ಇದೊಂದು ಬಾಕಿ ಇತ್ತು! ಸಾಮಾಜಿಕ ತಾಣದಲ್ಲಿ ವೈರಲ್​ ಆಗುತ್ತಿದೆ ಪ್ಯಾಂಟ್​​ನಲ್ಲಿ ಮೂತ್ರ ವಿಸರ್ಜನೆ ಚಾಲೆಂಜ್​!

Pee Your Pants Challenge: ಪ್ಯಾಂಟ್​​ನಲ್ಲಿ ಮೂತ್ರ ವಿಸರ್ಜನೆ ಮಾಡುವುದೇ ಈ ಚಾಲೆಂಜ್​ ಗುಟ್ಟು. ವಿಡಿಯೋ ಮಾಡುತ್ತಾ ಈ ಚಾಲೆಂಜ್ ಅನ್ನು​ ಮಾಡಬೇಕು. ಈಗಾಗಲೇ ಅನೇಕರು ಈ ಚಾಲೆಂಜ್​ ಸ್ವೀಕರಿಸಿದ್ದಾರೆ. ಸದ್ಯ ವಿದೇಶದಲ್ಲಿ ಪೀ ಯುವರ್​ ಪ್ಯಾಂಟ್ಸ್​ ಚಾಲೆಂಜ್​​ ಹುಟ್ಟಿಕೊಂಡಿದೆ.

news18-kannada
Updated:May 6, 2020, 2:33 PM IST
ಇದೊಂದು ಬಾಕಿ ಇತ್ತು! ಸಾಮಾಜಿಕ ತಾಣದಲ್ಲಿ ವೈರಲ್​ ಆಗುತ್ತಿದೆ ಪ್ಯಾಂಟ್​​ನಲ್ಲಿ ಮೂತ್ರ ವಿಸರ್ಜನೆ ಚಾಲೆಂಜ್​!
ಪೀ ಯುವರ್​ ಪ್ಯಾಂಟ್ಸ್​​​ ಚಾಲೆಂಜ್​‘
  • Share this:
ಕೊರೋನಾ ಲಾಕ್​ಡೌನ್​ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚಾಲೆಂಜ್​ ಹುಟ್ಟುಕೊಂಡಿವೆ. ಸೋಷಿಯಲ್​ ಮೀಡಿಯಾದಲ್ಲಿ ಹೊಸ ಚಾಲೆಂಜ್​ ಜನರನ್ನು ಸೆಲೆಯುತ್ತಿದೆ. ಇತ್ತೀಚೆಗೆ ಪಿಲ್ಲೋ ಚಾಲೆಂಜ್​, ಡಲಗೋನಾ ಕಾಫಿ ಚಾಲೆಂಜ್​​, ಶಾಪಿಂಗ್​​ ಚಾಲೆಂಜ್​ಗಳು ವೈರಲ್ ಆಗಿತ್ತು . ಸಾಕಷ್ಟು ಜನರು ಈ ಚಾಲೆಂಜ್​ಗಳನ್ನು ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಚಾಲೆಂಜ್​ಗಳ ಮೊರೆ ಹೋಗಿರುವ ಸಂಗತಿಗಳು ಬಹಳಷ್ಟಿದೆ. ಇಂತಹ ಚಾಲೆಂಜ್​ಗಳ ಮಧ್ಯೆ ಇದೀಗ ಮತ್ತೊಂದು ಹೊಸ ಚಾಲೆಂಜ್​ ಹುಟ್ಟಿಕೊಂಡಿದೆ. ಅದುವೆ ‘ಪೀ ಯುವರ್​ ಪ್ಯಾಂಟ್ಸ್​​​ ಚಾಲೆಂಜ್​‘!

ಹೌದು, ಈ ಚಾಲೆಂಜ್​ ಕೇಳಲು ಹಾಸ್ಯಸ್ಪದ ಎನಿಸಿದರು ಸಾಕಷ್ಟು ಜನರು ಈ ಚಾಲೆಂಜ್​ ಸ್ವೀಕರಿಸಿದ್ದಾರೆ. ಮಾತ್ರವಲ್ಲ ಸೋಷಿಯಲ್​ ಮೀಡಿಯಾದಲ್ಲಿ ಮೀಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಸದ್ಯ ಲಾಕ್​ಡೌನ್​ ಅವಧಿಯಲ್ಲಿ ಇಂತಹದೊಂದು ಚಾಲೆಂಜ್​ ಕೂಡ ಹುಟ್ಟಿಕೊಂಡಿದೆ ಎಂಬುದು ಹ್ಯಾಸ್ಯಸ್ಪದ ಸಂಗತಿ ಅಲ್ಲದೆ ಮತ್ತೇನು.

ಏನಿದು ಪೀ ಯುವರ್​ ಪ್ಯಾಂಟ್ಸ್​ ಚಾಲೆಂಜ್​?

ಪ್ಯಾಂಟ್​​ನಲ್ಲಿ ಮೂತ್ರ ವಿಸರ್ಜನೆ ಮಾಡುವುದೇ ಈ ಚಾಲೆಂಜ್​ ಗುಟ್ಟು. ವಿಡಿಯೋ ಮಾಡುತ್ತಾ ಈ ಚಾಲೆಂಜ್ ಅನ್ನು​ ಮಾಡಬೇಕು. ಈಗಾಗಲೇ ಅನೇಕರು ಈ ಚಾಲೆಂಜ್​ ಸ್ವೀಕರಿಸಿದ್ದಾರೆ. ಸದ್ಯ ವಿದೇಶದಲ್ಲಿ ಪೀ ಯುವರ್​ ಪ್ಯಾಂಟ್ಸ್​ ಚಾಲೆಂಜ್​​ ಹುಟ್ಟಿಕೊಂಡಿದೆ.

 
@mentally7evanPEE YOUR PANTW CHALLENGE ##PeeYourPantsChallenge ##PeeYourPants♬ original sound - mentally7evan

@liamw2##peeyourpantschallenge ##fyp♬ original sound - liamw2


@mentally7evanPEE YOUR PANTW CHALLENGE ##PeeYourPantsChallenge ##PeeYourPants♬ original sound - mentally7evan


@tylerdoesit1Sorry ##fyp ##foryou ##peeyourpantschallenge ##xyzbca♬ original sound - liamw2‘ಕೀ ಕೀ ಡು ಯು ಲವ್​ ಮಿ‘ ಎನ್ನುತ್ತಾ ಕಾರಿನಿಂದ ಕೆಲಕ್ಕೆ ಇಳಿದ್ದದು ಆಯಿತು. ‘ಕ್ರಾಕೋಚ್​ ಚಾಲೆಂಜ್‘​ ಎಂದು ಮುಖದ ಮೇಲೆ ಜಿರಳೆ ಬಿಟ್ಟಿದ್ದು ಆಯಿತು, ‘ಪಿಲ್ಲೋ ಚಾಲೆಂಜ್‘​ ಮೂಲಕ ತಲೆದಿಂಬು ಉಟ್ಟದ್ದು ಆಯಿತು. ಆದರೀಗ ಪ್ಯಾಂಟ್​​​ನಲ್ಲೇ ಮೂತ್ರ ವಿಸರ್ಜನೆ ಮಾಡುವಂತಹ ಚಾಲೆಂಜ್​ ಹುಟ್ಟಿಕೊಂಡಿದೆ.

ಈ ಚಾಲೆಂಜ್​ ಸದ್ಯ ಟಿಕ್​ಟಾಕ್​ನಲ್ಲಿ ವೈರಲ್​ ಆಗುತ್ತಿದೆ. ಲಿಯಾಮ್​​ ವೀಯರ್​​​ ಎಂಬಾತ ಈ ಚಾಲೆಂಜ್​ ಅನ್ನು ಸ್ವೀಕರಿಸಿ ನಂತರ ಟಿಕ್​ಟಾಕ್​ನಲ್ಲಿ ಹರಿ ಬಿಟ್ಟಿದ್ದಾರೆ. ಲಿಯಾಮ್​ ಅಮೆರಿಕದ ಕಾನ್​ಸಾಸ್​ನವರಾಗಿದ್ದು, ಸಿನಿಮಾ ನಿರ್ಮಾಣ ಮತ್ತು ಹಾಸ್ಯನಟನಾಗಿದ್ದಾರೆ.

ಸಾಕಷ್ಟು ಚಾಲೆಂಜ್​ಗಳು ವಿದೇಶದಲ್ಲಿ ಹುಟ್ಟಿಕೊಂಡು ಆನಂತರ ಭಾರತೀಯರು ಕೂಡ ಈ ಚಾಲೆಂಜ್​​ ಸ್ವೀಕರಿಸುತ್ತಾರೆ. ಆದರೀಗ ಬಟ್ಟೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಚಾಲೆಂಜ್​​ ಎಷ್ಟು ಜನರು ಸ್ವೀಕರಿಸಿ ನಗೆಪಾಟಲಿಗೀಡಾಗುತ್ತಾರೆ ಎಂದು ಕಾದುನೋಡಬೇಕಿದೆ.

ಅಮೆಜಾನ್​ನಲ್ಲಿ ಧೂಳೆಬ್ಬಿಸುತ್ತಿದೆ ಕನ್ನಡದ ಗ್ಯಾಂಗ್​ಸ್ಟರ್ ಸಿನಿಮಾಗಳು; ಮಿಸ್ ಮಾಡದೆ ನೋಡಿ
First published: May 6, 2020, 2:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading