ಮೊಬೈಲ್ (Mobile) ಫೋನ್‌ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಗೇಮ್‌ಗಳು, ಆ ಗೇಮ್‌ಗಳಲ್ಲಿ ಹಣ ಹಾಕುವುದು ಮತ್ತು ಆ ಗೇಮ್‌ಗಳಲ್ಲಿ ಚಾಲೆಂಜ್‌ಗಳನ್ನು ಸ್ವೀಕರಿಸುವುದು ಏನೆಲ್ಲಾ ಅವಾಂತಾರಗಳನ್ನು ಸೃಷ್ಟಿ ಮಾಡಬಹುದು ಅಂತ ಈಗಾಗಲೇ ನಾವೆಲ್ಲಾ ಅನೇಕ ಪ್ರಕರಣಗಳನ್ನು ಟಿವಿಯಲ್ಲಿ ನೋಡಿರುತ್ತೇವೆ. ಕೆಲವರು ಈ ಆನ್ಲೈನ್ ಗೇಮ್ ನ ಚಟಕ್ಕೆ ಮತ್ತು ಬೇಗನೆ ದುಡ್ಡು ಮಾಡಬೇಕು ಅನ್ನೋ ದುರಾಸೆಯಿಂದ ಜೂಜಾಟದಂತಹ ಗೇಮ್ (Game) ಗಳನ್ನು ಆಡಿ ತಮ್ಮ ಹಣವನ್ನೆಲ್ಲಾ ಮತ್ತು ಅಷ್ಟೇ ಅಲ್ಲದೆ ಅವರ ತಂದೆ-ತಾಯಂದಿರು ಕೂಡಿಟ್ಟ ಹಣ ಮತ್ತು ಮಾಡಿಟ್ಟ ಮನೆ, ಆಸ್ತಿಗಳನ್ನೆಲ್ಲಾ ಮಾರಿಕೊಳ್ಳುವ ಪರಿಸ್ಥಿತಿಗೆ ಬಂದು ನಿಲ್ಲುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಸಹ ಆನ್ಲೈನ್ ಗೇಮ್‌ಗಳಲ್ಲಿ (Online Game) ನೀಡುವ ವಿಲಕ್ಷಣವಾದ ಚಾಲೆಂಜ್‌ಗಳನ್ನು ಹದಿಹರೆಯದ ಯುವಕ-ಯುವತಿಯರು ಸ್ವೀಕರಿಸಿ, ಅದರಿಂದ ಏನು ಮಾಡುವುದು ಅಂತ ತೋಚದೆ ಆತ್ಮಹತ್ಯೆ ಮಾಡಿಕೊಂಡು ಪ್ರಕರಣಗಳು ಸಹ ವರದಿಯಾಗಿದ್ದವು.
ಟಿಕ್‌ಟಾಕ್ ಚಟಕ್ಕೆ ಬಿದ್ದ ಯುವಕ ಮಾಡಿಕೊಂಡ ಅವಾಂತರ ನೋಡಿ
ಒಟ್ಟಿನಲ್ಲಿ ಈ ಆನ್ಲೈನ್ ಗೇಮ್ ಗಳು ನಮ್ಮ ಹದಿಹರೆಯದ ಯುವಕ ಮತ್ತು ಯುವತಿಯರನ್ನು ಬದುಕಿನ ಹಳಿಯನ್ನು ಸಂಪೂರ್ಣವಾಗಿ ತಪ್ಪಿಸುತ್ತಿವೆ. ಇಲ್ಲಿಯೂ ಸಹ ಇಂತಹದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ ನೋಡಿ. ಉತ್ತರ ಕೆರೊಲಿನಾದಲ್ಲಿ ಹದಿಹರೆಯದ ಯುವಕನೊಬ್ಬ ಅತಿಯಾದ ಟಿಕ್‌ಟಾಕ್ ಚಟಕ್ಕೆ ಬಿದ್ದು ಅದರಲ್ಲಿ ನೀಡಿರುವ ಚಾಲೆಂಜ್ ಅನ್ನು ಸ್ವೀಕರಿಸಿ ಅದನ್ನು ಮಾಡಿದ್ದಕ್ಕೆ ಅವನ ದೇಹದ 75 ರಷ್ಟು ಸುಟ್ಟಗಾಯಗಳಾಗಿವೆ.
16 ವರ್ಷದ ಮೇಸನ್ ಡಾರ್ಕ್ ಟಿಕ್‌ಟಾಕ್ ಚಾಲೆಂಜ್ ನಲ್ಲಿ ತೊಡಗಿದ್ದಾಗ, ಕ್ಯಾನ್ ಸ್ಫೋಟಗೊಂಡಾಗ ಅವರ ಮನೆಯಲ್ಲಿ ದೊಡ್ಡ ಶಬ್ದ ಕೇಳಿಸಿತಂತೆ. ಆತ ಚಾಲೆಂಜ್ ನಲ್ಲಿ ಲೈಟರ್ ಗೆ ಏರೋಸಾಲ್ ಪೇಂಟ್ ಅನ್ನು ಸಿಂಪಡಿಸಿದ್ದಾನೆ, ಅದು ಕ್ಯಾನ್ ಸ್ಪೋಟಕ್ಕೆ ಕಾರಣವಾಗಿದೆ ಎಂದು ಡಬ್ಲ್ಯುಆರ್‌ಎಎಲ್ ತಿಳಿಸಿದೆ.
ದೇಹಕ್ಕೆ ಹತ್ತಿದ ಬೆಂಕಿಯನ್ನು ನಂದಿಸಿಕೊಳ್ಳಲು ನದಿಗೆ ಹಾರಿದ್ರಂತೆ ಡಾರ್ಕ್
ನಂತರ ಮೇಸನ್ ಡಾರ್ಕ್ ದೇಹಕ್ಕೆ ಬೆಂಕಿ ಹತ್ತಿಕೊಂಡಿತು ಮತ್ತು ಆ ಬೆಂಕಿಯನ್ನು ನಂದಿಸಲು ಅಲ್ಲಿಯೇ ಇರುವ ಒಂದು ನದಿಗೆ ಹಾರಿದರು, ಆದರೆ ಅಷ್ಟೊತ್ತಿಗಾಗಲೇ ಡಾರ್ಕ್ ನ ದೇಹದ ಅನೇಕ ಕಡೆಗಳಲ್ಲಿ ಸುಟ್ಟಗಾಯಗಳಾಗಿದ್ದವು.
ಇದನ್ನೂ ಓದಿ: ಇಂತಾ ಹವ್ಯಾಸಗಳು ಕೂಡ ಇರುತ್ತಾ? ಅಬ್ಬಬ್ಬಾ, ಇವರು ಸಾಮಾನ್ಯ ಮಹಿಳೆಯರಲ್ಲ!
ಡಾರ್ಕ್ ನ ತಾಯಿ ಹೊಲ್ಲಿ ಡಾರ್ಕ್ ಈ ಅಹಿತಕರ ಘಟನೆಯ ಬಗ್ಗೆ ಮಾತನಾಡುತ್ತಾ “ಅವನಿಗೆ ಈಗ ಗುರುತಿಸಲು ಸಹ ಸಾಧ್ಯವಾಗದಷ್ಟು ಸುಟ್ಟು ಗಾಯಗಳಾಗಿವೆ" ಎಂದು ಡಬ್ಲ್ಯುಆರ್‌ಎಎಲ್ ತಿಳಿಸಿದರು. ಈ ಘಟನೆಯ ನಂತರ ಡಾರ್ಕ್ ನನ್ನು ಚಾಪೆಲ್ ಹಿಲ್ ನಲ್ಲಿರುವ ಯುಎನ್‌ಸಿ ಬರ್ನ್ ಸೆಂಟರ್ ಗೆ ಚಿಕಿತ್ಸೆಗಾಗಿ ಕಳುಹಿಸಲಾಯಿತು, ಅಲ್ಲಿ ಅವನಿಗೆ ಶಸ್ತ್ರಚಿಕಿತ್ಸೆ ಸಹ ಮಾಡಲಾಯಿತಂತೆ.
ಡಾರ್ಕ್ ನ ದೇಹದ ಬಹುಪಾಲು ಭಾಗವು ಸುಟ್ಟಗಾಯಗಳಿಂದ ಆವೃತವಾಗಿದೆ ಎಂದು ವೈದ್ಯರು ಡಾರ್ಕ್ ನ ಪೋಷಕರಿಗೆ ತಿಳಿಸಿದರು. "ಮೊದಲು ನನ್ನ ಮಗನನ್ನು ನೋಡಿದ್ದಕ್ಕೂ ಮತ್ತು ಈಗ ಈ ಘಟನೆಯ ನಂತರ ಅವನನ್ನು ನೋಡುವುದಕ್ಕೂ ತುಂಬಾನೇ ವ್ಯತ್ಯಾಸವಿದೆ" ಎಂದು ಡಾರ್ಕ್ ತಾಯಿ ಹೇಳಿದರು.
ಇದನ್ನೂ ಓದಿ: 74ನೇ ವಯಸ್ಸಿನಲ್ಲೂ ಯುವಕನಂತೆ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಕಾಕಾ! ಇವರ ಕಥೆ ಅನೇಕರಿಗೆ ಸ್ಫೂರ್ತಿ
ಆರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಇರಲು ಸಿದ್ದನಾದ ಡಾರ್ಕ್
ಉತ್ಸಾಹಿ ಫುಟ್ಬಾಲ್ ಆಟಗಾರನಾಗಿರುವ ಹದಿಹರೆಯದ ಡಾರ್ಕ್ ಸುಮಾರು ಆರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿರುವ ಬರ್ನ್ ಯೂನಿಟ್ ಎಂದರೆ ಸುಟ್ಟಗಾಯ ಘಟಕದಲ್ಲಿ ಇರಲು ಸಿದ್ಧನಾಗಿದ್ದಾನೆ.
ಡಾರ್ಕ್ ಅವರ ಚೇತರಿಕೆಗೆ ಸಹಾಯ ಮಾಡಲು ಅಗತ್ಯವಿರುವ ವೈದ್ಯಕೀಯ ಬಿಲ್ ಗಳು ಮತ್ತು ಇತರ ವೆಚ್ಚಗಳನ್ನು ಭರಿಸಲು ಅವರ ಕುಟುಂಬವು ‘ಗೋ ಫಂಡ್ ಮಿ’ ಅನ್ನು ಶುರು ಮಾಡಿದೆ.
"ಪ್ರತಿಯೊಬ್ಬರ ಪ್ರಾರ್ಥನೆಗೆ, ಬೆಂಬಲಕ್ಕೆ ಮತ್ತು ಪ್ರೀತಿಗೆ ತುಂಬಾನೇ ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದು ಡಾರ್ಕ್ ಅವರ ಅಜ್ಜಿ ಹಣ ಸಂಗ್ರಹ ಮಾಡುವ ಆನ್ಲೈನ್ ಪುಟದಲ್ಲಿ ಬರೆದಿದ್ದಾರೆ, ಅಲ್ಲಿ ಕುಟುಂಬವು ಈ ಚಿಕಿತ್ಸೆಗೆ ಅವಶ್ಯಕತೆ ಇದ್ದ 25,000 ಡಾಲರ್ ಹಣದಲ್ಲಿ ಇಲ್ಲಿಯವರೆಗೆ 20,000 ಡಾಲರ್ ಹಣ ಸಂಗ್ರಹ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ