Video: ಟಿಕ್​ಟಾಕ್​ನಲ್ಲಿ ಅಜ್ಜನದ್ದೇ ಹವಾ: ಯುವಕರನ್ನೂ ನಾಚಿಸುವಂತೆ ಫುಲ್ ಮಿಂಚಿಂಗ್

ಸಿನಿಮಾ ಡೈಲಾಗ್​ಗಳನ್ನು ಬಳಸಿ ಅಜ್ಜಪ್ಪ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಿರಿ ವಯಸ್ಸಿನಲ್ಲಿಯೂ ಇರುವ ಜೀವನ ಉತ್ಸಾಹಕ್ಕೆ ಬಹುಪರಾಕ್ ಅನ್ನುತ್ತಿದ್ದಾರೆ.

news18-kannada
Updated:January 27, 2020, 5:58 PM IST
Video: ಟಿಕ್​ಟಾಕ್​ನಲ್ಲಿ ಅಜ್ಜನದ್ದೇ ಹವಾ: ಯುವಕರನ್ನೂ ನಾಚಿಸುವಂತೆ ಫುಲ್ ಮಿಂಚಿಂಗ್
prakash-ganger
  • Share this:
ಟಿಕ್ ಟಾಕ್ ಆ್ಯಪ್​ನಿಂದ ಅದೆಷ್ಟೋ ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ಕೆಲವರು ಆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೆ, ಮತ್ತೆ ಕೆಲವರು ಅದೇ ಆ್ಯಪ್​ನಿಂದ ಕೈ ತುಂಬಾ ಸಂಪಾದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆಯಷ್ಟೇ ಯುವರಾಜ್ ಎಂಬ ಹುಡುಗ ಟಿಕ್ ಟಾಕ್​ ವಿಡಿಯೋದಲ್ಲಿ ಭರ್ಜರಿ ಸ್ಟೆಪ್ ಹಾಕುವ ಮೂಲಕ ಇಡೀ ಬಾಲಿವುಡ್​ನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ. ಅಂದರೆ ಟಿಕ್ ಟಾಕ್​ ಮೂಲಕ ಯುವಕರು ಮಾತ್ರ ಮಿಂಚುತ್ತಿದ್ದಾರೆ ಎಂದು ನೀವು ಭಾವಿಸಬೇಡಿ.

ಯುವಕರನ್ನೂ ನಾಚುವಂತೆ ಟಿಕ್​ ಟಾಕ್​ನಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ ಪ್ರಕಾಶ್ ಗಾಣಿಗೇರ್ ಅಜ್ಜ. ಇವರು ಯುವ ತಲೆಮಾರನ್ನು ಮೀರಿಸುವಂತೆ ಕೆಲ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನೊಳಗಿರುವ ಕಲಾವಿದನನ್ನು ಹಾಸ್ಯದ ವಿಡಿಯೋ ಮುಖಾಂತರ ಪರಿಚಯಿಸುತ್ತಿದ್ದಾರೆ.
@prakashganger♬ original sound - mahihnayak




ಸಿನಿಮಾ ಡೈಲಾಗ್​ಗಳನ್ನು ಬಳಸಿ ಅಜ್ಜಪ್ಪ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಿರಿ ವಯಸ್ಸಿನಲ್ಲಿಯೂ ಇರುವ ಜೀವನ ಉತ್ಸಾಹಕ್ಕೆ ಬಹುಪರಾಕ್ ಅನ್ನುತ್ತಿದ್ದಾರೆ.
@prakashganger♬ original sound - user987615lakshmi

@prakashganger♬ original sound - ಪಕ್ಕ ದಾದಾ ಅಭಿಮಾನಿ.


ಅಂದಹಾಗೆ ಈ ವಿಡಿಯೋಗಳನ್ನು ಅವರೇ ಚಿತ್ರಿಸಿ ಅಪ್​ಲೋಡ್ ಮಾಡುತ್ತಾರಂತೆ. ಸ್ಮಾರ್ಟ್​ಫೋನ್​ ಎಲ್ಲ ಆಯ್ಕೆಗಳನ್ನು ಕರಗತ ಮಾಡಿಕೊಂಡಿರುವ ಪ್ರಕಾಶ್ ಗಾಣಿಗೇರ್ ಸದ್ಯಕ್ಕಂತು ಕನ್ನಡ ಟಿಕ್ ಟಾಕ್ ಲೋಕದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. ಇವರ ಪ್ರತಿಭೆಗೆ ಮುಂದೊಂದು ದಿನ ಸಿನಿಮಾದಲ್ಲೂ ಅವಕಾಶ ಸಿಗಲಿದೆ ಎಂಬ ನಂಬಿಕೆಯಲ್ಲಿದ್ದಾರೆ.
@prakashganger#tiktoktraditions♬ original sound - Love u DBoss 🙏🙏 🙏


@prakashganger♬ original sound - PŘÄĎÈÉP😉ಪ್ರದೀಪ್

First published:January 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading