Viral Video: ನೀರಿನಲ್ಲಿ ಮರಿಗಳೊಂದಿಗೆ ಹೆಣ್ಣು ಹುಲಿ ತುಂಟಾಟ! ಅಮ್ಮ-ಮಕ್ಕಳ ಮುದ್ದಾದ ವಿಡಿಯೋ ನೀವೂ ನೋಡಿ

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದ ಅವರು, ಎಲ್ಲರೂ ಭಯಪಡುವ ವನ್ಯ ಮೃಗವೊಂದರ ಮುದ್ದಾದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅರೇ, ಎಲ್ಲರೂ ಭಯ ಪಡುವ ವನ್ಯಮೃಗದ ವಿಡಿಯೋ ಮುದ್ದಾಗಿರಲು ಹೇಗೆ ಸಾಧ್ಯ ಎನ್ನುತ್ತೀರಾ? ಆ ವಿಡಿಯೋವನ್ನು ನೋಡಿದರೇ ನೀವು ಕೂಡ ಆಹ್, ಎಷ್ಟು ಮುದ್ದಾಗಿದೆ ಎಂದೇ ಹೇಳುತ್ತೀರಿ.

ಹುಲಿ

ಹುಲಿ

  • Share this:
ಸುಡು ಬೇಸಿಗೆಯಲ್ಲಿ (Summer) ನೀರಿನ ಬರದಿಂದ, ಬಿಸಿಗಾಳಿಯ ಶಾಖದಿಂದ ನಾಡಿನ ಜನಜೀವನ ಮಾತ್ರವಲ್ಲ, ಕಾಡಿನ ಜೀವಿಗಳು ಕೂಡ ಕಷ್ಟಪಡುತ್ತವೆ. ಏಕೆಂದರೆ, ವಾತಾವರಣದಲ್ಲಿ ತಾಪಮಾನ ಹೆಚ್ಚಿದಷ್ಟು, ಅರಣ್ಯ ಪ್ರದೇಶಗಳಲ್ಲಿನ (Forest Area) ನೀರಿನ ನೈಸರ್ಗಿಕ ಮೂಲಗಳು ಕೂಡ ಬತ್ತಿ ಹೋಗುತ್ತವೆ. ಹಾಗಾಗಿ, ಕಾಡು ಪ್ರಾಣಿಗಳು (Animal) ತಮ್ಮ ನೀರಿನ ದಾಹವನ್ನು ನೀಗಿಸಿಕೊಳ್ಳಲು ಒದ್ದಾಡುವ ಪರಿಸ್ಥಿತಿ ಬರುತ್ತದೆ. ಆಗ ಅವು ಕಾಡಿನೆಲ್ಲೆಡೆ ನೀರಿನ (Water) ಮೂಲಗಳನ್ನು ಅರಸಿಕೊಂಡು ಹೋಗುತ್ತವೆ. ನೀರಿನ ಸಮಸ್ಯೆಯಿಂದ ವನ್ಯಜೀವಿಗಳನ್ನು ಕಾಪಾಡಲು ಅರಣ್ಯ ಇಲಾಖೆಯ (Forest Department) ಹಲವಾರು ನೀರಿನ ಕೃತಕ ಹಳ್ಳಗಳನ್ನು ಕಟ್ಟಿ, ಅವುಗಳ ನಿರ್ವಹಣೆ ಮಾಡುತ್ತಿದೆ.

ವನ್ಯ ಮೃಗವೊಂದರ ಮುದ್ದಾದ ವಿಡಿಯೋ ವೈರಲ್

ಗುರುವಾರ, ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದ ಅವರು, ಎಲ್ಲರೂ ಭಯಪಡುವ ವನ್ಯ ಮೃಗವೊಂದರ ಮುದ್ದಾದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅರೇ, ಎಲ್ಲರೂ ಭಯ ಪಡುವ ವನ್ಯಮೃಗದ ವಿಡಿಯೋ ಮುದ್ದಾಗಿರಲು ಹೇಗೆ ಸಾಧ್ಯ ಎನ್ನುತ್ತೀರಾ? ಆ ವಿಡಿಯೋವನ್ನು ನೋಡಿದರೇ ನೀವು ಕೂಡ ಆಹ್, ಎಷ್ಟು ಮುದ್ದಾಗಿದೆ ಎಂದೇ ಹೇಳುತ್ತೀರಿ.

ಏಕೆಂದರೆ, ಅಮ್ಮ ಹುಲಿ ಮತ್ತು ಅದರ ಮರಿಗಳ ಅಕ್ಕರೆಯ ಕ್ಷಣಗಳ ದೃಶ್ಯವಿರುವ ವಿಡಿಯೋ ಅದು. ಆ ವಿಡಿಯೋದಲ್ಲಿ ಮಾನವ ನಿರ್ಮಿತವಾದ ಚಿಕ್ಕ ಹಳ್ಳವೊಂದರಲ್ಲಿ ಹೆಣ್ಣು ಹುಲಿ ಮತ್ತು ಅದರ ಮರಿಗಳು ನೀರು ಕುಡಿಯುವುದು ಮತ್ತು ನೀರಿನಲ್ಲಿ ಮುಳುಗಿ ಮೈ ತಂಪಾಗಿಸಿಕೊಳ್ಳುವ ದೃಶ್ಯಗಳನ್ನು ಕಾಣಬಹುದು.

ಇದನ್ನೂ ಓದಿ: Viral Video: ಅಬ್ಬಾ ಡೈನೋಸಾರ್ ಕಂಡಿವೆ ಅಂತೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್

ಈ ವಿಡಿಯೋದ ಜೊತೆ, “ನೀರಿನ ಹಳ್ಳದಲ್ಲಿ ಮುದ್ದಾದ ಹುಲಿ ಕುಟುಂಬ. ಹುಲಿಗಳು ಮೈ ತಣ್ಣಗಾಗಿಸಿಕೊಳ್ಳಲು ಕೊಳಗಳಲ್ಲಿ ಮತ್ತು ಹಳ್ಳಗಳಲ್ಲಿ ತಮ್ಮ ಸಮಯವನ್ನು ಕಳೆಯಲು ಇಷ್ಟಪಡುತ್ತವೆ, ಈ ಒಂದು ಹೆಣ್ಣು ಹುಲಿ ಹಾಗೂ ಅದರ 5 ಮರಿಗಳಂತೆ. ಸುಡು ಬೇಸಿಗೆಯ ಸಮಯದಲ್ಲಿ ಹುಲಿಗಳು ಭಾಗಶಃ ಅಥವಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವುದನ್ನು ಕಾಣಬಹುದು” ಎಂದು ಸುಸಂತಾ ನಂದಾ ಬರೆದಿದ್ದಾರೆ.

ಇದಕ್ಕೆ ನೆಟ್ಟಿಗರು ಹೇಳಿದ್ದೇನು ನೋಡಿ
ಈ ವಿಡಿಯೋಗೆ ಅನೇಕ ಮಂದಿ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ತಾಯಿ ಮತ್ತು ಮರಿಗಳ ಹೊಟ್ಟೆಗಳು ಗುಳಿ ಬಿದ್ದಿದ್ದು, ತುಂಬಾ ಸೊಣಕಲಾಗಿ ಕಾಣುತ್ತಿವೆ. ಸರಕಾರವು ಕಾಡು ಹಂದಿಗಳನ್ನು ಕಾಡಿನಲ್ಲಿ ಬಿಟ್ಟರೆ, ಹುಲಿಗಳಿಗೆ ಸಾಕಷ್ಟು ಆಹಾರ ಸೇವಿಸಲು ಸಿಗುತ್ತದೆ. ನೀರಿನ ಹಳ್ಳಗಳ ಗಾತ್ರ ದೊಡ್ಡದಿರಬೇಕು” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದರೆ, “ಆದರೆ ಹಳ್ಳಗಳು ತುಂಬಾ ಚಿಕ್ಕದಿವೆ” ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು “ಅವಳು ಕಾಲರ್ ಉಳ್ಳವಳೇ, ಸರ್ ?” ಎಂದು ಪ್ರಶ್ನಿಸಿದ್ದರೆ, ಮತ್ತೊಬ್ಬರು “ತುಂಬಾ ಕೂಲ್” ಎಂದು ಬರೆದಿದ್ದಾರೆ. ಸಾಕಷ್ಟು ಮಂದಿ ಈ ವಿಡಿಯೋಗೆ ಪ್ರೀತಿಯ ಇಮೋಜಿಗಳ ಮೂಲಕವೂ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Viral Video: ನಿಜ್ವಾಗ್ಲೂ ಈ ನಾಯಿಯ ಧೈರ್ಯಕ್ಕೆ ಮೆಚ್ಚಲೇಬೇಕು! ಅಷ್ಟಕ್ಕೂ ಏನು ಮಾಡಿದೆ ಅಂತ ನೀವೇ ನೋಡಿ

ಸುಸಂತಾ ನಂದಾ ಅವರು ಟ್ವಿಟ್ಟರ್ನಲ್ಲಿ, ಅರಣ್ಯದಲ್ಲಿನ ನೀರಿನ ಹಳ್ಳಗಳ ಕುರಿತು ಇನ್ನೂ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕೃತಕ ನೀರಿನ ಹಳ್ಳಗಳಿಗೆ ನೀರನ್ನು ತುಂಬಿಸುವ ದೃಶ್ಯವನ್ನು ಕಾಣಬಹುದು. “ಸುಡು ಬೇಸಿಗೆಯಲ್ಲಿ ಈ ನೀರಿನ ಗುಂಡಿಗಳನ್ನು ನಿರ್ವಹಣೆ ಮಾಡುವುದು ಅರಣ್ಯ ಅಧಿಕಾರಿಗಳ ಪಾಲಿಗೆ ಒಂದು ಪ್ರಯಾಸದಾಯಕ ಕೆಲಸವಾಗಿದೆ. ಅವುಗಳಲ್ಲಿ ಅನೇಕ ಗುಂಡಿಗಳು, ಈಗ ಸೌರ ಪಂಪ್‍ಗಳಿಂದ ನಿರ್ವಹಿಸಲ್ಪಡುತ್ತಿವೆ. ವನ್ಯಜೀವಿಗಳ ಲೈಫ್‍ಲೈನ್ ಅನ್ನು ಕಾಪಾಡುತ್ತಿರುವ ಸಿಬ್ಬಂದಿಗಳಿಗೆ ಅಭಿನಂದನೆಗಳು” ಎಂದು ಆ ವಿಡಿಯೋಗೆ ಅಡಿ ಬರಹವನ್ನು ಬರೆದಿದ್ದಾರೆ ಸುಸಂತಾ.“ವನ್ಯಜೀವಿಗಳಿಗೆ ಏರ್ ಕಂಡೀಶನರುಗಳ ಕೆಳಗೆ ಹೋಗಿ, ವಿರಾಮ ಪಡೆಯುವ ವೈಭೋಗ ಇರುವುದಿಲ್ಲ. ಹಾಗಾಗಿ, ಸರ್ ಹೇಳಿದಂತೆ, ನಾವು ಕೊನೆ ಪಕ್ಷ ನೀರಿನ ಹಳ್ಳಗಳನ್ನು ತುಂಬಿಸಿದರೆ, ಅವುಗಳು ಶಾಖವನ್ನು ತಡೆದುಕೊಳ್ಳಲು ಹಾಗೂ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಸಹಾಯವಾಗುತ್ತದೆ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋಗೆ ಅಭಿಪ್ರಾಯ ವ್ಯಕ್ತಪಡಿದ್ದಾರೆ. ಈ ನೀರಿನ ಕೃತಕ ಮೂಲಗಳು ಕಾಡು ಪ್ರಾಣಿಗಳ ನೀರಿನ ಸಮಸ್ಯೆಯನ್ನು ಪರಿಹರಿಸುವುದು ಮಾತ್ರವಲ್ಲ, ಪ್ರಾಣಿ ಗಣತಿಯಂತಹ ದಾಖಲಾತಿ ಕೆಲಸವನ್ನು ನಿರ್ವಹಿಸಲು ಕೂಡ ಸಂರಕ್ಷಣಾಧಿಕಾರಿಗಳಿಗೆ ಸಹಾಯ ಮಾಡುತ್ತವೆ.
Published by:Ashwini Prabhu
First published: