ಸಿನಿಮಾಗೆ ಹೋದಾಗ ಪಾಪ್​ಕಾರ್ನ್​ ಕೊಂಡು ಮೋಸ ಹೋಗಿದ್ದೀರಾ? ಟಿಕ್​ಟಾಕ್​ ಮೂಲಕ ಬಣ್ಣ ಬಯಲು ಮಾಡಿರುವ ಕತೆ ಇಲ್ಲಿದೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮಾರು 7 ಮಿಲಿಯನ್‍ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ಅದರಲ್ಲಿ ಆತ ಗ್ರಾಹಕನ ಸೋಗಿನಲ್ಲಿ ಸಿನಿಮಾ ಮಂದಿರವೊಂದರಲ್ಲಿ ಪಾಪ್‍ಕಾರ್ನ್ ಖರೀದಿಸುವ ದೃಶ್ಯವಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  ಬಹಳಷ್ಟು ಮಂದಿಗೆ ಸಿನಿಮಾ ಮಂದಿರಗಳಲ್ಲಿ ಪಾಪ್‍ಕಾರ್ನ್ ತಿನ್ನುತ್ತಾ ಸಿನಿಮಾ ನೋಡುವುದೆಂದರೆ ಅದೇನೋ ಖುಷಿ. ಸಾಮಾನ್ಯವಾಗಿ ಸಿನಿಮಾ ಪರದೆಯ ಹಾಲ್‍ನ ಪ್ರವೇಶ ದ್ವಾರದಲ್ಲಿಯೇ ಇರುವ ಪಾಪ್‍ಕಾರ್ನ್ ಕೌಂಟರ್‌ಗಳಲ್ಲಿ ಪೇಪರ್ ಬಕೆಟ್‍ಗಳಲ್ಲಿ ತುಂಬಿಕೊಂಡುವ ಪಾಪ್‍ಕಾರ್ನ್‍ಗಳು ವೀಕ್ಷಕರನ್ನು ಆಕರ್ಷಿಸದೇ ಇರಲು ಸಾಧ್ಯವಿಲ್ಲ. ಹೊರಗೆ ಅಗ್ಗವಾಗಿ ಸಿಗುವ ಆ ಪಾಪ್‍ಕಾರ್ನ್‍ಗೆ ಸಿನಿಮಾ ಮಂದಿರಗಳಲ್ಲಿ ನಾಲ್ಕೈದು ಪಟ್ಟು ಹೆಚ್ಚು ದರ ಇರುತ್ತದೆ. ಆದರೂ ಕೊಳ್ಳುವವರ ಸಂಖ್ಯೆಗೇನು ಕೊರತೆ ಇಲ್ಲ ಎಂದೇ ಹೇಳಬಹುದು.


  ಸಿನಿಮಾ ನೋಡಲು ಬಂದವರ ಜೊತೆ ಮಕ್ಕಳೋ ಅಥವಾ ಪ್ರೇಯಸಿಯೋ ಇದ್ದರಂತೂ, ಪಾಪ್ ಕಾರ್ನ್ ಬಕೆಟ್ ಸಮೇತ ಸಿನಿಮಾ ಹಾಲ್‍ನೊಳಗೆ ಪ್ರವೇಶ ಬಹುಪಾಲು ಖಾತರಿ. ಸಿನಿಮಾ ಮಂದಿರಗಳಲ್ಲಿ ಚಿಕ್ಕದು, ಮಧ್ಯಮ ಮತ್ತು ದೊಡ್ಡ ಪ್ರಮಾಣದಲ್ಲಿ ಪಾಪ್ ಕಾರ್ನ್ ಬಾಕ್ಸ್‌ಗಳು / ಬಕೆಟ್‍ಗಳು ಲಭ್ಯ ಇರುತ್ತವೆ. ಆದರೆ ಅವುಗಳಲ್ಲಿನ ವ್ಯತ್ಯಾಸವನ್ನು ಅದರಲ್ಲಿ ನಮೂದಿಸಿರುವುದಿಲ್ಲವಾದ ಕಾರಣ ಬಹಳಷ್ಟು ಮಂದಿಗೆ ಯಾವುದನ್ನು ಕೊಳ್ಳಬೇಕೆಂದು ಗೊಂದಲವಾಗುತ್ತದೆ.


  ಅವುಗಳ ಬೆಲೆಗಳ ಕುರಿತು ಯಾವಾಗಲೂ ದೂರುಗಳು ಇದ್ದೇ ಇರುತ್ತದೆ, ಜೊತೆಗೆ ಪಾಪ್‍ಕಾರ್ನ್ ಬಕೆಟ್‍ಗಳಲ್ಲಿರುವ ಪಾಪ್‍ಕಾರ್ನ್‍ಗಳ ಪ್ರಮಾಣದಲ್ಲೂ ಮೋಸವಾಗುತ್ತದೆ ಎಂಬುವುದು ನಿಮಗೆ ಗೊತ್ತೇ..? ಹೌದು, ಸಿನಿಮಾ ಮಂದಿರದ ಉದ್ಯೋಗಿಯೊಬ್ಬರು ಅಲ್ಲಿ ಮಾರಲಾಗುವ ಪಾಪ್‍ಕಾರ್ನ್‍ಗಳ ಬಗ್ಗೆ ರಹಸ್ಯ ಬಿಚ್ಚಿಟ್ಟಿದ್ದಾರೆ.


  ಟಿಕ್‍ಟಾಕರ್ @thatcoolguy.25597 ಹೇಳುವ ಪ್ರಕಾರ, ಜನರು ಖರೀದಿಸುವ ‘ಮಧ್ಯಮ’ ಪಾಪ್‍ಕಾರ್ನ್ ಬಕೆಟ್‍ನಲ್ಲಿ ಇರುವ ಪಾಪ್‍ಕಾರ್ನ್ ಪ್ರಮಾಣಕ್ಕೂ, ‘ಸಣ್ಣ’ ಪಾಪ್‍ಕಾರ್ನ್ ಬಕೆಟ್‍ನಲ್ಲಿರುವ ಪಾಪ್‍ಕಾರ್ನ್‍ಗಳ ಪ್ರಮಾಣಕ್ಕೂ ವ್ಯತ್ಯಾಸ ಇರುವುದಿಲ್ಲ. ಹಾಗಂದ ಮಾತ್ರಕ್ಕೆ ಎಲ್ಲಾ ಸಿನಿಮಾ ಮಂದಿರಗಳಲ್ಲಿ ಒಂದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈ ಟಿಕ್‍ಟಾಕರ್ ಶೇರ್ ಮಾಡಿಕೊಂಡಿರುವ ವಿಡಿಯೋ, ನೆಟ್ಟಿಗರನ್ನು ಸಿನಿಮಾ ಮಂದಿರದಲ್ಲಿ ಪಾಪ್‍ಕಾರ್ನ್ ಕೊಳ್ಳುವ ಕೊಂಚ ಆಲೋಚಿಸುವಂತೆ ಮಾಡಿದೆ.


  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮಾರು 7 ಮಿಲಿಯನ್‍ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ಅದರಲ್ಲಿ ಆತ ಗ್ರಾಹಕನ ಸೋಗಿನಲ್ಲಿ ಸಿನಿಮಾ ಮಂದಿರವೊಂದರಲ್ಲಿ ಪಾಪ್‍ಕಾರ್ನ್ ಖರೀದಿಸುವ ದೃಶ್ಯವಿದೆ. ಬಳಿಕ ಅದೇ ವ್ಯಕ್ತಿ, ಅಲ್ಲಿನ ಪಾಪ್‍ಕಾರ್ನ್ ಕೌಂಟರ್‌ನ ಉದ್ಯೋಗಿಯ ರೂಪದಲ್ಲಿ, ಅಲ್ಲಿ ಲಭ್ಯವಿರುವ ದೊಡ್ಡ, ಮಧ್ಯಮ ಮತ್ತು ಚಿಕ್ಕ ಗಾತ್ರದ ಪಾಪ್‍ಕಾರ್ನ್ ಬಕೆಟ್‍ಗಳನ್ನು ತೋರಿಸುವುದು ಕಂಡು ಬರುತ್ತದೆ.


  ಗ್ರಾಹಕ 7.35 ಡಾಲರ್ ಕೊಟ್ಟು ಚಿಕ್ಕ ಬ್ಯಾಗ್ ಖರೀದಿಸುತ್ತಾನೆ. ಆದರೆ ಅದನ್ನು ಕೊಂಡ ಬಳಿಕ ಗ್ರಾಹಕ ಮನಸ್ಸು ಬದಲಾಯಿಸಿ ಮಧ್ಯಮ ಗಾತ್ರದ ಬ್ಯಾಗ್ ಕೇಳುತ್ತಾನೆ. ಆಗ ಕೌಂಟರ್‌ನಲ್ಲಿರುವ ಟಿಕ್‍ಟಾಕರ್ ಸಣ್ಣ ಗಾತ್ರದ ಬ್ಯಾಗಲ್ಲಿರುವ ಪಾಪ್‍ಕಾರ್ನನ್ನು ಮಧ್ಯಮ ಗಾತ್ರದ ಬ್ಯಾಗ್‍ಗೆ ಹಾಕುತ್ತಾನೆ. ಅದು ಆ ಬ್ಯಾಗ್‍ನಲ್ಲಿ ಸರಿಯಾಗಿ ತುಂಬಿಕೊಳ್ಳುತ್ತದೆ, ಅಂದರೆ ಎರಡರಲ್ಲಿಯೂ ಇರುವ ಪಾಪ್‍ಕಾರ್ನ್ ಪ್ರಮಾಣ ಒಂದೇ ಎಂದಾಯಿತು. ಆದರೂ ಮಧ್ಯಮ ಗಾತ್ರದ ಪಾಪ್‍ಕಾರ್ನ್ ಬ್ಯಾಗ್‍ಗೆ ಹೆಚ್ಚುವರಿಯಾಗಿ 1.09 ಡಾಲರ್ ಪಾವತಿಸಬೇಕಿತ್ತು.


  ಇದನ್ನೂ ಓದಿ:  ಪುಣೆ: ವ್ಯಕ್ತಿಯೋರ್ವನನ್ನು ಹುಚ್ಚ ಎಂದು ಕರೆದರು: ಆತ ಕೋಪಿಸಿಕೊಂಡಿದ್ದಕ್ಕೆ ಕೊಂದೆ ಬಿಟ್ಟರು

  ಈ ವಿಡಿಯೋ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿದ್ದು, ಜನರು ಸಿನಿಮಾ ಮಂದಿರಗಳಲ್ಲಿ ನಡೆಯುವ ಈ ‘ಮೋಸ’ ಕಂಡು ಆಶ್ಚರ್ಯಚಕಿತರಾಗಿದ್ದಾರೆ. “ಇದು ಕಾನೂನು ಬಾಹಿರ. ನಾನು ದೊಡ್ಡ ಗಾತ್ರಕ್ಕೆ ದುಡ್ಡು ಕೊಟ್ಟರೆ, ನನಗೆ ದೊಡ್ಡ ಗಾತ್ರದ್ದೇ ಸಿಗಬೇಕು” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: