕ್ಕಿ’ ಯಂತೆ ವೇಷ ಧರಿಸಿ ಬ್ಯಾಗನ್ನು ಕಸಿದು ಕೊಳ್ಳಲು ಶತ ಪ್ರಯತ್ನ ಮಾಡಿದ ವಿಡಿಯೋ ವೈರಲ್
‘ಚಕ್ಕಿ’ ಯಂತೆ ವೇಷ ಧರಿಸಿದ ಆ ವ್ಯಕ್ತಿ ಅಲ್ಲೇ ಕುಳಿತಂತಹ ಮಹಿಳೆಯ ಮೇಲೆ ಹಠಾತ್ತನೆ ಹಲ್ಲೆ ಮಾಡಿ ಅವಳ ಕೈಯಲ್ಲಿರುವ ಬ್ಯಾಗನ್ನು ಕಸಿದು ಕೊಳ್ಳಲು ಶತ ಪ್ರಯತ್ನವನ್ನು ಮಾಡಿದನು ಎಂದು ವಿಡಿಯೋದಲ್ಲಿ ನೋಡಬಹುದು. ಆ ಮಹಿಳೆಯು ಸುಮ್ಮನಿರದೆ ತನ್ನ ಬ್ಯಾಗನ್ನು ರಕ್ಷಿಸಿಕೊಳ್ಳಲು ಪ್ರತಿದಾಳಿ ನಡೆಸಿದಾಗ, ಮಾಸ್ಕ್ ಧರಿಸಿದ್ದ ವ್ಯಕ್ತಿ ಅವಳ ಕಾಲನ್ನು ಹಿಡಿದುಕೊಂಡು ಎಳೆದಾಡುವುದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಆ ವಿಡಿಯೋದಲ್ಲಿ ನೋಡಬಹುದಾಗಿದೆ. ಆ ಹೆಂಗಸು ಅವನನ್ನು ಶಪಿಸಿದಳು ಮತ್ತು ಅವನಿಂದ ಕೊನೆಗೂ ತಪ್ಪಿಸಿಕೊಳ್ಳಲು ಶಕ್ತಳಾದಳು. ಅವಳ ಬಳಿ ಕುಳಿತಿದ್ದ ಜನರು ‘ಚಕ್ಕಿ’ಯ ಆಕ್ರಮಣವನ್ನು ತಪ್ಪಿಸಲು ಎದ್ದು ನಿಂತರು ಮತ್ತು ಎಲ್ಲರೂ ದಿಗ್ಭ್ರಮೆಗೊಂಡರು.

ಇದನ್ನೂ ಓದಿ: Gym Fail Photos: ದಯವಿಟ್ಟು ಜಿಮ್​​ನಲ್ಲಿ ಹಿಂಗೆಲ್ಲಾ ಮಾಡ್ಬೇಡಿ! ಸದ್ಯಕ್ಕೆ ಫೋಟೋಸ್​ ನೋಡಿ, ಎಂಜಾಯ್​ ಮಾಡಿ

ಆ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಲು ‘ಚಕ್ಕಿ’ ವೇಷಧಾರಿ ಪ್ರಯತ್ನಿಸಿದ್ದಾಗ ರೈಲಿನಲ್ಲಿರುವ ಜನರಲ್ಲಿ ಒಬ್ಬರು ಆ ವ್ಯಕ್ತಿಯ ಮುಖವಾಡಕ್ಕೆ ಕೈ ಹಾಕಿ ಅದನ್ನು ತೆಗೆದಿದ್ದಾರೆ, ಆ ಎಳೆದಾಡಿದ ರಭಸಕ್ಕೆ ಆ ವ್ಯಕ್ತಿ ಕೆಳಕ್ಕೆ ಬಿದ್ದಿರುವುದನ್ನು ನಾವು ಈ ವೈರಲ್ ವಿಡಿಯೋದಲ್ಲಿ ನೋಡಬಹುದು. ಕಿರಾ ಎಂಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ 17 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇಷ್ಟೇ ಅಲ್ಲದೆ ಈ ವೀಡಿಯೋ 415 ಸಾವಿರ ಲೈಕ್ ಗಳನ್ನು ಪಡೆದಿದೆ.
Published by:Ashwini Prabhu
First published: