• Home
  • »
  • News
  • »
  • trend
  • »
  • Viral News: ಜನಕ್ಕೆ ಬೋರ್​ ಆದ್ರೆ ಏನೆಲ್ಲಾ ಮಾಡ್ತಾರೆ, ಆದ್ರೆ ಈ ಮಹಿಳೆ ನೋಡಿ ಎಂಥ ಎಡವಟ್​ ಮಾಡಿಕೊಂಡಿದ್ದಾರೆ!

Viral News: ಜನಕ್ಕೆ ಬೋರ್​ ಆದ್ರೆ ಏನೆಲ್ಲಾ ಮಾಡ್ತಾರೆ, ಆದ್ರೆ ಈ ಮಹಿಳೆ ನೋಡಿ ಎಂಥ ಎಡವಟ್​ ಮಾಡಿಕೊಂಡಿದ್ದಾರೆ!

ವೈರಲ್ ಆದ ಫೋಟೋ

ವೈರಲ್ ಆದ ಫೋಟೋ

ಯಾವುದೇ ಒಂದು ಕೆಲಸ (Work) ಮಾಡುವ ಮೊದಲು ಆ ಕೆಲಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಇಲ್ಲವೇ ಆ ವಿಷಯದ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ (Knowledge) ವನ್ನಾದರೂ ಹೊಂದಿರಬೇಕು

  • Share this:

ಯಾವುದೇ ಒಂದು ಕೆಲಸ (Work) ಮಾಡುವ ಮೊದಲು ಆ ಕೆಲಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಇಲ್ಲವೇ ಆ ವಿಷಯದ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ (Knowledge) ವನ್ನಾದರೂ ಹೊಂದಿರಬೇಕು ಎಂಬುದಾಗಿ ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಅಮೆರಿಕಾದ ಡೇನಿಯಲ್ ಅಲೆನ್ (Daniel Allen) ಕೂಡ ತಮಗೆ ಅಷ್ಟೊಂದು ಮಾಹಿತಿ ಇಲ್ಲದ ಹಾಗೂ ಗಂಧಗಾಳಿಯೂ ಗೊತ್ತಿಲ್ಲದ ಹರಾಜು (Auction) ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಇರಿಸು ಮುರಿಸಿನ ಸನ್ನಿವೇಶಕ್ಕೆ ಒಳಗಾಗಿದ್ದಾರೆ.


ಹರಾಜು ನಡೆಯುವ ಸಮಯದಲ್ಲಿ ಎಲ್ಲರಂತೆ ತಾನು ಕೂಡ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ಉತ್ಸುಕತೆಯಿಂದ ಡೇನಿಯಲ್ ಭಾಗವಹಿಸಿದ್ದು ಇತ್ತ ಕೊಂಚ ಹಣವನ್ನು ಕಳೆದುಕೊಂಡಿದ್ದಲ್ಲದೆ ಹರಾಜಿನಲ್ಲಿ ದೊರೆತ ಕಲಾಕೃತಿಗೆ ಸೂಕ್ತ ಕೊಳ್ಳುವವರಿಲ್ಲದೆ ಅಂಗಲಾಚುವ ಪರಿಸ್ಥಿತಿಗೆ ಒಳಗಾಗಿದ್ದಾರೆ.


ಅಂದುಕೊಂಡಿದ್ದು ಬೇರೆ ನಡೆದದ್ದೇ ಬೇರೆ


28 ರ ಹರೆಯದ ಅಮೆರಿಕಾ ಮೂಲದ ಡೇನಿಯಲ್ ಅಲೆನ್ ಆಕಸ್ಮಿಕವಾಗಿ ಸ್ಪ್ಯಾನಿಷ್ ನವ್ಯ ಸಾಹಿತ್ಯ ಸಿದ್ಧಾಂತವಾದಿ ಸಾಲ್ವಡಾರ್ ಡಾಲಿಯಿಂದ ರಚಿತವಾದ ಕಲಾ ಇತಿಹಾಸದ ತುಣುಕೊಂದನ್ನು $4,000 ಮೌಲ್ಯದಲ್ಲಿ ಹರಾಜಿನಲ್ಲಿ ಖರೀದಿಸಿದ್ದರು. ಇದೇ ತುಣುಕನ್ನು $20,000 ಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವ ಆಶಯದಿಂದ ಸೂಕ್ತ ಮಾರಾಟಗಾರನನ್ನು ಅನ್ವೇಷಿಸುತ್ತಿದ್ದಾರೆ ಎಂಬುದಾಗಿ ಸ್ವತಃ ಡೇನಿಯಲ್ ತಿಳಿಸಿದ್ದಾರೆ.


ಏನೋ ಮಾಡಲು ಹೋಗಿ ಬೇರೋನೋ ಆಯಿತು ಎಂಬಂತೆ ತನಗೆ ಬೇಡದೇ ಇರುವ ಕಲಾಕೃತಿಯನ್ನು ಮುಂದಿಟ್ಟುಕೊಂಡು ಯಾರಾದರೂ ಖರೀದಿಸಲು ಮುಂದೆ ಬರುತ್ತಾರೆಯೇ ಎಂದು ಡೇನಿಯಲ್ ಆಸಕ್ತಿಯಿಂದ ಕಾಯುತ್ತಿದ್ದಾರೆ.


ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ಡಿಫರೆಂಟ್‌ ಸೀರೆ, ನೋಡಿದ್ರೆ ಪಕ್ಕಾ ಬೇಕೇ ಬೇಕು ಅಂತೀರಾ!


ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಲಾ ಪ್ರೇಮಿಯಾಗಿರುವ ಡೇನಿಯಲ್ ಆರ್ಟ್ ಗ್ಯಾಲರಿಗೆ ಹೋದಾಗ ಹರಾಜಿನ ಸಂದರ್ಭದಲ್ಲಿ ಕಲಾಕೃತಿಗಳು $ 75,000 ಕ್ಕೆ ಮಾರಾಟವಾಗುವುದನ್ನು ನೋಡುತ್ತಾರೆ. ಇದು ಆಕೆ ಊಹಿಸಿದಕ್ಕಿಂತಲೂ ಹೆಚ್ಚಿನ ಬೆಲೆಯಾಗಿತ್ತು. ಆದರೆ ಹರಾಜು 20 ನಿಮಿಷಕ್ಕಿಂತ ಹೆಚ್ಚು ಕಾಲ ನಡೆದದ್ದನ್ನು ನೋಡಿ, ಆಕೆಗೆ ಬೋರ್ ಹೊಡೆಯತೊಡಗಿತು.


ಹೀಗಾಗಿ ಅದರ ನಂತರದ ಕಲಾಕೃತಿಗೆ ಬಿಡ್‌ ನಡೆಸಿದ್ದಾಗಿ ಅಲೆನ್ ಟಿಕ್‌ಟಾಕ್ ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ. 20 ನಿಮಿಷದ ಹರಾಜು ಪ್ರಕ್ರಿಯೆಯಲ್ಲಿ ಒಬ್ಬೊಬ್ಬರು ಒಂದೊಂದು ಬೆಲೆ ಹೇಳುತ್ತಾ ಕೊನೆಗೆ ಅತ್ಯಂತ ಹೆಚ್ಚಿನ ಬೆಲೆಗೆ ಹರಾಜು ಮುಕ್ತಾಯಗೊಳ್ಳುತ್ತದೆ. ಇದೇ ರೀತಿ ತಾನು ಭಾಗವಹಿಸುತ್ತಿರುವ ಹರಾಜು ಪ್ರಕ್ರಿಯೆಯಲ್ಲೂ ನಡೆಯಲಿದೆ ಎಂದೇ ಡೇನಿಯಲ್ ಭಾವಿಸಿದ್ದರು.


ತಮಾಷೆಗಾಗಿ ಭಾಗವಹಿಸಿದ್ದ ಹರಾಜು ಪ್ರಕ್ರಿಯೆ


ಕಲಾಕೃತಿಯ ತುಣುಕಿಗೆ ಅಂದಾಜಿಸಿದ ಕನಿಷ್ಟ ಬೆಲೆ $15,000 ಆಗಿದ್ದರಿಂದ ಬರೇ ವಿನೋದಕ್ಕಾಗಿ ಹರಾಜಿನಲ್ಲಿ ಭಾಗವಹಿಸಿದ್ದೆ. ಹೀಗಾಗಿ ಅಷ್ಟೇನೋ ನಷ್ಟವನ್ನುಂಟು ಮಾಡಲಿಲ್ಲ ಎಂದು ಅಲೆನ್ ತಿಳಿಸಿದ್ದಾರೆ. ಹಾಗಾಗಿ ಆಕೆ $2,000 ಹರಾಜು ನಡೆಸಿದರು. ನನ್ನ ಕೈಗಳನ್ನು ಮೇಲಕ್ಕೆತ್ತಿ ನನಗೆ ಹರಾಜು ಮೊತ್ತ ಹೇಳಬೇಕಿತ್ತು. ಮತ್ತು ನಾನು ಹೇಳಿದ ಬೆಲೆಗೆ ಬೇರೆ ಯಾರಾದರೂ ಹೆಚ್ಚಿನ ಬೆಲೆಯನ್ನು ಹೇಳಬೇಕಿತ್ತು. ಹರಾಜಿನಲ್ಲಿ ಹೇಗೆ ವಾದ ಪ್ರತಿವಾದಗಳು ನಡೆಯುತ್ತವೆಯೋ ಅಂತೆಯೇ ನಾನು ಲೆಕ್ಕಾಚಾರ ಹಾಕಿದ್ದೆ ಆದರೆ ನಾನು ಅಂದುಕೊಂಡಂತೆ ನಡೆಯಲಿಲ್ಲ ಎಂದು ಡೇನಿಯಲ್ ತಿಳಿಸಿದ್ದಾರೆ.


ಮೂರ್ಖಳಾದ ಡೇನಿಯಲ್


ಆಕೆಯ ಜೀವನದಲ್ಲಿ ನಡೆದ ಆಘಾತದಂತೆ ಅತ್ಯಂತ ದೀರ್ಘಾವಧಿಯ 10 ಸೆಕೆಂಡ್‌ಗಳ ನಂತರ ಹರಾಜುದಾರರು ಆಕೆ ಬಿಡ್ ಮಾಡಿದ್ದ ಕಲಾಕೃತಿಯ ತುಣುಕನ್ನು ಆಕೆಗೆ ನೀಡಿದರು. ಇನ್ನು ಹರಾಜು ನಡೆಯುವ ಸಂದರ್ಭದಲ್ಲಿ ಕಲಾಕೃತಿಯ ತುಣುಕನ್ನು ಕುಳಿತಲ್ಲಿಂದ ಮಾತ್ರವೇ ನೋಡಿದ್ದರಿಂದ ಕಲಾಕೃತಿಯ ತುಣುಕು ಹೇಗಿದೆ ಎಂಬುದು ಸ್ಪಷವಾಗಿರಲಿಲ್ಲ ಎಂದು ಡೇನಿಯಲ್ ತಿಳಿಸಿದ್ದಾರೆ.


ಇದನ್ನೂ ಓದಿ: ವಿಚಿತ್ರವಾಗಿದೆ ಈ ಪ್ರೀ ವೆಡ್ಡಿಂಗ್​​ ಫೋಟೋಶೂಟ್​, ವೈರಲ್ ಆಯ್ತು ವಿಡಿಯೋ


ಹರಾಜಿನಲ್ಲಿ ನಡೆದ ಘಟನೆಯನ್ನು ಅಲೆನ್ ನೆನಪಿಸಿಕೊಂಡಿದ್ದು ತನ್ನ ಬಳಿ ಇರುವ ಕಲಾ ಮುದ್ರಣದ ತುಂಡನ್ನು ಯಾರಾದರೂ ಖರೀದಿಸಲು ಉತ್ಸುಕರಾಗಿರುವವರ ಸಂಪರ್ಕದಲ್ಲಿರಲು ಆಕೆ ಬಯಸಿದ್ದಾರೆ.

Published by:ವಾಸುದೇವ್ ಎಂ
First published: