• Home
 • »
 • News
 • »
 • trend
 • »
 • Bacteria: ದೇಹದ ಬ್ಯಾಕ್ಟೀರಿಯಾದಿಂದಲೇ ಆಭರಣ ತಯಾರಿಕೆ: ಮಹಿಳೆಯಿಂದ ಅಚ್ಚರಿಯ ಸಾಧನೆ

Bacteria: ದೇಹದ ಬ್ಯಾಕ್ಟೀರಿಯಾದಿಂದಲೇ ಆಭರಣ ತಯಾರಿಕೆ: ಮಹಿಳೆಯಿಂದ ಅಚ್ಚರಿಯ ಸಾಧನೆ

ಬ್ಯಾಕ್ಟೀರಿಯಾದಿಂದಲೇ ಆಭರಣ ತಯಾರಿಕೆ

ಬ್ಯಾಕ್ಟೀರಿಯಾದಿಂದಲೇ ಆಭರಣ ತಯಾರಿಕೆ

ಬ್ಯಾಕ್ಟೀರಿಯಾದಿಂದ (Bacteria) ತಯಾರಿಸಲಾದ ಆಭರಣಗಳನ್ನು ನೋಡಿರೋಕೆ ಸಾಧ್ಯವೇ ಇಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ಬ್ಯಾಕ್ಟೀರಿಯಾ ಆಭರಣಗಳನ್ನು ತಯಾರಿಸಿ ಅಚ್ಚರಿ ಮೂಡಿಸಿದ್ದಾಳೆ.

 • Share this:

  ಈಗಿನ ಜನರು ಯಾವುದೇ ವಿಷಯದಲ್ಲಾದರೂ ಹೊಸದನ್ನು ಕೇಳ್ತಾರೆ. ಡಿಫರೆಂಟಾಗಿ, ಅಂದವಾಗಿ ಹಾಗೂ ವಿಶಿಷ್ಟವಾದ ಬದಲಾವಣೆ ಕೇಳ್ತಾರೆ. ಅದು ಅವರು ಧರಿಸೋ ಬಟ್ಟೆಯಲ್ಲಾಗಿರಬಹುದು ಅಥವಾ ಹೇರ್‌ ಸ್ಟೈಲ್‌, ಜ್ಯುವೆಲ್ಲರಿ (Jwellery) ಹೀಗೆ ಎಲ್ಲ ತರಹದ ವಿಷಯಗಳಿಗೂ ಇದು ಅನ್ವಯಿಸುತ್ತೆ. ನೀವು ಚಿನ್ನದ್ದು ಮುತ್ತಿನದು.. ಸ್ಟೋನ್‌ ದು, ಟೆರ್ರಕೋಟಾ ಹೀಗೆ ವಿವಿಧ ಬಗೆಯ ಜ್ಯುವೆಲ್ಲರಿಗಳನ್ನು ನೋಡಿರಬಹುದು. ಆದ್ರೆ ಬ್ಯಾಕ್ಟೀರಿಯಾದಿಂದ (Bacteria) ತಯಾರಿಸಲಾದ ಆಭರಣಗಳನ್ನು ನೋಡಿರೋಕೆ ಸಾಧ್ಯವೇ ಇಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ಬ್ಯಾಕ್ಟೀರಿಯಾ ಆಭರಣಗಳನ್ನು ತಯಾರಿಸಿ ಅಚ್ಚರಿ ಮೂಡಿಸಿದ್ದಾಳೆ.


  ಅಂದಹಾಗೆ ಸ್ಕಾಟ್‌ಲ್ಯಾಂಡ್‌ನ ಕ್ಲೋಯ್ ಫಿಟ್ಜ್‌ಪ್ಯಾಟ್ರಿಕ್ ಎಂಬುವವರೇ ಈ "ಬ್ಯಾಕ್ಟೀರಿಯಾ ಆಭರಣಗಳನ್ನು" ತಯಾರಿಸುತ್ತಾರೆ. ಅಷ್ಟೇ ಅಲ್ಲದೇ ಅದಕ್ಕಾಗಿ ಅವರು ಡುಂಡೀ ವಿಶ್ವವಿದ್ಯಾಲಯ ಮತ್ತು ಜೇಮ್ಸ್ ಹಟ್ಟನ್ ಸಂಶೋಧನಾ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ.


  ಇದನ್ನೂ ಓದಿ: ಮೈಸೂರಿನ ಹೋಟೆಲ್​​ನಲ್ಲಿ 21 ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು! ಕೊಲೆಗೈದಿರುವ ಶಂಕೆ


  ಬಹುತೇಕ ಜನರು ಬ್ಯಾಕ್ಟೀರಿಯಾ ಎಂದರೆ ಮಾರು ದೂರ ಸರೀತಾರೆ. ಆದ್ರೆ ಸ್ಕಾಟ್‌ ಲ್ಯಾಂಡ್‌ ನ ಈ ಕಲಾವಿದೆ ಪಾಲಿಗೆ ಈ ಬ್ಯಾಕ್ಟೀರಿಯಾಗಳು ಬೇರೆಯದೇ ಆಗಿವೆ. ಇದನ್ನೇ ಬಳಸಿಕೊಂಡು ಅವರು ಆಭರಣ ತಯಾರಿಸ್ತಾರೆ ಅಂದ್ರೆ ನೀವು ನಂಬಲೇ ಬೇಕು. ಕ್ಲೋಯ್ ಫಿಟ್ಜ್‌ಪ್ಯಾಟ್ರಿಕ್ ಅವರು ಸಸ್ಯಗಳ ಮೇಲೆ ಮತ್ತು ತನ್ನ ಸ್ವಂತ ದೇಹದ ಮೇಲೆ ಕಂಡುಬರುವ ಬ್ಯಾಕ್ಟೀರಿಯಾದಿಂದ ವಿಶಿಷ್ಟವಾದ ಬಣ್ಣಗಳನ್ನು ಬೆಳೆಸುವ ಮೂಲಕ ಆಭರಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರ ಈ ಯೋಜನೆಯು ಟಿಕ್‌ಟಾಕ್‌ನಲ್ಲಿ 20 ಮಿಲಿಯನ್ ವೀಕ್ಷಣೆ ಕಂಡಿದೆ.


  ಬ್ಯಾಕ್ಟೀರಿಯಾದಿಂದ ಬಣ್ಣಗಳನ್ನು ಪಡೆಯಬಹುದು!


  ಬ್ಯಾಕ್ಟೀರಿಯಾಗಳು ತಾವು ಬೆಳೆಯುವ ಮಾಧ್ಯಮಗಳ ಪಿಹೆಚ್ ಮಟ್ಟಕ್ಕೆ ಅನುಗುಣವಾಗಿ ಬಣ್ಣವನ್ನು ಬದಲಾಯಿಸಬಹುದು. ಆ ಪರಿಸರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ವಿವಿಧ ಬಣ್ಣಗಳನ್ನು ಪಡೆಯಲು ಸಾಧ್ಯವಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಬ್ಯಾಕ್ಟೀರಿಯಾ ಆಭರಣಗಳನ್ನು ರಚಿಸಲು ಫಿಟ್ಜ್‌ಪ್ಯಾಟ್ರಿಕ್ ಯುನಿವರ್ಸಿಟಿ ಆಫ್ ಡುಂಡೀ ಮತ್ತು ಜೇಮ್ಸ್ ಹಟ್ಟನ್ ಸಂಶೋಧನಾ ಸಂಸ್ಥೆಯೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದಾರೆ.


  ಬ್ಯಾಕ್ಟೀರಿಯಾದಿಂದ ಆಭರಣ ತಯಾರಿಕೆ ಹೇಗೆ?


  ಆಕೆಯ ದೇಹದಿಂದ ಸ್ವ್ಯಾಬ್‌ಗಳನ್ನು ಎಲ್‌ಬಿಎಸ್ ನ್ಯೂಟ್ರಿಯೆಂಟ್ ಅಗರ್‌ಗೆ ವರ್ಗಾಯಿಸಲಾಗುತ್ತೆ. ಬ್ಯಾಕ್ಟೀರಿಯಾವನ್ನು ಬೆಳೆಸಲು ಬಳಸುವ ನ್ಯೂಟ್ರಿಯೆಂಟ್‌ ರಿಚ್‌ ಮೀಡಿಯಂ ಅಥವಾ ಪೋಷಕಾಂಶ-ಸಮೃದ್ಧ ಮಾಧ್ಯಮವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಇದು ಬ್ಯಾಕ್ಟೀರಿಯಾದ ಹೊರಹೊಮ್ಮುವಿಕೆಗೆ ಕಾರಣವಾಗುತ್ತೆ. ಅವುಗಳಿಂದ, ಫಿಟ್ಜ್‌ಪ್ಯಾಟ್ರಿಕ್ ಅವರು ಆದ್ಯತೆ ನೀಡಿದ ಬಣ್ಣವನ್ನು ಆರಿಸಿ ಕೊಲೋನೀಸ್‌ ಗಳನ್ನು ಆರಿಸಿಕೊಳ್ತಾರೆ. ಅವುಗಳನ್ನು ವಿಶೇಷವಾದ ಅಗರ್ ಪ್ಲೇಟ್‌ನಲ್ಲಿ ಇರಿಸುತ್ತಾರೆ. ಇದರಿಂದ ಬಣ್ಣಗಳು ದ್ವಿಗುಣಗೊಳ್ಳುತ್ತವೆ.


  ಕಲರ್‌ ಕಾಲೋನೀಸ್‌ ಗಳು ಬೆಳೆದ ನಂತರ, UV ರಾಳವನ್ನು ಪ್ಲೇಟ್‌ಗಳ ಮೇಲೆ ಸುರಿದು, ಮಿಶ್ರಣ ಮಾಡಲಾಗುತ್ತೆ. ನಂತರ ಅದನ್ನು ರಬ್ಬರ್ ಅಚ್ಚಿನಲ್ಲಿ ಹೊಂದಿಸಿ ನಂತರ ಅದನ್ನು ಮುಚ್ಚಲಾಗುತ್ತದೆ ಎಂದು ಇನ್‌ಸ್ಟಿಟ್ಯೂಟ್ ಹೇಳಿದೆ.


  ಇದನ್ನೂ ಓದಿ: ಸ್ಮಶಾನ ಇಲ್ಲದೇ ಹೆಣ ಹೂಳಲು ಪಂಚಾಯ್ತಿ ಆವರಣದಲ್ಲಿ ಗುಂಡಿ ತೆಗೆದ ಗ್ರಾಮಸ್ಥರು


  ಆಕೆಯ ದೇಹದ ವಿವಿಧ ಭಾಗಗಳಿಂದ ತೆಗೆಯಲಾಗುವ ಬ್ಯಾಕ್ಟೀರಿಯಾಗಳು ವಿವಿಧ ಬಣ್ಣಗಳನ್ನು ನೀಡುತ್ತವೆ. ಆಕೆ ಮಾಡಿದಂತಹ ಗುಲಾಬಿ ಬಣ್ಣದ ಎಕ್ಸಸರೀಸ್‌ ಆಕೆಯ ಪಾದದಿಂದ ಬೆಳೆದ ಬಣ್ಣದಿಂದ ಬಳಸಿ ತಯಾರಿಸಲಾಗಿದೆ. ಇನ್ನು ಆಕೆ ತಯಾರಿಸಿದ ಮೀನಿನ ಉಂಗುರ ನೋಡಲು ಆಕರ್ಷಕವಾಗಿದೆ. ಸಾಮಾನ್ಯವಾಗಿ ಅತ್ಯಂತ ಸುಂದರವೆಂದು ಪರಿಗಣಿಸದ ಜೀವಿಗಳ "ನಿಜವಾದ ಸೌಂದರ್ಯ" ವನ್ನು ಪ್ರದರ್ಶಿಸಲು ಅವಳು ಈ ಮೀನಿನ ಉಂಗುರಗಳನ್ನು ವಿನ್ಯಾಸಗೊಳಿಸಿದಳಂತೆ.


  ಅಂದಹಾಗೆ, ಜನರು ಸಾಮಾನ್ಯವಾಗಿ ಯೋಚಿಸದ ಪ್ರಕೃತಿಯ ಭಾಗದೊಂದಿಗೆ ರಿ ಕನೆಕ್ಟ್‌ ಮಾಡುವುದು ತನ್ನ ಗುರಿ ಎನ್ನುತ್ತಾರೆ ಫಿಟ್ಜ್‌ಪ್ಯಾಟ್ರಿಕ್. ಅಲ್ಲದೇ "ಸೂಕ್ಷ್ಮ ಮತ್ತು ಬ್ಯಾಕ್ಟೀರಿಯಾ ಪ್ರಪಂಚವು ಸುಸ್ಥಿರ ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಾಮುಖ್ಯತೆ ಹೊಂದಿದೆ ಎಂದು ನಾನು ನಂಬುತ್ತೇನೆ. ಈ ಶ್ರೀಮಂತ ಶ್ರೇಣಿಯ ಬಣ್ಣಗಳು, ಆಕಾರಗಳು ಮತ್ತು ರೂಪಗಳು ಮುಂದಿನ ಪೀಳಿಗೆಯ ಕಲಾವಿದರು ಮತ್ತು ವಿನ್ಯಾಸಕರಿಗೆ ಸ್ಫೂರ್ತಿ ನೀಡಬಲ್ಲವು" ಎಂದು ಅವರು ತಿಳಿಸಿದ್ದಾರೆ.


  ಏನೇ ಆಗಲಿ, ಫಿಟ್ಜ್‌ಪ್ಯಾಟ್ರಿಕ್ ಅವರ ಈ ವಿಶಿಷ್ಟ ಕಲೆ ಹಾಗೂ ಕೆಲಸ ಆಕರ್ಷಕವಾಗಿರುವುದಂತೂ ಹೌದು.

  Published by:Precilla Olivia Dias
  First published: