(VIDEO): ಹೆಂಡತಿ ಜೊತೆ ಫಿಲ್ಮ್​ಗೆ ಹೋದಾಗ ನನ್ನ ಮಗು ನೋಡ್ಕೊ: ಪಂತ್​ ಕಾಲೆಳೆದ ಆಸೀಸ್ ನಾಯಕ

ನಿನ್ನೆ ಆಸೀಸ್ ನಾಯಕ ಟಿಮ್ ಪೇಯ್ನೆ ರೋಹಿತ್ ಶರ್ಮಾರನ್ನು ಕೆಣಕಿ ಕೆಟ್ಟಿದ್ದರು. ಇಂದು ಕೂಡ ಪೇಯ್ನೆ ಅವರು ರಿಷಭ್ ಪಂತ್ ಮೇಲೆ ಸ್ಲೆಡ್ಜಿಂಗ್ ಮುಂದಿವರಿಸಿದ್ದಾರೆ.

Vinay Bhat | news18
Updated:December 28, 2018, 5:31 PM IST
(VIDEO): ಹೆಂಡತಿ ಜೊತೆ ಫಿಲ್ಮ್​ಗೆ ಹೋದಾಗ ನನ್ನ ಮಗು ನೋಡ್ಕೊ: ಪಂತ್​ ಕಾಲೆಳೆದ ಆಸೀಸ್ ನಾಯಕ
Pic: Twitter
Vinay Bhat | news18
Updated: December 28, 2018, 5:31 PM IST
ಮೆಲ್ಬೋರ್ನ್​: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ಕುತೂಹಲ ಘಟ್ಟದತ್ತ ತಲುಪುತ್ತಿದೆ. ಅಂತೆಯೆ ಟೆಸ್ಟ್​​ ಸರಣಿ ಆರಂಭದಿಂದಲು ಉಭಯ ತಂಡಗಳ ನಡುವೆ ಸ್ಲೆಡ್ಜಿಂಗ್ ಸಮರ ಮುಂದುವರಿದಿದೆ.

ಇದು ಮೂರನೇ ಟೆಸ್ಟ್​​ನಲ್ಲು ಕಂಡುಬಂದಿದ್ದು ನಿನ್ನೆ ಆಸೀಸ್ ನಾಯಕ ಟಿಮ್ ಪೇಯ್ನೆ ರೋಹಿತ್ ಶರ್ಮಾರನ್ನು ಕೆಣಕಿದ್ದರು. ಇಂದು ಕೂಡ ಪೇಯ್ನೆ ಅವರು ರಿಷಭ್ ಪಂತ್ ಮೇಲೆ ಸ್ಲೆಡ್ಜಿಂಗ್ ಮುಂದಿವರಿಸಿದ್ದಾರೆ.

ಇದನ್ನೂ ಓದಿ: 2018ರಲ್ಲಿ ದೇಶಕ್ಕೆ ಟೀಂ ಇಂಡಿಯಾ ನೀಡಿದ ಮರೆಯಲಾಗದ ಉಡುಗೊರೆ ಏನು ಗೊತ್ತಾ?

ಈ ಬಾರಿ ಇಂದು ಹೆಜ್ಜೆ ಮುಂದುಹೋಗಿರುವ ಪೇಯ್ನ್​​ ಪಂತ್​​ರನ್ನು ಬೇಕಂತಲೆ ಕಾಲೆಳೆದಿದ್ದಾರೆ. 'ಮುಂದಿನ ಏಕದಿನ ಪಂದ್ಯಕ್ಕೆ ಧೋನಿ ವಾಪಾಸ್ಸಾಗಿದ್ದಾರೆ. ಈ ಟೆಸ್ಟ್​​ ಸರಣಿ ಮುಗಿದ ಮೇಲೆ ಇಲ್ಲೇ ಬಿಗ್​ಬ್ಯಾಶ್​​ ಲೀಗ್​​ನಲ್ಲಿ ನೀನು ಆಡು. ಹೋಬಾರ್ಡ್​​ ಸುಂದರ ತಾಣ. ನೀನು ಹೋಬಾರ್ಟ್​​ ಹರಿಕೇನ್ಸ್​​ ತಂಡದ ಪರವಾಗಿ ಆಡು. ಆಸ್ಟ್ರೇಲಿಯಾದಲ್ಲಿ ರಜೆಯನ್ನು ಆರಾಮಾಗಿ ಮಜಾ ಮಾಡು' ಎಂದಿದ್ದಾರೆ.

ಅಷ್ಟೇ ಅಲ್ಲದೆ 'ನಿನ್ನನ್ನು ಇಲ್ಲಿ ಅದ್ಭುತವಾದ ಜಾಗಕ್ಕೆ ಕರೆದುಕೊಂಡೊಗುತ್ತೇವೆ. ಊಟಕ್ಕೆ ನಮ್ಮ ಮನೆಗೆ ಬಾ, ನಾನು ಹಾಗೂ ನನ್ನ ಹೆಂಡತಿ ಫಿಲ್ಮ್​​ ನೋಡಲು ಹೊರಗಡೆ ಹೋದಾಗ ಮನೆಯಲ್ಲಿ ನನ್ನ ಮಕ್ಕಳನ್ನು ನೋಡ್ಕೊಂಡಿರು' ಎಂದು ಕಾಲೆಳೆದಿದ್ದಾರೆ.

 



ಇದನ್ನೂ ಓದಿ: (VIDEO): ಬುಮ್ರಾ ಯಾರ್ಕರ್ ದಾಳಿಗೆ ಆಸೀಸ್ ಉಡೀಸ್: 39 ವರ್ಷಗಳ ದಾಖಲೆ ನೆಲಸಮ

ಇಷ್ಟೆಲ್ಲ ಸ್ಲೆಡ್ಜಿಂಗ್ ಮಾಡುತ್ತಿದ್ದರು ಪಂತ್ ಇದಕ್ಕೆಲ್ಲ ತಲೆಕೆಡಿಸಿಗೊಳ್ಳದೆ ಬ್ಯಾಟಿಂಗ್​ನತ್ತ ಗಮನ ಹರಿಸಿದ್ದರು. ಸದ್ಯ ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 151 ರನ್​ಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್​ ಆರಂಭಿಸಿವ ಭಾರತ ದಿನದಾಟಕ್ಕೆ 5 ವಿಕೆಟ್ ನಷ್ಟಕ್ಕೆ 54 ರನ್ ಕಲೆಹಾಕಿದೆ. ಅಂತೆಯೆ ಟೀಂ ಇಂಡಿಯಾ 346 ರನ್​ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 6 ಹಾಗೂ ಮಯಾಂಕ್ ಅಗರ್ವಾಲ್ 28 ರನ್​ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 



First published:December 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ